ನಾಯಿಗಳ ಬಗ್ಗೆ ಅಕ್ಕರೆ ಇದ್ದರೆ ಅವುಗಳನ್ನೇ ಮದುವೆ ಆಗಬಹುದಲ್ಲವೇ?- ಆರ್‌ಜಿವಿ

ದೆಹಲಿಯ ಬೀದಿನಾಯಿಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಭಾರೀ ಚರ್ಚೆ ಹುಟ್ಟಾಕ್ಕಿದೆ. ಈ ಬಗ್ಗೆ ಪರ- ವಿರೋಧ ವಾದಗಳನ್ನು ಜನ ಮುಂದಿಡುತ್ತಿದ್ದಾರೆ. ಮೂಕ ಜೀವಿಗಳಿಗೆ ಈ ಶಿಕ್ಷೆ ಬೇಡ ಎನ್ನುವುದು ಪ್ರಾಣಿಪ್ರೇಮಿಗಳ ಅಭಿಪ್ರಾಯ. ಆದರೆ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವುದು ಉತ್ತಮ ನಿರ್ಣಯ ಎಂದು ಕೆಲವರು ಹೇಳುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಟ್ವೀಟ್ ಮಾಡಿದೆ.

ಸಿನಿಮಾ ತಾರೆಯರು ಕೂಡ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಈ ಭೂಮಿ ಮನುಷ್ಯನಿಗೆ ಮಾತ್ರ ಸೇರಿದ್ದಲ್ಲ, ನಾಯಿಗಳಿಗೂ ಇಲ್ಲಿ ಸ್ವಚ್ಛಂದವಾಗಿ ಬದುಕುವ ಹಕ್ಕಿದೆ. ಸುಪ್ರೀಂ ಕೋರ್ಟ್ ತನ್ನ ಆದೇಶ ಬದಲಿಸಬೇಕು. ಇವತ್ತು ದೆಹಲಿಯಲ್ಲಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲು ಹೇಳುತ್ತಿದ್ದಾರೆ. ಮುಂದೆ ಎಲ್ಲಾ ಕಡೆ ಇದೇ ನಿಯಮ ಜಾರಿ ಆಗಬಹುದು ಎನ್ನುತ್ತಿದ್ದಾರೆ. ನಟ ಸುದೀಪ್, ನಟಿ ರಮ್ಯಾ, ನಟಿ ಸುಧಾರಾಣಿ ಸೇರಿದಂತೆ ಬಾಲಿವುಡ್, ಟಾಲಿವುಡ್. ಕಾಲಿವುಡ್ ತಾರೆಯರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನಟಿ ಸದಾ ಕಣ್ಣೀರು ಹಾಕಿ ಬೇಸರ ವ್ಯಕ್ತಪಡಿಸಿದ್ದರು.

Ram Gopal Varma s Explosive Reaction to Supreme Court s Stray Dog Order Sparks Celebrity Debate

ಸದ್ಯ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನಿರ್ದೇಶಕ ಆರ್‌ಜಿವಿ ಪ್ರತಿಕ್ರಿಯಿಸಿದ್ದಾರೆ. ಯಾವುದೇ ವಿಚಾರದ ಬಗ್ಗೆ ತಮ್ಮದೇ ಶೈಲಿಯಲ್ಲಿ ವರ್ಮಾ ಮಾತನಾಡುತ್ತಾರೆ. ವಾದ ಮುಂದಿಡುತ್ತಾರೆ. ಬೀದಿ ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವ ನಾಯಿ ಪ್ರಿಯರಿಗೆ ನನ್ನ 10 ಅಂಶಗಳು ಇಲ್ಲಿವೆ ಎಂದು ಟ್ವೀಟ್ ಮಾಡಿದ್ದಾರೆ.

1. ಬೀದಿ ನಾಯಿಗಳು ಜನರನ್ನು ಎಲ್ಲೆಡೆ ಕಚ್ಚಿ ಕೊಲ್ಲುತ್ತಿವೆ. ಮತ್ತು ನಾಯಿ ಪ್ರಿಯರು ನಾಯಿ ಹಕ್ಕುಗಳ ಬಗ್ಗೆ ಟ್ವೀಟ್ ಮಾಡುವಲ್ಲಿ ನಿರತರಾಗಿದ್ದಾರೆ.

2. ನೀವು ನಿಮ್ಮ ಐಷಾರಾಮಿ ಮನೆಗಳಲ್ಲಿ ನಿಮ್ಮ ಸಾಕುಪ್ರಾಣಿಗಳನ್ನು ಪ್ರೀತಿಸಬಹುದು. ಆದರೆ ಬೀದಿ ನಾಯಿಗಳಿಂದ ಸಮಸ್ಯೆ ಎದುರಿಸಿದವರು ಮತ್ತು ಅವರ ಪ್ರೀತಿಪಾತ್ರರಿಗೆ ಕರುಣೆಯನ್ನು ಬೋಧಿಸುವುದು ಸಂವೇದನಾರಹಿತವಾಗಿದೆ.

3. ಶ್ರೀಮಂತರು ಶ್ರೇಷ್ಠ ತಳಿಯ ನಾಯಿಗಳನ್ನು ಸಾಕುವವರು. ಬಡವರನ್ನು ಬೀದಿ ನಾಯಿಗಳು ಕಚ್ಚಿ ಕೊಲ್ಲುತ್ತವೆ. ನಾಯಿ ಪ್ರಿಯರು ಮಾತನಾಡದ ವರ್ಗ ವಿಭಜನೆ ಅದು.

4. ಒಬ್ಬ ಮನುಷ್ಯ ಕೊಂದರೆ, ಅವನು ಕೊಲೆಗಾರ. ನಾಯಿ ಕೊಂದರೆ, ನೀವು ಅದನ್ನು "ಅಪಘಾತ" ಎಂದು ಕರೆಯುತ್ತೀರಿ. ಹಾಗಾದರೆ ಜನರು ಪ್ರಾಣಿಗಳಂತೆ ಕೊಲ್ಲುವುದನ್ನು ಕೂಡ ಅಪಘಾತ ಎಂದೂ ಕರೆಯಬಹುದೇ?

5. ನೀವು ನಾಯಿಗಳಿಗಾಗಿ ಅಳುತ್ತೀರಿ, ಆದರೆ ಸತ್ತ ಮನುಷ್ಯರಿಗಾಗಿ ಅಲ್ಲ. ಸಹಾನುಭೂತಿ ಕೂಡ ಇಲ್ಲಿ ಆಯ್ಕೆಯ ವಿಷಯ ಎಂದು ನನಗೆ ತಿಳಿದಿರಲಿಲ್ಲ.

6. "ಬೀದಿ ನಾಯಿಗಳನ್ನು ಕೊಲ್ಲಬೇಡಿ" ಎಂದು ಹೇಳುವ ನಾಯಿ ಪ್ರಿಯರು ಅವುಗಳನ್ನೆಲ್ಲಾ ಯಾಕೆ ದತ್ತು ತೆಗೆದುಕೊಳ್ಳಬಾರದು. ಏಕೆಂದರೆ, ಅವು ಕೆಳಜಾತಿಯವು, ಕೊಳಕು, ರೋಗಪೀಡಿತ ಅಥವಾ ನಿಮ್ಮ ಪ್ರೀತಿಪಾತ್ರರಿಗೆ ಅಪಾಯವನ್ನುಂಟುಮಾಡಲು ನೀವು ಬಯಸುವುದಿಲ್ಲವೇ?

7. ನ್ಯಾಯವಿಲ್ಲದೆ ಕರುಣೆ ಕರುಣೆಯಲ್ಲ. ಅದು ಸ್ವ-ಸದಾಚಾರದಲ್ಲಿ ಸುತ್ತುವರಿದ ಕ್ರೌರ್ಯ.

8. ಬೀದಿ ನಾಯಿಗಳು ಗೇಟೆಡ್ ಸಮುದಾಯಗಳ ಒಳಗೆ ದಾಳಿ ಮಾಡುವುದಿಲ್ಲ. ಅವು ಗೇಟ್‌ಗಳಿಲ್ಲದ ಕಡೆ ದಾಳಿ ಮಾಡುತ್ತವೆ.

9. ಒಬ್ಬ ತಾಯಿ ತನ್ನ ಮಗುವನ್ನು ಕಚ್ಚಿ ಸಾಯಿಸುವುದನ್ನು ನೋಡುತ್ತಾಳೆ. ನೀವು ಯಾಕೆ ಆಕೆಗೆ ಹ್ಯಾಶ್‌ಟ್ಯಾಗ್ ಅನ್ನು ಕ್ರಿಯೇಟ್ ಮಾಡಬಾರದು?

10. ನಾಯಿಗಳಿಗೆ ಮಾತ್ರವಲ್ಲ, ಬಹುಶಃ ಎಲ್ಲಾ ಪ್ರಾಣಿಗಳಿಗೂ ಬದುಕುವ ಹಕ್ಕಿದೆ, ಆದರೆ ಅದು ಮಾನವ ಜೀವಗಳ ವೆಚ್ಚದಲ್ಲಿ ಆಗಬಹುದೇ?

ಹೀಗೆ ತಮ್ಮ ಶೈಲಿಯಲ್ಲಿ 10 ಅಂಶಗಳನ್ನು ಟ್ವಿಟ್ಟರ್‌ನಲ್ಲಿ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಪೋಸ್ಟ್ ಮಾಡಿದ್ದಾರೆ. ಸಾಕಷ್ಟು ಜನ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಾಣಿಪ್ರೇಮಿಗಳಿಗೆ ಕೆಲ ವಿಚಿತ್ರ ಸಲಹೆಗಳನ್ನು ಕೂಡ ಆರ್‌ಜಿವಿ ಪೋಸ್ಟ್ ಮಾಡಿದ್ದಾರೆ.

1. ನೀವು ಎಲ್ಲಾ ಬಡವರನ್ನು ದತ್ತು ತೆಗೆದುಕೊಂಡು ನಿಮ್ಮ ಮನೆಗಳಿಗೆ ತಂದು ನಾಯಿಗಳಿಗಾಗಿ ಬೀದಿಗಳನ್ನು ಏಕೆ ಬಿಡಬಾರದು?

2. ನಾಯಿಗಳು ನಿಮ್ಮ ಕುಟುಂಬದಂತೆಯೇ ಇದ್ದರೆ, ನಿಮ್ಮ ಲ್ಯಾಬ್ರಡಾರ್‌ಗಳು, ಹಸ್ಕಿಗಳು ಇತ್ಯಾದಿ ಮತ್ತು ಬೀದಿ ನಾಯಿಗಳನ್ನು ಏಕೆ ಮದುವೆಯಾಗಬಾರದು?

3. ನಿಮ್ಮ ಮಕ್ಕಳನ್ನು ಬೀದಿ ನಾಯಿಗಳ ಗುಂಪಿನೊಂದಿಗೆ ಆಟವಾಡಲು ಮತ್ತು ಪ್ರಕೃತಿಯೊಂದಿಗೆ ಬೆರೆಯಲು ಏಕೆ ಕಳುಹಿಸಬಾರದು?

7. ನಾಯಿಗಳಿಗೆ ಮಕ್ಕಳಷ್ಟೇ ಹಕ್ಕುಗಳಿವೆ ಎಂದು ನೀವು ಭಾವಿಸಿದರೆ, ಬೀದಿ ನಾಯಿಗಳಿಗೆ ಶಾಲೆಗಳು ಮತ್ತು ಮಕ್ಕಳಿಗಾಗಿ ಪಂಜರಗಳನ್ನು ನಿರ್ಮಿಸಿ ಎಂದು ವರ್ಮಾ ಬರೆದುಕೊಂಡಿದ್ದಾರೆ.

More from Filmibeat

Read more about: ram gopal varma tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X