twitter
    For Quick Alerts
    ALLOW NOTIFICATIONS  
    For Daily Alerts

    ನಾನು ಗೇ ಅಲ್ಲ ಆದರೆ ಆ ನಟನಿಗೆ ಮುತ್ತಿಡಬೇಕು ಎಂದುಕೊಂಡಿದ್ದೆ: ರಾಮ್ ಗೋಪಾಲ್ ವರ್ಮಾ

    |

    ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಾಲಗೆಗೆ ಫಿಲ್ಟರ್ ಇಲ್ಲ, ವ್ಯಕ್ತಿತ್ವಕ್ಕೂ ಸಹ. ಅನಿಸಿದ್ದನ್ನು ಹೇಳುವ, ಮಾಡುವ ಜಾಯಮಾನ ಅವರದ್ದು. ಒಂದು ಕಾಲದ ನಂಬರ್ ಒನ್ ನಿರ್ದೇಶಕ, ಈಗ ಸಿ ಗ್ರೇಡ್ ಸಿನಿಮಾಗಳನ್ನಷ್ಟೆ ಮಾಡುತ್ತಾ ಪ್ರತಿಭೆ ವ್ಯರ್ಥ ಮಾಡುತ್ತಿದ್ದಾರೆ.

    ಇದೀಗ ರಾಮ್ ಗೋಪಾಲ್ ವರ್ಮಾ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ ಒಂದನ್ನು ನಿರ್ದೇಶನ ಮಾಡಿದ್ದು ಸಿನಿಮಾಕ್ಕೆ ತೆಲುಗಿನಲ್ಲಿ 'ಅಮ್ಮಾಯಿ', ಕನ್ನಡದಲ್ಲಿ 'ಹುಡುಗಿ' ಹಿಂದಿಯಲ್ಲಿ 'ಲಡ್ಕಿ' ಎಂದು ಹೆಸರಿಟ್ಟು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡಲು ಹೊರಟಿದ್ದಾರೆ.

    ಚೀನಾದ 40,000 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗುತ್ತಿದೆ ಭಾರತದ ಸಿನಿಮಾ!ಚೀನಾದ 40,000 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗುತ್ತಿದೆ ಭಾರತದ ಸಿನಿಮಾ!

    ಈ ಸಾಹಸಮಯ ಆಕ್ಷನ್ ಸಿನಿಮಾ ಜುಲೈ 15 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆಯಷ್ಟೆ ನಡೆದಿದೆ. ಕಾರ್ಯಕ್ರಮದಲ್ಲಿ ಅಪರೂಪಕ್ಕೆ ರಾಮ್ ಗೋಪಾಲ್ ವರ್ಮಾ ಭಾವುಕರಾಗಿದ್ದಾರೆ. ಅದು ಮಾತ್ರವೇ ಅಲ್ಲದೆ, ತಾವು ಗೇ ಅಲ್ಲದೇ ಇದ್ದರೂ ಮುತ್ತು ಕೊಡಲೇ ಬೇಕು ಎಂದುಕೊಂಡಿದ್ದ ಒಬ್ಬ ನಾಯಕ ನಟನನ್ನು ಅವರು ಹೆಸರಿಸಿದ್ದಾರೆ.

    ಬೆಂಗಳೂರಿಗೆ ಬಂದ RGV: ನಗರದಲ್ಲಿ 'ಲಡ್ಕಿ'ಯ ಪ್ರಚಾರ!ಬೆಂಗಳೂರಿಗೆ ಬಂದ RGV: ನಗರದಲ್ಲಿ 'ಲಡ್ಕಿ'ಯ ಪ್ರಚಾರ!

    ಮುತ್ತು ಕೊಡಬೇಕು ಎಂದುಕೊಂಡ ಏಕೈಕ ವ್ಯಕ್ತಿ

    ಮುತ್ತು ಕೊಡಬೇಕು ಎಂದುಕೊಂಡ ಏಕೈಕ ವ್ಯಕ್ತಿ

    ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ''ನನ್ನ ಜೀವನದಲ್ಲಿ ನಟ ಬ್ರೂಸ್ ಲೀ ಅತ್ಯಂತ ಮಹತ್ವದ ವ್ಯಕ್ತಿ. ಬ್ರೂಸ್ ಲೀ ಇಂದಾಗಿ ನನ್ನು ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಬ್ರೂಸ್ ಲೀ ಸಿನಿಮಾಗಳನ್ನು ನೋಡಿ, ಅವರ ಬಗ್ಗೆ ತಿಳಿದುಕೊಂಡು ನಾನು ಬಹಳ ಎಕ್ಸೈಟ್ ಆಗುತ್ತಿರುತ್ತೇನೆ. ನಾನು ಗೇ (ಸಲಿಂಗಿ) ಅಲ್ಲ ಆದರೆ ನಾನು ಮುತ್ತು ಕೊಡಬೇಕು ಎಂದುಕೊಂಡ ಏಕೈಕ ನಾಯಕ ನಟ ಬ್ರೂಸ್ ಲೀ ಮಾತ್ರವೇ. ಒಂದು ಕಾಲದಲ್ಲಿ ಬ್ರೂಸ್ ಲೀ ಸಿನಿಮಾ ನೋಡಲೆಂದು ಪಂಜಾಗುಟ್ಟದಿಂದ ಆರ್‌ಟಿಸಿ ಕ್ರಾಸ್ ರೋಡ್ ವರೆಗೆ ಸೈಕಲ್‌ನಲ್ಲಿ ಹೋಗುತ್ತಿದ್ದೆ. ಆದರೆ ಇಂದು ನಾನೇ ಬ್ರೂಸ್‌ ಲೀ ಬಗ್ಗೆ ಸಿನಿಮಾ ಮಾಡುತ್ತಿದ್ದೇನೆ'' ಎಂದಿದ್ದಾರೆ ವರ್ಮಾ.

    ಬ್ರೂಸ್‌ ಲೀಗೆ ಸಲ್ಲಿಸುತ್ತಿರುವ ಗೌರವ

    ಬ್ರೂಸ್‌ ಲೀಗೆ ಸಲ್ಲಿಸುತ್ತಿರುವ ಗೌರವ

    ''ಬ್ರೂಸ್ ಲೀ ನನ್ನ ಸಿನಿಮಾಗಳ ಮೇಲೆ ಸಿನಿಮಾಗಳ ಪಾತ್ರಗಳ ಮೇಲೆ ಬಹಳ ಪ್ರಭಾವ ಬೀರಿದ್ದಾರೆ. ನಾನು ಬ್ರೂಸ್‌ ಲೀಯ ಅತಿ ದೊಡ್ಡ ಫ್ಯಾನ್ ಆಗಿದ್ದೆ. ಅದೇ ರೀತಿ ಒಬ್ಬ ಯುವತಿ ಬ್ರೂಸ್‌ ಲೀಯ ಫ್ಯಾನ್ ಆಗಿದ್ದರೆ ಹೇಗಿರುತ್ತದೆ ಎಂದು ಯೋಚಿಸಿ ಮಾಡಿದ ಸಿನಿಮಾ 'ಲಡ್ಕಿ'. ಈ ಹಿಂದೆ ನಾನು ಮಾಡಿದ 'ಸರ್ಕಾರ್' ಸಿನಿಮಾ ಗಾಡ್‌ಫಾದರ್ ಸಿನಿಮಾಕ್ಕೆ ನಾನು ನೀಡಿದ ಗೌರವ, ಅದೇ ರೀತಿ ಈ ಸಿನಿಮಾ ನಾನು ಬ್ರೂಸ್‌ ಲೀಗೆ ಸಲ್ಲಿಸುತ್ತಿರುವ ಗೌರವ'' ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

    ನಾಯಕಿ ಪೂಜಾ ಭಲೇಕರ್ ಅನ್ನು ಕೊಂಡಾಡಿದ ವರ್ಮಾ

    ನಾಯಕಿ ಪೂಜಾ ಭಲೇಕರ್ ಅನ್ನು ಕೊಂಡಾಡಿದ ವರ್ಮಾ

    ಸಾಮಾನ್ಯವಾಗಿ ಪುರುಷ ಮಾರ್ಷಲ್ ಆರ್ಟ್ ನಿಪುಣರೇ ಸಿಗುವುದು ಕಷ್ಟ ಅಂಥಹದ್ದುರಲ್ಲಿ ಪೂಜಾ ಭಲೆಕರ್ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಆಕೆ ಪ್ರತಿದಿನ ಹಲವು ಗಂಟೆಗಳ ಕಾಲ ಸಿನಿಮಾಕ್ಕಾಗಿ ಕಷ್ಟಪಟ್ಟಿದ್ದಾರೆ. ಆಕೆಯ ಮಾರ್ಷಲ್ ಆರ್ಟ್ ಕಲೆ ಅತ್ಯುತ್ತಮವಾದುದು. ಚೀನಾದಲ್ಲಿ ಸಹ ಸಾವು ಬ್ರೂಸ್‌ ಲೀ ಬಗ್ಗೆ ಸಿನಿಮಾ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಲ್ಲದೆ, ಅಲ್ಲಿ 40,000 ಸ್ಕ್ರೀನ್‌ಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ'' ಎಂದಿದ್ದಾರೆ ವರ್ಮಾ.

    ಜುಲೈ 15 ರಂದು ತೆರೆಗೆ

    ಜುಲೈ 15 ರಂದು ತೆರೆಗೆ

    'ಲಡ್ಕಿ' ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದಲ್ಲಿ 'ಹುಡುಗಿ' ಹೆಸರಿನಲ್ಲಿ ಬಿಡುಗಡೆ ಆಗುತ್ತಿದೆ. ಇತ್ತೀಚೆಗೆ ನಡೆದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಇನ್ನೂ ಹಲವರು ಭಾಗವಹಿಸಿದ್ದರು. 'ಲಡ್ಕಿ' ಸಿನಿಮಾ ಜುಲೈ 15 ರಂದು ತೆರೆಗೆ ಬರುತ್ತಿದೆ. ಈ ಸಿನಿಮಾವು ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದ ಟ್ರೈಲರ್ ಈಗಾಗಲೇ ಸೂಪರ್ ಹಿಟ್ ಆಗಿದೆ.

    English summary
    Director Ram Gopal Varma emotional words about legend Bruce Lee. He said Ladki movie is tribute to Bruce Lee.
    Thursday, July 14, 2022, 10:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X