For Quick Alerts
  ALLOW NOTIFICATIONS  
  For Daily Alerts

  ಸೆಕ್ಸಿ ಸಂದರ್ಶನದಲ್ಲಿ ವರ್ಮಾ, ಇನ್ನೊಂದು ವಿವಾದಕ್ಕೆ ಮುನ್ನುಡಿ?

  |

  ರಾಮ್ ಗೋಪಾಲ್ ವರ್ಮಾ ಗ್ಲಾಮರಸ್ ಯುವತಿಯೊಬ್ಬರ ಜೊತೆಗೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  ಮಾಜಿ ಬಿಗ್‌ಬಾಸ್ ಸ್ಪರ್ಧಿ ಅರಿಯಾನಾ ಗ್ಲೋರಿ ಜೊತೆಗೆ ರಾಮ್ ಗೋಪಾಲ್ ವರ್ಮಾ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಚಿತ್ರಗಳು ಸಖತ್ ಸೆಕ್ಸಿಯಾಗಿದ್ದು, ಭಾರಿ ವೈರಲ್ ಆಗಿವೆ.

  ಚಿತ್ರ ನೋಡಿದವರು ಇದು ಯಾವುದೋ ಸಿನಿಮಾದ ಫೋಟೊಶೂಟ್ ಎಂದುಕೊಂಡಿದ್ದಾರೆ ಆದರೆ ಇದು ಸಿನಿಮಾದ ಫೋಟೊಶೂಟ್ ಅಲ್ಲ ಬದಲಿಗೆ ರಾಮ್ ಗೋಪಾಲ್ ವರ್ಮಾರ ಸಂದರ್ಶನ.

  ಹೌದು, ಗ್ಲಾಮರಸ್ ಬಟ್ಟೆ ತೊಟ್ಟು ಸೆಕ್ಸಿಯಾಗಿ ರಾಮ್ ಗೋಪಾಲ್ ವರ್ಮಾರ ಸಂದರ್ಶನ ಮಾಡಿದ್ದಾರೆ ಅರಿಯಾನಾ ಗ್ಲೋರಿ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಸಹ ಹಂಚಿಕೊಂಡಿದ್ದಾರೆ.

  ''ನಾನು ಏನನ್ನಾದರೂ ಮಾಡುತ್ತೇನೆ ಎಂದು ನಿರ್ಣಯಿಸಿದ ಮೇಲೆ ಮಾಡಿಯೇ ತೀರುತ್ತೇನೆ. ಅದರ ಬಗ್ಗೆ ಯಾರು ಏನು ಅಂದುಕೊಳ್ಳುತ್ತಾರೆ ಎಂದೆಲ್ಲಾ ನಾನು ಯೋಚಿಸುವುದಿಲ್ಲ. ಆ ಕಾರ್ಯವನ್ನು ನಾನು ನನಗಾಗಿಯಷ್ಟೆ ಮಾಡುತ್ತೇನೆ'' ಎಂದಿದ್ದಾರೆ.

  ನಾನು ಹೇಗೆಂದು ಜನಕ್ಕೆ ಅರ್ಥವಾಗದು: ಅರಿಯಾನಾ

  ನಾನು ಹೇಗೆಂದು ಜನಕ್ಕೆ ಅರ್ಥವಾಗದು: ಅರಿಯಾನಾ

  ''ಜನ ಹೇಗಿದ್ದರು ನನ್ನ ಬಗ್ಗೆ ಅವರಿಗೆ ತೋಚಿದಂತೆ ಮಾತನಾಡಿಕೊಳ್ಳುತ್ತಾರೆ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಹತ್ತಿರದಿಂದ ನೋಡದ ಹೊರತು, ನಾನು ಯಾರು? ನನ್ನ ವ್ಯಕ್ತಿತ್ವ ಏನೆಂದು ಜನರಿಗೆ ಅರ್ಥವಾಗದು'' ಎಂದಿದ್ದಾರೆ ಅರಿಯಾನಾ ಗ್ಲೋರಿ.

  ನಿಮ್ಮ ಅಭಿಪ್ರಾಯಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ: ಅರಿಯಾನಾ

  ನಿಮ್ಮ ಅಭಿಪ್ರಾಯಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ: ಅರಿಯಾನಾ

  ''ಜನ ನನ್ನ ಬಗ್ಗೆ ಒಳ್ಳೆಯದು ಮಾತನಾಡುತ್ತಾರೊ, ಕೆಟ್ಟದು ಮಾತನಾಡುತ್ತಾರೊ ಅದನ್ನೆಲ್ಲಾ ನಾನು ಕೇರ್ ಮಾಡುವುದಿಲ್ಲ. ವಿಶಾಲ ಮನೋಭಾವಹೊಂದಿ ನನ್ನನ್ನು ಅರ್ಥ ಮಾಡಿಕೊಂಡಿರೆ ನನಗೆ ಸಂತೋಶ ಇಲ್ಲವಾದರೆ ನಿಮ್ಮಿಷ್ಟ, ನಾನದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ನನ್ನ ಗುರಿಯ ಕಡೆಗೆ ನಾನು ಸಾಗುತ್ತಲಿರುತ್ತೇನೆ'' ಎಂದು ದಿಟ್ಟ ಮಾತುಗಳನ್ನಾಡಿದ್ದಾರೆ ಅರಿಯಾನಾ.

  ಗ್ಲಾಮರಸ್ ಚಿತ್ರ ಹಂಚಿಕೊಂಡಿರುವ ಅರಿಯಾನಾ

  ಗ್ಲಾಮರಸ್ ಚಿತ್ರ ಹಂಚಿಕೊಂಡಿರುವ ಅರಿಯಾನಾ

  ''ರಾಮ್ ಗೋಪಾಲ್ ವರ್ಮಾ ಸರ್‌ಗೆ ನಾನು ಋಣಿಯಾಗಿರುತ್ತೇನೆ. ಅವರ ಒಂದು ಸಂದರ್ಶನ ನನ್ನ ಜೀವನವನ್ನು ಬದಲಾಯಿಸಿತು. ಈಗ ಮತ್ತೊಂದು ಹೊಸ ಸಂದರ್ಶನದೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇನೆ'' ಎಂದಿರುವ ಆರಿಯಾನಾ. ಆರ್‌ಜಿವಿ ಜೊತೆಗೆ ಜಿಮ್ ಮಾಡುತ್ತಿರುವ ಗ್ಲಾಮರಸ್ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

  Sanchari Vijay ಅದ್ಬುತ ನಟನೆಗೆ ಸಾಕ್ಷಿಯಾಯ್ತು ತಲೆದಂಡ ಚಿತ್ರದ ಟ್ರೈಲರ್ | Filmibeat Kannada
  ಬಿಕಿನಿಯಲ್ಲಿ ನೋಡಲು ಇಷ್ಟಪಡುತ್ತೀನಿ ಎಂದಿದ್ದರು ಆರ್‌ಜಿವಿ

  ಬಿಕಿನಿಯಲ್ಲಿ ನೋಡಲು ಇಷ್ಟಪಡುತ್ತೀನಿ ಎಂದಿದ್ದರು ಆರ್‌ಜಿವಿ

  ಅರಿಯಾನಾ ಗ್ಲೋರಿ ಈ ಹಿಂದೆ ಎರಡು ಬಾರಿ ರಾಮ್ ಗೋಪಾಲ್ ವರ್ಮಾ ಸಂದರ್ಶನ ಮಾಡಿದ್ದರು. ಆ ಎರಡರೂ ಸಂದರ್ಶನಗಳು ಸಖತ್ ಹಿಟ್ ಆಗಿದ್ದವು. ಮೊದಲ ಸಂದರ್ಶನದಲ್ಲಿ ಮಾತನಾಡಿದ್ದ ಆರ್‌ಜಿವಿ, ''ನಿಮ್ಮನ್ನು ಬಿಕಿನಿಯನ್ನು ನೋಡಲು ಇಷ್ಟಪಡುತ್ತೇನೆ'' ಎಂದಿದ್ದರು. ಎರಡನೇ ಸಂದರ್ಶನದಲ್ಲಿ ''ಕಳೆದ ಬಾರಿಯ ನೀವು ಹಾಕಿದ್ದ ಡ್ರೆಸ್ ಚೆನ್ನಾಗಿತ್ತು, ಅದರಲ್ಲಿ ನಿಮ್ಮ ಸುಂದರ ಕಾಲುಗಳು ನನಗೆ ಕಾಣುತ್ತಿದ್ದವು'' ಎಂದರಿದ್ದರು.

  English summary
  Director Ram Gopal Varma working out in gym with anchor, former bigg boss contestant Ariyana Glory. Pics went viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X