For Quick Alerts
  ALLOW NOTIFICATIONS  
  For Daily Alerts

  ಚೀನಾದ 47 ಸಾವಿರ ಸ್ಕ್ರೀನ್‌ನಲ್ಲಿ ತೆರೆಕಂಡ ರಾಮ್‌ ಗೋಪಾಲ್ ವರ್ಮಾ ಸಿನಿಮಾದ ಕಲೆಕ್ಷನ್ ಎಷ್ಟು?

  |

  ಮಾರ್ಷಲ್ ಆರ್ಟ್ಸ್ ದಂತಕಥೆ ಬ್ರೂಸ್ಲಿಯನ್ನೇ ಪ್ರೇರಣಿಯಾಗಿಟ್ಟುಕೊಂಡು ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ಲಡ್ಕಿ'. ಈ ಸಿನಿಮಾ ಭಾರತ ಸೇರಿದಂತೆ ಚೀನಾದಲ್ಲಿ ಈಗಾಗಲೇ ರಿಲೀಸ್ ಆಗಿದೆ.

  ರಾಮ್‌ ಗೋಪಾಲ್ ವರ್ಮಾ ಹೇಳಿದ್ದಂತೆಯೇ ಚೀನಾದಲ್ಲಿ ಸುಮಾರು 47 ಸಾವಿರ ಸ್ಕ್ರೀನ್‌ನಲ್ಲಿ ಬಿಡುಗಡೆಯಾಗಿದೆ. ಭಾರತಕ್ಕಿಂತಲೂ ವಿದೇಶದಲ್ಲಿಯೇ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾದ ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಅನ್ನು ಕುತೂಹಲ ಎಲ್ಲರನ್ನೂ ಕಾಡುತ್ತಲೇ ಇದೆ.

  'ಲಡ್ಕಿ' ಸಿನಿಮಾವನ್ನು ರಾಮ್‌ ಗೋಪಾಲ್ ವರ್ಮಾ ಭಾರತದ ಮೊದಲ ಮಾರ್ಷಲ್ ಆರ್ಟ್ಸ್ ಸಿನಿಮಾ ಎಂದು ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ಬಿಡುಗಡೆಯಾದಲ್ಲೆಲ್ಲಾ ರೆಸ್ಪಾನ್ಸ್ ಹೇಗಿದೆ? ಎಂಬುದನ್ನು ನೋಡಲು ಮುಂದೆ ಓದಿ.

  ಪ್ಯಾನ್ ಇಂಡಿಯಾ ಸಿನಿಮಾ 'ಲಡ್ಕಿ'

  ಪ್ಯಾನ್ ಇಂಡಿಯಾ ಸಿನಿಮಾ 'ಲಡ್ಕಿ'

  ರಾಮ್‌ ಗೋಪಾಲ್ ವರ್ಮಾ ನಿರ್ದೇಶನದ 'ಲಡ್ಕಿ' ಸಿನಿಮಾ ಕೇವಲ ಚೀನಾದಲ್ಲಿ ರಿಲೀಸ್ ಆಗಿದ್ದಷ್ಟೇ ಅಲ್ಲ. ಈ ಸಿನಿಮಾ ಭಾರತದ ಐದು ಪ್ರಮುಖ ಭಾಷೆಗಳಲ್ಲೂ ಬಿಡುಗಡೆಯಾಗಿದೆ. ಮಾರ್ಷಲ್ ಆರ್ಟ್ಸ್ ಕಲಿತ ಹುಡುಗಿಯ ಪಾತ್ರದಲ್ಲಿ ಪೂಜಾ ಭಾಲೆಕರ್ ನಟಿಸಿದ್ದಾರೆ. ಇದು ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಬ್ರೂಸ್ಲಿಯಿಂದ ಪ್ರೇರಣೆ ಹೊಂದಿ ಈ ಸಿನಿಮಾ ಮಾಡಲಾಗಿದ್ದು, ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿದೆ.

  ವಿದೇಶದಲ್ಲಿ ಸಖತ್ ಕಲೆಕ್ಷನ್

  ವಿದೇಶದಲ್ಲಿ ಸಖತ್ ಕಲೆಕ್ಷನ್

  ಜುಲೈ 15ರಂದು ರಿಲೀಸ್ ಆಗಿದ್ದ 'ಲಡ್ಕಿ' ಸಿನಿಮಾ ಅಮೆರಿಕದ ಬಾಕ್ಸಾಫೀಸ್‌ನಲ್ಲಿ ಸೂಪರ್ ಕಲೆಕ್ಷನ್ ಮಾಡಿದೆ. ಯಾವುದೇ ಸ್ಟಾರ್ ನಟರು ಇಲ್ಲದೆ ಬಿಡುಗಡೆಯಾಗಿದ್ದ ಈ ಸಿನಿಮಾ ಮೊದಲ ದಿನ 70 ಸಾವಿರ ಡಾಲರ್ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ 'ಲಡ್ಕಿ' ಸಿನಿಮಾ ಹೆಚ್ಚು ಕಡಿಮೆ 55 ಲಕ್ಷದ 80 ಸಾವಿರ ಕಲೆ ಹಾಕಿದೆ. ಇನ್ನು ಪ್ರೀಮಿಯರ್ ಶೋಗಳಿಂದ 30 ಸಾವಿರ ಡಾಲರ್ ಅಂದರೆ, 79 ಲಕ್ಷದ 72 ಸಾವಿರ ಕಲೆಹಾಕಿದೆ ಎನ್ನಲಾಗಿದೆ.

  ಚೀನಾದಲ್ಲಿ ಟಾಪ್ 7

  ಚೀನಾದಲ್ಲಿ ಟಾಪ್ 7

  ರಾಮ್‌ ಗೋಪಾಲ್ ವರ್ಮಾ ಪ್ರಕಾರ, ಚೀನಾದಲ್ಲಿ ಸುಮಾರು 47 ಸಾವಿರ ಸ್ಕ್ರೀನ್‌ನಲ್ಲಿ ಬಿಡುಗಡೆಯಾಗಿದೆ. ಅಲ್ಲದೆ ಬಿಡುಗಡೆಗೂ ಮುನ್ನವೇ ಹಲವೆಡೆ ಪ್ರೀಮಿಯರ್ ಶೋಗಳನ್ನು ಹಮ್ಮಿಕೊಳ್ಳಲಾಗಿತ್ತು. ಚೀನಾ ರಾಮ್‌ ಗೋಪಾಲ್ ವರ್ಮಾ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಟಾಪ್ 7 ಸ್ಥಾನದಲ್ಲಿ 'ಲಡ್ಕಿ' ಸಿನಿಮಾವಿದೆ ಎನ್ನಲಾಗಿದೆ. ಆದರೆ, ಮೊದಲ ದಿನ ಚೀನಾದಲ್ಲಿ ಎಷ್ಟು ಗಳಿಕೆ ಮಾಡಿದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ.

  ಚೀನಾದಲ್ಲಿ 'ಲಡ್ಕಿ' ಸಿನಿಮಾ ರಿಲೀಸ್ ಆಗಿದ್ದೇಗೆ?

  ಚೀನಾದಲ್ಲಿ 'ಲಡ್ಕಿ' ಸಿನಿಮಾ ರಿಲೀಸ್ ಆಗಿದ್ದೇಗೆ?

  ಚೀನಾದಲ್ಲಿ ಬಿಡುಗಡೆಯಾಗುವ ಭಾರತ ಸಿನಿಮಾ ಅದೆಷ್ಟೇ ಗಳಿಕೆ ಮಾಡಿದ್ದರೂ, ಕೇವಲ 25ರಷ್ಟು ಮಾತ್ರ ಹಣ ಸಿಗುತ್ತೆ. ಇಲ್ಲಿವರೆಗೂ ಚೀನಾದ ವಿತರಕರು ಇದೇ ಪಾಲಸಿಯನ್ನು ಚಾಲ್ತಿಯಲ್ಲಿ ಇಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೆ ಚೀನಾ ಸರ್ಕಾರ ವರ್ಷಕ್ಕೆ ಕೇವಲ 35 ವಿದೇಶಿ ಸಿನಿಮಾ ಬಿಡುಗಡೆಗೆ ಅನುಮತಿಯನ್ನು ನೀಡುತ್ತಿದೆ. ಹೀಗಾಗಿ ಚೀನಾದಲ್ಲಿ' ಲಡ್ಕಿ' ಸಿನಿಮಾದಿಂದ ಆದ ಕಲೆಕ್ಷನ್‌ನಲ್ಲಿ ವರ್ಮಾ ಕೈ ಸೇರಿದ್ದು ಎಷ್ಟು? ಅನ್ನೋದು ಇನ್ನೂ ಗೊತ್ತಾಗಿಲ್ಲ.

  English summary
  Ram Gopal Varma Movie Ladki Box Office Collection Day 1: Debut At No. 7 in China, Know More.
  Saturday, July 16, 2022, 21:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X