twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಬಂದಿದೆ ಎಂದ ರಾಮ್‌ಗೋಪಾಲ್ ವರ್ಮಾ, ತರಾಟೆಗೆ ತೆಗೆದುಕೊಂಡ ನೆಟ್ಟಿಗರು

    |

    ಕೊರೊನಾ ಕುರಿತು ಹಲವು ಮೀಮ್‌ಗಳು, ಜೋಕ್‌ಗಳು, ತಮಾಷೆಯ ವಿಡಿಯೋಗಳು ಈಗಾಗಲೇ ಹರಿದಾಡುತ್ತಿವೆ.

    ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಕೊರೊನಾ ಬಗ್ಗೆ ಸುಳ್ಳು ಸುದ್ದಿ ಹರಡಿಸಲು, ಕೊರೊನಾ ಬಳಸಿ ತಮಾಷೆ ಮಾಡಲು ಯತ್ನಿಸಿ ನೆಟ್ಟಿಗರಿಂದ ಸರಿಯಾಗಿ ಉಗಿಸಿಕೊಂಡಿದ್ದಾರೆ.

    ವಿವಾದಗಳನ್ನು ಹುಡುಕಿ-ಹುಡುಕಿ ಮೈಮೇಲೆ ಎಳೆದುಕೊಳ್ಳುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೊರೊನಾ ಬಗ್ಗೆ ತಮಾಷೆ ಮಾಡಿ ನೆಟ್ಟಿಗರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.

    ನಿನ್ನೆ ರಾತ್ರಿ 9:30 ಸುಮಾರಿಗೆ ಟ್ವೀಟ್ ಮಾಡಿದ್ದ ರಾಮ್ ಗೋಪಾಲ್ ವರ್ಮಾ 'ನನಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ನನ್ನ ವೈದ್ಯ ಈಗಷ್ಟೆ ಹೇಳಿದ' ಎಂದಿದ್ದರು.

    ಏಪ್ರಿಲ್ ಫೂಲ್ ಎಂದ ರಾಮ್ ಗೋಪಾಲ್ ವರ್ಮಾ

    ಏಪ್ರಿಲ್ ಫೂಲ್ ಎಂದ ರಾಮ್ ಗೋಪಾಲ್ ವರ್ಮಾ

    ಮತ್ತೆ ಅರ್ಧ ಗಂಟೆ ಬಿಟ್ಟು ಟ್ವೀಟ್ ಮಾಡಿದ ರಾಮ್ ಗೋಪಾಲ್ ವರ್ಮಾ, 'ನಿಮಗೆ ನಿರಾಸೆ ಮೂಡಿಸಿದ್ದಕ್ಕೆ ಕ್ಷಮಿಸಿ, ಇವತ್ತು ಏಪ್ರಿಲ್ ಫೂಲ್ಸ್ ಡೇ ಹಾಗಾಗಿ ಜೋಕ್ ಮಾಡಿದೆ ಎಂದು ನನ್ನ ವೈದ್ಯ ಹೇಳಿದ, ಈ ಜೋಕ್ ಮಾಡಿದ್ದು ನಾನಲ್ಲ, ನನ್ನ ವೈದ್ಯ'' ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

    ಹುಡುಕಾಟಕ್ಕೆ ಬಳಸಿಕೊಂಡ ನಿರ್ದೇಶಕ ವರ್ಮಾ

    ಹುಡುಕಾಟಕ್ಕೆ ಬಳಸಿಕೊಂಡ ನಿರ್ದೇಶಕ ವರ್ಮಾ

    ಕೊರೊನಾ ಭೀತಿಯನ್ನು ತಮಾಷೆ ಮಾಡಲು, ಏಪ್ರಿಲ್ ಫೂಲ್‌ ನಂತಹಾ ಹುಡುಕಾಟಕ್ಕೆ ಬಳಸಿಕೊಂಡಿದ್ದಕ್ಕೆ ನೆಟ್ಟಿಗರು ರಾಮ್‌ ಗೋಪಾಲ್ ವರ್ಮಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ''ವರ್ಮಾ ಕೊರೊನಾಗಿಂತಲೂ ಅಪಾಯಕಾರಿ''

    ''ವರ್ಮಾ ಕೊರೊನಾಗಿಂತಲೂ ಅಪಾಯಕಾರಿ''

    'ನೀನು ಕೊರೋನಾಗಿಂತಲೂ ಅಪಾಯಕಾರಿ' ಎಂದು ಕೆಲವರು ಜರಿದಿದ್ದರೆ, ಇನ್ನು ಕೆಲವರು ಕೀಳು ಭಾಷೆ ಬಳಸಿ ಬೈದಿದ್ದಾರೆ. ಆದರೆ ರಾಮ್ ಗೋಪಾಲ್ ವರ್ಮಾ ಗೆ ಇದೆಲ್ಲಾ ಮಾಮೂಲು, ಅವರು ಇಂಥಹಾ ವಿವಾದಾತ್ಮಕ ಟ್ವೀಟ್‌ಗಳನ್ನು ಬಿಡುವಾದಾಗಲೆಲ್ಲಾ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಹೆಚ್ಚೇ ಬಿಡುವಾಗಿದ್ದಾರೆ.

    ವರ್ಮಾ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ

    ವರ್ಮಾ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ

    ಕೊರೊನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಎಲ್ಲಾ ರಾಜ್ಯ ಸರ್ಕಾರಗಳು ಪ್ರಕರಣಗಳನ್ನು ದಾಖಲಿಸುತ್ತಿವೆ. ಕೊರೊನಾ ಬಗ್ಗೆ ಜವಾಬ್ದಾರಿಹೀನ ಪೋಸ್ಟ್ ಹಾಕಿದ ವರ್ಮಾ ವಿರುದ್ಧವೂ ಕ್ರಮ ಕೈಗೊಳ್ಳಿ ಎಂಬ ಮಾತುಗಳು ಕೇಳಿಬರುತ್ತಿವೆ.

    English summary
    Director Ram Gopal Varma tweeted that he tests positive coronavirus. Then he tweeted its April Fools day joke.
    Thursday, April 2, 2020, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X