For Quick Alerts
  ALLOW NOTIFICATIONS  
  For Daily Alerts

  ಅಮ್ಮನಿಗೆ ವೋಡ್ಕಾ ಕುಡಿಸಲು ಪ್ರಯತ್ನಿಸಿದ ರಾಮ್ ಗೋಪಾಲ್ ವರ್ಮಾ

  |

  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ದೀಪಾವಳಿ ಹಬ್ಬವನ್ನು ತನ್ನ ಕುಟುಂಬದ ಜೊತೆ ಸಂಭ್ರಮದಿಂದ ಆಚರಿಸಿದ್ದಾರೆ. ತಾಯಿ, ಸಹೋದರಿ ಸೇರಿದಂತೆ ಇಡೀ ಕುಟುಂಬದ ಜೊತೆ ಬೆಳಕಿನ ಹಬ್ಬವನ್ನು ಸೆಲೆಬ್ರೆಟ್ ಮಾಡಿದ್ದಾರೆ.

  ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದ್ದಾರೆ. ಕುಟುಂಬದ ಜೊತೆ ವರ್ಮಾ ಪಟಾಕಿ ಸಿಡಿಸುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆರ್‌ಜಿವಿ ಚರ್ಚಾತ್ಮಕವಾಗಿ ಟ್ವೀಟ್‌ಗಳನ್ನು ಮಾಡಿದ್ದಾರೆ.

  ರಾಮ್‌ ಗೋಪಾಲ್ ವರ್ಮಾ ತಂಟೆಗೆ ಹೋಗಿ ಪೆಚ್ಚಾದ ರಾಜಮೌಳಿರಾಮ್‌ ಗೋಪಾಲ್ ವರ್ಮಾ ತಂಟೆಗೆ ಹೋಗಿ ಪೆಚ್ಚಾದ ರಾಜಮೌಳಿ

  ದೀಪಾವಳಿ ಹಬ್ಬದ ಬಹಳ ಬೋರ್ ಆಗಿದೆ ಎಂದು ಟ್ವೀಟ್ ಮಾಡಿರುವ ವರ್ಮಾ ತನ್ನ ತಾಯಿ ಮತ್ತು ಸಹೋದರಿಗೆ ವೋಡ್ಕಾ (ಮದ್ಯಪಾನ) ಕುಡಿಯುವಂತೆ ಒತ್ತಾಯಿಸಿದ್ದಾರೆ. ಇದನ್ನು ಸಹ ವರ್ಮಾ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.

  ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ತಾಯಿಗೆ ವೋಡ್ಕಾ ಕುಡಿಯುವಂತೆ ಮನವೊಲಿಸುತ್ತಿದ್ದೇನೆ ಎಂದು ಫೋಟೋ ಸಮೇತ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ವರ್ಮಾಗೆ ತೆಲೆಕೆಟ್ಟಿದೆ ಎಂದು ಖಂಡಿಸಿದ್ದಾರೆ.

  ಇನ್ನು ಕೆಲವು ವರ್ಮಾ ವೋಡ್ಕಾ ಎಂದು ಹೇಳುತ್ತಿದ್ದಾರೆ. ಆದ್ರೆ, ನೀರು ಇರಬಹುದು. ಆದರೂ ವೋಡ್ಕಾ ಎಂದು ಸ್ವತಃ ಆರ್‌ಜಿವಿ ಹೇಳಿಕೊಂಡಿರುವುದರಿಂದ ''ತಾಯಿಗೆ ಈ ರೀತಿ ಮಾಡುವುದು ಖಂಡನೀಯ'' ಎಂದು ಟೀಕಿಸಿದ್ದಾರೆ.

  ಕೊಹ್ಲಿ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಮುಖಂಡ | Filmibeat Kannada

  ಲಾಕ್‌ಡೌನ್ ವೇಳೆ ಇಡೀ ಚಿತ್ರರಂಗ ಸ್ತಬ್ದವಾಗಿತ್ತು. ಆದರೆ, ಆರ್‌ಜಿವಿ ಮಾತ್ರ ಮರ್ಡರ್, ಡೇಂಜರ್ಸ್, ಕೊರೊನಾ ವೈರಸ್, ಎಂಟರ್ ದಿ ಗರ್ಲ್ ಡ್ರಾಗನ್ ಅಂತಹ ಚಿತ್ರಗಳ ಚಿತ್ರೀಕರಣ ಮಾಡಿದ್ದಾರೆ.

  English summary
  Ram gopal varma trying to convince his mother and sister to have a vodka sip to spice up.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X