For Quick Alerts
  ALLOW NOTIFICATIONS  
  For Daily Alerts

  ತೆಲುಗು ನಟ ರಾಮ್ ಪೊಥಿನೆನಿ ಅಜ್ಜ ನಿಧನ: ಭಾವುಕ ಟ್ವೀಟ್

  |

  ತೆಲುಗು ನಟ ರಾಮ್ ಪೊಥಿನೆನಿ ಅಜ್ಜ ಸುಬ್ಬರಾವ್ ಅವರು ವಯೋಸಹಜ ಕಾಯಿಲೆಯಿಂದ ಮಂಗಳವಾರ ವಿಜಯವಾಡದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

  91 ವರ್ಷದ ಸುಬ್ಬರಾವ್ ಅವರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ. ಪ್ರೀತಿಯ ತಾತನನ್ನು ಕಳೆದುಕೊಂಡ ನಟ ರಾಮ್ ಟ್ವಿಟ್ಟರ್ ಮೂಲಕ ಹೃದಯಪೂರ್ವಕವಾಗಿ ನಮನ ಸಲ್ಲಿಸಿದ್ದಾರೆ.

  ತಾತನ ಬಗ್ಗೆ ಭಾವುಕರಾಗಿ ಬರೆದುಕೊಂಡಿರುವ ರಾಮ್ ಪೊಥಿನೆನಿ, 'ನನ್ನ ಜೀವನದಲ್ಲಿ ನಮ್ಮ ಅಜ್ಜ ಹೇಳಿಕೊಟ್ಟ ಪಾಠಗಳು ಬಹಳ ಪ್ರಮುಖವಾದದು. ಅದನ್ನು ಜೀವನ ಪೂರ್ತಿ ಪಾಲಿಸುತ್ತೇನೆ' ಎಂದು ಹೇಳಿದ್ದಾರೆ.

  ನಟ ಪರೇಶ್ ರಾವಲ್ ನಿಧನದ ಬಗ್ಗೆ ವಂದತಿ: ಟ್ವಿಟ್ಟರ್‌ನಲ್ಲಿ ತಿರುಗೇಟುನಟ ಪರೇಶ್ ರಾವಲ್ ನಿಧನದ ಬಗ್ಗೆ ವಂದತಿ: ಟ್ವಿಟ್ಟರ್‌ನಲ್ಲಿ ತಿರುಗೇಟು

  "ವಿಜಯವಾಡದಲ್ಲಿ ಲಾರಿ ಡ್ರೈವರ್‌ ಆಗಿ ನಿಮ್ಮ ಜೀವನ ಆರಂಭಿಸಿದ್ರಿ. ಲಾರಿ ಟೈರ್‌ಗಳನ್ನೇ ನಿಮ್ಮ ಹಾಸಿಗೆಯಾಗಿ ಮಾಡಿಕೊಂಡು ಮಲಗಿದ್ರಿ. ಕುಟುಂಬವನ್ನು ನೋಡಿಕೊಳ್ಳುವುದು, ಆರೈಕೆ ಮಾಡುವುದು, ನೀವು ಯಾವಾಗಲೂ ರಾಜನ ಹೃದಯವನ್ನು ಹೊಂದಿದ್ದೀರಿ'' ಎಂದು ನೆನಪಿಸಿಕೊಂಡಿದ್ದಾರೆ.

  ಮತ್ತೊಂದು ಟ್ವೀಟ್‌ನಲ್ಲಿ ''ಶ್ರೀಮಂತಿಕೆ ನಿಮ್ಮ ಜೇಬಿನಲ್ಲಿರುವುದರಿಂದಲ್ಲ, ನಿಮ್ಮ ಹೃದಯದಲ್ಲಿ ಅಡಗಿದೆ ಎಂದು ನೀವು ನಮಗೆ ತೋರಿಸಿದ್ದೀರಿ'' ಎಂದು ಭಾವುಕರಾಗಿದ್ದಾರೆ.

  ಕಿಶೋರ್ ತಿರುಮಲ ನಿರ್ದೇಶನದಲ್ಲಿ ತಯಾರಾಗಿರುವ 'ರೆಡ್' ಚಿತ್ರದಲ್ಲಿ ರಾಮ್ ಪೊಥಿನೆನಿ ನಟಿಸಿದ್ದಾರೆ. ನಿವೇತಾ ಪೆತುರಾಜ್ ಮತ್ತು ಮಾಳವಿಕಾ ಶರ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

  Kotigobba 3 |100 ಕೋಟಿ ಗಳಿಸೋದು ಪಕ್ಕಾ ಆಯ್ತು | Filmibeat Kannada

  ಎಲ್ ಲಿಂಗಸ್ವಾಮಿ ಜೊತೆ ದ್ವಿಭಾಷ ಚಿತ್ರಕ್ಕೆ ರಾಮ್ ಸಹಿ ಮಾಡಿದ್ದಾರೆ. ಈ ಚಿತ್ರದಲ್ಲಿ ಉಪ್ಪೇನಾ ನಾಯಕಿ ಕೃತಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಲಿದ್ದಾರೆ.

  English summary
  Telugu actor Ram Pothineni’s Grandfather Passes Away. he pays tribute on grandfather’s death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X