ರಾಮ್‌ ಗೋಪಾಲ್ ವರ್ಮಾ 'naughty' ಸಂದರ್ಶನ: ಯುವತಿ ಜೊತೆ ಏನೇನೋ ಮಾತು

By ಫಿಲ್ಮೀಬೀಟ್ ಡೆಸ್ಕ್

ತೆಲುಗಿನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಸಿನಿಮಾಗಳಿಂದ ಸುದ್ದಿಯಲ್ಲಿರುವ ಕಾಲ ಹೋಗಿ ಈಗ ವಿವಾದಾತ್ಮಕ ಹೇಳಿಕೆಗಳು, ಟ್ವೀಟ್‌ಗಳಿಂದಷ್ಟೆ ಸುದ್ದಿಯಾಗುವಂತಾಗಿದ್ದಾರೆ. ತಮ್ಮ ಪ್ರತಿಭೆಯನ್ನೆಲ್ಲ ವಿವಾದ ಸೃಷ್ಟಿಸುವುದಕ್ಕೆ ಮಾತ್ರವೇ ಬಳಸುತ್ತಿದ್ದಾರೆ ಎನಿಸುತ್ತಿದೆ ವರ್ಮಾ.

ಇದೀಗ ರಾಮ್ ಗೋಪಾಲ್ ವರ್ಮಾ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಅರಿಯಾನಾಗೆ ಸಂದರ್ಶನವೊಂದನ್ನು ನೀಡಿದ್ದು, ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ ಆಡಿರುವ ಮಾತುಗಳು ವೈರಲ್ ಆಗಿವೆ.

ಮಾಜಿ ಬಿಗ್‌ಬಾಸ್ ಸ್ಪರ್ಧಿ ಅರಿಯಾನಾ ಗ್ಲೋರಿ ಸುದ್ದಿಗೆ ಬಂದಿದ್ದು ಸಹ ಹಿಂದೊಮ್ಮೆ ರಾಮ್ ಗೋಪಾಲ್ ವರ್ಮಾ ಸಂದರ್ಶನ ಮಾಡಿದ್ದಕ್ಕಾಗಿಯೇ. ಹಿಂದಿನ ಸಂದರ್ಶನದಲ್ಲಿ ವರ್ಮಾ, ಅರಿಯಾನಾ ಗ್ಲೋರಿಯ ಕಾಲುಗಳನ್ನು ಹೊಗಳಿದ್ದರು. ನಂತರ ಆಕೆ ಬಿಗ್‌ಬಾಸ್‌ಗೆ ಹೋದಾಗಲೂ ಅರಿಯಾನಾಗೆ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಅದೇ ಕಾರಣದಿಂದ ಮತ್ತೆ ರಾಮ್ ಗೋಪಾಲ್ ವರ್ಮಾರ ಸಂದರ್ಶನವನ್ನು ಅರಿಯಾನಾ ಮಾಡಿದ್ದಾರೆ. ಈ ಬಾರಿಯ ಸಂದರ್ಶನಕ್ಕೆ ಪೂರ್ಣ ಗ್ಲಾಮರ್ ಲುಕ್ ನೀಡಿದ್ದಾರೆ ಅರಿಯಾನಾ.

ಮಾದಕ ಉಡುಗೆ ತೊಟ್ಟು ವರ್ಮಾ ಜೊತೆಗೆ ಜಿಮ್ ಮಾಡುವ ಅರಿಯಾನಾ ಅಲ್ಲಿಯೇ ಸಂದರ್ಶನ ಮಾಡಿದ್ದಾರೆ. ಸಂದರ್ಶನದಲ್ಲಿ ಹಲವು ಖಾಸಗಿ ವಿಷಯಗಳು. ಮಹಿಳೆಯ ಅಂದ ಇನ್ನಿತರೆ ವಿಷಯಗಳು ಚರ್ಚೆಯಾಗಿವೆ. ವರ್ಮಾ ಅಂತೂ ಬಹಳ ತುಂಟತನದಿಂದ ತುಂಬಿದ ಉತ್ತರಗಳನ್ನು ನೀಡಿದ್ದಾರೆ. ವರ್ಮಾರ ತುಂಟ ಮಾತುಗಳ ವಿಡಿಯೋಗಳು ಸಖತ್ ವೈರಲ್ ಆಗಿವೆ.

ನನಗೆ ಲೆಸ್ಬಿಯನ್ ಸೆಕ್ಸ್ ನೋಡಲು ಇಷ್ಟ: ಆರ್‌ಜಿವಿ

ನನಗೆ ಲೆಸ್ಬಿಯನ್ ಸೆಕ್ಸ್ ನೋಡಲು ಇಷ್ಟ: ಆರ್‌ಜಿವಿ

ಸಂದರ್ಶನದ ಆರಂಭದಲ್ಲಿಯೇ ಸಂದರ್ಶಕಿ ಅರಿಯಾನಾಗೆ ''ನಿನ್ನ ತೊಡೆಗಳು ನನಗೆ ಬಹಳ ಇಷ್ಟ'' ಎನ್ನುತ್ತಾರೆ ವರ್ಮಾ. ಮುಂದುವರೆದು ಸೆಕ್ಸ್‌ ಬಗ್ಗೆ ಮಾತನಾಡುತ್ತಾ, 'ಸನ್ನಿ ಲಿಯೋನ್ ನನ್ನ ಫೇವರೇಟ್ ಪಾರ್ನ್ ಸ್ಟಾರ್'' ಎಂದಿದ್ದಾರೆ. ಇನ್ನೂ ಮುಂದುವರೆದು, ''ನನಗೆ ಲೆಸ್ಬಿಯನ್ ಸೆಕ್ಸ್‌ (ಹೆಣ್ಣು-ಹೆಣ್ಣಿನ ನಡುವಿನ ಲೈಂಗಿಕ ಕ್ರಿಯೆ) ನೋಡಲು ಇಷ್ಟ. ನನಗೆ ಮಾತ್ರವಲ್ಲ ವಿಶ್ವದ ಬಹುಪಾಲು ಪುರುಷರಿಗೆ ಲೆಸ್ಬಿಯನ್ ಸೆಕ್ಸ್ ಇಷ್ಟ'' ಎಂದಿದ್ದಾರೆ ವರ್ಮಾ.

ಆ ಕ್ಷಣದಲ್ಲಿ ಮಾತ್ರ ನಾನು ಪ್ರೀತಿಸುತ್ತೇನೆ: ಆರ್‌ಜಿವಿ

ಆ ಕ್ಷಣದಲ್ಲಿ ಮಾತ್ರ ನಾನು ಪ್ರೀತಿಸುತ್ತೇನೆ: ಆರ್‌ಜಿವಿ

ಅಫೇರ್‌ಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, ''ನನಗೆ ಸಾಕಷ್ಟು ಅಫೇರ್‌ಗಳಿವೆ. ಮುಂಚೆ ಈ ಅಫೇರ್‌ಗಳು ತಿಂಗಳುಗಟ್ಟಲೆ ನಡೆಯುತ್ತಿದ್ದವು. ನಂತರ ದಿನಗಳು, ಈಗಂತೂ ಗಂಟೆಗಳಲ್ಲಿಯೇ ಮುಗಿದು ಹೋಗುತ್ತವೆ'' ಎಂದಿದ್ದಾರೆ. ''ನಾನು ಯಾವ ಮಹಿಳೆಯನ್ನೇ ಆಗಲಿ ಆಕೆಯೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಮಾತ್ರವೇ ಆಕೆಯನ್ನು ಪ್ರೀತಿಸುತ್ತೇನೆ ಆ ನಂತರ ನನ್ನ ಪ್ರೀತಿ ಅಲ್ಲಿಗೆ ನಿಂತು ಹೋಗುತ್ತದೆ. ಹೀಗೆ ಮಾಡುವುದು ನಾನು ಆ ಮಹಿಳೆಗೆ ನೀಡುವ ಸ್ವಾತಂತ್ರ್ಯ'' ಎಂದಿದ್ದಾರೆ ವರ್ಮಾ.

ನನಗೆ ಯುವತಿಯರನ್ನು ಮುಟ್ಟಲು ಇಷ್ಟ: ಆರ್‌ಜಿವಿ

ನನಗೆ ಯುವತಿಯರನ್ನು ಮುಟ್ಟಲು ಇಷ್ಟ: ಆರ್‌ಜಿವಿ

ಸಂದರ್ಶನದ ಮಧ್ಯದಲ್ಲಿ ಅರಿಯಾನಾಗೆ ಜಿಮ್‌ ಹೇಳಿಕೊಟ್ಟಿದ್ದಾರೆ ವರ್ಮಾ. ''ಜಿಮ್ ಹೇಳಿಕೊಡುವ ನೆಪದಲ್ಲಿ ನನ್ನನ್ನು ಮುಟ್ಟಲು ಯತ್ನಿಸುತ್ತಿದ್ದೀರಾ?'' ಎಂದು ಅರಿಯಾನಾ ಕೇಳಿದಾಗ. ''ಹೌದು, ನನಗೆ ಯುವತಿಯರನ್ನು ಮುಟ್ಟಲು ಇಷ್ಟ. ಹಾಗಾಗಿಯೇ ವ್ಯಾಯಾಮ ಹೇಳಿಕೊಡುವ ನೆಪದಲ್ಲಿ ನಿನ್ನನ್ನು ಮುಟ್ಟುತಿದ್ದೇನೆ. ಬೇರೆ ಯುವತಿಯರನ್ನು ಸಹ ಮುಟ್ಟುವುದು ಇಷ್ಟ ಆದರೆ ಸುಮ್ಮನೆ ಮುಟ್ಟಿದರೆ ಕಪಾಳಕ್ಕೆ ಹೊಡೆಯುತ್ತಾರಲ್ಲ ಹಾಗಾಗಿಯೇ ನಾನು ಏನಾದರು ನೆಪ ಒಟ್ಟಿ ಅವರನ್ನು ಮುಟ್ಟುತ್ತೇನೆ'' ಎಂದಿದ್ದಾರೆ ವರ್ಮಾ.

''ನನಗೆ ನಿನ್ನ ದೇಹದ ಈ ಅಂಗ ಇಷ್ಟ''

''ನನಗೆ ನಿನ್ನ ದೇಹದ ಈ ಅಂಗ ಇಷ್ಟ''

ಅರಿಯಾನಾರನ್ನು ಸಹ ಕೆಲವು ಪ್ರಶ್ನೆಗಳು ಕೇಳಿರುವ ವರ್ಮಾ, ''ನಿನ್ನ ಬಾಯ್‌ಫ್ರೆಂಡ್‌ಗೆ ನಿನ್ನ ದೇಹದಲ್ಲಿ ಇಷ್ಟವಾಗುವ ಭಾಗ ಯಾವುದು?'' ಎಂದಿದ್ದಾರೆ. ಇದಕ್ಕೆ ಸಂದರ್ಶಕಿ ಉತ್ತರಿಸುವುದಿಲ್ಲ. ನಂತರ, ''ನನಗೆ ಈ ಮೊದಲು ನಿನ್ನ ತೊಡೆಗಳು ಇಷ್ಟವಾಗುತ್ತಿತ್ತು. ಇಂದು ನಿನ್ನ ಬ್ಯಾಕ್ ಇಷ್ಟವಾಗುತ್ತಿದೆ'' ಎಂದಿದ್ದಾರೆ. ಈ ಉತ್ತರಕ್ಕೆ ಸ್ಪಷ್ಟನೆ ನೀಡುವಂತೆ ಕೇಳಿದಾಗ, ''ನನಗೆ ನಿನ್ನ ಕಣ್ಣು, ಕೆನ್ನೆ ಇಷ್ಟ ಎಂದಾಗ ನಿನಗೆ ಬೇಸರವಾಗುವುದಿಲ್ಲ ಆದರೆ ಸೊಂಟ, ಎದೆ, ಬ್ಯಾಕ್ ಎಲ್ಲವೂ ನಿನ್ನ ದೇಹದ ಭಾಗವೇ ತಾನೆ. ಅವುಗಳನ್ನು ಹೊಗಳಿದಾಗ ಕೋಪಿಸಿಕೊಳ್ಳುವುದು ಏಕೆ?. ದೇಹದ ಎಲ್ಲ ಭಾಗಗಳ ಬಗ್ಗೆಯೂ ಸಮಾನ ಪ್ರೀತಿ ಇರಬೇಕಲ್ಲವೆ?'' ಎಂದು ಮರು ಪ್ರಶ್ನಿಸಿದ್ದಾರೆ ವರ್ಮಾ.

More from Filmibeat

English summary
Director Ram Gopal Varma naughty talks with former bigg boss contestant Ariyana Glory.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X