For Quick Alerts
  ALLOW NOTIFICATIONS  
  For Daily Alerts

  ಅಮ್ಮನ ಉಳಿಸುವ ಹೋರಾಟದಲ್ಲಿ ಪ್ರಾಣಬಿಟ್ಟ ಆರ್‌ಜಿವಿ ಸಹೋದರ

  |

  ಕೊರೊನಾ ವೈರಸ್ ಕಾರಣದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವರು ಪ್ರಾಣ ಕಳೆದುಕೊಂಡರು. ಇನ್ನು ಅನೇಕರು ಸೋಂಕಿಗೆ ಒಳಗಾಗಿ ಹೋರಾಡುತ್ತಿದ್ದಾರೆ. ಇದೀಗ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮನೆಯಲ್ಲಿ ವಿಷಾದ ಉಂಟಾಗಿದೆ. ಆರ್‌ಜಿವಿ ಸಹೋದರ ಪಿ ಸೋಮಶೇಖರ್ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

  ಕೋವಿಡ್ ಸೋಂಕಿಗೆ ತುತ್ತಾಗಿದ್ದ ಸೋಮಶೇಖರ್ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿರುವ ವಿಚಾರ ವರದಿಯಾಗಿದೆ. ಅಮ್ಮನ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಸೋಮಶೇಖರ್ ತಮ್ಮ ಪ್ರಾಣವನ್ನೇ ಬಿಟ್ಟರು ಎಂದು ಖ್ಯಾತ ನಿರ್ಮಾಪಕರೊಬ್ಬರು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

  ಅಲ್ಲು ಅರ್ಜುನ್ ಸಹೋದರನನ್ನು 'ಈ ನನ್ ಮಗ' ಎಂದ ವರ್ಮಾಅಲ್ಲು ಅರ್ಜುನ್ ಸಹೋದರನನ್ನು 'ಈ ನನ್ ಮಗ' ಎಂದ ವರ್ಮಾ

  ವರ್ಮಾ ಜೊತೆ ಕೆಲಸ ಆರಂಭಿಸಿದ್ದ ಸೋಮಶೇಖರ್

  ವರ್ಮಾ ಜೊತೆ ಕೆಲಸ ಆರಂಭಿಸಿದ್ದ ಸೋಮಶೇಖರ್

  ಸಂಬಂಧದಲ್ಲಿ ಸಹೋದರ ಆಗಿದ್ದ ಪಿ ಸೋಮಶೇಖರ್ ವರ್ಮಾ ಜೊತೆ ಆರಂಭದಿಂದಲೂ ಕೆಲಸ ಮಾಡಿದ್ದರು. ರಂಗೀಲಾ, ಸತ್ಯ, ಜಂಗ್ಲಿ, ಕಂಪನಿ ಅಂತಹ ಚಿತ್ರಗಳಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು. ಹಿಂದಿಯಲ್ಲಿ 'ಮುಸ್ಕುರಕೆ ದೇಖ್ ಜರಾ' ಎಂಬ ಚಿತ್ರವನ್ನು ನಿದೇರ್ಶಿಸಿದ್ದರು.

  ಉದ್ಯಮದಿಂದ ಸಿನಿಮಾ ಬಿಟ್ಟಿದ್ದ ಸೋಮಶೇಖರ್

  ಉದ್ಯಮದಿಂದ ಸಿನಿಮಾ ಬಿಟ್ಟಿದ್ದ ಸೋಮಶೇಖರ್

  ನಿಧಾನವಾಗಿ ಸಿನಿಮಾ ಕೆಲಸದಿಂದ ದೂರ ಉಳಿದ ಸೋಮಶೇಖರ್ ಬೇರೆ ಉದ್ಯಮದಲ್ಲಿ ತೊಡಗಿಕೊಂಡರು. ಬಿಸಿನೆಸ್‌ ಅಭಿವೃದ್ದಿ ಪಡಿಸುವ ಕೆಲಸದಲ್ಲಿ ಬ್ಯುಸಿ ಇದ್ದರು. ಈ ಸಮಯದಲ್ಲಿ ಆರ್‌ ಜಿ ವಿಯಿಂದ ದೂರವೇ ಉಳಿದಿದ್ದರು. ಈ ನಡುವೆ ಕೊರೊನಾ ಸೋಂಕಿಗೆ ಒಳಗಾದರು. ಆದರೂ ಆರೋಗ್ಯವಾಗಿ ಚೆನ್ನಾಗಿಯೇ ಇದ್ದರು. ಆದರೆ, ಇತ್ತೀಚಿನ ದಿನದಲ್ಲಿ ಸೋಮಶೇಖರ್ ಆರೋಗ್ಯದಲ್ಲಿ ಗಂಭೀರ ವ್ಯತ್ಯಾಸ ಉಂಟಾಗಿತ್ತು ಎಂದು ತಿಳಿದು ಬಂದಿದೆ.

  'ನಾರಾ ಲೋಕೇಶ್ ಒಬ್ಬ ವೈರಸ್, ಜೂ ಎನ್‌ಟಿಆರ್ ವ್ಯಾಕ್ಸಿನ್' ಎಂದ ವರ್ಮಾ'ನಾರಾ ಲೋಕೇಶ್ ಒಬ್ಬ ವೈರಸ್, ಜೂ ಎನ್‌ಟಿಆರ್ ವ್ಯಾಕ್ಸಿನ್' ಎಂದ ವರ್ಮಾ

  ಅಮ್ಮನ ಕಾಪಾಡಲು ಹೋಗಿ ಜೀವ ಬಿಟ್ಟರು

  ಅಮ್ಮನ ಕಾಪಾಡಲು ಹೋಗಿ ಜೀವ ಬಿಟ್ಟರು

  ಪಿ ಸೋಮಶೇಖರ್ ನಿಧನಕ್ಕೆ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿ, ಮನಮುಟ್ಟುವ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ''ಮೊದಲು ಸೋಮಶೇಖರ್ ತಾಯಿಗೆ ಕೊರೊನಾ ಸೋಂಕು ತಗುಲಿತ್ತು. ಅಮ್ಮನ ಆರೈಕೆಯಲ್ಲಿ ಮಗ ತೊಡಗಿದ್ದರು. ನಂತರ ಅವರಿಗೂ ಸೋಂಕು ಅಂಟಿಕೊಂಡಿತು. ತಾಯಿಯ ಆರೈಕೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದ ಸೋಮಶೇಖರ್ ತಮ್ಮ ಆರೋಗ್ಯದ ಕುರಿತು ಗಮನ ಕೊಡಲಿಲ್ಲ. ತಾಯಿಯನ್ನು ಕಾಪಾಡಲು ಹೋಗಿ ತಮ್ಮ ಪ್ರಾಣ ಬಿಟ್ಟರು'' ಎಂದು ಟ್ವೀಟ್ ಮಾಡಿದ್ದಾರೆ.

  ಕ್ಷಮೆ ಕೇಳಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಸಿಹಿಕಹಿ ಚಂದ್ರು | Filmibeat Kannada
  ಭಾವುಕರಾದ ಆರ್‌ಜಿವಿ

  ಭಾವುಕರಾದ ಆರ್‌ಜಿವಿ

  ಸಹೋದರನನ್ನು ಕಳೆದುಕೊಂಡ ಆರ್‌ಜಿವಿ ಭಾವುಕರಾಗಿದ್ದಾರೆ. ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿರುವ ವರ್ಮಾ ''ನನ್ನ ಸೋದರ ಸಂಬಂಧಿ ಶೇಖರ್‌ನನ್ನು ಕೋವಿಡ್‌ನಿಂದ ಕಳೆದುಕೊಂಡೆ. ನನ್ನ ಜೀವನದ ಪ್ರಮುಖ ಭಾಗವಾಗಿದ್ದರು. ನಿಜಕ್ಕೂ ಸುದ್ದಿ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಸೋಮಶೇಖರ್ ಆತ್ಮಕ್ಕೆ ಶಾಂತಿ ಸಿಗಲಿ'' ಎಂದಿದ್ದಾರೆ.

  English summary
  Director Ram Gopal Varma Cousin Brother P Somashekar Passed due to Corona virus at hyderbad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X