ರಾಮ್ ಗೋಪಾಲ್ ವರ್ಮಾ ತಂಟೆಗೆ ಹೋಗಿ ಪೆಚ್ಚಾದ ರಾಜಮೌಳಿ
ರಾಮ್ ಗೋಪಾಲ್ ವರ್ಮಾ ಅನ್ನು ತೆಲುಗು ಸಿನಿಉದ್ಯಮದಲ್ಲಿ 'ವಿಲಕ್ಷಣ ನಿರ್ದೇಶಕ' ಎಂದು ಕರೆಯಲಾಗುತ್ತದೆ. ಒಂದು ಕಾಲದ ಅತ್ಯುತ್ತಮ ನಿರ್ದೇಶಕ ಈಗ ಸಾಫ್ಟ್ ಪಾರ್ನ್ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ರಾಮ್ ಗೋಪಾಲ್ ವರ್ಮಾ ತಮ್ಮ ಸಿನಿಮಾಕ್ಕಿಂತಲೂ ಹೆಚ್ಚಾಗಿ, ಹೇಳಿಕೆಗಳು, ಟ್ವೀಟ್‌ಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್, ಮೆಗಾಸ್ಟಾರ್ ಫ್ಯಾಮಿನಿ, ಚಂದ್ರಬಾಬು ನಾಯ್ಡು ಹೀಗೆ ಹಲವರ ಬಗ್ಗೆ ತೋಚಿದ್ದು ಟ್ವೀಟ್ ಮಾಡುತ್ತಿರುತ್ತಾರೆ ರಾಮ್ ಗೋಪಾಲ್ ವರ್ಮಾ.
ಅವರ ಅನಿಯಮಿತ ಹೇಳಿಕೆಗಳಿಂದ ರೋಸೆದ್ದುಹೋಗಿರುವ ಅವರ ಗೆಳೆಯರು ಸಹ ರಾಮ್ ಗೋಪಾಲ್ ವರ್ಮಾ ಇಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಖ್ಯಾತ ನಿರ್ದೇಶಕ ರಾಜಮೌಳಿ, ರಾಮ್ ಗೋಪಾಲ್ ವರ್ಮಾ ಗೆ ಟ್ವೀಟ್ ಒಂದನ್ನು ಮಾಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಗ್ರೀನ್ ಇಂಡಿಯಾ ಚಾಲೆಂಜ್ ನಡೆಯುತ್ತಿದೆ
ತೆಲುಗು ಸಿನಿಮಾ ಉದ್ಯಮದಲ್ಲಿ ಈಗ ಗ್ರೀನ್ ಚಾಲೆಂಜ್ ನಡೆಯುತ್ತಿದೆ. ಒಬ್ಬ ಸ್ಟಾರ್ ಅಥವಾ ಸೆಲೆಬ್ರಿಟಿ ಗಿಡ ನೆಟ್ಟು, ಅದರ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿ, ಇನ್ನೂ ಕೆಲವು ಸೆಲೆಬ್ರಿಟಿಗಳಿಗೆ ಚಾಲೆಂಜ್ ಮಾಡಿ ಅವರೂ ಗಿಡ ನೆಡುವಂತೆ ಸವಾಲು ಮಾಡುವುದು ಈ ಗ್ರೀನ್ ಚಾಲೆಂಜ್.

ರಾಮ್ ಗೋಪಾಲ್ ವರ್ಮಾಗೆ ಗ್ರೀನ್ ಚಾಲೆಂಜ್
ಇತ್ತೀಚೆಗಷ್ಟೆ ಯಾರೋ ಸ್ಟಾರ್ ಹಾಕಿದ್ದ ಗ್ರೀನ್ ಚಾಲೆಂಜ್ ಮುಗಿಸಿದ ನಿರ್ದೇಶಕ ರಾಜಮೌಳಿ, ಗ್ರೀನ್ ಚಾಲೆಂಜ್ ಸವಾಲನ್ನು ರಾಮ್ ಗೋಪಾಲ್ ವರ್ಮಾ, ರಾಮ್ ಚರಣ್ ತೇಜ, ವಿವಿ ವಿನಾಯಕ್, ಪುರಿ ಜಗನ್ನಾಥ್ ಗೆ ಹಾಕಿದ್ದಾರೆ. ನೀವೂ ಗಿಡ ನೆಡಿ ಎಂದು ಮನವಿ ಮಾಡಿದ್ದಾರೆ.

ನನ್ನ ಕೈ ಮಣ್ಣಾಗುವುದು ನನಗೆ ಇಷ್ಟವಿಲ್ಲ: ವರ್ಮಾ
ಇದಕ್ಕೆ ಪ್ರತಿಕ್ರಿಯಿಸಿದ ರಾಮ್ ಗೋಪಾಲ್ ವರ್ಮಾ, 'ನನಗೆ ಚಾಲೆಂಜ್‌ಗಳು ಇಷ್ಟವಾಗುವುದಿಲ್ಲ. ನನಗೆ ಮಣ್ಣು ಮುಟ್ಟುವುದೆಂದರೆ ಆಗುವುದಿಲ್ಲ. ನನ್ನಂಥಹಾ ಸ್ವಾರ್ಥಿ ಅಲ್ಲದೆ ನನಗಿಂತ ಒಳ್ಳೆಯ ವ್ಯಕ್ತಿ ಆ ಗಿಡಗಳನ್ನು ಬೆಳೆಸಲಿ, ನಿಮಗೂ ನಿಮ್ಮ ಗಿಡಗಳಿಗೂ ಒಳ್ಳೆಯದಾಗಲಿ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.
Recommended Video

'ನೀವೇಕೆ ಆತನ ತಂಟೆಗೆ ಹೋದಿರಿ'
ರಾಮ್ ಗೋಪಾಲ್ ವರ್ಮಾ ಹೀಗೆ ಮುಖಕ್ಕೆ ಹೊಡೆದಂತೆ ರಾಜಮೌಳಿಗೆ ಪ್ರತಿಕ್ರಿಯೆ ಕೊಟ್ಟಿರುವುದನ್ನು ಕೆಲವರು ವಿರೋಧಿಸಿದ್ದರೆ, ಇನ್ನು ಕೆಲವರು, 'ನೀವೇಕೆ ಅವನ ತಂಟೆಗೆ ಹೋದಿರಿ' ಎಂದು ರಾಜಮೌಳಿಗೆ ಬುದ್ಧಿ ಹೇಳಿದ್ದಾರೆ.


Click it and Unblock the Notifications