ವಿದೇಶಿ ನಟಿ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಾಮ್ ಚರಣ್ ತೇಜ
ಆರ್ಆರ್ಆರ್ ಸಿನಿಮಾ ಹಾಗೂ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ರಾಮ್ ಚರಣ್ ತೇಜ ಇದೀಗ ಖ್ಯಾತ ನಿರ್ದೇಶಕ ಶಂಕರ್ ಅವರೊಟ್ಟಿಗೆ ಸಿನಿಮಾ ಒಪ್ಪಿಕೊಂಡಿದ್ದಾರೆ.
ಶಂಕರ್, ರಾಮ್ ಚರಣ್ ತೇಜ ಸಿನಿಮಾದಲ್ಲಿ ಕನ್ನಡಿಗ ಯಶ್ ಸಹ ಮುಖ್ಯ ಭೂಮಿಕೆಯಲ್ಲಿರಲಿದ್ದಾರೆ ಎನ್ನಲಾಗುತ್ತಿದೆ. ಇದು ಇನ್ನು ಅಧಿಕೃತಗೊಳ್ಳಬೇಕಿದೆ.
ಈ ನಡುವೆ ಇದೇ ಸಿನಿಮಾದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಸಿನಿಮಾದಲ್ಲಿ ರಾಮ್ ಚರಣ್ ತೇಜ ಗೆ ವಿದೇಶಿ ನಟಿಯೊಬ್ಬರು ಜೋಡಿಯಾಗಿ ಇರಲಿದ್ದಾರಂತೆ.

ರಾಮ್ ಚರಣ್ ತೇಜ ಗೆ ಜೋಡಿಯಾಗಿ ದಕ್ಷಿಣ ಕೊರಿಯಾದ ನಟಿ ಸುಜಿ ಬೀ ಅನ್ನು ಆಯ್ಕೆ ಮಾಡಲಾಗಿದೆ. ಮುದ್ದು ಮುಖದ ಈ ಚೆಲುವೆ ಈಗಾಗಲೇ ಕೆಲವು ಕೊರಿಯನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಜಿ ಗೆ ಇದೇ ಮೊದಲ ವಿದೇಶಿ ಭಾಷಾ ಸಿನಿಮಾ.
ಒಂದು ಕಿರು ಚಿತ್ರ, ನಾಲ್ಕು ಪೂರ್ಣ ಪ್ರಮಾಣದ ಸಿನಿಮಾ ಹಾಗೂ ಒಂದು ಕೊರಿಯನ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಸುಜಿ ಬೀ. 12 ಟೆಲಿವಿಶನ್ ಸೀರೀಸ್, ಐದು ಟಿವಿ ಶೋ ಗಳಲ್ಲಿಯೂ ಈ ನಟಿ ಭಾಗವಹಿಸಿದ್ದಾರೆ.
Recommended Video
ಈ ಸಿನಿಮಾವು ರಾಮ್ ಚರಣ್ ತೇಜ ನಟನೆಯ 15ನೇ ಸಿನಿಮಾ ಆಗಿದೆ. ಶಂಕರ್ ನಿರ್ದೇಶಿಸುತ್ತಿರುವ 50ನೇ ಸಿನಿಮಾ ಆಗಿದೆ. ಸಿನಿಮಾವನ್ನು ಶ್ರೀ ವೆಂಕಟೇಶ್ವರ ಕ್ರಿಯೇಶನ್ಸ್‌ನಲ್ಲಿ ಮೂಡಿಬರುತ್ತಿರುವ ಶಂಕರ್-ರಾಮ್ ಚರಣ್ ಜೋಡಿಯ ಈ ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಖ್ಯಾತ ನಿರ್ಮಾಪಕ ದಿಲ್ ರಾಜು ಜೊತೆಗೆ ಶಿರಿಸ್ ಸಹ ನಿರ್ಮಾಪಕರಾಗಿದ್ದಾರೆ.
ಇದೇ ಸಿನಿಮಾದಲ್ಲಿ ನಟ ಯಶ್ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ವರೆಗೂ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ರಾಮ್ ಚರಣ್ ತೇಜ ನಟನೆಯ ಆಚಾರ್ಯ ಸಿನಿಮಾ ಚಿತ್ರೀಕರಣ ಮುಗಿದ ಬಳಿಕ ಈ ಸಿನಿಮಾ ಸೆಟ್ಟೇರಲಿದೆ.


Click it and Unblock the Notifications











