For Quick Alerts
  ALLOW NOTIFICATIONS  
  For Daily Alerts

  'ಇಂಡಿಯನ್' ನಿರ್ದೇಶಕರ ಜೊತೆ ರಾಮ್ ಚರಣ್ ಸಿನಿಮಾ ಕನ್ಫರ್ಮ್; ಚಿತ್ರದಲ್ಲಿ ಇರ್ತಾರಾ ಯಶ್?

  |

  ತೆಲುಗು ಸ್ಟಾರ್ ನಟ ರಾಮ್ ಚರಣ್ ಸದ್ಯ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದೆ ಸಿನಿಮಾತಂಡ.

  ಆರ್ ಆರ್ ಆರ್ ಸಿನಿಮಾ ಬಳಿಕ ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಇದೀಗ ರಾಮ್ ಚರಣ್ ಮುಂದಿನ ಸಿನಿಮಾ ಅನೌನ್ಸ್ ಆಗಿದೆ. ಖ್ಯಾತ ತಮಿಳು ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ರಾಮ್ ಚರಣ್ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಶಂಕರ್ ಜೊತೆ ಕೆಲಸ ಉತ್ಸುಕನಾಗಿದ್ದೀನಿ ಎಂದು ರಾಮ್ ಚರಣ್ ಹೇಳಿದ್ದಾರೆ.

  ಶಂಕರ್ ನಿರ್ದೇಶನದಲ್ಲಿ ರಾಕಿ ಭಾಯ್: ರಾಮ್ ಚರಣ್ ಕೂಡ ಎಂಟ್ರಿ!ಶಂಕರ್ ನಿರ್ದೇಶನದಲ್ಲಿ ರಾಕಿ ಭಾಯ್: ರಾಮ್ ಚರಣ್ ಕೂಡ ಎಂಟ್ರಿ!

  ಮೊದಲ ಬಾರಿಗೆ ತೆಲುಗು ನಟನಿಗೆ ನಿರ್ದೇಶನ

  ಮೊದಲ ಬಾರಿಗೆ ತೆಲುಗು ನಟನಿಗೆ ನಿರ್ದೇಶನ

  ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಶಂಕರ್ ಮೊದಲ ಬಾರಿಗೆ ತೆಲುಗು ನಟನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂಲಗಳ ಪ್ರಕಾರ ಮಲ್ಟಿ ಸ್ಟಾರರ್ ಸಿನಿಮಾ ಎಂದು ಹೇಳಲಾಗುತ್ತಿದೆ. ಆದರೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ.

  ರಾಮ್ ಚರಣ್ 15ನೇ ಸಿನಿಮಾ

  ರಾಮ್ ಚರಣ್ 15ನೇ ಸಿನಿಮಾ

  ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ರಾಮ್ ಚರಣ್ ನಟನೆಯ 15ನೇ ಸಿನಿಮಾ ಇದಾಗಿದ್ದು, 5 ಭಾಷೆಯಲ್ಲಿ ತಯಾರಾಗುತ್ತಿದೆ. ವಿಶೇಷ ಎಂದರೆ ಕನ್ನಡದಲ್ಲೂ ಬರ್ತಿದೆ. 2022ಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

  ಚಿತ್ರದಲ್ಲಿ ಇರ್ತಾರಾ ಯಶ್?

  ಚಿತ್ರದಲ್ಲಿ ಇರ್ತಾರಾ ಯಶ್?

  ಅಂದಹಾಗೆ ಶಂಕರ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಇರಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೀಗ ರಾಮ್ ಚರಣ್ ಹೆಸರನ್ನು ಮಾತ್ರ ಅನೌನ್ಸ್ ಮಾಡಿರುವುದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಇದು ಮಲ್ಟಿ ಸ್ಟಾರರ್ ಸಿನಿಮಾನಾ ಅಥವಾ ರಾಮ್ ಚರಣ್ ಮಾತ್ರ ಇರಲಿದ್ದಾರಾ ಎನ್ನುವ ಪ್ರಶ್ನೆ ದಕ್ಷಿಣ ಭಾರತದ ಚಿತ್ರಾಭಿಮಾನಿಗಳಲ್ಲಿ ಮನೆಮಾಡಿದೆ.

  ಚಿರಂಜೀವಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ 'ಆಚಾರ್ಯ' ಸಿನಿಮಾತಂಡಚಿರಂಜೀವಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ 'ಆಚಾರ್ಯ' ಸಿನಿಮಾತಂಡ

  ನವಗ್ರಹ ಸಿನಿಮಾ ಮಾಡೋಕೆ ವಿನೋದ್ ಪ್ರಭಾಕರ್ ಒಪ್ಪಿರ್ಲಿಲ್ಲ
  ಇಂಡಿಯನ್-2ನಲ್ಲಿ ಶಂಕರ್ ಬ್ಯುಸಿ

  ಇಂಡಿಯನ್-2ನಲ್ಲಿ ಶಂಕರ್ ಬ್ಯುಸಿ

  ಶಂಕರ್ ಸದ್ಯ ಇಂಡಿಯನ್-2 ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲು ಕಾಯುತ್ತಿದ್ದಾರೆ. ಕಮಲ್ ಹಾಸನ್ ನಾಯಕನಾಗಿ ಕಾಣಿಸಿಕೊಂಡಿರುವ ಇಂಡಿಯನ್-2 ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿತ್ತು. ಆದರೆ ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಕಮಲ್ ಹಾಸನ್ ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಸಿನಿಮಾ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.

  English summary
  Telugu Actor Ram Charan team up with Tamil Director Shankar for his next film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X