For Quick Alerts
  ALLOW NOTIFICATIONS  
  For Daily Alerts

  ತಮಿಳಿನ ಯಶಸ್ವಿ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ?

  |

  ರಾಜಮೌಳಿ ಜೊತೆ ಆರ್‌ಆರ್‌ಆರ್ ಸಿನಿಮಾ ಮಾಡುತ್ತಿರುವ ರಾಮ್ ಚರಣ್ ತೇಜ ತಮ್ಮ ಮುಂದಿನ ಚಿತ್ರವನ್ನು ಶಂಕರ್ ಜೊತೆ ಮಾಡುವುದಾಗಿ ಅದಾಗಲೇ ಪ್ರಕಟಿಸಿದ್ದಾರೆ.

  ನಿರ್ದೇಶಕ ಶಂಕರ್ ಸಹ ರಾಮ್ ಚರಣ್ ಜೊತೆಗಿನ ಪ್ರಾಜೆಕ್ಟ್‌ಗೆ ಪೂರ್ವ ತಯಾರಿ ನಡೆಸುತ್ತಿದ್ದು, ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ್ಮೇಲೆ ಚಿತ್ರೀಕರಣ ಆರಂಭಿಸಬಹುದು.

  ಕಮಲ್ ಹಾಸನ್ ಚಿತ್ರತಂಡ ಸೇರಿದ 'ಕೆಜಿಎಫ್' ಸಾಹಸ ನಿರ್ದೇಶಕರುಕಮಲ್ ಹಾಸನ್ ಚಿತ್ರತಂಡ ಸೇರಿದ 'ಕೆಜಿಎಫ್' ಸಾಹಸ ನಿರ್ದೇಶಕರು

  ಇದೀಗ, ತಮಿಳಿನ ಮತ್ತೊಬ್ಬ ನಿರ್ದೇಶಕನ ಜೊತೆ ಮೆಗಾಪುತ್ರ ಸಿನಿಮಾ ಮಾಡುವ ಕುರಿತು ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಶಂಕರ್-ರಾಮ್ ಚರಣ್ ಸಿನಿಮಾ ಸ್ವಲ್ಪ ತಡವಾಗಬಹುದು. ಈ ಅಂತರದಲ್ಲಿ ಮತ್ತೊಂದು ಸಿನಿಮಾ ಮಾಡುವ ಬಗ್ಗೆ ಮಗಧೀರ ನಟ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

  ಹಾಗಾಗಿ, ಮಾಸ್ಟರ್ ಚಿತ್ರ ನಿರ್ದೇಶಿಸಿದ್ದ ಲೋಕೇಶ್ ಕನಕರಾಜ್ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಸಮಾಚಾರ ಸದ್ದು ಮಾಡ್ತಿದೆ. ರಾಮ್ ಚರಣ್‌ಗಾಗಿ ಮಾಸ್ಟರ್ ಡೈರೆಕ್ಟರ್ ಭರ್ಜರಿಯಾಗಿರುವ ಕಮರ್ಷಿಯಲ್ ಸಬ್ಜೆಕ್ಟ್ ಸಿದ್ದಮಾಡಿದ್ದು, ಮೆಗಾನಟನ ಬಳಿ ಸ್ಕ್ರಿಪ್ಟ್‌ಗೆ ಓಕೆ ಮಾಡಿಕೊಂಡಿದ್ದಾರಂತೆ.

  Sanchari Vijay ಬ್ರೈನ್ ಫೆಲ್ಯೂರ್ ಆಗಿದೆ ಡೆಡ್ ಆಗಿಲ್ಲ ಎಂದು ಡಾಕ್ಟರ್ ಸ್ಪಷ್ಟನೆ | Filmibeat Kannada

  ಒಂದು ವೇಳೆ ಶಂಕರ್ ಸಿನಿಮಾ ಮುಂದಕ್ಕೆ ಹೋದರೆ ಈ ಪ್ರಾಜೆಕ್ಟ್ ಟೇಕ್ ಆನ್ ಮಾಡುವ ಆಲೋಚನೆಯಲ್ಲಿದ್ದಾರೆ ರಾಮ್ ಚರಣ್. ಮತ್ತೊಂದೆಡೆ ಲೋಕೇಶ್ ಕನಕರಾಜ್ ತಮಿಳಿನಲ್ಲಿ ಕಮಲ್ ಹಾಸನ್ ಜೊತೆ ವಿಕ್ರಂ ಸಿನಿಮಾ ಶುರು ಮಾಡಿದ್ದಾರೆ.

  English summary
  Telugu actor Ram charan Teja planning to do next project with Lokesh kanagaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X