'ನೀಲಿ' ನಟಿಯ ಹಾಟ್ ಚಲನಚಿತ್ರ ಬಿಡುಗಡೆ ದಿನಾಂಕ ಬಹಿರಂಗ
ಈ ಹಿಂದೆ ನೀಲಿ ಚಿತ್ರತಾರೆ ಮಿಯಾ ಮಾಲ್ಕೊವಾ ಜೊತೆಗೆ 'ಸೆಕ್ಸ್ ಗಾಡ್ ಆಂಡ್ ಟ್ರುತ್' ಹೆಸರಿನ ಪಾರ್ನ್ ಡಾಕ್ಯುಮೆಂಟರಿ ನಿರ್ಮಿಸಿದ್ದ ರಾಮ್‌ಗೋಪಾಲ್ ವರ್ಮಾ ಈಗ ಮತ್ತೆ ಅದೇ ನಟಿಯೊಂದಿಗೆ ಮತ್ತೊಂದು ಸಿನಿಮಾ ನಿರ್ಮಿಸಿದ್ದಾರೆ.
Recommended Video
ಹೌದು, ನೀಲಿ ಚಿತ್ರತಾರೆ ಮಿಯಾ ಮಾಲ್ಕೊವಾಳನ್ನೇ ಮುಖ್ಯ ನಟಿಯಾಗಿ ಇಟ್ಟುಕೊಂಡು ತಮ್ಮ ನೆಚ್ಚಿನ ದೆವ್ವ-ಭೂತದ ಕತೆ ಹೇಳಲು ಹೊರಟಿದ್ದಾರೆ ರಾಮ್ ಗೋಪಾಲ್ ವರ್ಮಾ.
ಈ ಸಿನಿಮಾಕ್ಕೆ ಕ್ಲೈಮ್ಯಾಕ್ಸ್ ಎಂದು ಹೆಸರಿಟ್ಟಿದ್ದು, ಸಿನಿಮಾ ಜೂನ್ 6 ರಂದು ಬಿಡುಗಡೆ ಆಗಲಿದೆ. ವಿಶೇಷವೆಂದರೆ ರಾಮ್‌ಗೋಪಾಲ್ ವರ್ಮಾ ಯಾವುದೇ ಚಿತ್ರಮಂದಿರಗಳಿಗೆ ಅಥವಾ ಖ್ಯಾತ ಒಟಿಟಿಗಳಲ್ಲಿ ತಮ್ಮ ಸಿನಿಮಾ ಬಿಡುಗಡೆ ಆಗುತ್ತಿಲ್ಲ.

ಆಪ್ ಹಾಗೂ ವೆಬ್‌ಸೈಟ್‌ನಲ್ಲಿ ಬಿಡುಗಡೆ
ಹೌದು, ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಕ್ಲೈಮ್ಯಾಕ್ಸ್ ಸಿನಿಮಾವನ್ನು ತಮ್ಮದೇ ಹೆಸರಿನ ಆಪ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಅಥವಾ ಆರ್‌ಜಿವಿ ವರ್ಲ್ಡ್ ಎನ್ನುವ ವೆಬ್‌ಸೈಟ್‌ನಲ್ಲಿ ಸಿನಿಮಾ ನೋಡಬಹುದಾಗಿದೆ. ಇಂದು ಸಂಜೆ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ.

ಟಿಕೆಟ್ ನಿಗದಿಪಡಿಸಿರುವ ಆರ್‌ಜಿವಿ
ಆನ್‌ಲೈನ್‌ನಲ್ಲಿ ಈ ಸಿನಿಮಾ ನೋಡಲು ಟಿಕೆಟ್ ದರ ಸಹ ಸ್ವತಃ ರಾಮ್‌ಗೋಪಾಲ್ ವರ್ಮಾ ನಿಗದಿಪಡಿಸಿದ್ದಾರೆ. ಆಪ್‌ನಲ್ಲಿ ಅಥವಾ ವೆಬ್‌ಸೈಟ್‌ನಲ್ಲಿ 'ಕ್ಲೈಮ್ಯಾಕ್ಸ್' ಸಿನಿಮಾ ನೋಡಲು ಒಬ್ಬ ವ್ಯಕ್ತಿ ನೂರು ರೂಪಾಯಿ ಕೊಡಬೇಕಂತೆ.

ಸೆಕ್ಸ್ ಗಾಡ್ ಆಂಡ್ ಟ್ರುತ್ ವೆಬ್‌ಸೈಟ್‌ನಲ್ಲಿ ಬಿಡುಗಡೆ
ಈ ಹಿಂದೆ ಸಹ ರಾಮ್‌ಗೋಪಾಲ್ ವರ್ಮಾ 'ಸೆಕ್ಸ್ ಗಾಡ್ ಆಂಡ್ ಟ್ರುತ್' ಸಿನಿಮಾವನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ್ದರು. ಸಿನಿಮಾ ನೋಡಿದ್ದ ಹಲವಾರು ಮಂದಿಗೆ ಸಿನಿಮಾ ಅಷ್ಟಾಗಿ ಇಷ್ಟವಾಗಿರಲಿಲ್ಲ. ಸಿನಿಮಾ ನಿರಾಸೆ ಮೂಡಿಸಿದ್ದಾಗಿ ಹೇಳಿದ್ದರು.

ಕೊರೊನಾ ಸಿನಿಮಾ ಸಹ ರೆಡಿ ಇದೆ
ಕ್ಲೈಮ್ಯಾಕ್ಸ್ ಸಿನಿಮಾ ಮಾತ್ರವಲ್ಲದೆ 'ಕೊರೊನಾ' ಹೆಸರಿನ ಸಿನಿಮಾವನ್ನೂ ಸಹ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದಾರೆ. ಕೊರೊನಾ ಸಮಯದಲ್ಲಿಯೇ ಒಂದೇ ಮನೆಯಲ್ಲಿ ಈ ಸಿನಿಮಾ ತೆಗೆಯಲಾಗಿದೆ. ಕೊರೊನಾ ಸಿನಿಮಾ ಸಹ ಕೆಲವೇ ವಾರಗಳಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











