twitter
    For Quick Alerts
    ALLOW NOTIFICATIONS  
    For Daily Alerts

    'ನಾರಾ ಲೋಕೇಶ್ ಒಬ್ಬ ವೈರಸ್, ಜೂ ಎನ್‌ಟಿಆರ್ ವ್ಯಾಕ್ಸಿನ್' ಎಂದ ವರ್ಮಾ

    |

    ತೆಲುಗುದೇಶ ಪಕ್ಷಕ್ಕೆ ಜೂನಿಯರ್ ಎನ್‌ ಟಿ ಆರ್ ಅನಿವಾರ್ಯ ಎಂದು ಮತ್ತೊಮ್ಮೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯ ಮಂಡಿಸಿದ್ದಾರೆ. ಟಿಡಿಪಿ ಪಕ್ಷದಲ್ಲಿ ನಾರಾ ಲೋಕೇಶ್ ಎಂಬ ವೈರಸ್ ಹುಟ್ಟಿಕೊಂಡಿದೆ. ಅದಕ್ಕೆ ವ್ಯಾಕ್ಸಿನ್ ಆಗಿ ಜೂ ಎನ್‌ಟಿಆರ್ ಬರಬೇಕಿದೆ ಎಂದು ಆರ್‌ಜಿವಿ ಟ್ವೀಟ್ ಮಾಡಿದ್ದಾರೆ.

    ''ನಾರಾ ಲೋಕೇಶ್ ಎಂಬ ಅಪಾಯಕಾರಿ ವೈರಸ್‌ನಿಂದ ತೆಲುಗು ದೇಶಂ ಪಕ್ಷ ನೆಲಕಚ್ಚಿದೆ. ಟಿಡಿಪಿ ಪಕ್ಷವನ್ನು ಪುನಶ್ಚೇತನಗೊಳಿಸಬೇಕು ಅಂದ್ರೆ ಜೂ ಎನ್‌ಟಿಆರ್ ಅವರಿಂದ ಮಾತ್ರ ಸಾಧ್ಯ. ವೈರಸ್‌ನಿಂದ ನಿಮ್ಮನ್ನು ಕಾಪಾಡಲು ಎನ್‌ಟಿಆರ್ ಎಂಬ ವ್ಯಾಕ್ಸಿನ್ ಬಳಸಿ. ಇಲ್ಲವಾದಲ್ಲಿ ಟಿಡಿಪಿ ಪಕ್ಷದ ಸದಸ್ಯರೇ ನೀವೆಲ್ಲ ಸಾಯಲಿದ್ದೀರಾ'' ಎಂದು ಆರ್‌ಜಿವಿ ಟ್ವೀಟ್ ಮೂಲಕ ಚಂದ್ರಬಾಬು ನಾಯ್ಡು ಮಗನಿಗೆ ಟಾಂಗ್ ಕೊಟ್ಟಿದ್ದಾರೆ.

    ಜೂ ಎನ್‌ಟಿಆರ್ ರಾಜಕೀಯ ಎಂಟ್ರಿ ಬಗ್ಗೆ ಅನುಮಾನ ಮೂಡಿಸಿದ RRR ಹೊಸ ಪೋಸ್ಟರ್?ಜೂ ಎನ್‌ಟಿಆರ್ ರಾಜಕೀಯ ಎಂಟ್ರಿ ಬಗ್ಗೆ ಅನುಮಾನ ಮೂಡಿಸಿದ RRR ಹೊಸ ಪೋಸ್ಟರ್?

    ''ಟಿಡಿಪಿ ಕಾರ್ಯಕರ್ತರು ಎಲ್ಲರೂ ಜಾಗೃತವಾಗಿರಿ. ನಾರಾ ಲೋಕೇಶ್ ಮತ್ತು ಚಂದ್ರಬಾಬು ನಾಯ್ಡು ಅವರ ಕಾರಣದಿಂದ ತೆಲುಗು ದೇಶಂ ಪಕ್ಷ ಕೊರೊನಾ ಸೋಂಕಿಗೆ ಒಳಗಾಗಿದೆ. ತಕ್ಷಣ ತಾರಕ್ ಎಂಬ ವ್ಯಾಕ್ಸಿನ್ ಪಡೆದುಕೊಳ್ಳಿ'' ಎಂದು ಇನ್ನೊಂದು ಟ್ವೀಟ್‌ನಲ್ಲಿ ಎನ್‌ಟಿಆರ್ ಪರವಾಗಿ ವರ್ಮಾ ದನಿ ಎತ್ತಿದ್ದಾರೆ.

    Ram Gopal Varma Called Dangerous virus to nara lokesh

    ಎರಡು ದಿನಗಳ ಹಿಂದೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಚಂದ್ರಬಾಬು ನಾಯ್ಡು ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡುವುದನ್ನು ಮರೆತಿಲ್ಲ ರಾಮ್ ಗೋಪಾಲ್ ವರ್ಮಾ.

    ''ಚಂದ್ರಬಾಬು ನಾಯ್ಡು ಅವರಿಗೆ ಶುಭಾಶಯಗಳು. ಆಂಧ್ರಪ್ರದೇಶ ಇರುವವರೆಗೂ ನೀವು ಬದುಕಬೇಕೆಂದು ನಾನು ಪ್ರಮಾಣಿಕವಾಗಿ ಬಯಸುತ್ತೇನೆ. ಏಕಂದ್ರೆ, ಮಡಿಚಿದ ಎರಡು ಕೈಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ'' ಎಂದಿದ್ದಾರೆ.

    ಚಂದ್ರಬಾಬು ನಾಯ್ಡು ಅವರನ್ನು ಮೊದಲಿನಿಂದಲೂ ಟಾರ್ಗೆಟ್ ಮಾಡುತ್ತಿರುವ ರಾಮ್ ಗೋಪಾಲ್ ವರ್ಮಾ, ಒಂದಲ್ಲ ಒಂದು ವಿಚಾರವನ್ನು ಮುಂದಿಟ್ಟು ಕುಟುಕುತ್ತಲೇ ಇದ್ದಾರೆ.

    Ram Gopal Varma Called Dangerous virus to nara lokesh

    Recommended Video

    ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅನುಪ್ರಭಾಕರ್ | Filmibeat Kannada

    'ಲಕ್ಷ್ಮೀಸ್ ಎನ್‌ಟಿಆರ್', 'ಅಮ್ಮ ರಾಜ್ಯಂಲೋ ಕಡಪ ಬಿಡ್ಡಲು', 'ಪವರ್‌ಸ್ಟಾರ್' ಚಿತ್ರದಲ್ಲಿ ಎನ್‌ಟಿಆರ್ ಅವರಿಗೆ ಚಂದ್ರಬಾಬು ನಾಯ್ಡು ಅವರ ಬಗ್ಗೆ ಹೀಯಾಳಿಸಿ, ಕೆಟ್ಟದಾಗಿ ತೋರಿಸಲಾಗಿತ್ತು.

    English summary
    Director Ram Gopal Varma Called 'Dangerous virus' to nara lokesh and chandrababu naidu.
    Thursday, April 22, 2021, 15:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X