For Quick Alerts
  ALLOW NOTIFICATIONS  
  For Daily Alerts

  'ಇವತ್ತು ನನ್ನ ಬರ್ತಡೇ ಅಲ್ಲ ಡೆತ್ ಡೇ' ರಾಮ್ ಗೋಪಾಲ್ ವರ್ಮಾ ಶಾಕಿಂಗ್ ಹೇಳಿಕೆ

  |

  ತೆಲುಗು ಚಿತ್ರರಂಗದ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಇಂದು ಜನ್ಮದಿನ. 59ನೇ ವಸಂತಕ್ಕೆ ಕಾಲಿಟ್ಟಿರುವ ವರ್ಮಾ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳು ಹರಿದುಬರುತ್ತಿವೆ. ಆದರೆ ಹುಟ್ಟುಹಬ್ಬದ ಆಚರಣೆ, ಶುಭಕೋರುವವರನ್ನು ಕಂಡರೆ ರಾಮ್ ಗೋಪಾಲ್ ವರ್ಮಾ ಅವರಿಗೆ ಆಗಲ್ಲ.

  ವರ್ಮಾ ಅವರ ವಿಚಿತ್ರ ಗುಣ ಗೊತ್ತಿರುವ ಕಾರಣ ಅಭಿಮಾನಿಗಳು ಅನ್ ಹ್ಯಾಪಿ ಬರ್ತಡೇ ಅಂತ ಶುಭಕೋರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ #unhappybirthdayrgv ಎಂದು ಹ್ಯಾಷ್ ಟ್ಯಾಗ್ ಕ್ರಿಯೇಟ್ ಮಾಡಿ ಎಲ್ಲರೂ ವಿಶ್ ಮಾಡುತ್ತಿದ್ದಾರೆ. ಯಾರಾದರು ಶುಭಾಶಯ ಕೋರಿದ್ರೆ ಸಾಕು ಉರಿದು ಬೀಳುವ ವರ್ಮಾ ಇಂದು ಹುಟ್ಟುಹಬ್ಬದ ದಿನ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಮುಂದೆ ಓದಿ...

  ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿಚಿತ್ರ ವಿಶ್ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿಚಿತ್ರ ವಿಶ್

  ಡೆತ್ ಡೇ ಎಂದು ವರ್ಮಾ ಟ್ವೀಟ್

  ಡೆತ್ ಡೇ ಎಂದು ವರ್ಮಾ ಟ್ವೀಟ್

  ಹುಟ್ಟುಹಬ್ಬದ ದಿನ ಟ್ವೀಟ್ ಮಾಡಿರುವ ವರ್ಮಾ, 'ಇವತ್ತು ನನ್ನ ಬರ್ತಡೇ ಅಲ್ಲ, ಡೆತ್ ಡೇ. ಏಕೆಂದರೆ ನನ್ನ ಜೀವನದ ಇನ್ನೂ ಒಂದು ವರ್ಷ ಇಂದು ಸತ್ತುಹೋಯಿತು' ಎಂದು ಬರೆದುಕೊಂಡಿದ್ದಾರೆ.

  ಅಭಿಮಾನಿಗಳಿಂದ ವಿಚಿತ್ರ ಕಾಮೆಂಟ್

  ಅಭಿಮಾನಿಗಳಿಂದ ವಿಚಿತ್ರ ಕಾಮೆಂಟ್

  ವರ್ಮಾ ಟ್ವೀಟ್ ಗೆ ಅಭಿಮಾನಿಗಳು ವಿಚಿತ್ರ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಕೆವಲರು RIP ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಹ್ಯಾಪಿ ಡೆತ್ ಎಂದು ಹೇಳುತ್ತಿದ್ದಾರೆ. ಅಷ್ಟೆಯಲ್ಲದೆ ವರ್ಮಾ ಫೋಟೋಗೆ ಹಾರ ಹಾಕಿ ಟ್ರೋಲ್ ಮಾಡುತ್ತಿದ್ದಾರೆ. ವಿಚಿತ್ರ ನಿರ್ದೇಶಕನ ವಿಚಿತ್ರ ಟ್ವೀಟ್‌ಗೆ ವಿಚಿತ್ರವಾದ ಕಾಮೆಂಟ್‌ಗಳೇ ಹರಿದು ಬರುತ್ತಿದೆ.

  ವಿಶ್ ಮಾಡಿದ್ರೆ ನೋ ಥ್ಯಾಂಕ್ಸ್ ಪ್ರತಿಕ್ರಿಯೆ

  ವಿಶ್ ಮಾಡಿದ್ರೆ ನೋ ಥ್ಯಾಂಕ್ಸ್ ಪ್ರತಿಕ್ರಿಯೆ

  ವರ್ಮಾ ಬಗ್ಗೆ ಗೊತ್ತಿದ್ದು ವಿಶ್ ಮಾಡುವ ಸಾಹಸ ಮಾಡಿದ ನೆಟ್ಟಿಗರಿಗೆ ವರ್ಮಾ 'ನೋ ಥ್ಯಾಂಕ್ಸ್..' ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸದ್ಯ ನೋ ಥ್ಯಾಂಕ್ಸ್ ಎನ್ನುತ್ತಿದ್ದಾರೆ ಇದನ್ನು ಮೀರಿ ವಿಶ್ ಮಾಡಿದರಿಗೆ ಇನ್ನೇನು ಪ್ರತಿಕ್ರಿಯೆ ಬರುತ್ತೋ ದೇವರಿಗೆ ಗೊತ್ತು. ಹಾಗಾಗಿ ಹುಟ್ಟುಹಬ್ಬ ಅಂತ ಆರ್ ಜಿ ವಿ ಗೆ ವಿಶ್ ಮಾಡುವ ಮುನ್ನ ಸ್ವಲ್ಪ ಯೋಚಿಸೋದು ಒಳ್ಳೆಯದು.

  ತಲೈವಿ ಟ್ರೈಲರ್ ನೋಡಿ ಕಂಗನಾಗೆ 'ಬಹುಪರಾಕ್' ಎಂದ ರಾಮ್ ಗೋಪಾಲ್ ವರ್ಮಾತಲೈವಿ ಟ್ರೈಲರ್ ನೋಡಿ ಕಂಗನಾಗೆ 'ಬಹುಪರಾಕ್' ಎಂದ ರಾಮ್ ಗೋಪಾಲ್ ವರ್ಮಾ

  ವಿಶ್ ಟೈಮ್ ವೇಸ್ಟ್ ಮಾಡಬೇಡಿ ಎನ್ನುವ ವರ್ಮಾ

  ವಿಶ್ ಟೈಮ್ ವೇಸ್ಟ್ ಮಾಡಬೇಡಿ ಎನ್ನುವ ವರ್ಮಾ

  ಈ ಹಿಂದೆಯೂ ತನ್ನ ಹುಟ್ಟುಹಬ್ಬದ ದಿನ 'ನಾನು ಮಾಡಿರುವ ಪಾಪಗಳಿಗೆ ಎಂದೋ ಸತ್ತು ಹೋಗಿದ್ದೇನೆ. ನಾನು ಮತ್ತೊಮ್ಮೆ ಹುಟ್ಟಿ ಬರುತ್ತೇನೆ ಅನ್ನುವ ನಂಬಿಕೆ ಕೂಡ ನನಗಿಲ್ಲ. ಹೀಗಾಗಿ ನನ್ನ ಬರ್ತಡೇಗೆ ವಿಶ್ ಮಾಡಿ ಟೈಮ್ ವೇಸ್ಟ್ ಮಾಡ್ಬೇಡಿ' ಎಂದು ಟ್ವೀಟ್ ಮಾಡಿದ್ದರು.

  ಪುನೀತ್ ರಾಜ್ ಕುಮಾರ್ ದೊಡ್ಡ ಗುಣದ ಬಗ್ಗೆ ಮಾತನಾಡಿದ ಆಶೀತ | Filmibeat Kannada
  ವರ್ಮಾ ಏನೆ ಮಾಡಿದ್ರು ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ

  ವರ್ಮಾ ಏನೆ ಮಾಡಿದ್ರು ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ

  ಮೂರು ದಶಕಗಳ ವೃತ್ತಿ ಜೀವನದಲ್ಲಿ ವರ್ಮಾ ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಜೊತೆಗೆ ಅಷ್ಟೆ ವಿವಾದಗಳನ್ನು ಮಾಡಿಕೊಂಡಿದ್ದಾರೆ. ಏನೆ ಮಾಡಿದ್ರು ವರ್ಮಾ ಅವರನ್ನು ಇಷ್ಟ ಪಡುವ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ.

  1989ರಲ್ಲಿ 'ಶಿವ' ಸಿನಿಮಾ ನಿರ್ದೇಶನ ಮಾಡುವ ಮೂಲಕ ತೆಲುಗು ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ ವರ್ಮಾ ಬಳಿಕ ತಮಿಳು, ಹಿಂದಿ ಸಿನಿಮಾಗಳಿಗೂ ಆಕ್ಷನ್ ಕಟ್ ಹೇಳಿದ್ದಾರೆ. ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮೂಲಕ ವರ್ಮಾ ಕನ್ನಡಕ್ಕೂ ಕಾಲಿಟ್ಟಿದ್ದಾರೆ. ಇತ್ತೀಚಿಗೆ ಆರ್ ಜಿ ವಿ ಕಡಿಮೆ ಅವಧಿಯಲ್ಲಿ ಸಿನಿಮಾಗಳನ್ನು ಮಾಡಿ ಆನ್ ಲೈನ್‌ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

  English summary
  Ram Gopal Varma Birthday: Ram Gopal Varma says it's not my birthday its death day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X