twitter
    For Quick Alerts
    ALLOW NOTIFICATIONS  
    For Daily Alerts

    ಚೀನಾದ 40,000 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗುತ್ತಿದೆ ಭಾರತದ ಸಿನಿಮಾ!

    |

    'ಕೆಜಿಎಫ್ 2' ಸಿನಿಮಾ ವಿಶ್ವದಾದ್ಯಂತ ಸುಮಾರು 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆ ಕಂಡಿತ್ತು. 'RRR' ಸಿನಿಮಾ ಸುಮಾರು 8000 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆ ಕಂಡು ದಾಖಲೆ ಬರೆದಿತ್ತು. ಈ ಸಿನಿಮಾಗಳು ಸಾವಿರಾರು ಕೋಟಿ ಗಳಿಸಿದವು.

    ಮೇಲೆ ಹೆಸರಿಸಿದ ಸಿನಿಮಾಗಳು ವಿಶ್ವದಾದ್ಯಂತ ಸೇರಿ ಕ್ರಮವಾಗಿ 6000, 8000 ಸ್ಕ್ರೀನ್‌ಗಳಲ್ಲಿ ತೆರೆ ಕಂಡಿದ್ದವು, ಆದರೆ ಭಾರತದ ಒಂದು ಸಿನಿಮಾ, ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗದ ನಿರ್ದೇಶಿಸಿರುವ ಸಿನಿಮಾ ಒಂದು ವಿದೇಶದಲ್ಲಿ 40,000 ಸ್ಕ್ರೀನ್‌ಗಳಲ್ಲಿ ತೆರೆಗೆ ಬರುತ್ತಿದೆ!

    ಯುಎಫ್‌ಓ ಬೆಂಬಲದೊಂದಿಗೆ 'ಕೆಜಿಎಫ್', 'ಚಾರ್ಲಿ'ಯನ್ನು 'ಚೇಸ್' ಮಾಡುತ್ತಿದೆ 'ಚೇಸ್'!ಯುಎಫ್‌ಓ ಬೆಂಬಲದೊಂದಿಗೆ 'ಕೆಜಿಎಫ್', 'ಚಾರ್ಲಿ'ಯನ್ನು 'ಚೇಸ್' ಮಾಡುತ್ತಿದೆ 'ಚೇಸ್'!

    ತೆಲುಗಿನ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿರುವ 'ಲಡ್ಕಿ' ಸಿನಿಮಾ ಚೀನಾ ದೇಶ ಒಂದರಲ್ಲೇ 40,000 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗಲಿದೆಯಂತೆ! ಹೀಗೆಂದು ಸ್ವತಃ ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    40,000 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾ!

    40,000 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾ!

    ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿರುವ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ 'ಲಡ್ಕಿ', ಜುಲೈ 15 ರಂದು ಬಿಡುಗಡೆ ಆಗುತ್ತಿದ್ದು ಚೀನಾ ದೇಶವೊಂದರಲ್ಲೇ 40,000 ಸ್ಕ್ರೀನ್‌ಗಳಲ್ಲಿ ತೆರೆಗೆ ಬರಲಿದೆ! ಇದೇ ಮೊದಲ ಬಾರಗೆ ಭಾರತೀಯ ಸಿನಿಮಾವೊಂದು ಚೀನಾದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ ಎಂದು ಪೋಸ್ಟರ್ ಹಂಚಿಕೊಂಡಿದ್ದಾರೆ ಸಿನಿಮಾದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.

    ಪೂಜಾ ಭಲೇಕರ್ ನಟಿಸಿರುವ ಆಕ್ಷನ್ ಸಿನಿಮಾ

    ಪೂಜಾ ಭಲೇಕರ್ ನಟಿಸಿರುವ ಆಕ್ಷನ್ ಸಿನಿಮಾ

    ಪೂಜಾ ಭಲೇಕರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವು ಸಮರ ಕಲೆಯನ್ನು ಆಧರಿಸಿದ ಸಿನಿಮಾ ಆಗಿದೆ. ಬ್ರೂಸ್ ಲೀ ಪರಮ ಭಕ್ತೆಯ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ 'ಡ್ರಾಗನ್ ಗರ್ಲ್' ಎಂಬ ಅಡಿಬರಹ ಇದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಟ್ರೈಲರ್ ನಲ್ಲಿ ಪೂಜಾ ಭಲೇಕರ್ ಕೇಡಿಗಳಿಗೆ ಕಿಕ್ ಕೊಡುತ್ತಿರುವ ಹಲವು ದೃಶ್ಯಗಳಿವೆ. ಬ್ರೂಸ್‌ ಲೀಯ ಸಿನಿಮಾ ಆದ್ದರಿಂದ ಚೀನಾದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿರುವಂತೆ ಕಾಣುತ್ತಿದೆ ವರ್ಮಾ.

    ಇಂಡೊ-ಚೈನಾ ಸಹಯೋಗದ ಸಿನಿಮಾ

    ಇಂಡೊ-ಚೈನಾ ಸಹಯೋಗದ ಸಿನಿಮಾ

    'ಲಡ್ಕಿ' ಸಿನಿಮಾವನ್ನು ಚೀನಾದ ಸಂಸ್ಥೆಯೊಂದರ ಸಹಯೋಗದೊಂದಿಗೆ ಚಿತ್ರೀಕರಿಸಿದ್ದಾರೆ ರಾಮ್ ಗೋಪಾಲ್ ವರ್ಮಾ. ಈ ಸಿನಿಮಾಕ್ಕೆ ಚೀನಾದ ಜಿಂಗ್ ಶು, ಶಾನ್ ಡೋಂಗ್‌ಬಿಂಗ್ ಸಹ ಬಂಡವಾಳ ಹೂಡಿದ್ದಾರೆ. ಹಾಗಾಗಿ ಇದೊಂದು ಇಂಡೊ-ಚೀನಾ ಸಹಯೋಗದ ಸಿನಿಮಾ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಅಂತೆಯೇ ಸಿನಿಮಾ ಸಹ ಚೀನಾದ ಹಲವು ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ಚೀನಾದ ಚಿತ್ರೀಕರಣದ ಬಿಹೈಂಡ್‌ ದಿ ಕ್ಯಾಮೆರಾ ವಿಡಿಯೋವನ್ನು ವರ್ಮಾ ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ದರು.

    ವರ್ಮಾ ಹೇಳುತ್ತಿರುವುದು ನಿಜವೇ?

    ವರ್ಮಾ ಹೇಳುತ್ತಿರುವುದು ನಿಜವೇ?

    ಗೂಗಲ್ ಮಾಹಿತಿಯ ಪ್ರಕಾರ ಚೀನಾದಲ್ಲಿ ಇರುವುದು 75,000 ಸ್ಕ್ರೀನ್‌ಗಳು, ಅದರಲ್ಲಿ 40,000 ಸ್ಕ್ರೀನ್‌ಗಳಲ್ಲಿ 'ಲಡ್ಕಿ' ಸಿನಿಮಾ ಒಂದೇ ಬಿಡುಗಡೆ ಆಗುತ್ತಿರುವುದು ಊಹೆಗೂ ಮೀರಿದ ಸಂಗತಿ. ಆದರೆ ರಾಮ್ ಗೋಪಾಲ್ ವರ್ಮಾ ಈ ಮಾಹಿತಿಯನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದು ನಿಜವೋ ಸುಳ್ಳೋ ಖಾತ್ರಿಯಿಲ್ಲ ಏಕೆಂದರೆ, ''ಪ್ರಚಾರಕ್ಕಾಗಿ ಹಾಗೂ ಸಿನಿಮಾ ಗೆಲ್ಲಿಸಿಕೊಳ್ಳಲು ನಾನು ಏನು ಬೇಕಾದರು ಮಾಡಬಲ್ಲೆ'' ಎಂದು ರಾಮ್ ಗೋಪಾಲ್ ವರ್ಮಾ ಹಿಂದೊಮ್ಮೆ ಹೇಳಿದ್ದರು.

    English summary
    Ram Gopal Varma directional Ladki movie releasing on 40,000 screens in China on July 15. Pooja Bhalekar acted as heroine in the movie.
    Friday, July 8, 2022, 9:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X