twitter
    For Quick Alerts
    ALLOW NOTIFICATIONS  
    For Daily Alerts

    ಎಲ್ಲಾ ಬಂದ್ ಮಾಡಿ ಕುಂಭಮೇಳಕ್ಕೆ ಹೋಗಲು ರಜೆ ನೀಡಿದ ಸರ್ಕಾರಕ್ಕೆ ಧನ್ಯವಾದ; ರಾಮ್ ಗೋಪಲ್ ವರ್ಮಾ ವ್ಯಂಗ್ಯ

    |

    ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದೆ ಎಂದು ಸರ್ಕಾರ ತೆಗೆದುಕೊಂಡ ಕೆಲವು ನಿರ್ಧಾರಗಳು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ರಾತ್ರಿ ಕರ್ಫ್ಯೂ, ಕೆಲವು ಪ್ರದೇಶಗಳಲ್ಲಿ ಲಾಕ್ ಡೌನ್, ಸಮಾರಂಭಗಳಿಗೆ ಕಡಿವಾಣ, ಚಿತ್ರಮಂದಿರಗಳು ಬಂದ್ ಹೀಗೆ ಅನೇಕ ಕಟ್ಟುನಿಟ್ಟಿನ ನಿಯಮಗಳನ್ನು ಹೊರಡಿಸಿದೆ.

    Recommended Video

    Kumbh Mela ವನ್ನು ಕೊರೊನಾ ಅಣುಬಾಂಬ್ ಎಂದ ರಾಮ್ ಗೋಪಾಲ್ ವರ್ಮಾ | Filmibeat Kannada

    ಆದರೆ ರಾಜಕೀಯ ರ್ಯಾಲಿ, ಕುಂಭಮೇಳ ಅಂತಹ ಕಾರ್ಯಕ್ರಮಗಳು ರಾಜರೋಷವಾಗಿ ನಡೆಯುತ್ತಿದೆ. ಯಾವುದೇ ಅಂತರ, ಮಾಸ್ಕ್ ಹಾಕದೆ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದಾರೆ. ಸರ್ಕಾರದ ಇಂತಹ ಗೊಂದಲದ ನಿರ್ಧಾರಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

    ಇದೀಗ ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಸರ್ಕಾರದ ಈ ನಿಯಮಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರ್ ಜಿ ವಿ, ಪರೀಕ್ಷೆಗಳು ಮುಂದೂಡಲ್ಪಟ್ಟವು, ಬ್ಯುಸಿನೆಸ್ ಗಳು ಮುಚ್ಚಿದವೆ, ಚಿತ್ರಮಂದಿರಗಳು ಬಂದ್ ಆಗಿವೆ, ರೆಸ್ಟೋರೆಂಟ್ ಗಳಿಲ್ಲ, ಎಲ್ಲಾ ಕೆಲಸಗಳು ನಿಂತುಹೋಗಿವೆ. ಆದರೆ ಇದೆಲ್ಲ ಕೊರೊನಾದಿಂದ ಅಲ್ಲ. ಕುಂಬ ಮೇಳಕ್ಕೆ ಹೋಗಿ ರಾಜಕೀಯ ರ್ಯಾಲಿಯಲ್ಲಿ ಹಾಜರಾಗುವಂತೆ ಸರ್ಕಾರ ಎಲ್ಲರಿಗೂ ರಜೆ ನೀಡಿದೆ. ತುಂಬಾ ಧನ್ಯವಾದಗಳು ಸರ್ಕಾರ' ಎಂದು ಟ್ವೀಟ್ ಮಾಡಿದ್ದಾರೆ.

    Ram Gopal Varma thanks to government for give holidays to go to the KUMBH MELA

    'ಇಲ್ಲಿ ಕೊರೊನಾ ಮೇಳ ನಡೆಯುತ್ತಿದೆ. ಕುಂಬಮೇಳಗೆ ಸೇರಲು ಇಡೇ ಭಾರತವನ್ನು ಆಹ್ವಾನನಿಸುತ್ತಿದೆ. ಹರಿದ್ವಾರಕ್ಕೆ ಹೋಗೋಣ ಅಲ್ಲಿ ಯಾವುದು ನಿರ್ಬಂಧಗಳಿಲ್ಲ.' ಎಂದಿದ್ದಾರೆ.

    ಅನೇಕರು ಆರ್ ಜಿ ವಿಗೆ ಮಾತಿಗೆ ಬೆಂಬಲ ಸೂಚಿಸಿದ್ರೆ ಇನ್ನು ಕೆಲವರು ಸಮಾಜಿಕ ಜಾಲತಾಣದಲ್ಲಿ ತರಾಟೆ ತೆಗೆದುಕೊಂಡಿದ್ದಾರೆ. ಸರ್ಕಾರ ಎಷ್ಟೇ ಕಟ್ಟು ನಿಟ್ಟಿನ ನಿಯಮಗಳನ್ನು ತೆಗೆದುಕೊಂಡರೂ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಆತಂಕ ಸೃಷ್ಟಿಸಿರುವ ಕೊರೊನಾ ವಿರುದ್ಧ ಹೋರಾಡಲು ಸರ್ಕಾರದ ಮುಂದಿನ ನಿರ್ಧಾರ ಏನು ಎನ್ನುವುದು ಕಾದು ನೋಡಬೇಕು.

    English summary
    Ram Gopal Varma thanks to government for give holidays to go to the KUMBH MELA and attend POLITICAL RALLIES.
    Friday, April 16, 2021, 10:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X