ರಾಮ್‌ಚರಣ್- ಉಪಾಸನಾ ಆತಂಕ ನಿಜವಾಯ್ತಾ? ಮಗಳು ಕ್ಲಿಂಕಾರ ಬಗ್ಗೆ ಕೆಲವರ ವಿಚಿತ್ರ ಕಾಮೆಂಟ್ಸ್

ತೆಲುಗು ನಟ ರಾಮ್‌ಚರಣ್ ಹಾಗೂ ಉಪಾಸನಾ ಟಾಲಿವುಡ್ ಹಾಟ್ ಕಪಲ್. ಇಬ್ಬರಿಗೂ ದೊಡ್ಡ ಫಾಲೋಯಿಂಗ್ ಇದೆ. ಚರಣ್ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆಯುತ್ತಿದ್ದಾರೆ. ಉದ್ಯಮಿ, ಅಪೋಲೋ ಆಸ್ಪತ್ರೆಗಳ CSRನ ಉಪಾಧ್ಯಕ್ಷೆಯಾಗಿ ಉಪಾಸನಾ ಜನಪ್ರಿಯತೆ ಸಂಪಾದಿಸಿದ್ದಾರೆ. ದಂಪತಿಗೆ ಎರಡು ಹೆಣ್ಣು, ಒಂದು ಗಂಡು ಸೇರಿ ಮೂವರು ಮಕ್ಕಳು. 3 ವರ್ಷಗಳ ಹಿಂದೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೇ ವರ್ಷ ಅವಳಿ ಮಕ್ಕಳನ್ನು ದಂಪತಿ ಸ್ವಾಗತಿಸಿದ್ದರು.

ಮಗಳಿಗೆ ಕ್ಲಿಂಕಾರ ಎಂದು ಮೆಗಾ ಫ್ಯಾಮಿಲಿ ನಾಮಕರಣ ಮಾಡಿತ್ತು. ಆದರೆ ಮಗಳ ಫೋಟೊವನ್ನು ಈವರೆಗೆ ಹಂಚಿಕೊಂಡಿರಲಿಲ್ಲ. ಮಗಳ ಮುಖವನ್ನು ಯಾವುದೇ ಫೋಟೊದಲ್ಲಿ ದಂಪತಿ ತೋರಿಸುತ್ತಿರಲಿಲ್ಲ. ಇದೀಗ 3ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕ್ಲಿಂಕಾರಳನ್ನು ಅಭಿಮಾನಿಗಳಿಗೆ ದಂಪತಿ ಪರಿಚಯಿಸಿದ್ದಾರೆ. ತಂದೆ-ತಾಯಿ ಮಗಳನ್ನು ಎತ್ತಿ ಹಿಡಿದುಕೊಂಡಿರುವ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

Ram Charan-Upasana s Fear Comes True Klinkara s Photo Sparks Social Media Debate

ಕ್ಲಿಂಕಾರಳನ್ನು ನೋಡಲು ಬಹಳ ದಿನಗಳಿಂದ ಮೆಗಾ ಫ್ಯಾನ್ಸ್ ಕಾಯುತ್ತಿದ್ದರು. ಹೋದಲ್ಲಿ ಬಂದಲ್ಲಿ ಮಗಳ ಮುಖ ಮುಚ್ಚಿಕೊಂಡು ಉಪಾಸನಾ ಓಡಾಡುತ್ತಿದ್ದರು. ಮಗು ಹಿಂದೆ ತಿರುಗಿರುವ ಫೋಟೊ ಅಥವಾ ಮುಖ ಕಾಣಿಸದಂತೆ ಮುಚ್ಚಿರುವ ಫೋಟೊಗಳನ್ನು ಮಾತ್ರ ಹಂಚಿಕೊಳ್ಳುತ್ತಿದ್ದರು. ಕೆಲವರು ಹೇಗಾದರೂ ಮಾಡಿ ಕ್ಲಿಂಕಾರ ಫೋಟೊ ಹಿಡಿದು ಪೋಸ್ಟ್ ಮಾಡುವ ಸಾಹಸ ಮಾಡಿದ್ದರು. ಮಾರ್ಪ್ ಮಾಡಿದ್ದ ಫೋಟೊಗಳನ್ನು ತೇಲಿಬಿಟ್ಟಿದ್ದರು. ಅಷ್ಟಕ್ಕೂ ಉಪಾಸನಾ ಸಾರ್ವಜನಿಕವಾಗಿ ಮಗಳ ಮುಖ ತೋರಿಸಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ? ಇಷ್ಟು ಕುತೂಹಲ ಯಾಕೆ? ಮಚ್ಚಿಟ್ಟರೆ ಕುತೂಹಲ ಹೆಚ್ಚು. ಒಂದಲ್ಲ ಒಂದು ದಿನ ತೋರಿಸಲೇಬೇಕಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದು ಇದೆ.

ಸೋಶಿಯಲ್ ಮೀಡಿಯಾದಲ್ಲಿ ಬಹಳ ನೆಗೆಟಿವಿಟಿ ಇದೆ. ಎಲ್ಲದಕ್ಕೂ ಏನೇನೊ ಕಾಮೆಂಟ್ ಮಾಡ್ತಾರೆ. ಟ್ರೋಲ್ ಮಾಡ್ತಾರೆ ಅದಕ್ಕೆ ನಾನು ಮಗಳ ಮುಖ ಕಾಣುವಂತಹ ಫೋಟೊ ಹಾಕುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಉಪಾಸನಾ ಹೇಳಿದ್ದರು. ಕೆಲವರು ಆಕೆಯ ವಾದವನ್ನು ಒಪ್ಪಿದ್ದರು. ಇದೀಗ ಕ್ಲಿಂಕಾರಳ ಫೋಟೊ ಹಂಚಿಕೊಂಡಿದ್ದಾರೆ. ಉಪಾಸನಾ ಊಹಿಸಿದಂತೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಏನೇನೊ ಕಾಮೆಂಟ್ ಮಾಡುತ್ತಿದ್ದಾರೆ. ಮಗು ನೋಡಲು ಹೀಗಿದೆ, ಹಾಗಿದೆ ಅಂತ ಚರ್ಚೆ ಹುಟ್ಟುಹಾಕಿದ್ದಾರೆ. ಈ ಬಗ್ಗೆ ಮೆಗಾ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಉಪಾಸನಾ ಹಾಗೂ ರಾಮ್‌ಚರಣ್ ಊಹಿಸಿದ್ದೇ ನಿಜವಾಯ್ತು. ಮಗು ನೋಡಿ ಕೆಲವರು ಬಾಯಿಗೆ ಬಂದಂತೆ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಅವಳಿ ಮಕ್ಕಳ ವಿಚಾರದಲ್ಲಿ ಕೂಡ ರಾಮ್‌ಚರಣ್- ಉಪಾಸನಾ ದಂಪತಿ ಇದೇ ರೀತಿ ಜಾಗ್ರತೆ ವಹಿಸಿದ್ದಾರೆ. ಇತ್ತೀಚೆಗೆ ಮೂವರು ಮಕ್ಕಳು ಒಟ್ಟಿಗೆ ಕೈ ಇಟ್ಟುಕೊಂಡಿರುವ ಫೋಟೊವನ್ನು ಮಾತ್ರ ಪೋಸ್ಟ್ ಮಾಡಿದ್ದಾರೆ. ಸದ್ಯಕ್ಕೆ ಅವಳಿಮಕ್ಕಳನ್ನು ರಾಮ್‌ಚರಣ್- ಉಪಾಸನಾ ಪರಿಚಯಿಸುವುದಿಲ್ಲ ಎನ್ನುವುದು ಗೊತ್ತಾಗುತ್ತಿದೆ.

'ಪೆದ್ದಿ' ಸಿನಿಮಾ ಗೆಲುವಿನ ಸಂಭ್ರಮದಲ್ಲಿ ರಾಮ್‌ಚರಣ್ ತೇಲುತ್ತಿದ್ದಾರೆ. ಬುಚ್ಚಿಬಾಬು ನಿರ್ದೇಶನದ ಸಿನಿಮಾ ಜೂನ್ 4ರಂದು ತೆರೆಗೆ ಬಂದಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈಗಾಗಲೇ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ.

ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ 'ಪೆದ್ದಿ' ಚಿತ್ರವನ್ನು ವೃದ್ಧಿ ಸಿನಿಮಾಸ್ ಸಂಸ್ಥೆ ನಿರ್ಮಿಸಿದೆ. ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕಾಗಿ ರಾಮ್‌ಚರಣ್ ತನು, ಮನ ಅರ್ಪಿಸಿಕೊಂಡು ಕೆಲಸ ಮಾಡಿದ್ದರು. ಅವರ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಮೊದಲ ದಿನ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಉಪಾಸನಾ ಸಂಭ್ರಮಿಸಿದ್ದರು.

Read more about: ramcharan tollywood actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X