twitter
    For Quick Alerts
    ALLOW NOTIFICATIONS  
    For Daily Alerts

    ನೌಕರರಿಗೆ ಒಂದು ಕೋಟಿ ಸಂಬಳ ಬಾಕಿ ಉಳಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ!

    |

    ಖ್ಯಾತ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸುಮಾರು ಒಂದು ಕೋಟಿ ಮೊತ್ತದಷ್ಟು ನೌಕರರ ಸಂಬಳ ಬಾಕಿ ಉಳಿಸಿಕೊಂಡಿದ್ದಾರೆ ಎಂದು ವೆಸ್ಟರ್ನ್ ಇಂಡಿಯಾ ಸಿನಿಮಾ ಕಾರ್ಮಿಕರ ಒಕ್ಕೂಟ (ಎಫ್‌ಡಬ್ಲ್ಯುಐಸಿಒ) ಆರೋಪಿಸಿದೆ.

    ಸಿನಿಮಾ ನೌಕರರ ಒಕ್ಕೂಟವು ಈಗಾಗಲೇ ಈ ಸಂಬಂಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಗೆ ನೊಟೀಸ್ ನೀಡಿದೆ. ಆದರೆ ನೊಟೀಸ್‌ ಗೆ ರಾಮ್ ಗೋಪಾಲ್ ವರ್ಮಾ ಉತ್ತರಿಸಿಲ್ಲ ಎಂದಿದೆ ಎಫ್‌ಡಬ್ಲ್ಯುಐಸಿಒ.

    ಒಕ್ಕೂಟದ ವತಿಯಿಂದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಗೆ ಬಹಿಷ್ಕಾರ ಹೇರಿದ್ದು, ಸಿನಿಮಾ ನೌಕರರ ಒಕ್ಕೂಟದ ಸದಸ್ಯರು ಇನ್ನು ಮುಂದೆ ರಾಮ್ ಗೋಪಾಲ್ ವರ್ಮಾ ಜೊತೆಗೆ ಕೆಲಸ ಮಾಡುವುದಿಲ್ಲ ಎಂದಿದೆ ಎಫ್‌ಡಬ್ಲ್ಯುಐಸಿಒ.

    Ram Gopal Varma Banned By FWIOC For Not Giving Salary To Film Labors

    ಕಳೆದ ವರ್ಷ ಸೆಪ್ಟೆಂಬರ್ ನಲ್ಲಿಯೇ ರಾಮ್ ಗೋಪಾಲ್ ವರ್ಮಾಗೆ ಎಫ್‌ಡಬ್ಲ್ಯುಐಸಿಒ ನೊಟೀಸ್ ನೀಡಿತ್ತು. ಅಷ್ಟೇ ಅಲ್ಲದೆ ಹಲವು ಪತ್ರಗಳನ್ನೂ ಬರೆದಿತ್ತು. ಆದರೆ ಅವುಗಳನ್ನು ಸ್ವೀಕರಿಸಲು ರಾಮ್ ಗೋಪಾಲ್ ವರ್ಮಾ ನಿರಾಕರಿಸಿದ್ದರು.

    ಲಾಕ್‌ಡೌನ್ ಅವಧಿ ಸೇರಿದಂತೆ ಅದರ ಹಿಂದೆಯೂ ರಾಮ್ ಗೋಪಾಲ್ ವರ್ಮಾ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಆದರೆ ಆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಸಿನಿ ಕಾರ್ಮಿಕರಿಗೆ ವರ್ಮಾ ಸಂಬಳ ನೀಡಿರಲಿಲ್ಲ ಎನ್ನಲಾಗಿದೆ.

    ರಾಮ್ ಗೋಪಾಲ್ ವರ್ಮಾ ಕೇವಲ ವಿವಾದಗಳಿಂದಷ್ಟೆ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಬಗ್ಗೆ ಸಿನಿಮಾ ಮಾಡಿದ್ದರು. ನಂತರ ಕೆಲವು ಸಾಫ್ಟ್ ಪಾರ್ನ್ ಸಿನಿಮಾಗಳನ್ನು ನಿರ್ದೇಶಿಸಿ ಆನ್‌ಲೈನ್ ನಲ್ಲಿ ಬಿಡುಗಡೆ ಮಾಡಿ ಸುದ್ದಿಯಾಗಿದ್ದರು ವರ್ಮಾ.

    English summary
    Director Ram Gopal Varma banned by FWIOC for not giving salaries to movie labors.
    Tuesday, January 12, 2021, 9:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X