ಮುಂಬೈನಲ್ಲಿ ಭವ್ಯ ಬಂಗ್ಲೆ ಖರೀದಿಸಿದ ಚಿರಂಜೀವಿ ಪುತ್ರ ರಾಮ್ ಚರಣ್

ಮೆಗಾಸ್ಟಾರ್ ಚಿರಂಜೀವಿ ಪುತ್ರ ನಟ ರಾಮ್ ಚರಣ್ ತೇಜ ತೆಲುಗು ರಾಜ್ಯಗಳಲ್ಲಿ ಒಳ್ಳೆಯ ಆಸ್ತಿಯನ್ನೇ ಹೊಂದಿದ್ದಾರೆ. ಈಗ ಮುಂಬೈನಲ್ಲೂ ಭವ್ಯವಾದ ಬಂಗಲೆಯೊಂದನ್ನು ಖರೀದಿಸಿದ್ದಾರೆ.

ಮುಂಬೈನ ಖಾರ್ ಪ್ರದೇಶದಲ್ಲಿ ಸಮುದ್ರಕ್ಕೆ ಎದುರಾಗಿರುವ ಐಶಾರಾಮಿ ಬಂಗಲೆಯನ್ನು ರಾಮ್ ಚರಣ್ ಖರೀದಿಸಿದ್ದು, ರಾಮ್ ಚರಣ್ ಪತ್ನಿ ಉಪಾಸನಾ, ಈಗಾಗಲೇ ಬಂಗ್ಲೆಯ ಗೃಹ ಪ್ರವೇಶ ಕಾರ್ಯ ಸಹ ಮುಗಿಸಿಬಿಟ್ಟಿದ್ದಾರೆ.

ಸ್ಟಾರ್ ನಟರ ಸಿನಿಮಾಗಳೆಲ್ಲವೂ ಬಹುತೇಕ ಪ್ಯಾನ್ ಇಂಡಿಯಾ ಸಿನಿಮಾಗಳೇ ಆಗುತ್ತಿದ್ದು, ರಾಮ್ ಚರಣ್ ಸಿನಿಮಾಗಳು ಸಹ ತೆಲುಗು ಸೇರಿದಂತೆ ಹಿಂದಿ ಇನ್ನಿತರೆ ಭಾಷೆಗಳಲ್ಲಿ ಬಿಡಗುಡೆ ಆಗುತ್ತಿವೆ. ಜೊತೆಗೆ ರಾಮ್ ಚರಣ್ ತೇಜ ನಿರ್ಮಾಪಕರೂ ಆಗಿದ್ದು ಬಾಲಿವುಡ್‌ನ ನಿರ್ಮಾಪಕರು, ವಿತರಕರು ಇನ್ನಿತರೆ ವ್ಯಕ್ತಿಗಳ ಜೊತೆಗೆ ಆಗಾಗ್ಗೆ ಮಾತನಾಡುತ್ತಲೇ ಇರಬೇಕಾಗುತ್ತದೆ. ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಇಷ್ಟವಿಲ್ಲದ ರಾಮ್ ಚರಣ್ ಅದಕ್ಕೆಂದೇ ಈ ಭವ್ಯ ಬಂಗ್ಲೆ ಖರೀದಿಸಿದ್ದಾರೆ.

ಮುಂಬೈನ ದುಬಾರಿ ಏರಿಯಾಗಳಲ್ಲಿ ಒಂದು ಖಾರ್

ಮುಂಬೈನ ದುಬಾರಿ ಏರಿಯಾಗಳಲ್ಲಿ ಒಂದು ಖಾರ್

ಬಂಗ್ಲೆಗೆ ಎಷ್ಟು ಕೋಟಿ ಹಣ ತೆತ್ತಿದ್ದಾರೆ ರಾಮ್ ಚರಣ್ ಎಂಬುದು ಬಹಿರಂಗಗೊಂಡಿಲ್ಲ. ಖಾರ್ ಏರಿಯಾವು, ಮುಂಬೈನ ದುಬಾರಿ ಏರಿಯಾಗಳಲ್ಲಿ ಒಂದು ಹಾಗಾಗಿ ಕೆಲವು ಕೋಟಿಗಳನ್ನೇ ಬಂಗ್ಲೆ ಖರೀದಿಸಲು ರಾಮ್ ಚರಣ್ ನೀಡಿರುವುದರಲ್ಲಿ ಅನುಮಾನವಿಲ್ಲ.

ಜೂಬ್ಲಿ ಹಿಲ್ಸ್‌ನಲ್ಲಿ ಭವ್ಯವಾದ ಮನೆ ಇದೆ

ಜೂಬ್ಲಿ ಹಿಲ್ಸ್‌ನಲ್ಲಿ ಭವ್ಯವಾದ ಮನೆ ಇದೆ

ಹೈದರಾಬಾದ್‌ನ ಜೂಬ್ಲಿ ಹಿಲ್ಸ್‌ನಲ್ಲಿ ರಾಮ್ ಚರಣ್ ಈಗಾಗಲೇ ಭವ್ಯವಾದ ಮನೆಯನ್ನು ಹೊಂದಿದ್ದಾರೆ. ಜೊತೆಗೆ ಹಲವು ಐಶಾರಾಮಿ ಕಾರುಗಳನ್ನು ಸಹ ಅವರು ಹೊಂದಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಸಹ ಬಹು ಶ್ರೀಮಂತ ಕುಟುಂಬದವರಾಗಿದ್ದು, ಅಪೊಲೊ ಸಮೂಹದ ಒಡೆಯರ ಕುಟುಂಬದವರಾಗಿದ್ದಾರೆ ಉಪಾಸನಾ.

ಮುಂಬೈನಲ್ಲಿ ಮನೆ ಮಾಡಿದ ರಶ್ಮಿಕಾ

ಮುಂಬೈನಲ್ಲಿ ಮನೆ ಮಾಡಿದ ರಶ್ಮಿಕಾ

ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಸಹ ಕೆಲವು ದಿನಗಳ ಹಿಂದೆಯಷ್ಟೆ ಮುಂಬೈನಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ. ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ, ಇನ್ನು ಮುಂದೆ ಹಿಂದಿ ಚಿತ್ರರಂಗದಲ್ಲಿಯೇ ನೆಲೆಗೊಳ್ಳಲು ಯತ್ನಿಸುತ್ತಿರುವ ಕಾರಣ ಮುಂಬೈನಲ್ಲಿಯೇ ಮನೆ ಮಾಡಿದ್ದಾರೆ ರಶ್ಮಿಕಾ.

Recommended Video

ಕೊನೆ ಕ್ಷಣದಲ್ಲಿ ಒಳಿತು ಮಾಡು ಮನುಷ್ಯ ಹಾಡು ಹಾಡಿದ ನವೀನ್ ಸಜ್ಜು | Filmibeat Kannada
ಮೂರು ಸಿನಿಮಾಗಳು ಕೈಯಲ್ಲಿವೆ

ಮೂರು ಸಿನಿಮಾಗಳು ಕೈಯಲ್ಲಿವೆ

ಸಿನಿಮಾಗಳ ವಿಷಯ ಗಮನಿಸುವುದಾದರೆ, ರಾಮ್ ಚರಣ್ ಪ್ರಸ್ತುತ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ 'ಆಚಾರ್ಯ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. 'ಆಚಾರ್ಯ' ಸಿನಿಮಾದ ನಿರ್ಮಾಪಕರೂ ಅವರೇ. ತಮಿಳಿನ ನಿರ್ದೇಶಕ ಶಂಕರ್ ಜೊತೆಗೆ ಹೊಸ ಸಿನಿಮಾದಲ್ಲಿಯೂ ನಟಿಸುತ್ತಿದ್ದು, ಅದರ ಚಿತ್ರೀಕರಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ.

More from Filmibeat

English summary
Actor Ram Charan Teja buys a luxurious bungalow in Mumbai. Bungalow is in Khar area and it is a sea face bungalow.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X