ಜಲಧಾರೆಯಲ್ಲಿ 'ಸೀರೆ' ಸುಂದರಿಯ ಜಲಕ್ರೀಡೆ, ವರ್ಮಾ ಇದೆಂಥ ಕರ್ಮ...!

ಬದುಕೇ ಹಾಗೆ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ಇದಕ್ಕೆ 'ಶ್ರೀ ಲಕ್ಷ್ಮೀ ಸತೀಶ್' ಅತ್ಯುತ್ತಮ ಉದಾಹರಣೆ.

ಹೌದು. ಅದೆಲ್ಲೋ ಕೇರಳದ ಕಾಡು ಮೇಡಿನಲ್ಲಿ, ತನ್ನಷ್ಟಕ್ಕೆ ತಾನು ಕ್ಯಾಮರಾಗಳಿಗೆ ಫೋಸ್ ಕೊಡುತ್ತಾ ಹಾಯಾಗಿದ್ದ ' ಶ್ರೀ ಲಕ್ಷ್ಮೀ ಸತೀಶ್' ನಸೀಬು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಬದಲಾಗಿತ್ತು. 'ರಾಮ್ ಗೋಪಾಲ್ ವರ್ಮಾ' ಕಣ್ಣು ಈಕೆಯ ಮೇಲೆ ಬಿದ್ದು, ನಾಯಕಿಯಾಗುವ ಸುವರ್ಣ ಅವಕಾಶವೂ ಒಲಿದು ಬಂತು.

ram-gopal-varma-drops-hot-water-dance-video-of-aaradhya-devi-from-his-film-saree

ಆ ನಂತರ ಕೇವಲ ಹೆಸ್ರಷ್ಟೇ ಅಲ್ಲ ರೂಪ ಕೂಡ ಬದಲಿಸಿಕೊಂಡ 'ಶ್ರೀ ಲಕ್ಷ್ಮೀ ಸತೀಶ್‌' ಅಲಿಯಾಸ್ 'ಆರಾಧ್ಯ ದೇವಿ', ಹೆಚ್ಚೇನ್ ಇಲ್ಲ ಈಗ್ಗೆ ಮೂರು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿನ ಮನ್ಮಥರ ಹೃದಯಕ್ಕೆ ಬಾಣವನ್ನೂ ಬಿಟ್ಟಿದ್ದರು. ತನ್ನ ಸೌಂದರ್ಯದಿಂದ ಪಡ್ಡೆ ಹೈಕ್ಳಿಗೆ ಹುಚ್ಚು ಹಿಡಿಸಿದ್ದರು.

ಇಂಥ ಆರಾಧ್ಯ ಈಗ ಇನ್ನೊಮ್ಮೆ ತಮ್ಮ ಅಂಗಾಗದ ಪ್ರದರ್ಶನವನ್ನೂ ಮಾಡಿದ್ದಾರೆ. ಆದರೆ ಈ ಬಾರಿ ತಮ್ಮ ಭಾವಚಿತ್ರಗಳಿಂದ ಇವರು ತುಂಡೈಕ್ಳ ಹೃದಯಕ್ಕೆ ಕನ್ನ ಹಾಕ್ತಿಲ್ಲ. ಬದಲಿಗೆ ತಮ್ಮ ಮುಖದಲ್ಲಿನ ಭಾವಗಳಿಂದ ಬಲೆ ಬೀಸಿದ್ದಾರೆ.

ram-gopal-varma-drops-hot-water-dance-video-of-aaradhya-devi-from-his-film-saree

ಹೌದು, ' ಶ್ರೀ ಲಕ್ಷ್ಮೀ ಸತೀಶ್' ಅವರನ್ನ ಆರಾಧ್ಯ ದೇವಿ ಎಂಬ ಹೆಸರಿನಲ್ಲಿ ಪರಿಚಯ ಮಾಡಿಸಲು ಅಣಿಯಾದ ರಾಮ್ ಗೋಪಾಲ್ ವರ್ಮಾ, ಸದ್ಯಕ್ಕೆ ತಮ್ಮ ''ಸಾರಿ'' ಚಿತ್ರದ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಈ ಮೂಲಕ ಸಿನಿ ರಸಿಕರನ್ನ ಕೆಣಕಿದ್ದಾರೆ.

ಸದಾ ಹಿಮದ ಹೊದಿಕೆಯೇ ಆವರಿಸಿ ಶ್ವೇತ ಸುಂದರಿಯಂತೆ ಕಾಣೋ ಕರುನಾಡ ಕಾಶ್ಮೀರ ಕೂರ್ಗ್ ನಲ್ಲಿ ಸೆರೆ ಹಿಡಿಯಲಾದ ದೃಶ್ಯಗಳನ್ನ ಪೋಣಿಸಿ, ಅದಕ್ಕೆ ಸ್ಲೋ ಮೋಷನ್ ಸ್ಪರ್ಶವನ್ನ ನೀಡಿ ಸಾಮಾಜಿಕ ಜಾಲತಾಣದಲ್ಲಿ ರಾಮು ಹರಿ ಬಿಟ್ಟಿದ್ದಾರೆ. ಹೀಗೆ ಹರಿ ಬಿಡಲಾದ ವಿಡಿಯೋ ಈಗ ಅನೇಕರ ಮೊಬೈಲ್ ಡೇಟಾ ತಿನ್ನುತ್ತಿದೆ. ವಾಟ್ಸಾಫ್‌ ಯುನಿವರ್ಸಿಟಿಯಲ್ಲಿ ವೈರಲ್ ಆಗ್ತಿದೆ. ಮೊದಲೆಲ್ಲ ಸೀರೆಯಲ್ಲಿ 'ಕಣ್ಮನ' ಸೆಳೆಯುತ್ತಿದ್ದ ಶ್ರೀ ಲಕ್ಷ್ಮೀಯ ಈ ಅವತಾರದಿಂದ ಎಲ್ಲವೂ ರಾಮ್ ಗೋಪಾಲ್ ವರ್ಮಾ 'ಮಹಿಮೆ' ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ram-gopal-varma-drops-hot-water-dance-video-of-aaradhya-devi-from-his-film-saree

ಸದ್ಯಕ್ಕೆ ಶ್ರೀಲಕ್ಷ್ಮೀ ಸತೀಶ್ ಯಾನೆ ಆರಾಧ್ಯ ದೇವಿಯ ಈ ಬಳುಕುವ ದೇಹಸಿರಿಯನ್ನೂ ಕಣ್ತುಂಬಿಕೊಳ್ಳುತ್ತಿರುವ ಅನೇಕರು, ತಮ್ಮ ಮನಸಿನ ನೋವನ್ನೆಲ್ಲ ಶ್ರೀ ಲಕ್ಷ್ಮೀಯ 'ನೆನಪಿನಲ್ಲಿ' ಮರೆಯುವ ಪ್ರಯತ್ನವನ್ನ ಮಾಡುತ್ತಿದ್ದಾರೆ. ಶ್ರೀ ಲಕ್ಷ್ಮೀ ಸತೀಶ್ 'ಕಣ್ಣುಗಳು ಕಟ್ಟಿದ ಆ ಕನಸುಗಳ ಕೋಟೆ'ಯಲ್ಲಿ ಅನೇಕರು ಕಣ್ಮರೆಯಾಗುತ್ತಿದ್ದಾರೆ.

ಪಕ್ಕಾ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸುವಂತಹ ಅವತಾರವನ್ನ 'ಶ್ರೀ ಲಕ್ಷ್ಮೀ ಸತೀಶ್' ಇಲ್ಲಿ ತಾಳಿದ್ದಾರೆ. ಹೀಗಾಗಿಯೇ ಶ್ರೀ ಲಕ್ಷ್ಮೀ ಸತೀಶ್ ಕಣ್ಣೋಟವೇ ಸಾಕು, ಎಲ್ಲರ ಮನಸೂರೆ ಮಾಡೋಕೆ, ಅವಳ ಸ್ಪರ್ಶವೊಂದು ಸಾಕು ಹೂವಿನ ಮೊಗ್ಗು ಅರಳೋಕೆ' ಎಂಬಂತೆ ಸುಡುವ ಸೂರ್ಯನ ಕೆಳಗೆ ರಾಮ್' ಗೋಪಾಲ್ ವರ್ಮಾ ತೋಟದಲ್ಲಿ ಅರಳಿರುವ ಈ 'ಹೂ'ವನ್ನ ಎಲ್ಲರೂ ಸದ್ಯಕ್ಕೆ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಅಬ್ಬಾ.. ಎಂತಹ ಸೊಬಗು.. ಎಂತಹ ಮೈಮಾಟ..ಮನಮೋಹಕ ನೋಟ.. ಧರೆಗಿಳಿದ ಅಪ್ಸರೆ.. ಎಂದೆಲ್ಲಾ ಹೊಗಳುತ್ತಿದ್ದಾರೆ.

ಒಟ್ನಲ್ಲಿ 'ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ', ಈ ಮಾತು 'ಶ್ರೀ ಲಕ್ಷ್ಮೀ ಸತೀಶ್' ಅಲಿಯಾಸ್ 'ಆರಾಧ್ಯ ದೇವಿ'ಗೆ ಹೆಚ್ಚು ಸೂಕ್ತವಾಗುತ್ತೆ ಅನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸೀರೆಯಿಂದನೇ ಫೇಮಸ್ ಆದ ಶ್ರೀ ಲಕ್ಷ್ಮೀ ಸತೀಶ್ ಮೈ ಮೇಲೆ ಈಗ ಸೀರೆಯೇ ನಿಲ್ಲುತ್ತಿಲ್ಲ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ನೀವೇನ್ ಅಂತೀರಾ..?

More from Filmibeat

English summary
Ram Gopal Varma shares steamy video of his upcoming film 'Saree'; netizens wonder about the transformation of Aaradhya Devi."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X