twitter
    For Quick Alerts
    ALLOW NOTIFICATIONS  
    For Daily Alerts

    KGF, ಪುಷ್ಪ ಬಳಿಕ ಹಿಂದಿ ಡಬ್ಬಿಂಗ್ ಬೇಡಿಕೆ ಹೆಚ್ಚಾಯ್ತು: 16 ಕೋಟಿಗೆ ತೆಲುಗು ಚಿತ್ರ ಸೇಲ್!

    |

    ಹಲವು ವರ್ಷಗಳು ಬಾಲಿವುಡ್‌ ಸಿನಿಮಾರಂಗ ಮತ್ತು ಸೌತ್‌ ಸಿನಿಮಾರಂಗದ ನಡುವೆ ಅಜಗಜಾಂತರ ಅಂತರ ಇತ್ತು. ಹಾಗಾಗಿ ನಾರ್ತ್‌ನಲ್ಲಿ ಸೌತ್ ಸಿನಿಮಾಗಳಿಗೆ ಬೇಡಿಕೆ ಕಡಿಮೆ ಇತ್ತು. ಆದರೆ ಇದ್ದಕ್ಕಿದ್ದ ಹಾಗೆ ಹಿಂದಿ ಸಿನಿಮಾರಂಗದವರ ಕಣ್ಣು ಸೌತ್‌ ಚಿತ್ರರಂಗದ ಮೇಲೆ ಬೀಳುವ ಹಾಗೆ ಆಗಿದ್ದು ಬಾಹುಬಲಿ ಚಿತ್ರದಿಂದ.

    ಬಾಹುಬಲಿ ಸಿನಿಮಾ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿತ್ತು. ಈ ಚಿತ್ರಕ್ಕೆ ಹಿಂದಿ ಪ್ರೇಕ್ಷಕರು ಫಿದಾ ಆಗಿದ್ದರು. ಬಾಹುಬಲಿ ಭಾಗ ಒಂದು ಮತ್ತು ಎರಡು, ಎರಡು ಚಿತ್ರಗಳೂ ಕೂಡ ಹಿಂದಿಯಲ್ಲಿ ದೊಡ್ಡ ಮೊತ್ತ ಕಲೆ ಹಾಕಿದ್ದವು. ನಂತರ ಕನ್ನಡದ ಕೆಜಿಎಫ್, ತೆಲುಗಿನ ಪುಷ್ಪ ಮತ್ತು ಕೂಡ ಹಿಂದಿಯಲ್ಲಿ ಡಬ್‌ ಆಗಿ ರಿಲೀಸ್ ಆಗಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿವೆ.

    ಈ ಚಿತ್ರಗಳಿಂದಾಗಿ ಈಗ ಸೌತ್‌ ಸಿನಿಮಾಗಳ ಹಿಂದಿ ಡಬ್ಬಿಂಗ್‌ಗೆ ಬಾರಿ ಬೇಡಿಕೆ ಸೃಷ್ಟಿ ಆಗಿದೆ. ಅದರಲ್ಲೂ ತೆಲುಗು ಸಿನಿಮಾಗಳ ಹಿಂದಿ ಡಬ್ಬಿಂಗ್ ಅವತರಣಿಕೆಗೆ ಬೇಡಿಕೆ ಹೆಚ್ಚಾಗಿದೆ. ಹಿಂದಿ ಡಬ್ಬಿಂಗ್ ಅವತರಣಿಕೆಗೆ ಕೋಟಿಗಟ್ಟಲೇ ಬೆಲೆ ಬಂದಿದೆ.

    16 ಕೋಟಿಗೆ ಸೇಲ್ ಆಯ್ತು ರಾಮ್‌ ಪೊತಿನೇನಿ ಅಭಿನಯದ 'ದಿ ವಾರಿಯರ್'!

    16 ಕೋಟಿಗೆ ಸೇಲ್ ಆಯ್ತು ರಾಮ್‌ ಪೊತಿನೇನಿ ಅಭಿನಯದ 'ದಿ ವಾರಿಯರ್'!

    ತೆಲುಗಿನಲ್ಲಿ ನಟ ರಾಮ್‌ ಪೊತಿನೇನಿ ಅಭಿನಯದ 'ದಿ ವಾರಿಯರ್' ಸಿನಿಮಾ ಹಿಂದಿಯಲ್ಲಿ ಡಬ್ಬಿಂಗ್ ಆಗಿದೆ. ಈ ಚಿತ್ರದ ಹಿಂದಿ ಅವತರಣಿಕೆ ದೊಡ್ಡ ಮಟ್ಟಕ್ಕೆ ಮಾರಾಟ ಆಗಿದೆ. ಬರೋಬ್ಬರಿ 16 ಕೋಟಿ ರೂ.ಗೆ 'ದಿ ವಾರಿಯರ್' ಸಿನಿಮಾ ಮಾರಾಟ ಆಗಿದೆ. ಈ ವಿಚಾರವನ್ನು ಅಧಿಕೃತವಾಗಿ ಚಿತ್ರ ತಂಡ ಹೇಳಿಕೊಂಡಿದೆ. ಈ ಸುದ್ದಿ ಸ್ವತಃ ಟಾಲಿವುಡ್‌ ಮಂದಿಗೆ ಶಾಕ್ ನೀಡಿದೆ. ಇಷ್ಟು ದೊಡ್ಡ ಮಟ್ಟಕ್ಕೆ ಈ ಚಿತ್ರ ಮಾರಾಟ ಆಗಿರುವುದು ಅಚ್ಚರಿಗೆ ಕಾರಣ ಆಗಿದೆ. ಆದರೂ ಕೂಡ ಇದು ಒಂದು ದಾಖಲೆ ಆಗಿ ಬಿಟ್ಟಿದೆ.

    44 ಕೋಟಿ ರೂ. ಗಳಿಸಿದ KGF 1 ಹಿಂದಿ ಡಬ್ಬಿಂಗ್!

    44 ಕೋಟಿ ರೂ. ಗಳಿಸಿದ KGF 1 ಹಿಂದಿ ಡಬ್ಬಿಂಗ್!

    ನಟ ರಾಕಿಂಗ್ ಸ್ಟಾರ್ ಯಶ್‌ ಅಭಿನಯದ ಕೆಜಿಎಫ್ ಸಿನಿಮಾ ಹಿಂದಿ ಡಬ್ಬಿಂಗ್‌ಗೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿತ್ತು. ರಾಕಿ ಭಾಯ್‌ಗೆ ನಾರ್ತ್ ಪ್ರೇಕ್ಷಕರು ಜೈಕಾರ ಹಾಕಿದ್ರು. ಕನ್ನಡದ ಒಂದು ಸಿನಿಮಾ ಬಾಲಿವುಡ್‌ನಲ್ಲಿ ಇಷ್ಟು ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದು ಅಂದರೆ ಅದು ಕೆಜಿಎಫ್. ಬಾಹುಬಲಿ ಬಳಿಕ ಬಾಲಿವುಡ್‌ನಲ್ಲಿ ಹೆಚ್ಚು ಸದ್ದು ಮಾಡಿದ ಸಿನಿಮಾ ಅಂದರೆ ಅದು ಕನ್ನಡದ ಕೆಜಿಎಫ್ ಸಿನಿಮಾ. ಹಿಂದಿ ಅವತರಣಿಕೆಯಲ್ಲಿ ಕೆಜಿಎಫ್ ಸಿನಿಮಾ ಗಳಿದ್ದು 44 ಕೋಟಿ ರೂ ಎನ್ನಲಾಗಿದೆ.

    ಹಿಂದಿಯಲ್ಲಿ ನೂರು ಕೋಟಿ ಮೀರಿಸಿದ 'ಬಾಹುಬಲಿ' ಚಿತ್ರ ಸರಣಿ!

    ಹಿಂದಿಯಲ್ಲಿ ನೂರು ಕೋಟಿ ಮೀರಿಸಿದ 'ಬಾಹುಬಲಿ' ಚಿತ್ರ ಸರಣಿ!

    ಬಾಹುಬಲಿ ಸಿನಿಮಾವನ್ನು ನೋಡಿ ಬಾಲಿವುಡ್‌ ಮಂದಿಯೇ ಬೆರಗಾಗಿ ಬಿಟ್ಟಿದ್ದರು. ಅಷ್ಟರ ಮಟ್ಟಿಗೆ ಬಾಹುಬಲಿ ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಸೆಳೆದಿತ್ತು. ಈ ಚಿತ್ರದ ಎರಡೂ ಸರಣಿಗಳು ಹಿಂದಿಯಲ್ಲಿ ರಿಲೀಸ್ ಆಗಿವೆ. ಬಾಹುಬಲಿ ಭಾಗ 1 ಹಿಂದಿ ಡಬ್ಬಿಂಗ್ ಸಿನಿಮಾ 118 ಕೋಟಿ ರೂ ಮತ್ತು ಬಾಹುಬಲಿ ಭಾಗ 2 ಚಿತ್ರ 122 ಕೋಟಿ ರೂಪಾಯಿಯನ್ನು ಬಾಕ್ಸಾಫೀಸ್‌ನಲ್ಲಿ ಗಳಿಸಿದೆ ಎಂದು ವರದಿ ಆಗಿದೆ. ಸೌತ್‌ ಸಿನಿಮಾಗಳಿಗೆ ಇಷ್ಟೊಂದು ಬೇಡಿಕೆ ಇದೆ ಎಂದು ಮೊದಲು ತೋರಿಸಿದ್ದು ಬಾಹುಬಲಿ ಸಿನಿಮಾ.

    94 ಕೋಟಿ ದಾಟಿತು ಪುಷ್ಪ ಬಾಲಿವುಡ್‌ ಬಾಕ್ಸಾಫೀಸ್!

    94 ಕೋಟಿ ದಾಟಿತು ಪುಷ್ಪ ಬಾಲಿವುಡ್‌ ಬಾಕ್ಸಾಫೀಸ್!

    ಇನ್ನು ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಹಿಂದಿ ಅವತರಣಿಕೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನವೇ ಬಿಗ್ ಓಪನಿಂಗ್ ಪಡೆದು ಕೊಂಡಿದೆ. ಪುಷ್ಪ ಹಿಂದಿಯಲ್ಲಿ ಡಬ್ ಆಗಿ ರಿಲೀಸ್ ಆದ ಪುಷ್ಪ ಅಲ್ಲು ಅರ್ಜುನ್‌ ಸಿನಿಮಾಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ. ಪುಷ್ಪ ಸಿನಿಮಾ ರಿಲೀಸ್ ಆಗಿ 5 ವಾರಗಳು ಕಳೆದಿವೆ. ಹಾಗಾಗಿ ಇಲ್ಲಿ ತನಕ ಪುಷ್ಪ ಸಿನಿಮಾ ಕಲೆ ಹಾಕಿದ ಮೊತ್ತ 94 ಕೋಟಿ ರೂ ಎಂದು ವರದಿ ಆಗಿದೆ. ಬಾಹುಬಲಿ, ಕೆಜಿಎಫ್, ಪುಷ್ಪ ಮತ್ತು ಆರ್‌ಆರ್‌ಆರ್‌ ಸಿನಿಮಾಗಳು ಹಿಂದಿಯಲ್ಲಿ ಸೌತ್ ಸಿನಿಮಾಗಳಿಕೆ ಮಾರುಕಟ್ಟೆ ಸೃಷ್ಟಿಸಿ ಕೊಟ್ಟಿದೆ. ಹಾಗಾಗಿ ಸೌತ್‌ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ.

    English summary
    Ram Pothineni's The Warrior Movie Hindi Dubbing Rights Sold For Record 16 Crore
    Tuesday, January 25, 2022, 17:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X