RGV Dangerous Movie: ವರ್ಮಾ ಸಿನಿಮಾ ಪ್ರದರ್ಶಿಸಲ್ಲ ಎಂದ ಚಿತ್ರಮಂದಿರಗಳು! ಅಂಥಹದ್ದೇನಿದೆ ಸಿನಿಮಾದಲ್ಲಿ?

ಒಂದು ಕಾಲದಲ್ಲಿ ಟ್ರೆಂಡ್ ಸೆಟ್ಟರ್ ನಿರ್ದೇಶಕ ಎನಿಸಿಕೊಂಡಿದ್ದ ರಾಮ್ ಗೋಪಾಲ್ ವರ್ಮಾ ಇತ್ತೀಚಿನ ಕೆಲ ವರ್ಷಗಳಲ್ಲಿ ಮಾಡಿರುವುದೆಲ್ಲ ಕೇವಲ ಸಿ ಗ್ರೇಡ್ ಸಿನಿಮಾಗಳು. ಪೋರ್ನ್ ನಟಿರೊಟ್ಟಿಗೆ ಸಿನಿಮಾ ಮಾಡಿ ತಮ್ಮದೇ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿ ಹಣ ಗಳಿಸುತ್ತಿದ್ದಾರೆ.

ಇದೀಗ ರಾಮ್ ಗೋಪಾಲ್ ವರ್ಮಾ 'ಡೇಂಜರಸ್' (ಮಾ ಇಷ್ಟಂ) ಹೆಸರಿನ ಸಿನಿಮಾ ಮಾಡಿದ್ದು ಇದನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿ, ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈಗಳಲ್ಲಿ ಪ್ರಚಾರ ಸಹ ಮಾಡಿದ್ದರು. ಸಿನಿಮಾ ನಾಳೆ (ಏಪ್ರಿಲ್ 08)ರಂದು ಬಿಡುಗಡೆ ಆಗಬೇಕಿತ್ತು. ಆದರೆ ಈಗ ಹಠಾತ್ತನೆ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ.

ವರ್ಮಾ ನಿರ್ದೇಶನದ 'ಡೇಂಜರಸ್' ಸಿನಿಮಾವನ್ನು ಪ್ರದರ್ಶನ ಮಾಡುವುದಿಲ್ಲ ಎಂದು ಹಲವು ಚಿತ್ರಮಂದಿರ ಮಾಲೀಕರು ಪ್ರತಿರೋಧ ವ್ಯಕ್ತಿಪಡಿಸಿದ್ದು, ಈ ಕಾರಣಕ್ಕಾಗಿ ರಾಮ್ ಗೋಪಾಲ್ ವರ್ಮಾ, ತಮ್ಮ ಸಿನಿಮಾ ಬಿಡುಗಡೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

ಸಿನಿಮಾ ಪ್ರದರ್ಶಿಸಲ್ಲ ಎಂದ ಚಿತ್ರಮಂದಿರಗಳು

ಸಿನಿಮಾ ಪ್ರದರ್ಶಿಸಲ್ಲ ಎಂದ ಚಿತ್ರಮಂದಿರಗಳು

ಸಿನಿಮಾದಲ್ಲಿ ಇಬ್ಬರು ಯುವತಿಯರು ಪರಸ್ಪರ ಪ್ರೇಮಿಸುವ, ಅವರಿಗೆ ವಿಲನ್‌ಗಳಿಂದ ಸಮಸ್ಯೆ ಆಗುವ ವಿಲನ್‌ಗಳನ್ನು ಎದುರಿಸಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಕತೆ ಇದೆ. ಇಬ್ಬರು ನಾಯಕಿಯರ ನಡುವೆ ಶೃಂಗಾರದ ದೃಶ್ಯಗಳು ಇವೆ. ಯುವತಿಯರ ನಡುವಿನ ಪ್ರೇಮವನ್ನು ತೋರಿಸಿದ್ದಕ್ಕಾಗಿ ಕೆಲವು ಸಿನಿಮಾ ಪ್ರದರ್ಶಕರು ಈ ಸಿನಿಮಾದ ವಿರುದ್ಧ ನಿಲವು ತಳೆದಿದ್ದಾರೆ.

ವಿಡಿಯೋ ಪ್ರಕಟಿಸಿರುವ ವರ್ಮಾ

ವಿಡಿಯೋ ಪ್ರಕಟಿಸಿರುವ ವರ್ಮಾ

ಈ ಬಗ್ಗೆ ವಿಡಿಯೋ ಒಂದನ್ನು ಸಹ ಪ್ರಕಟಿಸಿರುವ ವರ್ಮಾ, ''ಸುಪ್ರಿಂಕೋರ್ಟ್‌ ಸಲಿಂಗ ಪ್ರೇಮ ಅಪರಾಧವಲ್ಲ ಎಂದು ತೀರ್ಪು ಬಂದ ಮೇಲೆ ಲೆಸ್ಬಿಯನ್ಸ್ ಕುರಿತ ಸಿನಿಮಾ ಮಾಡುವ ಆಲೋಚನೆ ನನಗೆ ಬಂದಿತು. ನನಗಿಂತಲೂ ಮುಂಚೆ ಹಲವರು ಲೆಸ್ಬಿಯನ್ಸ್‌ಗಳ ಬಗ್ಗೆ ಸಿನಿಮಾ ಮಾಡಿದ್ದಾರೆ. ಆದರೆ ಅವೆಲ್ಲ ಶಕ್ತಿಹೀನರೆಂದು, ಪಾಪದವರೆಂಬಂತೆಯೂ ಚಿತ್ರಿಸಿದ್ದಾರೆ. ಆದರೆ ನಾನು ಅವರನ್ನು ಫವರ್‌ಫುಲ್ ವ್ಯಕ್ತಿಗಳಾಗಿ ಚಿತ್ರಿಸಿ, ಸಮಾಜ ಲೆಸ್ಬಿಯನ್ಸ್‌ಗಳ ಕುರಿತು ಹೆಚ್ಚು ಸಹಿಷ್ಣುವಾಗಲಿ ಎಂದು ಮಸಾಲೆ ಸಿನಿಮಾದಲ್ಲಿ ಇರಬಹುದಾದ ಕತೆಯನ್ನೇ ಇಟ್ಟುಕೊಂಡು, ನಾಯಕ-ನಾಯಕಿ ಬದಲಿಗೆ ನಾಯಕಿ-ನಾಯಕಿ ಇಟ್ಟುಕೊಂಡಿದ್ದೇನೆ'' ಎಂದಿದ್ದಾರೆ.

ಹಾಟ್ ನಟಿಯರನ್ನು ಒಳಗೊಂಡಿರುವ ಸಿನಿಮಾ

ಹಾಟ್ ನಟಿಯರನ್ನು ಒಳಗೊಂಡಿರುವ ಸಿನಿಮಾ

''ನಾನು ಏನೋ ತೋರಿಸಬಾರದುದ್ದನ್ನು ತೋರಿಸಲು ಹೊರಟಿದ್ದೇನೆ ಎಂಬಂತೆ ಚಿತ್ರಮಂದಿರಗಳು ನಮ್ಮ ಸಿನಿಮಾವನ್ನು ಪ್ರದರ್ಶಿಸುವುದಿಲ್ಲ ಎಂದಿದ್ದಾರೆ. ಆದರೆ ನಾವು ಇದರ ವಿರುದ್ಧ ಹೊರಾಡಲಿದ್ದೇವೆ. ನಮ್ಮ ಸಿನಿಮಾ ಪ್ರದರ್ಶನಗೊಳ್ಳುವಂತೆ ಮಾಡಲು ಅಗತ್ಯ ಕಾನೂನು ಹೋರಾಟಕ್ಕೆ ನಾವು ಮುಂದಾಗಿದ್ದೇವೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ನಮ್ಮ ಸಿನಿಮಾ ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗಲಿದೆ'' ಎಂದಿದ್ದಾರೆ. 'ಡೇಂಜರಸ್' ಸಿನಿಮಾದಲ್ಲಿ ವರ್ಮಾರ ಮೆಚ್ಚಿನ ನಟಿ ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ನಟಿಸಿದ್ದಾರೆ. ಸಿನಿಮಾದ ಟ್ರೇಲರ್, ಟೀಸರ್‌ಗಳು ಹಸಿ-ಬಿಸಿ ದೃಶ್ಯಗಳನ್ನು ಒಳಗೊಂಡಿವೆ. ಜೊತೆಗೆ ಆಕ್ಷನ್ ದೃಶ್ಯಗಳು ಸಹ ಇವೆ.

ವರ್ಮಾ ನಿರ್ದೇಶನದ ಹಲವು ಸಿನಿಮಾಗಳು ವಿವಾದದಲ್ಲಿ

ವರ್ಮಾ ನಿರ್ದೇಶನದ ಹಲವು ಸಿನಿಮಾಗಳು ವಿವಾದದಲ್ಲಿ

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಕೊರೊನಾ ಕುರಿತಾದ ಸಿನಿಮಾ ಸಹ ಬಿಡುಗಡೆ ಆಗಿಲ್ಲ. ಅದಕ್ಕೆ ನ್ಯಾಯಾಲಯವು ತಡೆ ಹೇರಿದೆ. ಅದರ ಜೊತೆಗೆ ತೆಲಂಗಾಣದಲ್ಲಿ ನಡೆದ ದೀಕ್ಷಾಳ 'ಹತ್ಯಾಚಾರ'ದ ಬಗ್ಗೆ ನಿರ್ಮಿಸಿರುವ ಸಿನಿಮಾದ ಮೇಲೂ ನ್ಯಾಯಾಲಯ ತಡೆ ಹೇರಿದೆ. ಜೊತೆಗೆ ತೆಲಂಗಾಣದಲ್ಲಿ ನಡೆದ ಪ್ರಣಯ್‌ನ ಮರ್ಯಾದೆಗೇಡು ಹತ್ಯೆ ಕುರಿತಾಗಿ ವರ್ಮಾ ನಿರ್ಮಿಸಿದ್ದ 'ಮರ್ಡರ್' ಸಿನಿಮಾ ಸಹ ಹಲವು ವಿವಾದಗಳಿಗೆ ಕಾರಣವಾಗಿತ್ತು.

More from Filmibeat

English summary
Director Ram Gopal Varma's Dangerous movie release postponed due to theater owners disobedience. Movie's story is about lesbians.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X