ಕಾಸ್ಟೂಮ್ ಡಿಸೈನರ್ ಜೊತೆ ವರ್ಮ ನ್ಯೂ ಇಯರ್ ಪಾರ್ಟಿ
2020 ವರ್ಷವನ್ನು ಎಲ್ಲರೂ ತಮ್ಮದೆ ರೀತಿಯಲ್ಲಿ ಸ್ವಾಗತ ಮಾಡಿದ್ದಾರೆ. ಸಾಕಷ್ಟು ಮಂದಿ ಪಾರ್ಟಿ ಮಾಡುವ ಮೂಲಕ ಹೊಸ ವರ್ಷವನ್ನು ಶುರು ಮಾಡಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮ ಪಾರ್ಟಿ ಕೂಡ ಜೋರಾಗಿದೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮ ಕಾಸ್ಟೂಮ್ ಡಿಸೈನರ್ ಜೊತೆಗೆ ಹೊಸ ವರ್ಷವನ್ನು ಆಚರಣೆ ಮಾಡಿದ್ದಾರೆ. ಶ್ರೇಯಾ ಬ್ಯಾನರ್ಜಿರೊಂದಿಗೆ ವರ್ಮ ಪಾರ್ಟಿ ಮಾಡಿದ್ದಾರೆ. ಆರ್ ಜಿ ವಿ ಮುಂದೆ ಶ್ರೇಯಾ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ.
ಯಾವಾಗಲೂ ತಮ್ಮ ಹೇಳಿಕೆಗಳು ಮೂಲಕ ವಿವಾದ ಮಾಡಿಕೊಳ್ಳುವ ವರ್ಮ ಈಗಲೂ ತಮ್ಮ ಕಾಮೆಂಟ್ ಮೂಲಕ ಕೆಲವರು ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಮಹಿಳೆಯರ ಕಾಲಿನ ಬಗ್ಗೆ ಮಾತನಾಡಿದ್ದು, ಅನೇಕರು ಕೋಪಗೊಂಡಿದ್ದಾರೆ. ಒಬ್ಬ ಖ್ಯಾತ ನಿರ್ದೇಶಕ ಹೀಗೆಲ್ಲ ಮಾಡುವದು ಸರಿ ಅಲ್ಲ ಎಂದಿದ್ದಾರೆ.

ಯಾರು ಏನೇ ಹೇಳಿದ್ರು ವರ್ಮ ಅದಕ್ಕೆಲ್ಲ ತಲೆ ಕಡಿಸಿಕೊಳ್ಳುವುದಿಲ್ಲ. ಎಂದಿನಂತೆ ಅವರು ತಮಗೆ ಏನನಿಸುತ್ತದೆ ಅದನ್ನೇ ಮಾಡುತ್ತಾರೆ. ತಮ್ಮ ಹೊಸ ವರ್ಷದ ಸಂಭ್ರಮಾಚರಣೆಯ ಫೋಟೋ ಹಾಗೂ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಾಮ್ ಗೋಪಾಲ್ ವರ್ಮ ಅನೇಕ ಸಿನಿಮಾಗಳಿಗೆ ಶ್ರೇಯಾ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ. 'ಭೈರವಗೀತಾ', 'ಬ್ಯೂಟಿಫುಲ್' ನಂತರ 'ಎಂಟರ್ ದಿ ಗರ್ಲ್ ಡ್ರಗನ್' ಸಿನಿಮಾಗೆ ಕೂಡ ಶ್ರೇಯಾ ಕಾಸ್ಟೂಮ್ ಡಿಸೈನರ್ ಆಗಿದ್ದಾರೆ.


Click it and Unblock the Notifications











