For Quick Alerts
  ALLOW NOTIFICATIONS  
  For Daily Alerts

  ಡಿಸ್ನಿ ಹಾಟ್‌ಸ್ಟಾರ್ ಜೊತೆ 3 ಕೋಟಿ ಒಪ್ಪಂದ ಮಾಡಿಕೊಂಡ ರಾಮ್ ಚರಣ್

  |

  ತೆಲುಗು ನಟ ರಾಮ್ ಚರಣ್ ತೇಜ ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿ, ಉದ್ಯಮಿಯಾಗಿ ಹಲವು ಮೆಗಾ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಂಡಿದ್ದಾರೆ. ರಾಜಮೌಳಿ, ಶಂಕರ್ ಅಂತಹ ಸ್ಟಾರ್ ನಿರ್ದೇಶಕರ ಚಿತ್ರಗಳಲ್ಲಿ ನಟಿಸುತ್ತಿರುವ ರಾಮ್ ಚರಣ್, ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಮೂರು ಟಿವಿ ವಾಹಿನಿ ಖರೀದಿಸಿರುವ ಬಗ್ಗೆಯೂ ಸುದ್ದಿ ವರದಿಯಾಗಿತ್ತು.

  ಈ ನಡುವೆ ಮರ್ಸಿಡಿಸ್ ಮೇಬ್ಯಾಕ್ ಜಿಎಲ್‌ಎಸ್ 600 ಕಸ್ಟಮೈಸ್ಡ್ ಕಾರನ್ನು ಸಹ ರಾಮ್ ಚರಣ್ ತೇಜ ತೆಗೆದುಕೊಂಡಿದ್ದಾರೆ. ಈ ಎಲ್ಲಾ ಸುದ್ದಿಗಳ ನಡುವೆ ಮೆಗಾ ಪವರ್ ಸ್ಟಾರ್ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ಸರ್ಪ್ರೈಸ್ ನೀಡಿದೆ. ಭಾರತದ ಖ್ಯಾತ ಒಟಿಟಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಜೊತೆ ಮೆಗಾ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ. ಈ ಒಪ್ಪಂದಕ್ಕಾಗಿ ಭರ್ಜರಿ ಮೊತ್ತವನ್ನು ಸಂಭಾವನೆಯನ್ನಾಗಿ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ಮುಂದೆ ಓದಿ...

  ಡಿಸ್ನಿ ಹಾಟ್‌ಸ್ಟಾರ್ ರಾಯಭಾರಿ

  ಡಿಸ್ನಿ ಹಾಟ್‌ಸ್ಟಾರ್ ರಾಯಭಾರಿ

  ದೇಶದ ಪ್ರಖ್ಯಾತ ಒಟಿಟಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ನಟ ರಾಮ್ ಚರಣ್ ತೇಜ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಇದಕ್ಕಾಗಿ ಡಿಸ್ನಿ ಹಾಟ್‌ಸ್ಟಾರ್ ಸಂಸ್ಥೆ 3 ಕೋಟಿ ರೂಪಾಯಿ ಸಂಭಾವನೆಯನ್ನಾಗಿ ನೀಡಿದೆ. ಡಿಸ್ನಿ ಹಾಟ್‌ಸ್ಟಾರ್ ಪ್ರಸ್ತುತ ಪಡಿಸುವ ಜಾಹೀರಾತು ಅಥವಾ ವಿಡಿಯೋಗಳನ್ನು ಪ್ರಚಾರದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಒಟ್ಟಿಗೆ ಮೂರು ಟಿವಿ ಚಾನೆಲ್ ಖರೀದಿಸುತ್ತಿರುವ ರಾಮ್ ಚರಣ್ ತೇಜ: ಕಾರಣವೇನು?ಒಟ್ಟಿಗೆ ಮೂರು ಟಿವಿ ಚಾನೆಲ್ ಖರೀದಿಸುತ್ತಿರುವ ರಾಮ್ ಚರಣ್ ತೇಜ: ಕಾರಣವೇನು?

  ತೆಲುಗು ಮಾರ್ಕೆಟ್‌ಗೆ ರಾಮ್ ಚರಣ್ ಅಸ್ತ್ರ

  ತೆಲುಗು ಮಾರ್ಕೆಟ್‌ಗೆ ರಾಮ್ ಚರಣ್ ಅಸ್ತ್ರ

  ಈಗಾಗಲೇ ತೆಲುಗಿನಲ್ಲಿ ಆಹಾ ಒಟಿಟಿ ಹೆಚ್ಚು ಸದ್ದು ಮಾಡ್ತಿದೆ. ಅಲ್ಲು ಅರವಿಂದ್ ಮಾಲೀಕತ್ವದ ಈ ಒಟಿಟಿಗೆ ಸ್ವತಃ ಅಲ್ಲು ಅರ್ಜುನ್ ರಾಯಭಾರಿಯಾಗಿ ನಿಂತಿದ್ದಾರೆ. ತೆಲುಗಿನ ಹಲವು ಸ್ಟಾರ್ ನಟರು ಆಹಾಗೆ ಬೆಂಬಲವಾಗಿದ್ದಾರೆ. ಆಹಾ ಸಹ ತೆಲುಗು ವೆಬ್‌ಸಿರೀಸ್, ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಮತ್ತೊಂದೆಡೆ ಅಮೆಜಾನ್ ಪ್ರೈಮ್ ವಿಡಿಯೋ ಸಹ ಟಾಲಿವುಡ್‌ ಮಾರ್ಕೆಟ್‌ನಲ್ಲಿ ಒಳ್ಳೆಯ ಬಿಸಿನೆಸ್ ಮಾಡ್ತಿದೆ. ಜೀ5 ಸಹ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದೆ. ಈಗ ಡಿಸ್ನಿ ಹಾಟ್‌ಸ್ಟಾರ್ ರಾಮ್ ಚರಣ್ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ತೀರ್ಮಾನಿಸಿದೆ.

  ಟಿವಿ ವಾಹಿನಿ ಖರೀದಿಸಿದ್ದರ ಉದ್ದೇಶವೇನು?

  ಟಿವಿ ವಾಹಿನಿ ಖರೀದಿಸಿದ್ದರ ಉದ್ದೇಶವೇನು?

  ರಾಮ್ ಚರಣ್ ತೇಜ ಮಹಾ ನ್ಯೂಸ್ ಸೇರಿದಂತೆ ಒಟ್ಟು ಮೂರು ಚಾನೆಲ್‌ಗಳನ್ನು ಖರೀದಿ ಮಾಡಲು ಮಾತುಕತೆ ನಡೆಸುತ್ತಿದ್ದಾರೆ. ಹೆಚ್ಚೇನು ಲಾಭದಾಯಕ ಅಲ್ಲದ ಸ್ಥಿತಿಯಲ್ಲಿರುವ ಈ ಮೂರು ಚಾನೆಲ್‌ಗಳು ಕಡಿಮೆ ದರಕ್ಕೆ ರಾಮ್ ಚರಣ್ ತೇಜಗೆ ಮಾರಾಟವಾಗುತ್ತಿವೆ ಎನ್ನಲಾಗುತ್ತಿದೆ. ರಾಮ್ ಚರಣ್ ಈ ಚಾನೆಲ್‌ಗಳನ್ನು ಖರೀದಿಸಲು ಉದ್ದೇಶಿರುವುದು ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್‌ಗಾಗಿ ಎನ್ನಲಾಗುತ್ತಿದೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಪವನ್‌ ಕಲ್ಯಾಣ್‌ಗೆ ಮುಂದಿನ ಚುನಾವಣೆಗಳಲ್ಲಿ ನೆರವಾಗಲೆಂದು ರಾಮ್ ಚಾರಣ್ ಮೂರು ಚಾನೆಲ್‌ಗಳನ್ನು ಕೊಂಡುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

  ದುಬಾರಿ ಕಾರು ಖರೀದಿ ಮಾಡಿದ ನಟ

  ದುಬಾರಿ ಕಾರು ಖರೀದಿ ಮಾಡಿದ ನಟ

  ನಟನೆ, ನಿರ್ಮಾಣ ಜೊತೆಗೆ ಬಿಸಿನೆಸ್ ಎಲ್ಲ ಕ್ಷೇತ್ರದಲ್ಲು ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ರಾಮ್ ಚರಣ್ ತೇಜ, ಈಗ ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 ಕಸ್ಟಮೈಸ್ಡ್ ಕಾರು ಖರೀದಿ ಮಾಡಿದ್ದಾರೆ. ಇದರ ಬೆಲೆ 4 ಕೋಟಿ ಎನ್ನಲಾಗಿದೆ. ರಾಮ್ ಚರಣ್‌ಗಾಗಿ ತುಂಬಾ ವಿಶೇಷವಾಗಿ ಈ ಕಾರು ತಯಾರಿಸಲಾಗಿದೆಯಂತೆ.

  ಆರ್‌ಆರ್‌ಆರ್‌ ಮುಗಿಸಿ ಶಂಕರ್ ಜೊತೆ ಸಿನಿಮಾ

  ಆರ್‌ಆರ್‌ಆರ್‌ ಮುಗಿಸಿ ಶಂಕರ್ ಜೊತೆ ಸಿನಿಮಾ

  ಎಸ್‌ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾ ಚಿತ್ರೀಕರಣವನ್ನು ರಾಮ್ ಚರಣ್ ತೇಜ ಮುಗಿಸಿದ್ದಾರೆ. ಈ ಪ್ರಾಜೆಕ್ಟ್ ಮುಗಿಸಿದ ಹಿನ್ನೆಲೆ ಶಂಕರ್ ಜೊತೆ 15ನೇ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಇತ್ತೀಚಿಗಷ್ಟೆ ಹೈದರಾಬಾದ್‌ನಲ್ಲಿ RC15 ಚಿತ್ರದ ಮುಹೂರ್ತ ನಡೆದಿದ್ದು, ಬಾಲಿವುಡ್ ನಟ ರಣ್ವೀರ್ ಸಿಂಗ್, ಚಿರಂಜೀವಿ ಅತಿಥಿಯಾಗಿ ಆಗಮಿಸಿದ್ದರು. ರಾಮ್ ಚರಣ್‌ಗೆ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿದ್ದಾರೆ.

  English summary
  Mega Power Star Ram Charan & Disney plus hotstar to collaborate. The star will represent this OTT platform in video & print ads.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X