For Quick Alerts
  ALLOW NOTIFICATIONS  
  For Daily Alerts

  ಗಂಡ, ಹೆಂಡ್ತಿ, ಮಕ್ಕಳನ್ನು ಮುಂದಿಟ್ಟು ಸ್ವಾತಂತ್ರ್ಯದ ಪಾಠ: ಆರ್‌ಜಿವಿ ಟ್ವೀಟ್ ಬಗ್ಗೆನೇ ಚರ್ಚೆ!

  |

  ಈ ಬಾರಿಯ ಸ್ವಾತಂತ್ರೋತ್ಸವ ಭಾರತೀಯರಿಗೆ ತುಂಬಾನೇ ಸ್ಪೆಷಲ್. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರೈಸಿದೆ. ಈ ಕಾರಣಕ್ಕೆ ಎಲ್ಲೆಡೆ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಸೆಲೆಬ್ರೆಟಿಗಳೂ ಈ ಶುಭ ಸಂದರ್ಭವನ್ನು ನೆನೆದು ಸಮಸ್ತ ಜನತೆಗೆ ಶುಭ ಕೋರುತ್ತಿದ್ದಾರೆ.

  ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಸೆಲೆಬ್ರೆಟಿಗಳು ಭಾರತೀಯರಿಗೆ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಆದರೆ, ಕಾಂಟ್ರವರ್ಸಿ ಡೈರೆಕ್ಟರ್ ರಾಮ್‌ ಗೋಪಾಲ್ ವರ್ಮಾ ಸ್ವಾತಂತ್ರ್ಯ ದಿನಕ್ಕೆ ಟ್ವೀಟ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ. ಈ ಟ್ವೀಟ್ ಬಗ್ಗೆ ದೇಶಾದ್ಯಂತ ಚರ್ಚೆ ಹಾಗೂ ಟೀಕೆಯಾಗುತ್ತಿದೆ.

  ಪುರುಷರ ಬೆತ್ತಲೆ ಫೋಟೊವನ್ನು ಮಹಿಳೆಯರು ನೋಡಲು ಇಷ್ಟ ಪಡುತ್ತಾರಾ? ಸಮೀಕ್ಷೆಗೆ ಇಳಿದ RGV!ಪುರುಷರ ಬೆತ್ತಲೆ ಫೋಟೊವನ್ನು ಮಹಿಳೆಯರು ನೋಡಲು ಇಷ್ಟ ಪಡುತ್ತಾರಾ? ಸಮೀಕ್ಷೆಗೆ ಇಳಿದ RGV!

  ರಾಮ್‌ ಗೋಪಾಲ್ ವರ್ಮಾಗೆ ವಿವಾದಗಳು ಅನ್ನೋದು ಹೊಸದೇನು ಅಲ್ಲ. ಏನಾದರೂ ಒಂದು ಟ್ವೀಟ್ ಮಾಡಿ ಕಾಂಟ್ರವರ್ಸಿಗೆ ಸಿಲುಕಿಕೊಂಡಿದ್ದಾರೆ. ಸದ್ಯ ಸ್ವಾತಂತ್ರ್ಯ ಅಂದರೆ ಏನು ಅನ್ನೋದನ್ನು ತನ್ನದೇ ಶೈಲಿಯಲ್ಲಿ ಹೇಳಲು ಹೋಗಿ ಪೇಚಿಗೆ ಸಿಕ್ಕಿ ಬಿದ್ದಿದ್ದಾರೆ. ಅಷ್ಟಕ್ಕೂ ಆರ್‌ಜಿವಿ ಹೇಳಿದ್ದೇನು? ಮತ್ತೆ ವಿವಾದಕ್ಕೆ ಸಿಲುಕಿದ್ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..

  ಸ್ವಾತಂತ್ರ್ಯದ ಆರ್‌ಜಿವಿ ಟ್ವೀಟ್

  ಸ್ವಾತಂತ್ರ್ಯದ ಆರ್‌ಜಿವಿ ಟ್ವೀಟ್

  ರಾಮ್‌ ಗೋಪಾಲ್ ವರ್ಮಾ ಸುಮ್ಮನಿರಲಾರದೇ ಸ್ವಾತಂತ್ರ್ಯದ ಬಗ್ಗೆ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. 75ನೇ ಸ್ವಾತಂತ್ರ್ಯ ದಿನ ಅಮೃತ ಮಹೋತ್ಸವದಂದು ತಮಗೆ ಸ್ವಾತಂತ್ರ್ಯ ಅಂದರೆ ಏನು? ಅನ್ನೋದನ್ನು ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡಿದ್ದರು. " ಹೆಂಡತಿಯಿಂದ ಗಂಡನಿಗೆ ಸಿಗುವುದು ನಿಜವಾದ ಸ್ವಾತಂತ್ರ್ಯ, ಅದೇ ಹೆಂಡತಿಗೆ ತನ್ನ ಬೋರಿಂಗ್ ಗಂಡನಿಂದ ಸ್ವಾತಂತ್ರ್ಯ ಪಡೆಯುವುದು, ಕೆರಳಿಸುವ ಪೋಷಕರಿಂದ ಮಕ್ಕಳು ಸ್ವಾತಂತ್ರ್ಯ ಪಡೆಯುವುದು." ಎಂದು ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

  ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ಆರ್‌ಜಿವಿ ಕಮೆಂಟ್: ಬಿತ್ತು ಕೇಸ್ ಮೇಲೆ ಕೇಸ್!ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ಆರ್‌ಜಿವಿ ಕಮೆಂಟ್: ಬಿತ್ತು ಕೇಸ್ ಮೇಲೆ ಕೇಸ್!

  ಆರ್‌ಜಿವಿ ಟ್ವೀಟ್ ಬಗ್ಗೆನೇ ಚರ್ಚೆ!

  ಆರ್‌ಜಿವಿ ಟ್ವೀಟ್ ಬಗ್ಗೆನೇ ಚರ್ಚೆ!

  ರಾಮ್‌ ಗೋಪಾಲ್ ವರ್ಮಾ ಸ್ವಾತಂತ್ರ್ಯದ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಸಂಚಲನ ಚರ್ಚೆಯಾಗುತ್ತಿದೆ. ಸ್ವಾತಂತ್ರ್ಯದ ಬಗ್ಗೆ ಆರ್‌ಜಿವಿ ಟ್ವೀಟ್ ಕೆಲವರಿಗೆ ಇಷ್ಟ ಆಗಿದೆ. ಅದೇ ಮತ್ತಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. " ಆರ್‌ಜಿವಿ ಸ್ವಾತಂತ್ರ್ಯದ ಬಗ್ಗೆ ಬೇರೆ ಆಂಗಲ್‌ನಲ್ಲಿ ಜೂಮ್ ಮಾಡಿದ್ದಾರೆ. ಸ್ವಾತಂತ್ರ್ಯ ಅನ್ನೋದು ವಾಸ್ತವ, ಕಹಿ, ವ್ಯಂಗ್ಯ ಮತ್ತು ಹಾಸ್ಯಮಯವಾಗಿದೆ" ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. "ಇನ್ನು ಕೆಲವರು ಆರ್‌ಜಿವಿ ಹೇಳಿದ್ದೇ ನಿಜ" ಎಂದು ಹೇಳುತ್ತಿದ್ದಾರೆ.

  ನಿಮ್ಮಂತವರಿಂದ ಸ್ವಾತಂತ್ರ್ಯ ಬೇಕು

  ನಿಮ್ಮಂತವರಿಂದ ಸ್ವಾತಂತ್ರ್ಯ ಬೇಕು

  ಆರ್‌ಜಿವಿ ಮಾಡಿದ ಟ್ವೀಟ್ ಕೆಲವರಿಗೆ ಹಿಡಿಸಿಲ್ಲ. ಅದರಲ್ಲೂ 75ನೇ ಸ್ವಾತಂತ್ರ್ಯ ದಿನದಂದು ಇಂತಹ ಟ್ವೀಟ್ ಬೇಕಿರಲಿಲ್ಲ ಅಂತಿದ್ದಾರೆ. ಒಬ್ಬರಂತೂ" ಭಾರತೀಯ ಚಿತ್ರರಂಗಕ್ಕೆ ನಿಮ್ಮಂತಹ ನಿರ್ದೇಶಕರಿಂದ ಸ್ವಾತಂತ್ರ್ಯ ಬೇಕಿದೆ. ನೀಲಿ ಸಿನಿಮಾಗಳ ನಿರ್ದೇಶಕರಾಗಿ ಬದಲಾಗಿರುವ ನಿಮ್ಮಂತವರಿಂದ ಸ್ವಾತಂತ್ರ್ಯ ಬೇಕು ಎನ್ನುತ್ತಿದ್ದಾರೆ. ಇನ್ನೊಬ್ಬರು " ನಮಗೆ ನಿಮ್ಮ ಕಿರಿಕಿರಿ ಮಾಡುವ ದುರಂತ ಸಿನಿಮಾಗಳಿಂದ ಸ್ವಾತಂತ್ರ್ಯ ಬೇಕು" ಎಂದು ಆರ್‌ಜಿವಿಗೆ ಕಮೆಂಟ್ ಮಾಡಿದ್ದಾರೆ.

  ಆರ್‌ಜಿವಿ ವಿವಾದಾತ್ಮಕ ನಿರ್ದೇಶಕ

  ಆರ್‌ಜಿವಿ ವಿವಾದಾತ್ಮಕ ನಿರ್ದೇಶಕ

  ರಾಮ್‌ ಗೋಪಾಲ್‌ ವರ್ಮಾಗೆ ವಿವಾದಗಳು ಹೊಸದಲ್ಲ. ಹೀಗೆ ಒಂದಲ್ಲಾ ಒಂದು ಟ್ವೀಟ್ ಮಾಡಿ ಆರ್‌ಜಿವಿ ವಿವಾದಕ್ಕೆ ಸಿಕ್ಕಿಕೊಳ್ಳುತ್ತಲೇ ಇದ್ದಾರೆ. ಈಗ ಸ್ವಾತಂತ್ರ್ಯ ದಿನದಂದು ಮಾಡಿದ ಟ್ವೀಟ್‌ ಕೂಡ ಪರ ಹಾಗೂ ವಿರೋಧಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿಂದೆ ಕೂಡ ಹೀಗೆ ಟ್ವೀಟ್ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.

  English summary
  Ram Gopal Varma Tweet About Independence Day Goes Viral On Social Media, Know More.
  Monday, August 15, 2022, 15:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X