ಮೊದಲ ಲವರ್ ನ ಹಾಟ್ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ ರಾಮ್ ಗೋಪಾಲ್ ವರ್ಮಾ

ತೆಲುಗಿನ ವಿವಾದಾತ್ಮಕ ನಿರ್ದೇಶಕ ಅಂತಾನೆ ಖ್ಯಾತಿಗಳಿಸಿರುವ ರಾಮ್ ಗೋಪಾಲ್ ವರ್ಮಾ ತಮ್ಮ ಸಿನಿಮಾಗಳಿಂದ ಸುದ್ದಿಯಲ್ಲಿರುವ ಕಾಲ ಹೋಗಿ ಈಗ ವಿವಾದಾತ್ಮಕ ಹೇಳಿಕೆಗಳು, ಟ್ವೀಟ್, ಪೋಸ್ಟ್ ಗಳಿಂದ ಸುದ್ದಿಯಾಗುತ್ತಿದ್ದಾರೆ. ರಾಮ್ ಗೋಪಾಲ್ ವರ್ಮಾ ತಮ್ಮ ಪ್ರತಿಭೆಯನ್ನೆಲ್ಲ ವಿವಾದ ಸೃಷ್ಟಿಸುವುದಕ್ಕೆ ಮಾತ್ರ ಬಳಸುತ್ತಿದ್ದಾರೆ. ಸದಾ ಒಂದಲ್ಲೊಂದು ಹೇಳಿಕೆಗಳನ್ನು ನೀಡುತ್ತಾ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿರುವ ವರ್ಮಾ ಇದೀಗ ತನ್ನ ಮೊದಲ ಲವರ್ ನ ಹಾಟ್ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ನಟಿಯ ಜೊತೆ ಮನಬಂದಂತೆ ಡಾನ್ಸ್ ಮಾಡಿ, ಬಳಿಕ ಕಾಲಿಗೆ ಬಿದ್ದು ಈ ವಿಡಿಯೋದಲ್ಲಿರೋದು ನಾನು ಅಲ್ಲವೇ ಅಲ್ಲ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಮೇಲೆ ಆಣೆ ಮಾಡುತ್ತೀನಿ ಎಂದಿದ್ದ ವರ್ಮಾ ಇದೀಗ ತನ್ನ ಮೊದಲ ಲವರ್ ನ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ನೀಲಿ ಬಣ್ಣದ ಸ್ವಿಮ್ ಸೂಟ್ ಧರಿಸಿರುವ ಮಹಿಳೆಯ ಫೋಟೋ ಶೇರ್ ಮಾಡಿ ಈಕೆಯೇ ತನ್ನ ಮೊದಲ ಪ್ರೇಯಸಿ ಸತ್ಯ ಪೋಲವರಪು ಎಂದು ಪರಿಚಯ ಮಾಡಿಕೊಟ್ಟಿದ್ದಾರೆ. ಅಷ್ಟೆಯಲ್ಲ ತನ್ನ ಪ್ರೇಯಸಿಯ ನೆನಪಿಗಾಗಿ ರಾಮ್ ಗೋಪಾಲ್ ವರ್ಮಾ ತಾನು ನಿರ್ದೇಶನದ ಕ್ಷಣ ಕ್ಷಣಂ ಸಿನಿಮಾದಲ್ಲಿ ನಟಿ ಶ್ರೀದೇವಿ ಪಾತ್ರದ ಹೆಸರನ್ನು ಸತ್ಯಾ ಎಂದು ಇಟ್ಟಿದ್ದಾರೆ. ಅಷ್ಟೆಯಲ್ಲ ಸತ್ಯಾ ಹೆಸರಿನಲ್ಲಿ ಸಿನಿಮಾ ಕೂಡ ಮಾಡಿದ್ದಾರೆ. ಮುಂದೆ ಓದಿ...

ಮೊದಲ ಲವರ್ ಬಗ್ಗೆ ವರ್ಮಾ ಹೇಳಿದ್ದೇನು?

ಮೊದಲ ಲವರ್ ಬಗ್ಗೆ ವರ್ಮಾ ಹೇಳಿದ್ದೇನು?

ತನ್ನ ಮೊದಲ ಲವರ್ ಎಂದು ಹೇಳಿಕೊಂಡು ಶೇರ್ ಮಾಡಿರುವ ಫೋಟೋದಲ್ಲಿ ಮಹಿಳೆ ನೀಲಿ ಬಣ್ಣದ ಸ್ವಿಮಿಂಗ್ ಬಟ್ಟೆಯಲ್ಲಿ ಬೀಚ್ ನಲ್ಲಿ ಆಟವಾಡುತ್ತಿದ್ದಾರೆ. ಇದು ಇವತ್ತಿನ ಫೋಟೋ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. "ನೀಲಿ ಬಣ್ಣದ ಸ್ವಿಮ್ ಸೂಟ್ ಧರಿಸಿರುವ ಮಹಿಳೆ ಹೆಸರು ಸತ್ಯಾ. ಈಕೆ ನನ್ನ ಕಾಲೇಜು ದಿನಗಳ ಮೊದಲ ಪ್ರೇಯಸಿ. ಸಿದ್ಧಾರ್ಥ್ ಇಂಜಿನಿಯರ್ ಕಾಲೇಜಿನಲ್ಲಿ ಓದುತ್ತಿದ್ದಾಗ. ಸತ್ಯಾ ಈಗ ಅಮೆರಿಕದಲ್ಲಿ ಇದ್ದಾರೆ" ಎಂದು ಹೇಳಿದ್ದಾರೆ.

ಮೊದಲ ಲವರ್ ಹೆಸರಿನಲ್ಲಿ ಸಿನಿಮಾ ಮಾಡಿದ್ದ ನಿರ್ದೇಶಕ

ಮೊದಲ ಲವರ್ ಹೆಸರಿನಲ್ಲಿ ಸಿನಿಮಾ ಮಾಡಿದ್ದ ನಿರ್ದೇಶಕ

ಮತ್ತೊಂದು ಫೋಟೋ ಶೇರ್ ಮಾಡಿ, "ನನ್ನ ಲ್ಯಾಂಡ್ ಮಾರ್ಕ್ ಚಿತ್ರ ಸತ್ಯಾ ಮತ್ತು ಕ್ಷಣ ಕ್ಷಣಂ ಸಿನಿಮಾದಲ್ಲಿ ಶ್ರೀದೇವಿ ಹೆಸರನ್ನು ನನ್ನ ಮೊದಲ ಪ್ರೇಯಸಿ ಸತ್ಯಾ ಹೆಸರನ್ನು ಇಟ್ಟಿದ್ದೆ. ಈ ಫೋಟೋಗಳು ಇಂದಿನ ಫೋಟೋಗಳಾಗಿವೆ. ಅವಳು ನನಗೆ ಮಿಯಾಮಿ ಬೀಚ್ ನಿಂದ ಕಳುಹಿಸಿದಳು" ಎಂದು ಹೇಳಿದ್ದಾರೆ.

ಸತ್ಯಾ ಸಿನಿಮಾದ ಬಗ್ಗೆ

ಸತ್ಯಾ ಸಿನಿಮಾದ ಬಗ್ಗೆ

ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿ ನಿರ್ಮಾಣ ಮಾಡಿರುವ ಸತ್ಯಾ ಸಿನಿಮಾ 1998ರಲ್ಲಿ ಬಿಡುಗಡೆಯಾಗಿತ್ತು. 90 ದಶಕದಲ್ಲಿ ದೊಡ್ಡ ಮಟ್ಟಕ್ಕೆ ಹಿಟ್ ಆಗಿದ್ದ ಸಿನಿಮಾವಿದು. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾದಲ್ಲಿ ಜೆಡಿ ಚಕ್ರವರ್ತಿ, ಊರ್ಮಿಳಾ ಮಾತೋಂಡ್ಕರ್, ಮನೋಜ್ ಬಾಜಪೇಯಿ, ಸೌರಭ್ ಶುಕ್ಲಾ ಸೇರಿದಂತೆ ದೊಡ್ಡ ತಾರಾಬಳಗವಿತ್ತು.

ನಟಿಯ ಜೊತೆ ಮನಬಂದಂತೆ ಡಾನ್ಸ್ ಮಾಡಿದ್ದ ವರ್ಮಾ

ನಟಿಯ ಜೊತೆ ಮನಬಂದಂತೆ ಡಾನ್ಸ್ ಮಾಡಿದ್ದ ವರ್ಮಾ

ಇತ್ತೀಚಿಗಷ್ಟೆ ರಾಮ್ ಗೋಪಾಲ್ ವರ್ಮಾ, ನಟಿ, ಮಾಡೆಲ್ ಇನಾಯಾ ಸುಲ್ತಾನ ಜೊತೆ ಹೇಗೋ ಬೇಕೋ ಹಾಗೆ ಡಾನ್ಸ್ ಮಾಡಿ ಬಳಿಕ ಈ ಕಾಲಿಗೆ ಬಿದ್ದು ವಿಚಿತ್ರವಾಗಿ ವರ್ತಿಸುತ್ತಿದ್ದ ವಿಡಿಯೋ ಶೇರ್ ಮಾಡಿದ್ದರು. ಅದರಲ್ಲಿ ಇರುವುದು ರಾಮ್ ವರ್ಮಾ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿದ್ದರು ವಿಡಿಯೋದಲ್ಲಿ ಇರುವ ವ್ಯಕ್ತಿ ತಾನಲ್ಲ ಎಂದಿದ್ದರು.

ವಿಚಿತ್ರವಾಗಿ ನಡೆದುಕೊಂಡಿದ್ದ ರಾಮ್ ಗೋಪಾಲ್

ವಿಚಿತ್ರವಾಗಿ ನಡೆದುಕೊಂಡಿದ್ದ ರಾಮ್ ಗೋಪಾಲ್

ನಟಿ ಮತ್ತು ಮಾಡಲ್ ಇನಾಯಾ ಸುಲ್ತಾನ ಮತ್ತು ವರ್ಮಾ ಮನಬಂದಂತೆ ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತು. ಡಾನ್ಸ್ ಮಾಡುತ್ತಾ ನಟಿಯನ್ನು ಹೇಗ್ ಬೇಕೋ ಹಾಗೆ ತಬ್ಬಿಕೊಂಡಿದ್ದರು, ಸ್ಪರ್ಶಿಸಿದ್ದರು, ಬಳಿಕ ಆಕೆಯ ಕಾಲಿಗೆ ಬಿದ್ದಿದ್ದು ಹೊರಳಾಡಿದ್ರು. ಚಿತ್ರ-ವಿಚಿತ್ರವಾಗಿ ಆಡುತ್ತಿರುವ ರಾಮ್ ಗೋಪಾಲ್ ವರ್ಮಾ ವಿಡಿಯೋ ನೋಡಿ ನೆಟ್ಟಿಗರು ಕಿಡಿ ಕಾರಿದ್ದರು. ಹೀಗೆ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ಬೇಗಾಬಿಟ್ಟಿ ಪೋಸ್ಟ್ ಗಳನ್ನು ಶೇರ್ ಮಾಡುತ್ತಾ ನೆಟ್ಟಿಗರ ಗಮನಸೆಳೆಯುತ್ತಿದ್ದಾರೆ.

More from Filmibeat

English summary
Telugu Director Ram Gopal Varma shares his first lover Satya's photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X