twitter
    For Quick Alerts
    ALLOW NOTIFICATIONS  
    For Daily Alerts

    ದೀಪ ಹಚ್ಚಿ ಎಂದರೆ ಸಿಗರೇಟ್ ಹಚ್ಚಿ ವಿವಾದ ಸೃಷ್ಟಿಸಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

    |

    ಕೊರೊನಾ ವೈರಸ್‌ನಿಂದಾಗಿ ಘೋಷಿಸಿರುವ ಲಾಕ್‌ಡೌನ್‌ನಲ್ಲಿ ಮನೆಯಲ್ಲಿಯೇ ಕುಳಿತಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಸಲುವಾಗಿ ಅವರನ್ನು ಚಟುವಟಿಕೆಯಲ್ಲಿ ತೊಡಗಿಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಯಿಂದ ಒಂಬತ್ತು ನಿಮಿಷದವರೆಗೆ ದೀಪಗಳನ್ನು ಹಚ್ಚಲು ಕರೆ ನೀಡಿದ್ದರು. ಮನೆಯ ಲೈಟ್ ಆಫ್ ಮಾಡಿ ದೀಪ, ಮೋಂಬತ್ತಿ ಹಚ್ಚುವ ಅಥವಾ ಮೊಬೈಲ್ ಟಾರ್ಚ್ ಲೈಟ್ ಬಿಡುವ ಮೂಲಕ ಅಂಧಕಾರದ ವಿರುದ್ಧದ ಹೋರಾಟ ಪ್ರದರ್ಶಿಸಿ ಎಂದು ಹೇಳಿದ್ದರು.

    ಆದರೆ ಜನರು ಪಟಾಕಿ ಹೊಡೆದು, ಪಂಜುಗಳನ್ನು ಹಿಡಿದು ರಸ್ತೆಗಿಳಿಯುವ ಮೂಲಕ ಪುನಃ ಅತಿರೇಕಗಳನ್ನು ಪ್ರದರ್ಶಿಸಿದ್ದರು. ಅನೇಕ ನಟ ನಟಿಯರು, ನಿರ್ದೇಶಕರು ದೀಪ ಹಚ್ಚಿ ಪ್ರಧಾನಿಯ ಕರೆಗೆ ಓಗೊಟ್ಟಿದ್ದರು. ದೀಪ ಹಚ್ಚುವ ಮೂಲಕ ಒಗ್ಗಟ್ಟು ಪ್ರದರ್ಶಿಸೋಣ ಎಂದು ಕರೆ ನೀಡಿದ್ದರು. ದೀಪ ಹಚ್ಚುವ ವಿಡಿಯೋ ಮತ್ತು ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ವಿವಾದ ಹಾಗೂ ವಿಚಿತ್ರ ನಡೆಗಳಿಂದ ಸುದ್ದಿಯಲ್ಲಿರುವ ರಾಮ್ ಗೋಪಾಲ್ ವರ್ಮಾ ವಿಭಿನ್ನ ನಡೆ ಅನುಸರಿಸಿದ್ದಾರೆ.

    ದೀಪದ ಬೆಳಕಲ್ಲಿ ಹೊಳೆದ ತಾರೆಯರು: ಕೊರೊನಾ ಮಾರಿಗೆ ಬೆಳಕಿನ ಸೆಡ್ಡುದೀಪದ ಬೆಳಕಲ್ಲಿ ಹೊಳೆದ ತಾರೆಯರು: ಕೊರೊನಾ ಮಾರಿಗೆ ಬೆಳಕಿನ ಸೆಡ್ಡು

    ಸಿಗರೇಟ್ ಹಚ್ಚಿದ್ದ ವರ್ಮಾ

    ಭಾನುವಾರ ರಾತ್ರಿ 9 ಗಂಟೆಗೆ ವಿಡಿಯೋವನ್ನು ಟ್ವೀಟ್ ಮಾಡಿದ್ದ ರಾಮ್ ಗೋಪಾಲ್ ವರ್ಮಾ, ಸಿಗಾರ್ ಲೈಟರ್ ಹೊತ್ತಿಸಿ ಅದರಿಂದ ಸಿಗರೇಟ್ ಹಚ್ಚುತ್ತಿರುವುದನ್ನು ಹಂಚಿಕೊಂಡಿದ್ದರು. ಅವರ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

    ಸಿಗರೇಟ್‌ಗಿಂತ ಅಪಾಯಕಾರಿ

    ಬಳಿಕ ಅದಕ್ಕೆ ಡಿಸ್ಕ್ಲೈಮರ್‌ಅನ್ನೂ ಹಾಕಿ ಮತ್ತೊಂದು ಫೋಟೊವನ್ನು ರಾಮ್ ಗೋಪಾಲ್ ವರ್ಮಾ ಹಂಚಿಕೊಂಡಿದ್ದಾರೆ. ಕೊರೊನಾ ಕುರಿತಾದ ಎಚ್ಚರಿಕೆಯನ್ನು ಪಾಲಿಸದೆಯೇ ಇರುವುದು ಸಿಗರೇಟ್ ಸೇದುವುದರ ವಿರುದ್ಧ ಸರ್ಕಾರದ ಎಚ್ಚರಿಕೆಯನ್ನು ಉಲ್ಲಂಘಿಸುವುದಕ್ಕಿಂತಲೂ ಅಪಾಯಕಾರಿ ಎಂದು ಹೇಳಿದ್ದಾರೆ.

    ಕೊರೊನಾ ಬಂದಿದೆ ಎಂದ ರಾಮ್‌ಗೋಪಾಲ್ ವರ್ಮಾ, ತರಾಟೆಗೆ ತೆಗೆದುಕೊಂಡ ನೆಟ್ಟಿಗರುಕೊರೊನಾ ಬಂದಿದೆ ಎಂದ ರಾಮ್‌ಗೋಪಾಲ್ ವರ್ಮಾ, ತರಾಟೆಗೆ ತೆಗೆದುಕೊಂಡ ನೆಟ್ಟಿಗರು

    ಕೊರೊನಾ ಪಾಸಿಟಿವ್ ಎಂದಿದ್ದ ವರ್ಮಾ

    ಏಪ್ರಿಲ್ ಒಂದರಂದು ಟ್ವೀಟ್ ಮಾಡಿದ್ದ ರಾಮ್‌ಗೋಪಾಲ್ ವರ್ಮಾ, ತಮಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ ಎಂದು ವೈದ್ಯರು ಹೇಳಿದ್ದಾಗಿ ತಿಳಿಸಿದ್ದರು. ಬಳಿಕ ನಿಮಗೆ ನಿರಾಶೆ ಮಾಡುವುದಕ್ಕೆ ಕ್ಷಮಿಸಿ. ಅವರು ನನಗೆ ಅದು ಏಪ್ರಿಲ್ ಫೂಲ್ ಜೋಕ್ ಎಂದು ಹೇಳಿದರು. ಅದು ಅವರ ತಪ್ಪು, ನನ್ನದಲ್ಲ ಎಂದು ಹೇಳಿದ್ದರು.

    ವೈರಸ್ ಸಿನಿಮಾ ಮಾಡಲು ಹೊರಟಿದ್ದ ವರ್ಮಾ

    ಹಾಗೆಯೇ ತಮ್ಮ ಎರಡು ವರ್ಷಗಳ ಹಿಂದಿನ ಟ್ವೀಟನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ನನ್ನ ಮುಂದಿನ ಸಿನಿಮಾದ ಶೀರ್ಷಿಕೆ 'ವೈರಸ್' ಎಂದು. ಪರಾಗ್ ಸಿಂಗ್ವಿ ಅದನ್ನು ನಿರ್ಮಿಸುತ್ತಾರೆ ಎಂದು 2018ರಲ್ಲಿ ಅವರು ಬರೆದಿದ್ದರು. ಮಾರಣಾಂತಿಕ ವೈರಸ್ ಸೋಂಕಿನ ಕುರಿತು ಕಥೆ ಬರೆದಿದ್ದೆ. ಈಗ ಆಗುತ್ತಿರುವುದಕ್ಕೂ ಎರಡು ವರ್ಷದ ಹಿಂದಿ ಈ ಕಥೆಗೂ ಹೋಲಿಕೆಗಳಿವೆ ಎಂದು ತಿಳಿಸಿದ್ದಾರೆ.

    English summary
    Director Ram Gopal Varma stirs up one more controversy by lighting cigarette instead of candle on Sunday night.
    Monday, April 6, 2020, 20:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X