ಡೇಟಿಂಗ್ ಮಾಡುತ್ತಿದ್ದಾಗ ರಾಮ್‌ಚರಣ್‌ಗೆ ಉಪಾಸನಾ ಇಟ್ಟಿದ್ದ ಪ್ರೇಮ ಪರೀಕ್ಷೆ ಏನು?
ಸಿನಿಮಾಗಳಲ್ಲಿ ನಾಯಕ-ನಾಯಕಿ ಪ್ರೀತಿಸಿ ಮದುವೆ ಆಗುವುದನ್ನು ನೋಡಿದ್ದೇನೆ. ಅದೇ ರೀತಿ ನಿಜ ಜೀವನದಲ್ಲಿ ತಾರೆಯರು ತಮ್ಮಿಷ್ಟದವರನ್ನು ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ತೆರೆಮೇಲೆ ಸ್ಟಾರ್‌ಗಳಾಗಿದ್ದರೂ ನಿಜಜೀವನದಲ್ಲಿ ಎಲ್ಲರೂ ಸಾಮಾನ್ಯರೇ. ಸ್ಟಾರ್ ನಟರೇ ಪ್ರಪೋಸ್ ಮಾಡಿ ಇಷ್ಟಪಟ್ಟವರನ್ನು ಒಲಿಸಿಕೊಂಡಿರುವುದು ಇದೆ.
ತೆಲುಗು ನಟ ರಾಮ್‌ಚರಣ್ ಹಾಗೂ ಅಪೊಲೊ ಆಸ್ಪತ್ರೆಗಳ ಗ್ರೂಪ್ ಅಧ್ಯಕ್ಷರಾದ ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳು ಉಪಾಸನಾ ಪ್ರೀತಿಸಿ ಮದುವೆ ಆದವರು. 10 ವರ್ಷಗಳ ಬಳಿಕ ಮುದ್ದಾಗ ಹೆಣ್ಣು ಮಗುವನ್ನು ದಂಪತಿ ಬರಮಾಡಿಕೊಂಡಿದ್ದರು. ಸದ್ಯ ಮಗಳ ಲಾಲನೆ ಪಾಲನೆ ಜೊತೆ ಜೊತೆಗೆ ಉಪಾಸನಾ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಪೊಲೊ ಫೌಂಡೇಶನ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಗುರ್ತಿಸಿಕೊಂಡಿದ್ದಾರೆ. ತಮ್ಮ ಲವ್ ಸ್ಟೋರಿ ಬಗ್ಗೆ ಈ ಹಿಂದೆ ಕೂಡ ಆಕೆ ಮಾತನಾಡಿದ್ದಾರೆ.

ರಾಮ್‌ಚರಣ್ ಪತ್ನಿ ಉಪಾಸನಾ Curly Tales ಯೂಟ್ಯೂಬ್ ಚಾನಲ್ ಸಂದರ್ಶನಕ್ಕಾಗಿ ಹೋಂ ಟೂರ್ ಮಾಡಿದ್ದಾರೆ. ಈ ವೇಳೆ ತಮ್ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ. ಇದೇ ವೇಳೆ ಚರಣ್ ಜೊತೆಗಿನ ಲವ್ ಸ್ಟೋರಿಯನ್ನು ನೆನಪು ಮಾಡಿಕೊಂಡಿದ್ದಾರೆ. ಒಮ್ಮೆ ಪ್ರೇಮ ಪರೀಕ್ಷೆ ಇಟ್ಟಿದ್ದಾಗಿಯೂ ಹೇಳಿದ್ದಾರೆ. ಅದು ಈಗ ವೈರಲ್ ಆಗುತ್ತಿದೆ. "ನಾವಿಬ್ಬರೂ ಪ್ರೀತಿಸುತ್ತಿದ್ದಾಗ ನಾನು ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ವಾಸವಾಗಿದ್ದೆ. ಒಮ್ಮೆ ನಾನು ನೀನು ನಿಜವಾಗಿಯೂ ನನ್ನನ್ನು ಪ್ರೀತಿಸುತ್ತಿದ್ದರೆ ಆ ಫೇಮಸ್ ಐಸ್‌ಕ್ರೀಂ ಶಾಪ್‌ಗೆ ಕರ್ಕೊಂಡು ಹೋಗಬೇಕು ಅಂತ ಪರೀಕ್ಷೆ ಇಟ್ಟಿದ್ದೆ" ಎಂದು ಉಪಾಸನಾ ನೆನಪಿಸಿಕೊಂಡಿದ್ದಾರೆ.
ಬಳಿಯ ಏನಾಯಿತು ಎನ್ನುವುದನ್ನು ರಾಮ್‌ಚರಣ್ ಪತ್ನಿ ವಿವರಿಸಿದ್ದಾರೆ. "ಆ ಫೇಮಸ್ ಐಸ್‌ಕ್ರೀಂ ಶಾಪ್ ಸಿಟಿ ಮಧ್ಯೆ ಇತ್ತು. ಅದಾಗಲೇ ರಾಮ್‌ಚರಣ್ ಸ್ಟಾರ್ ಆಗಿಬಿಟ್ಟಿದ್ರು. ಎಲ್ಲರೂ ಅವ್ರನ್ನು ಗುರ್ತಿಸುತ್ತಿದ್ದರು. ಆದರೂ ಸರಿ ನಡಿ ಹೋಗೋಣ ಎಂದು ಕರೆದುಕೊಂಡು ಹೋಗಿಯೇಬಿಟ್ರು. ನಾವು ಹೋಗಿ ಐಸ್‌ಕ್ರೀಂ ಆರ್ಡರ್ ಮಾಡಿದ್ದೆವು. ಅಲ್ಲಿದ್ದವರಿಗೆ ರಾಮ್‌ಚರಣ್ ಬಂದಿರುವುದು ಗೊತ್ತಾಗಿತ್ತು. ಬಂದು ಬಾಗಿಲು ಬಡಿಯಲು ಆರಂಭಿಸಿದ್ರು. ಅದು ಚರಣ್‌ಗೆ ನಿಜವಾದ ಪ್ರೇಮಪರೀಕ್ಷೆ. ಅದರಲ್ಲಿ ಅವ್ರು ಗೆದ್ದಿದ್ರು" ಎಂದು ಉಪಾಸನಾ ನಕ್ಕಿದ್ದಾರೆ.

ಸಂದರ್ಶನದ ವೇಳೆ ಉಪಾಸನಾ ತಮ್ಮ ಮನೆಯ ಉಟೋಪಚಾರದ ಬಗ್ಗೆ ಮಾತನಾಡುತ್ತಾ ಬೇರೆ ಬೇರೆ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ ಮಹಿಳೆಯರೆಲ್ಲಾ ಚೆನ್ನಾಗಿ ಅಡುವೆ ಮಾಡುತ್ತಾರೆ. ನನ್ನನ್ನು ಬಿಟ್ಟು ಎಂದು ಉಪಾಸನಾ ಹೇಳಿದ್ದಾರೆ. ಚಿರಂಜೀವಿ ಸ್ಪೆಷಲ್ ರೆಸಿಪಿ ದೋಸೆ ಸೇರಿದಂತೆ ಸಾಕಷ್ಟು ವಿಚಾರದ ಬಗ್ಗೆ ಮಾತನಾಡಿದ್ದಾರೆ. ರಾಮ್‌ಚರಣ್‌ಗೆ ಅನ್ನ-ರಸ ಹಾಗೂ ಆಮ್ಲೆಟ್ ಅಂದ್ರೆ ಬಹಳ ಇಷ್ಟ. ಎಲ್ಲೇ ಹೋದರು ಇದು ಸಿಕ್ಕಿಬಿಟ್ಟರೆ ಸಾಕು. ಬೇರೇನು ಕೇಳಲ್ಲ ಎಂದು ಉಪಾಸನಾ ವಿವರಿಸಿದ್ದಾರೆ.
'RRR' ಬಳಿಕ ರಾಮ್‌ಚರಣ್ ನಟಿಸಿದ ಯಾವುದೇ ಸಿನಿಮಾ ಗೆಲ್ಲಲಿಲ್ಲ. 'ಗೇಮ್ ಚೇಂಜರ್' ಸಿನಿಮಾ ಹೀನಾಯವಾಗಿ ಸೋತಿತ್ತು. ಸದ್ಯ 'ಪೆದ್ದಿ' ಚಿತ್ರದಲ್ಲಿ ಚರಣ್ ನಟಿಸುತ್ತಿದ್ದಾರೆ. ಮುಂದಿನ ವರ್ಷ ಮಾರ್ಚ್ 27ಕ್ಕೆ ಸಿನಿಮಾ ತೆರೆಗೆ ಬರಲಿದೆ. ಬುಚ್ಚಿಬಾಬು ನಿರ್ದೇಶನದ ಈ ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ನಟಿಸಿದ್ದಾರೆ. 5 ಭಾಷೆಗಳಲ್ಲಿ ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.


Click it and Unblock the Notifications











