Peddi Teaser: ಪೈಲ್ವಾನ್ 'ಪೆದ್ದಿ' ರಾಮ್‌ಚರಣ್ ಕುಸ್ತಿ ಖದರ್ ಹೇಗಿದೆ? ಮಿಸ್ ಆಗಿದ್ದೇನು?

ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ. ಶ್ರೀರಾಮನವಮಿ ಹಾಗೂ ರಾಮ್‌ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಟೀಸರ್ ಬಿಡುಗಡೆ ಆಗಿ ಧೂಳೆಬ್ಬಿಸಿದೆ. ದೆ ಹಿಡಿದು ಕುಸ್ತಿ ಅಖಾಡಕ್ಕೆ ಇಳಿದ 'ಪೆದ್ದಿ' ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

80, 90ರ ದಶಕದ ಕಥೆ 'ಪೆದ್ದಿ' ಚಿತ್ರದಲ್ಲಿದೆ. ಅವತ್ತಿನ ಕಾಲದ ಹಳ್ಳಿಗಳ ಚಿತ್ರಣ ಅಲ್ಲಿನ ಕ್ರಿಕೆಟ್ ಕ್ರೀಡಾಕೂಟಗಳ ಸುತ್ತಾ ಸಿನಿಮಾ ಕಥೆ ಸಾಗುತ್ತದೆ ಎಂದು ಭಾವಿಸಲಾಗಿತ್ತು. ಈ ಹಿಂದೆ ಬಂದಿದ್ದ ಟೀಸರ್ ಹಾಗೂ ಹಾಡುಗಳಲ್ಲಿ ಕ್ರಿಕೆಟ್ ಆಟವನ್ನು ಹೈಲೆಟ್ ಮಾಡಿ ತೋರಿಸಿದ್ದರು. ಆದರೆ ದಿಢೀರನೆ ಕುಸ್ತಿ ಪೈಲ್ವಾನ್ ಆಗಿ ರಾಮ್‌ಚರಣ್ ದರ್ಶನ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಕ್ರಿಕೆಟ್ ಆಟಗಾರ ಮಾತ್ರವಲ್ಲ, ಕುಸ್ತಿ ಪೈಲ್ವಾನ್ ಆಗಿ ಕೂಡ ಚರಣ್ ನಟಿಸುತ್ತಿರುವುದು ಗೊತ್ತಾಗುತ್ತಿದೆ. ಸಿನಿಮಾದಲ್ಲಿ ಇನ್ನು ಏನೆಲ್ಲಾ ಸರ್‌ಪ್ರೈಸ್ ಕಾದಿದೆ ಎಂದು ಅಭಿಮಾನಿಗಳು ಬೆರಗುಗಣ್ಣಿನಿಂದ ಕಾಯುವಂತಾಗಿದೆ.

Ram Charan Stuns as Wrestler in Peddi Teaser Directed by Buchi Babu

ಕುಸ್ತಿ ಅಂದ್ರೆ ಬ್ಯಾಟ್‌ನಿಂದ ಬಾಲ್ ಹೊಡೆಯೋ ಆಟ ಅಲ್ಲ ಕಣೋ.. ಸಾವಿಗೆ ಎದೆ ಒಡ್ಡುವ ಆಟ.. ಎನ್ನುವ ವಾಯ್ಸ್ ಓವರ್ ಹಿನ್ನೆಲೆಯಲ್ಲಿ ಟೀಸರ್ ಶುರುವಾಗುತ್ತದೆ. ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಟೀಸರ್ ನೋಡಿದ ಮೇಲೆ ಅವರ ಪಾತ್ರ ಏನು ಎನ್ನುವುದು ಗೊತ್ತಾಗ್ತಿದೆ. ಚಿತ್ರದಲ್ಲಿ ಕುಸ್ತಿ ಕಲಿಸಿಕೊಡುವ ಗುರುವಿನ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ಟೀಸರ್ ಆರಂಭದಲ್ಲಿ ಬರುವ ಹಿನ್ನೆಲೆ ಧ್ವನಿ ಅವರದ್ದೇ ಎನ್ನುವುದು ಸ್ಪಷ್ಟವಾಗುತ್ತಿದೆ.

ಸದ್ಯ ಬಿಡುಗಡೆ ಆಗಿರುವ 'ಪೆದ್ದಿ' ಪೈಲ್ವಾನ್ ಟೀಸರ್‌ನಲ್ಲಿ ರಾಮ್‌ಚರಣ್ ಲುಕ್ ಮತ್ತು ಬಾಡಿ ಲಾಂಗ್ವೇಜ್ ಖಡಕ್ ಆಗಿದೆ. ಹುರಿಗಟ್ಟಿದ ದೇಹ, ರಗಡ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಕುಸ್ತಿಗಾಗಿ 'ಪೆದ್ದಿ'ನಡೆಸುವ ಕಸರತ್ತು ಅಖಾಡದಲ್ಲಿ ಎದುರಾಳಿಯನ್ನು ಎತ್ತಿ ನೆಲಕ್ಕೆ ಕುಕ್ಕುವುದನ್ನು ನೋಡಬಹುದು. ಕೊನೆಗೆ ಜಬರ್ದಸ್ತ್ ಆಗಿ ಗದೆ ಹಿಡಿದು ಮೀಸೆ ತಿರುಗಿಸಿರುವುದನ್ನು ನೋಡಬಹುದು.

ಚಿತ್ರಕ್ಕಾಗಿ ರಾಮ್‌ಚರಣ್ ತನು, ಮನ ಅರ್ಪಿಸಿದ್ದಾರೆ. ಮೊದಲಿನಿಂದಲೂ ಫಿಟ್‌ನೆಸ್ ಫ್ರೀಕ್ ಆಗಿರುವ ಚರಣ್ ದೇಹ ಕಟ್ಟಿ ಚಿತ್ರಗಳಲ್ಲಿ ನಟಿಸಿದ್ದು ಇದೆ. 'ಧ್ರುವ' ಹಾಗೂ 'RRR' ಚಿತ್ರದ ಪಾತ್ರಗಳಿಗಾಗಿ ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಮಾಡಿದ್ದರು. ಇದೀಗ ಮತ್ತೆ 'ಪೆದ್ದಿ' ಚಿತ್ರಕ್ಕಾಗಿ ದೇಹ ದಂಡಿಸಿ ಪೈಲ್ವಾನ್ ಅವತಾರ ತಾಳಿದ್ದಾರೆ. ಅದನ್ನು ಅಷ್ಟೇ ಸೊಗಸಾಗಿ ತೆರೆಮೇಲೆ ತರ್ತಿದ್ದಾರೆ ನಿರ್ದೇಶಕ ಬುಚ್ಚಿಬಾಬು. ಈ ಚಿತ್ರದ ಬಗ್ಗೆ ಫಿಲ್ಮ್‌ ನಗರ್‌ನಲ್ಲಿ ಭಾರೀ ಚರ್ಚೆ ನಡೀತಿದೆ. ಚಿತ್ರದ ಕತೆ ಬಗ್ಗೆ ಶಿವಣ್ಣ ಕೂಡ ಹಾಡಿ ಹೊಗಳಿದ್ದರು. ಈಗಾಗಲೇ ಟೀಸರ್, ಸಾಂಗ್ಸ್ ಹಿಟ್ ಆಗಿದ್ದು ಹೊಸ ಗಿಂಪ್ಸ್ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಜುಟ್ಟಿಗೆ ಜಡೆ ಕಟ್ಟಿ ಹನುಮಾನ್ ಲಂಗೋಟಿ ಧರಿಸಿ ರಾಮ್‌ಚರಣ್ ಕುಸ್ತಿ ಪೈಲ್ವಾನ್ ಆಗಿ ಅಖಾಡದಲ್ಲಿ ಕಾದಾಡಿದ್ದಾರೆ. ಕ್ರಿಕೆಟ್ ಆಡಿಕೊಂಡಿದ್ದ 'ಪೆದ್ದಿ' ಕುಸ್ತಿ ಪೈಲ್ವಾನ್ ಆಗೋದು ಯಾಕೆ? ಎನ್ನುವುದೇ ಸಿನಿಮಾ ಒನ್‌ಲೈನ್ ಸ್ಟೋರಿ ಎನ್ನುವುದು ಗೊತ್ತಾಗುತ್ತಿದೆ. ಎರಡು ದಿನಗಳ ಹಿಂದೆ ಚಿತ್ರೀಕರಣದ ವೇಳೆ ರಾಮ್‌ಚರಣ್ ಹಣೆಗೆ ಪೆಟ್ಟಾಗಿತ್ತು. ವೈದ್ಯರು 4 ಹೊಲಿಗೆ ಕೂಡ ಹಾಕಿದ್ದಾರೆ. ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆದರೆ ಒಂದೇ ದಿನದಲ್ಲಿ ಚರಣ್ ಮತ್ತೆ ಚಿತ್ರೀಕರಣಕ್ಕೆ ವಾಪಸ್ ಆಗಿದ್ದಾರೆ.

ಈಗಾಗಲೇ ಘೋಷಿಸಿರುವಂತೆ ಏಪ್ರಿಲ್ 30ಕ್ಕೆ 'ಪೆದ್ದಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಟೀಸರ್‌ನಲ್ಲಿ ಮತ್ತೊಮ್ಮೆ ಸಿನಿಮಾ ರಿಲೀಸ್ ಡೇಟ್ ಖಚಿತಪಡಿಸಿದೆ ಚಿತ್ರತಂಡ. ಇನ್ನು ರಾಮನವಮಿ ಸಂಭ್ರಮದಲ್ಲಿ ಚಿರಂಜೀವಿ ಅವರ ಮನೆಗೆ ತೆರಳಿ 'ಪೆದ್ದಿ' ಟೀಸರ್ ತೋರಿಸಿದೆ ಚಿತ್ರತಂಡ. ಮಗನ ಆರ್ಭಟ ನೋಡಿ ಚಿರು ಖುಷಿಯಾಗಿದ್ದಾರೆ. ಎಲ್ಲಾ ಸರಿ ಆದರೆ ಟೀಸರ್ ಬಿಜಿಎಂ ಅಷ್ಟಾಗಿ ಕಿಕ್ ಕೊಡ್ತಿಲ್ಲ. ಇದೇ ವಿಚಾರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಸುದೀಪ್ ನಟನೆಯ 'ಪೈಲ್ವಾನ್' ಚಿತ್ರದ ಬಿಜಿಎಂ ಅನ್ನು 'ಪೆದ್ದಿ' ಟೀಸರ್‌ಗೆ ಮಿಕ್ಸ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಈ ಬಿಜಿಎಂ ಚೆನ್ನಾಗಿ ಒಪ್ಪುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಎ. ಆರ್ ರಹಮಾನ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

More from Filmibeat

Read more about: ramcharan tollywood shivarajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X