'ಆಚಾರ್ಯ' ಸಿನಿಮಾದಲ್ಲಿ ತಮ್ಮ ಪಾತ್ರದ ಗುಟ್ಟು ಬಿಟ್ಟುಕೊಟ್ಟ ರಾಮ್ ಚರಣ್ ತೇಜ
ಮೆಗಾಸ್ಟಾರ್ ಚಿರಂಜೀವಿ ನಟಿಸಿ ಕೊರಟಾಲ ಶಿವ ನಿರ್ದೇಶಿಸುತ್ತಿರುವ 'ಆಚಾರ್ಯ' ಸಿನಿಮಾದಲ್ಲಿ ರಾಮ್ ಚರಣ್ ತೇಜ ಸಹ ನಟಿಸುತ್ತಿರುವುದು ಹಳೆಯ ಸುದ್ದಿ.
ತಂದೆಯ ಸಿನಿಮಾದಲ್ಲಿ ರಾಮ್ ಚರಣ್ ತೇಜ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ನಿಜವಲ್ಲ. ರಾಮ್ ಚರಣ್ ತೇಜ ಪೂರ್ಣ ಪ್ರಮಾಣದ ಪಾತ್ರವನ್ನೇ ನಿರ್ವಹಿಸುತ್ತಿದ್ದಾರಂತೆ.
'ಆಚಾರ್ಯ' ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಮ್ ಚರಣ್ ತೇಜ. 'ಆಚಾರ್ಯ ಸಿನಿಮಾದಲ್ಲಿ ನನ್ನದು ಅತಿಥಿ ಪಾತ್ರವಲ್ಲ ಬದಲಿಗೆ ಪೂರ್ಣ ಪ್ರಮಾಣದ ಪಾತ್ರ. ನಾನು ನಿರ್ವಹಿಸುತ್ತಿರುವ ಪಾತ್ರದ ಹೆಸರು 'ಸಿದ್ಧ'' ಎಂದಿದ್ದಾರೆ ರಾಮ್ ಚರಣ್.

ರಾಮ್ ಚರಣ್ ಗೆ ಪೂಜಾ ಹೆಗ್ಡೆ ನಾಯಕಿ
ಸಿನಿಮಾದಲ್ಲಿ ರಾಮ್ ಚರಣ್ ಗೆ ನಾಯಕಿಯಾಗಿ ನಟಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಾಯಕ ಚಿರಂಜೀವಿ ಅವರೇ ಆಗಿರುತ್ತಾರೆ. ಆದರೆ ರಾಮ್ ಚರಣ್ ತೇಜ ಅವರದ್ದೂ ಸಹ ಅಷ್ಟೇ ಪ್ರಮುಖವಾದ ಪಾತ್ರ ಸಿನಿಮಾದಲ್ಲಿ ಇರಲಿದೆ.

ಮಗಧೀರ, ಬ್ರೂಸ್ ಲೀ ಸಿನಿಮಾದಲ್ಲಿ ಚಿರಂಜೀವಿ ಅತಿಥಿ ಪಾತ್ರ
ಈ ಹಿಂದೆ ರಾಮ್ ಚರಣ್ ತೇಜ ಅಭಿನಯಿಸಿದ್ದ 'ಮಗಧೀರ' ಹಾಗೂ 'ಬ್ರೂಸ್ ಲೀ' ಸಿನಿಮಾದಲ್ಲಿ ನಟ ಚಿರಂಜೀವಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೇ ಮೊದಲ ಬಾರಿಗೆ ಅಪ್ಪ-ಮಕ್ಕಳಿಬ್ಬರೂ ಸಿನಿಮಾ ಒಂದರಲ್ಲಿ ಪೂರ್ಣ ಪ್ರಮಾಣದ ಪಾತ್ರಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.

'ಆಚಾರ್ಯ' ಸಿನಿಮಾಕ್ಕಾಗಿ ಬಹುದೊಡ್ಡ ಸೆಟ್
'ಆಚಾರ್ಯ' ಸಿನಿಮಾಕ್ಕಾಗಿ ಏಷ್ಯಾದಲ್ಲಿಯೇ ಅತಿ ದೊಡ್ಡ ಸಿನಿಮಾ ಸೆಟ್ ಹಾಕಲಾಗಿದೆ. ದೇವಾಲಯ ಹಾಗೂ ಹಳ್ಳಿಯೊಂದನ್ನು ಮರುಸೃಷ್ಟಿಸಲಾಗಿದೆ. ಈ ಒಂದು ಸೆಟ್‌ಗಾಗಿ ಹಲವಾರು ಕೋಟಿಗಳನ್ನು ನಿರ್ಮಾಪಕರು ಸುರಿದಿದ್ದಾರೆ. ಅಂದಹಾಗೆ ಸಿನಿಮಾದ ನಿರ್ಮಾಪಕರಲ್ಲಿ ರಾಮ್ ಚರಣ್ ತೇಜ ಸಹ ಒಬ್ಬರು.
Recommended Video

ಕಾಜಲ್ ಅಗರ್ವಾಲ್ ನಾಯಕಿ
'ಆಚಾರ್ಯ' ಸಿನಿಮಾದಲ್ಲಿ ಚಿರಂಜೀವಿ ಎದುರು ನಾಯಕಿಯಾಗಿ ನಟಿ ಕಾಜಲ್ ಅಗರ್ವಾಲ್ ಅಭಿನಯಿಸುತ್ತಿದ್ದಾರೆ. ಸಿನಿಮಾದಲ್ಲಿ ವಿಲನ್ ಪಾತ್ರಧಾರಿಯಾಗಿ ನಟ ಸೂನು ಸೂದ್ ಇದ್ದಾರೆ. ಆಚಾರ್ಯ ಸಿನಿಮಾದ ಟ್ರೇಲರ್ ಜನವರಿ 29 ರಂದು ಬಿಡುಗಡೆ ಆಗಲಿದೆ.


Click it and Unblock the Notifications











