For Quick Alerts
  ALLOW NOTIFICATIONS  
  For Daily Alerts

  ಮತ್ತೆ ಮದುವೆ ಆಗುವ ಇಚ್ಛೆ ವ್ಯಕ್ತಪಡಿಸಿದ ರಾಮ್ ಗೋಪಾಲ್ ವರ್ಮಾ!

  |

  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಮದುವೆ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅದೂ ಮದುವೆ ಆಗಲು ಇಚ್ಛಿಸಿರುವ ವ್ಯಕ್ತಿಯ ಮುಖ ಸಹಿತ ನೋಡದೆ!

  ರಾಜ್ ಕುಮಾರ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ದುನಿಯಾ ವಿಜಯ್

  ರಾಮ್ ಗೋಪಾಲ್ ವರ್ಮಾ ತಮ್ಮ ಸಿನಿಮಾಗಳಿಂದಾಗಿ ಎಷ್ಟು ಖ್ಯಾತರೋ, ತಮ್ಮ ಟ್ವೀಟ್‌ಗಳಿಂದಲೂ ಅಷ್ಟೇ ಖ್ಯಾತರಾಗಿದ್ದಾರೆ. ಅಷ್ಟು ವ್ಯಂಗ್ಯವಾಗಿ, ಇರಿಯುವ ಈಟಿಯಂತೆ ಟ್ವೀಟ್ ಮಾಡುತ್ತಾರೆ ಅವರು.

  ಮೊದಲ ಮದುವೆಯನ್ನೇ ಉಳಿಸಿಕೊಳ್ಳಲಾಗದೆ ವಿಚ್ಚೇಧನ ಪಡೆದುಕೊಂಡ ರಾಮ್‌ ಗೋಪಾಲ್ ವರ್ಮಾ ಮರು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ಯಾಕೆ. ಮುಂದೆ ಓದಿ...

  ಮೋದಿ-ಟ್ರಂಪ್ ವಿಡಿಯೋ ಅಪ್‌ಲೋಡ್

  ಪ್ರಧಾನಿ ಮೋದಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುಜರಾತ್‌ನ 'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ವಿಡಿಯೋವನ್ನು ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಇಂದು ಹಂಚಿಕೊಂಡಿದ್ದಾರೆ.

  ವಿಡಿಯೋ ಎಡಿಟ್ ಮಾಡಿದವರ ಮೇಲೆ ಪ್ರೀತಿ

  ವಿಡಿಯೋ ಎಡಿಟ್ ಮಾಡಿದವರ ಮೇಲೆ ಪ್ರೀತಿ

  ಅದ್ಭುತವಾಗಿ ಎಡಿಟ್ ಮಾಡಿರುವ ಈ ವಿಡಿಯೋ ಗೆ ತಮಿಳಿನ ಹಾಡೊಂದನ್ನು ಹಿನ್ನೆಲೆಯಾಗಿ ಹಾಕಿ, ಹಾಸ್ಯಮಯ ವಿಡಿಯೋವನ್ನಾಗಿಸಲಾಗಿದೆ. ಈ ವಿಡಿಯೋ ರಾಮ್‌ ಗೋಪಾಲ್ ವರ್ಮಾ ಗೆ ಬಹಳ ಇಷ್ಟವಾಗಿದೆಯಂತೆ. ಹಾಗಾಗಿ ಆ ವಿಡಿಯೋವನ್ನು ಎಡಿಟ್ ಮಾಡಿದವರನ್ನು ರಾಮ್ ಗೋಪಾಲ್ ವರ್ಮಾ ಮದುವೆಯಾಗಬೇಕಂತೆ.

  ರಾಮ್ ಗೋಪಾಲ್ ವರ್ಮಾ ಮದುವೆಯಾಗಿ ಮಗಳಿದ್ದಾಳೆ

  ರಾಮ್ ಗೋಪಾಲ್ ವರ್ಮಾ ಮದುವೆಯಾಗಿ ಮಗಳಿದ್ದಾಳೆ

  ರಾಮ್‌ ಗೋಪಾಲ್ ವರ್ಮಾ ಗೆ ಈ ಮೊದಲು ಮದುವೆಯಾಗಿದೆ. ಅವರು ರತ್ನಾ ಎಂಬುವರನ್ನು ಮದುವೆಯಾಗಿದ್ದರು. ಅವರಿಗೆ ಮಗು ಸಹ ಇತ್ತು. ರತ್ನಾ ಅವರಿಗೆ ರಾಮ್ ಗೋಪಾಲ್ ವರ್ಮಾ ವಿಚ್ಛೇದನ ನೀಡಿದರು. ನಂತರ ಮದುವೆ ಆಗಿಲ್ಲ.

  ವಿವಾದಾತ್ಮಕ ಟ್ವೀಟ್‌ಗಳಿಂದ ಖ್ಯಾತರು ವರ್ಮಾ

  ವಿವಾದಾತ್ಮಕ ಟ್ವೀಟ್‌ಗಳಿಂದ ಖ್ಯಾತರು ವರ್ಮಾ

  ರಾಮ್ ಗೋಪಾಲ್ ವರ್ಮಾ ಆಗಾಗ್ಗೆ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಮೊನ್ನೆಯಷ್ಟೆ ಕೊರೊನಾ ಕುರಿತು ಟ್ವೀಟ್ ಮಾಡಿದ್ದ ವರ್ಮಾ, 'ಕೊರೊನಾ ಗೆ ಮದ್ದು ಇಲ್ಲ, ನನಗೂ ಮದ್ದು (ಮದ್ಯ) ಇಲ್ಲ' ಎಂದು ಟ್ವೀಟ್ ಮಾಡಿದ್ದರು.

  English summary
  Director Ram Gopal Varma said he want to marry a video editor who edited Modi-Trump video which he shared on twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X