ಹುಡುಗಿಯರ ಎದೆ ಹಾಗೂ ಆ ಭಾಗ ನನಗಿಷ್ಟ; ವರ್ಮಾ ಮಾತಿಗೆ ನಾಚಿದ ಹುಡುಗಿ

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿ ಆಗುತ್ತಿರುತ್ತಾರೆ. ಯಾವುದೇ ವಿಚಾರದ ಬಗ್ಗೆ ಆರ್‌ಜಿವಿ ತಮ್ಮದೇ ಶೈಲಿಯಲ್ಲಿ ಮಾತನಾಡುತ್ತಾರೆ. ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಕೂಡ ವರ್ಮಾ ಮಾತನಾಡಿದ್ದರು. ದರ್ಶನ್ ಮಾಡಿದ್ದು ಶ್ವಾನದ ಮೇಲೆ ಆನೆ ದಾಳಿ ಮಾಡಿದಂತೆ, ಸಣ್ಣ ವಿಚಾರಕ್ಕೆ ದರ್ಶನ್ ಅಂತ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದಿದ್ದರು.

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಸೇರಿ ಕೆಲ ರಾಜಕೀಯ ಮುಖಂಡರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವರ್ಮಾ ಹಂಚಿಕೊಂಡಿದ್ದ ಪೋಸ್ಟ್ ವಿವಾದ ಸೃಷ್ಟಿಸಿತ್ತು. ದೂರು ದಾಖಲಾಗಿದೆ ನಿರ್ದೇಶಕ ಪೊಲೀಸ್ ವಿಚಾರಣೆ ಎದುರಿಸುವಂತಾಗಿತ್ತು. ಇದೀಗ ಹೆಣ್ಣು ಮಕ್ಕಳ ಖಾಸಗಿ ಭಾಗದ ಬಗ್ಗೆ ಮಾತನಾಡಿ ಮತ್ತೊಮ್ಮೆ ಆರ್‌ಜಿವಿ ಸುದ್ದಿಯಲ್ಲಿದ್ದಾರೆ.

Ram gopal varma Faces Backlash for his Comment on Woman body parts

ಸಿಕ್ಕಾಪಟ್ಟೆ ಬೋಲ್ಡ್ ಆಗಿ ಮಾತನಾಡುವ ರಾಮ್‌ಗೋಪಾಲ್ ವರ್ಮಾ ಬೋಲ್ಡ್ ಪ್ರಶ್ನೆ ಎದುರಾದರೆ ಸುಮ್ಮನಿರುತ್ತಾರೆಯೇ? ಹುಡುಗಿಯೊಬ್ಬಳ ಪ್ರಶ್ನೆಗೆ ವರ್ಮಾ ನೇರಾನೇರ ಉತ್ತರ ವೈರಲ್ ಆಗ್ತಿದೆ. ಹುಡುಗಿಯೊಬ್ಬಳು ಹೋಗಿ ಆರ್‌ಜಿವಿ ಜೊತೆ ಮಾತನಾಡಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾಳೆ. ಬಳಿಕ ಸರ್, ನೀವು ಸಾಕಷ್ಟು ಹುಡುಗಿಯರನ್ನು ನೋಡಿದ್ದೀರಾ, ನಿಮಗೆ ಹುಡುಗಿಯರ ದೇಹದ ಯಾವ ಭಾಗ ಇಷ್ಟ ಎಂದು ಕೇಳಿದ್ದಾಳೆ.

ಹುಡುಗಿಯ ಪ್ರಶ್ನೆಗೆ ಉತ್ತರಿಸಿರುವ ಆರ್‌ಜಿವಿ ತಪ್ಪು ತಿಳಿದುಕೊಳ್ಳಲ್ಲ ಅಂದ್ರೆ ಹೇಳ್ತೀನಿ, ನಿಜ ಹೇಳಬೇಕು ಅಂದ್ರೆ ಹುಡುಗಿಯರ ಎದೆ ಹಾಗೂ ನಿತಂಬ ಅಂದರೆ ನನಗಿಷ್ಟ ಎಂದು ಖುಲ್ಲಂಖುಲ್ಲಾ ಹೇಳಿ ಶಾಕ್ ಕೊಟ್ಟಿದ್ದಾರೆ. ವರ್ಮಾ ಹೀಗೆ ಹೇಳುತ್ತಿದ್ದಂತೆ ಆ ಹುಡುಗಿ ನಾಚಿ ನೀರಾಗಿರುವುದನ್ನು ವೀಡಿಯೋದಲ್ಲಿ ನೋಡಬಹುದು.

ಅಂದಹಾಗೆ ಆ ಹುಡುಗಿಯ ಹೆಸರು ಪ್ರತ್ಯೂಷ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ರೀಲ್ಸ್ ಮೂಲಕ ಗಮನ ಸೆಳೆದಿದ್ದಾಳೆ. ರಾಮ್‌ಗೋಪಾಲ್‌ ವರ್ಮಾ ಅವರನ್ನು ಭೇಟಿ ಮಾಡಿದ್ದು ಅವರ ಜೊತೆ ಮಾತನಾಡಿ ಸಾಕಷ್ಟು ವಿಚಾರಗಳನ್ನು ಕಲಿತಿದ್ದು ನಿಜಕ್ಕೂ ವಿಶೇಷ ಎಂದು ಆಕೆ ಸೋಶಿಯಲ್ ಮೀಡಿಯಾದಲ್ಲಿ ಬರೆದು ವೀಡಿಯೋ ಹಂಚಿಕೊಂಡಿದ್ದಾರೆ.

ಒಂದ್ಕಾಲದಲ್ಲಿ ಅದ್ಭುತ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದ ರಾಮ್‌ಗೋಪಾಲ್ ವರ್ಮಾ ಇತ್ತೀಚೆಗೆ ಸೈಲೆಂಟ್ ಆಗಿಬಿಟ್ಟಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿ ಆಗುತ್ತಿದ್ದಾರೆ. ಹೊಸ ಹೊಸ ನಾಯಕಿಯರನ್ನು ಪರಿಚಯಿಸಿ ಸಿಕ್ಕಾಪಟ್ಟೆ ಬೋಲ್ಡ್ ಹಾಡುಗಳು, ದೃಶ್ಯಗಳು ಇರುವ ಸಿನಿಮಾಗಳನ್ನು ಸುತ್ತಿಕೊಡುತ್ತಿದ್ದಾರೆ.

ಕಳೆದ ವರ್ಷ 'ವ್ಯೂಹಂ' ಎಂಬ ಚಿತ್ರವನ್ನು ಕೊನೆಯದಾಗಿ ಆರ್‌ಜಿವಿ ಕಟ್ಟಿಕೊಟ್ಟಿದ್ದರು. ಕಳೆದ ವರ್ಷ ಆ ಸಿನಿಮಾ ತೆರೆಗೆ ಬಂದಿತ್ತು. ನಿರ್ದೇಶಕನಾಗಿ ಮಾತ್ರವಲ್ಲದೇ ಚಿತ್ರ ಬರಹಗಾರನಾಗಿ ನಿರ್ಮಾಪಕನಾಗಿಯೂ ವರ್ಮಾ ಗುರ್ತಿಸಿಕೊಂಡಿದ್ದಾರೆ. ಕನ್ನಡದಲ್ಲಿ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದರು. ಚಿತ್ರದಲ್ಲಿ ಶಿವರಾಜ್‌ಕುಮಾರ್ ಹಾಗೂ ಸಂದೀಪ್ ಭಾರಧ್ವಜ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

'ಶಿವ', 'ಕ್ಷಣಂ ಕ್ಷಣಂ', 'ಕಂಪನಿ', 'ನಿಶಬ್ಧ್', 'ಸರ್ಕಾರ್, 'ಕಾಂಟ್ರ್ಯಾಕ್ಟ್', 'ರಕ್ತಚರಿತ್ರ', 'ರಣ್', 'ಪೂಂಕ್', 'ರಂಗೀಲ' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಒಂದ್ಕಾಲದಲ್ಲಿ ಕಟ್ಟಿಕೊಟ್ಟಿದ್ದರು. ನಟಿ ಶ್ರೀದೇವಿ ಅವರ ದೊಡ್ಡ ಅಭಿಮಾನಿ ನಾನು. ಆಕೆಯನ್ನು ನೋಡಬೇಕು, ಆಕೆ ಜೊತೆ ಸಿನಿಮಾ ಮಾಡಬೇಕು ಎನ್ನುವ ಕಾರಣಕ್ಕೆ ನಾನು ಚಿತ್ರರಂಗಕ್ಕೆ ಬಂದಿದ್ದು ಎಂದು ಸ್ವತಃ ವರ್ಮಾ ಹೇಳಿಕೊಂಡಿದ್ದರು. ಇತ್ತೀಚೆಗೆ ತೆರೆಮೇಲೆ ಆರ್‌ಜಿವಿ ಮ್ಯಾಜಿಕ್ ನಡೆಯುತ್ತಿಲ್ಲ. ಅವರ ಸಿನಿಮಾಗಳ ಬಗೆಗಿನ ಕ್ರೇಜ್ ಕೂಡ ಕಮ್ಮಿ ಆಗಿದೆ.

More from Filmibeat

English summary
Filmmaker Ram Gopal Varma has landed in trouble over his comments on female body parts
Read more about: ram gopal varma tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X