ಕೆನ್ನೆಗೆ ಹೊಡೆದ ಹುಡುಗಿಯ ಬೆತ್ತಲೆ ಕಾಲಿಗೆ ಮುತ್ತಿಟ್ಟ ರಾಮ್ ಗೋಪಾಲ್ ವರ್ಮಾ!

By ಫಿಲ್ಮಿಬೀಟ್ ಡೆಸ್ಕ್

90ರ ದಶಕದಲ್ಲಿ ಭಾರತೀಯ ಚಿತ್ರರಂಗಕ್ಕೆ ಹೊಸ ಭಾಷ್ಯ ತಂದಿದ್ದ ಖ್ಯಾತ, ಪ್ರತಿಭಾವಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ಹಲವರ ಪಾಲಿಗೆ ನಗೆಪಾಟಲಿನ ವ್ಯಕ್ತಿಯಾಗಷ್ಟೆ ಉಳಿದಿದ್ದಾರೆ.

ಗ್ಲಾಮರ್ ಅನ್ನಷ್ಟೆ ನೆಚ್ಚಿಕೊಂಡ ಕಳಪೆ, ಸಿ-ಕ್ಲಾಸ್ ಸಿನಿಮಾಗಳನ್ನು ಮಾಡುತ್ತಾ, ತೋಚಿದಂತೆ ಟ್ವೀಟ್‌ಗಳನ್ನು ಮಾಡುತ್ತಾ, ಆಗೊಮ್ಮೆ-ಈಗೊಮ್ಮೆ ಟಿವಿ ಸಂದರ್ಶನಗಳಿಗೆ ಹೋಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ದಿನ ಕಳೆಯುತ್ತಿದ್ದಾರೆ.

ಇದರ ಜೊತೆಗೆ ಆಗಾಗ್ಗೆ ಸುಂದರ ನಿರೂಪಕಿಯರ ಜೊತೆ ಕ್ಯಾಮೆರಾ ಮುಂದೆ ಸರಸ ಸಲ್ಲಾಪಗಳನ್ನೂ ಮಾಡುತ್ತಿರುತ್ತಾರೆ. ಈ ಹಿಂದೆ ಟಿವಿ ನಿರೂಪಕಿ ಅರಿಯಾನಾ ಗ್ಲೋರಿ ಜೊತೆ ಸರಸವಾಡಿ ಸುದ್ದಿಯಾಗಿದ್ದ ರಾಮ್ ಗೋಪಾಲ್ ವರ್ಮಾ ಆ ನಂತರ ನಿರೂಪಕಿ ಆಶು ರೆಡ್ಡಿಯ ಯೂಟ್ಯೂಬ್ ಚಾನೆಲ್‌ಗೆ ಅದೇ ಮಾದರಿಯ ಸಂದರ್ಶನ ನೀಡಿದ್ದರು. ಆಗ ಆಶು ರೆಡ್ಡಿಯ ತೊಡೆಗಳನ್ನು ಹೊಗಳಿದ್ದರು ವರ್ಮಾ, ಇದೇ ಕಾರಣಕ್ಕೆ ಆಶು ರೆಡ್ಡಿ, ವರ್ಮಾರ ಕಪಾಳಕ್ಕೆ ಭಾರಿಸಿದ್ದರು. ಆದರೆ ಅದು ಸ್ಕ್ರಿಪ್ಟೆಡ್ ಆಗಿತ್ತು.

ಆಶು ರೆಡ್ಡಿ-ವರ್ಮಾ ಸಂದರ್ಶನ

ಆಶು ರೆಡ್ಡಿ-ವರ್ಮಾ ಸಂದರ್ಶನ

ಈಗ ಮತ್ತೊಮ್ಮೆ ಅದೇ ಆಶು ರೆಡ್ಡಿಯ ಯೂಟ್ಯೂಬ್ ಚಾನೆಲ್‌ಗೆ ರಾಮ್ ಗೋಪಾಲ್ ವರ್ಮಾ ಸಂದರ್ಶನ ನೀಡಿದ್ದಾರೆ. ಅಮಿತಾಬ್ ಬಚ್ಚನ್, ಆಮಿರ್ ಖಾನ್, ಅಜಯ್ ದೇವಗನ್, ಸೂರ್ಯಾ, ಸುದೀಪ್, ಶಿವರಾಜ್ ಕುಮಾರ್ ಅಂಥಹಾ ಖ್ಯಾತ ನಟರಿಗೆ ಆಕ್ಷನ್ ಕಟ್ ಹೇಳಿ ಹಿಟ್ ಸಿನಿಮಾಗಳನ್ನು ನಿಡಿದ ರಾಮ್ ಗೋಪಾಲ್ ವರ್ಮಾ, ಕಾಮುಕನಂತೆ ಆಶು ರೆಡ್ಡಿಯ ಬೆತ್ತಲೆ ಕಾಲುಗಳನ್ನು ಹಿಡಿದುಕೊಂಡು ಕೂತಿರುವ ದೃಶ್ಯಗಳು ವಿಡಿಯೋದಲ್ಲಿವೆ.

ಆಶು ರೆಡ್ಡಿಯೇ ಚಿತ್ರ ಸೆರೆ ಹಿಡಿದಿದ್ದಾಳೆ

ಆಶು ರೆಡ್ಡಿಯೇ ಚಿತ್ರ ಸೆರೆ ಹಿಡಿದಿದ್ದಾಳೆ

ಆ ಚಿತ್ರಗಳನ್ನು ಸ್ವತಃ ರಾಮ್ ಗೋಪಾಲ್ ವರ್ಮಾ ಸಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದಿನ ಸಂದರ್ಶನದಲ್ಲಿ ತೊಡೆ ಚೆನ್ನಾಗಿದೆ ಎಂದಿದ್ದಕ್ಕೆ ವರ್ಮಾರ ಕಪಾಳಕ್ಕೆ ಹೊಡೆದಿದ್ದ ಆಶು ರೆಡ್ಡಿ ಈ ಬಾರಿ ವರ್ಮಾಗೆ ತನ್ನ ಕಾಲು ಚುಂಬಿಸುವ ಅವಕಾಶ ನೀಡಿದ್ದಾಳೆ. ಖ್ಯಾತ ನಿರ್ದೇಶಕ ವರ್ಮಾ ತನ್ನ ಕಾಲನ್ನು ಚುಂಬಿಸುತ್ತಿರುವ ದೃಶ್ಯವನ್ನು ಸ್ವತಃ ಆಶು ರೆಡ್ಡಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾಳೆ. ಆ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕಾಲನ್ನು ಹತ್ತಿರದಿಂದ ನೋಡಲು ಇಲ್ಲಿ ಕುಳಿತಿದ್ದೇನೆಂದ ವರ್ಮಾ

ಕಾಲನ್ನು ಹತ್ತಿರದಿಂದ ನೋಡಲು ಇಲ್ಲಿ ಕುಳಿತಿದ್ದೇನೆಂದ ವರ್ಮಾ

ಸೋಫಾ ಮೇಲೆ ಕುಳಿತ ಆಶು ರೆಡ್ಡಿ ಸ್ಟೈಲ್ ಆಗಿ ಹುಕ್ಕಾ ಸೇದುತ್ತಿದ್ದರೆ ಆಕೆಯ ಕಾಲಿನ ಬಳಿ ಕುಳಿತುಕೊಂಡು ರಾಮ್ ಗೋಪಾಲ್ ವರ್ಮಾ ಆಕೆಗೆ ಸಂದರ್ಶನ ನೀಡಿದ್ದಾರೆ. 'ಕಳೆದ ಸಂದರ್ಶನದಲ್ಲಿ ನೀವು ನನ್ನ ಕಪಾಳಕ್ಕೆ ಹೊಡೆದಿರಿ. ಅದು ಹಲವರಿಗೆ ಬೇಸರವಾಯಿತು. ಒಂದು ಹೆಣ್ಣು ನಿನ್ನನ್ನು ಹೊಡೆದಳು ಎಂದರು. ಕೆಲವರು ಹೆಣ್ಣನ್ನು ಕಡಿಮೆ ಎಂದುಕೊಂಡಿದ್ದಾರೆ. ಅವರಿಗೆ ಪಾಠ ಕಲಿಸಲು ನಾನಿಂದು ನಿಮ್ಮ ಕಾಲಬಳಿ ಕೂತಿದ್ದೀನಿ. ಇನ್ನೊಂದು ಕಾರಣವೆಂದರೆ ನಿಮ್ಮ ಕಾಲುಗಳನ್ನು ನಾನು ಹತ್ತಿರದಿಂದ ನೋಡಬಹುದು ಹಾಗಾಗಿ ಇಲ್ಲಿ ಕೂತಿದ್ದೀನಿ'' ಎಂದು ಅದೇ ಸಂದರ್ಶನದಲ್ಲಿ ಹೇಳಿದ್ದಾರೆ ವರ್ಮಾ.

ಅರಿಯಾನಾ ಗ್ಲೋರಿ ಜೊತೆಗೆ ಇಂಥಹುದೇ ಸಂದರ್ಶನ

ಅರಿಯಾನಾ ಗ್ಲೋರಿ ಜೊತೆಗೆ ಇಂಥಹುದೇ ಸಂದರ್ಶನ

ಆಶು ರೆಡ್ಡಿಗೆ ಮುನ್ನ, ನಿರೂಪಕಿ ಅರಿಯಾನಾ ಗ್ಲೋರಿಗೆ ಸಂದರ್ಶನ ಕೊಟ್ಟಿದ್ದರು ವರ್ಮಾ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾ ನೀಡಿದ್ದ ಸಂದರ್ಶನ ಅದಾಗಿತ್ತು. ಆ ಸಂದರ್ಶನದಲ್ಲಿ ಅವರ ಮಾತುಕತೆಗಿಂತಲೂ ಅರಿಯಾನಾರ ಸೌಂದರ್ಯ ತೊರಿಸಿದ್ದೇ ಹೆಚ್ಚಾಗಿತ್ತು. ವರ್ಮಾ ಸಹ ಆ ಸಂದರ್ಶನದಲ್ಲಿ ಅರಿಯಾನಾರ ದೇಹದ ಭಾಗಗಳ ಬಗ್ಗೆ ತುಸು ಹೆಚ್ಚಾಗಿಯೇ ಮಾತನಾಡಿದ್ದರು. ಇತ್ತೀಚೆಗೆ ರಾಮ್ ಗೋಪಾಲ್ ವರ್ಮಾ ಕೇವಲ ಯುವತಿಯರ ಅಂದ, ಸೆಕ್ಸ್ಯುಲಿಟಿ ಬಗ್ಗೆ ಮಾತ್ರವೇ ಸಿನಿಮಾ ಮಾಡುತ್ತಿದ್ದಾರೆ. ಅವುಗಳಲ್ಲಿ ಕೆಲವನ್ನು ತಮ್ಮದೇ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Director Ram Gopal Varma kissed Ashu Reddy legs in a recent interview. In past interview Ashu Reddy beaten Varma for talking about thighs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X