For Quick Alerts
  ALLOW NOTIFICATIONS  
  For Daily Alerts

  ಕೋಟಿ-ಕೋಟಿ ಗಳಿಸಿದ ರಾಮ್ ಗೋಪಾಲ್ ವರ್ಮಾ ನಾಯಕಿಗೆ ಕೊಟ್ಟಿದ್ದು ಇಷ್ಟೇ ಹಣ

  |

  ಲಾಕ್‌ಡೌನ್ ಸಂದರ್ಭದಲ್ಲಿ ಸಿನಿಮಾ ಉದ್ಯಮ ನಿಂತಲ್ಲೇ ನಿಂತುಬಿಟ್ಟಿದೆ. ಸಿನಿಮಾವನ್ನು ನಂಬಿಕೊಂಡಿದ್ದ ಲಕ್ಷಾಂತರ ಮಂದಿ ಆದಾಯವಿಲ್ಲದೆ ಆತಂಕದಲ್ಲಿದ್ದಾರೆ. ಸಿನಿಮಾವೊಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ತಿಂಗಳುಗಳೇ ಆಗಿಹೋಗಿದೆ. ನಿರ್ಮಾಪಕರಂತೂ ಸಿನಿಮಾ ನಿರ್ಮಾಣಕ್ಕೆ ತಂದ ಸಾಲದ ಬಡ್ಡಿ ಏರುತ್ತಿರುವುದು ನೋಡಿ ಬಿಪಿ ಏರಿಸಿಕೊಂಡಿದ್ದಾರೆ.

  DK Shivakumar meets Shivarajkumar | Filmibeat Kannada

  ಆದರೆ ಲಾಕ್‌ಡೌನ್ ಸಮಯದಲ್ಲೂ ಸಿನಿಮಾಗಳನ್ನು ಬಿಡುಗಡೆ ಮಾಡಿ ಕೋಟ್ಯಂತರ ಹಣ ಗಳಿಸುತ್ತಿದ್ದಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಲಾಕ್‌ಡೌನ್ ನಡುವೆಯೇ ಎರಡು ಸಿನಿಮಾ ಬಿಡುಗಡೆ ಮಾಡಿರುವ ಅವರು ಮೂರನೇ ಸಿನಿಮಾವನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದ್ದಾರೆ.

  'ನಗ್ನಂ' ಧಮಾಕಾ: ಅರ್ಧ ಗಂಟೆಯಲ್ಲಿ 47 ಲಕ್ಷ ಗಳಿಸಿದ ರಾಮ್‌ಗೋಪಾಲ್ ವರ್ಮಾ'ನಗ್ನಂ' ಧಮಾಕಾ: ಅರ್ಧ ಗಂಟೆಯಲ್ಲಿ 47 ಲಕ್ಷ ಗಳಿಸಿದ ರಾಮ್‌ಗೋಪಾಲ್ ವರ್ಮಾ

  ನಾಯಕಿಯರ ಗ್ಲಾಮರ್ ಅನ್ನೇ ಬಂಡವಾಳವಾಗಿಸಿಕೊಂಡು ಸಿನಿಮಾ ಮಾಡಿ ಕೋಟಿಗಟ್ಟಲೆ ಹಣ ಗಳಿಸುತ್ತಿರುವ ರಾಮ್ ಗೋಪಾಲ್ ವರ್ಮಾ ನಾಯಕರಿಯರಿಗೆ ಮಾತ್ರ ಕಡಿಮೆ ಹಣ ನೀಡುತ್ತಿದ್ದಾರೆ!

  ಇತ್ತೀಚೆಗೆ ಬಿಡುಗಡೆ ಆದ ನಗ್ನಂ ಸಿನಿಮಾ

  ಇತ್ತೀಚೆಗೆ ಬಿಡುಗಡೆ ಆದ ನಗ್ನಂ ಸಿನಿಮಾ

  ಇತ್ತೀಚೆಗೆ ನೇಕೆಡ್ ಅಥವಾ ನಗ್ನಂ ಹೆಸರಿನ ಸಖತ್ ಹಾಟ್ ಸಿನಿಮಾವನ್ನು ವರ್ಮಾ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದರು. ಸಿನಿಮಾದಿಂದ ಎರಡು ಕೋಟಿಗೂ ಹೆಚ್ಚು ಹಣವನ್ನು ವರ್ಮಾ ಗಳಿಸಿದ್ದರು.

  ನಾಯಕಿಗೆ ಹೆಚ್ಚಿನ ಸಂಭಾವನೆ ನೀಡಿಲ್ಲ ವರ್ಮಾ

  ನಾಯಕಿಗೆ ಹೆಚ್ಚಿನ ಸಂಭಾವನೆ ನೀಡಿಲ್ಲ ವರ್ಮಾ

  ನೇಕೆಡ್ ಸಿನಿಮಾದ ನಾಯಕಿ ಶ್ರೀರಪಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಸಿನಿಮಾ ಚೆನ್ನಾಗಿ ಓಡಲು ನಾಯಕಿಯ ಗ್ಲಾಮರ್ ಪ್ರಮುಖ ಕಾರಣ ಎನಿಸಿಕೊಂಡಿತ್ತು. ಆದರೆ ರಾಮ್ ಗೋಪಾಲ್ ವರ್ಮಾ ಮಾತ್ರ ನಾಯಕಿಗೆ ಹೆಚ್ಚಿನ ಹಣ ನೀಡಿಲ್ಲ.

  ಕಳಪೆ ಸಿನಿಮಾ ಮಾಡಿಯೂ ಕೋಟಿ-ಕೋಟಿ ಗಳಿಸಿದ ರಾಮ್‌ಗೋಪಾಲ್ ವರ್ಮಾ!ಕಳಪೆ ಸಿನಿಮಾ ಮಾಡಿಯೂ ಕೋಟಿ-ಕೋಟಿ ಗಳಿಸಿದ ರಾಮ್‌ಗೋಪಾಲ್ ವರ್ಮಾ!

  ಸಂದರ್ಶನದಲ್ಲಿ ಹೇಳಿರುವ ಶ್ರೀರಪಕಾ

  ಸಂದರ್ಶನದಲ್ಲಿ ಹೇಳಿರುವ ಶ್ರೀರಪಕಾ

  ಶ್ರೀರಪಕಾ ಅವರೇ ಸಂದರ್ಶನವೊಂದರಲ್ಲಿ ಹೇಳಿರುವಂತೆ ರಾಮ್ ಗೋಪಾಲ್ ವರ್ಮಾ ಶ್ರೀರಪಕಾ ಗೆ ಎರಡು ಲಕ್ಷ ಹಣವನ್ನು ಸಂಭಾವನೆಯಾಗಿ ನೀಡಿದ್ದಾರಂತೆ. ಒಟ್ಟು ಸಿನಿಮಾವನ್ನು ಕೇವಲ ಐದು ಲಕ್ಷ ರೂಪಾಯಿಯಲ್ಲಿ ಮುಗಿಸಿದ್ದಾರಂತೆ ವರ್ಮಾ!

  ಎರಡು ದಿನ ಮಾತ್ರವೇ ಶೂಟಿಂಗ್

  ಎರಡು ದಿನ ಮಾತ್ರವೇ ಶೂಟಿಂಗ್

  ನೇಕೆಡ್ ಸಿನಿಮಾಗಾಗಿ ಕೇವಲ ಎರಡು ದಿನ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರಂತೆ ಶ್ರೀರಪಕಾ ಎರಡೇ ದಿನದಲ್ಲಿ ಇಡೀಯ ಸಿನಿಮಾ ಶೂಟಿಂಗ್ ಮುಗಿದಿದೆ. ಎರಡನೇ ದಿನವೇ ಕೇವಲ ಒಂದು ಗಂಟೆಯಲ್ಲಿ ಡಬ್ಬಿಂಗ್ ಮುಗಿದಿದೆ. ಒಟ್ಟು 12 ದಿನದಲ್ಲಿ ಸಿನಿಮಾ ಬಿಡುಗಡೆ ಆಗಿದೆ!

  RRR ಸಿನಿಮಾ ಫ್ಲಾಪ್ ಆದರೆ ಯಾರು-ಯಾರು ಸಂಭ್ರಮಿಸುತ್ತಾರೆ?RRR ಸಿನಿಮಾ ಫ್ಲಾಪ್ ಆದರೆ ಯಾರು-ಯಾರು ಸಂಭ್ರಮಿಸುತ್ತಾರೆ?

  ಅರ್ಧಗಂಟೆಯಲ್ಲಿ 47 ಲಕ್ಷ ಗಳಿಸಿದ ವರ್ಮಾ

  ಅರ್ಧಗಂಟೆಯಲ್ಲಿ 47 ಲಕ್ಷ ಗಳಿಸಿದ ವರ್ಮಾ

  ನಗ್ನಂ ಅಥವಾ ನೇಕೆಡ್ ಸಿನಿಮಾ ಬಿಡುಗಡೆ ಆದ ಅರ್ಧ ಗಂಟೆಯಲ್ಲಿಯೇ ರಾಮ್ ಗೋಪಾಲ್ ವರ್ಮಾ ಅವರು ಬರೋಬ್ಬರಿ 47 ಲಕ್ಷ ರೂಪಾಯಿ ಗಳಿಸಿದ್ದರು. ಸಿನಿಮಾ ಬಿಡುಗಡೆ ಆಗಿ 10 ದಿನವಾಯ್ತು ಈ ವೇಳೆಗಾಗಲೆ ಲಾಭ ಎರಡು ಕೋಟಿ ದಾಟಿರುತ್ತದೆ ಎಂಬ ಅಂದಾಜು ಇದೆ.

  English summary
  Director Ram Gopal Varma gave very less money to his last movie heroine Sri Rapaka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X