twitter
    For Quick Alerts
    ALLOW NOTIFICATIONS  
    For Daily Alerts

    ಪ್ರಕಾಶ್ ರಾಜ್ ಬೆಂಬಲಿಸಿದ ವರ್ಮಾ: 'ನಾನ್ ಲೋಕಲ್' ಎಂದವರಿಗೆ ಗುನ್ನಾ

    |

    ತೆಲುಗು ಸಿನಿ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಬಹುಭಾಷೆ ನಟ ಪ್ರಕಾಶ್ ರಾಜ್ ಸ್ಪರ್ಧೆ ಮಾಡುತ್ತಿದ್ದಾರೆ. ಪ್ರಕಾಶ್ ರಾಜ್‌ಗೆ ನಾಗಬಾಬು, ಶ್ರೀಕಾಂತ್, ಬಂಡ್ಲಗಣೇಶ್ ಸೇರಿದಂತೆ ಮೆಗಾ ಕುಟುಂಬದ ಆಪ್ತರು ಬೆಂಬಲಿಸಿದ್ದಾರೆ. ಆದರೆ, 'ಪ್ರಕಾಶ್ ರಾಜ್ ನಮ್ಮವರಲ್ಲ, ಅವರು ನಾನ್ ಲೋಕಲ್, ಮಾ ಅಧ್ಯಕ್ಷರಾಗಲು ಅವರಿಗೆ ಅರ್ಹತೆ ಇಲ್ಲ' ಎಂಬ ಆರೋಪ ಟಾಲಿವುಡ್‌ನಲ್ಲಿ ಕೇಳಿಬರ್ತಿದೆ.

    'ಪ್ರಕಾಶ್ ರಾಜ್ ನಾನ್ ಲೋಕಲ್' ಎಂಬ ಹೇಳಿಕೆಯನ್ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಖಂಡಿಸಿದ್ದಾರೆ. ಪ್ರಕಾಶ್ ರಾಜ್ ನಾನ್ ಲೋಕಲ್ ಎನ್ನುವುದಾದರೆ ಎನ್‌ಟಿಆರ್, ನಾಗೇಶ್ವರರಾವ್, ಮೋಹನ್ ಬಾಬು, ಸೂಪರ್ ಸ್ಟಾರ್ ರಜನಿಕಾಂತ್, ಅಮಿತಾಭ್ ಬಚ್ಚನ್ ಇವರೆಲ್ಲ ಯಾರು ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಆರ್‌ಜಿವಿ, ಪ್ರಕಾಶ್ ರಾಜ್ ಬೆಂಬಲಕ್ಕೆ ನಿಂತಿದ್ದಾರೆ.

    ಎನ್‌ಟಿಆರ್, ನಾಗೇಶ್ವರ ರಾವ್ ಯಾರು?

    ಎನ್‌ಟಿಆರ್, ನಾಗೇಶ್ವರ ರಾವ್ ಯಾರು?

    ಪ್ರಕಾಶ್ ರಾಜ್‌ಗೆ ವಿರೋಧ ವ್ಯಕ್ತಪಡಿಸುತ್ತಿರುವವರ ಹೇಳಿಕೆಗೆ ತಿರುಗೇಟು ಕೊಟ್ಟಿರುವ ರಾಮ್ ಗೋಪಾಲ್ ವರ್ಮಾ, ''ಕರ್ನಾಟಕದಿಂದ ಬಂದಿರುವ ಪ್ರಕಾಶ್ ರಾಜ್ ಅವರನ್ನು ನಾನ್ ಲೋಕಲ್ ಎನ್ನುವುದಾದರೆ ಗುಡಿವಾಡದಿಂದ ಚೆನ್ನೈಗೆ ತೆರಳಿದ್ದ ನಂದಮೂರಿ ತಾರಕ್ ರಾಮಾರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಬುರ್ರಿಪಾಲೇಂನಿಂದ ಮದ್ರಾಸ್‌ಗೆ ಹೋಗಿದ್ದ ಕೃಷ್ಣ, ತಿರುಪತಿಯಿಂದ ಮದ್ರಾಸ್‌ಗೆ ತೆರಳಿದ್ದ ಮೋಹನ್ ಬಾಬು ಅವರು ಲೋಕಲ್? ಹೇಗೆ ಹೇಗೆ ಹೇಗೆ...?'' ಎಂದು ಪ್ರಶ್ನಿಸಿದ್ದಾರೆ.

    ರಜನಿಕಾಂತ್, ಅಮಿತಾಭ್ ಎಲ್ಲಿಯವರು?

    ರಜನಿಕಾಂತ್, ಅಮಿತಾಭ್ ಎಲ್ಲಿಯವರು?

    ''ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಬಂದ ಪ್ರಕಾಶ್ ರಾಜ್ ನಾನ್ ಲೋಕಲ್ ಆದ್ರೆ, ಮಹಾರಾಷ್ಟ್ರದಿಂದ ಎಲ್ಲೇಲ್ಲೊ ಹೋದ ರಜನಿಕಾಂತ್, ಉತ್ತರ ಪ್ರದೇಶದಿಂದ ಮಹಾರಾಷ್ಟ್ರಕ್ಕೆ ಹೋದ ಅಮಿತಾಭ್ ಬಚ್ಚನ್ ಲೋಕಲ್ ಆಗ್ತಾರಾ?...ಹೇಗೆ ಹೇಗೆ ಹೇಗೆ...? ಎಂದು ಆರ್‌ಜಿವಿ ಕೇಳಿದ್ದಾರೆ.

    ಗ್ರಾಮ ದತ್ತು ತೆಗೆದುಕೊಂಡ ಪ್ರಕಾಶ್ ರಾಜ್

    ಗ್ರಾಮ ದತ್ತು ತೆಗೆದುಕೊಂಡ ಪ್ರಕಾಶ್ ರಾಜ್

    ''ಸುಮಾರು 30 ವರ್ಷದಿಂದ ಇಲ್ಲಿಯೇ ಇದ್ದು ತೆಲುಗು ಕಲಿತುಕೊಂಡು, ಪತ್ನಿ ಮತ್ತು ಮಕ್ಕಳ ಜೊತೆ ಇಲ್ಲಿಯೇ ವಾಸವಿದ್ದು, ಹಲವು ಪುಸ್ತಕಗಳನ್ನು ತಾವೇ ಮುದ್ರಿಸಿ, ತೆಲಂಗಾಣದಲ್ಲಿ ಎರಡು ಗ್ರಾಮಗಳನ್ನು ದತ್ತು ಪಡೆದು, ಅಲ್ಲಿರುವ ಮಹಿಳೆಯವರಿಗೆ ಕೆಲಸ ಕಲ್ಪಿಸಿಕೊಟ್ಟವರು ನಾನ್ ಲೋಕಲ್?'' ಎಂದು ರಾಮ್ ಗೋಪಾಲ್ ವರ್ಮಾ ತಿರುಗೇಟು ಕೊಟ್ಟಿದ್ದಾರೆ.

    ಇದು ದೇಶದ ವಿರೋಧಿ ಹೇಳಿಕೆ

    ಇದು ದೇಶದ ವಿರೋಧಿ ಹೇಳಿಕೆ

    ''ಆತನ ನಟನೆ ಮೆಚ್ಚಿ ಈ ದೇಶ ನಾಲ್ಕು ಸಲ ಅವರಿಗೆ ಶಾಲು ಹೊದಿಸಿ ರಾಷ್ಟ್ರ ಪ್ರಶಸ್ತಿ ನೀಡಿದೆ. ಅವರನ್ನು ನಾನ್ ಲೋಕಲ್ ಎಂದು ಹೀಯಾಳಿಸುತ್ತೀರಾ. ಇದು ದೇಶದ ವಿರುದ್ಧವಾಗಿ ನೀಡುತ್ತಿರುವ ಹೇಳಿಕೆ'' ಎಂದು ವರ್ಮಾ ಟೀಕಿಸಿದ್ದಾರೆ.

    Recommended Video

    June 28ಕ್ಕೆ ಪ್ರತಿಭಟನೆಗೆ ಸಜ್ಜಾಗುತ್ತಿರುವ ಕಲಾವಿದರ ಸಂಘ!! | Filmibeat Kannada
    ನೀವು ಇಷ್ಟಪಡುವ ಹೀರೋಯಿನ್ಸ್ ನಾನ್ ಲೋಕಲ್

    ನೀವು ಇಷ್ಟಪಡುವ ಹೀರೋಯಿನ್ಸ್ ನಾನ್ ಲೋಕಲ್

    ''ನೀವೆಲ್ಲ ತುಂಬಾ ಇಷ್ಟಪಡುವ ನಾಯಕಿಯರು ನಾನ್ ಲೋಕಲ್. ಪ್ರಮುಖವಾಗಿ ಮೈಕಲ್ ಜಾಕ್ಸನ್ ನಾನ್ ಲೋಕಲ್, ಬ್ರೂಸ್ ಲೀ ನಾನ್ ಲೋಕಲ್, ರಾಮ, ಸೀತೆ ಜೊತೆಗೆ ಪ್ರಕಾಶ್ ರಾಜ್ ಸಹ ನಾನ್ ಲೋಕಲ್'' ಎಂದು ಆರ್‌ಜಿವಿ ಉತ್ತರಿಸಿದ್ದಾರೆ.

    English summary
    Director Ram gopal varma come forward and express his support to Prakash raj in MAA Election.
    Saturday, June 26, 2021, 9:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X