ಮೆಸೆಜ್ ಮಾಡಿದರೆ ಹತ್ತು ಸಿನಿಮಾ ಪ್ರಾರಂಭವಾಗುತ್ತವೆ: ರಾಮ್
ತೆಲುಗಿನಲ್ಲಿ ಆರಕ್ಕೇರದ ಮೂರಕ್ಕಿಳಿಯದ ಹೀರೊ ಎಂದರೆ ಅದು ರಾಮ್ ಪೋತಿನೇನಿ. 'ದೇವದಾಸ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಮ್ ಪೋತಿನೇನಿ ಮೊದಲ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರಾದರೂ ಆ ನಂತರ ಹಿಡಿತ ಸಡಿಲಿಸಿಬಿಟ್ಟರು.
ಹಾಗೆಂದು ರಾಮ್ ಕೆಟ್ಟ ಹೀರೋ ಸಹ ಅಲ್ಲ. ಕೆಲವು ಒಳ್ಳೆಯ ಸಿನಿಮಾಗಳನ್ನು ರಾಮ್ ನೀಡಿದ್ದಾರೆ. ಆದರೆ ಸತತ ಹಿಟ್ ನೀಡುವುದು ಅಥವಾ ಸೂಪರ್-ಡೂಪರ್ ಹಿಟ್ ನೀಡುವುದು ಅವರಿಂದ ಸಾಧ್ಯವಾಗುತ್ತಿಲ್ಲ.
ರಾಮ್ ಗೆ ಸಿನಿಮಾಗಳು ಸಿಗುವುದು ಕಡಿಮೆ ಆಗಿಬಿಟ್ಟಿದ್ದವು. ರಾಮ್ ಮೇಲೆ ಬಂಡವಾಳ ಹಾಕಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಲು ಆರಂಭವಾಗಿದ್ದವು. ಈ ಗಾಳಿ ಸುದ್ದಿಗಳಿಗೆ ಸ್ವತಃ ರಾಮ್ ಪೋತಿನೇನಿ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

ನನ್ನ ಬಳಿ ಈಗಲೂ ಹಲವಾರು ಸಿನಿಮಾಗಳಿವೆ. ನಾನು ಒಂದು ಮೆಸೆಜ್ ಮಾಡಿದರೆ ಸಾಕು ಹತ್ತು ಸಿನಿಮಾಗಳ ಚಿತ್ರೀಕರಣ ಆರಂಭಗೊಳ್ಳುತ್ತವೆ. ಹಲವು ಸಿನಿಮಾಗಳನ್ನು ನಾನೇ ಬೇಡವೆಂದು ನಿರಾಕರಿಸಿದ್ದೇನೆ ಎಂದಿದ್ದಾರೆ ರಾಮ್ ಪೋತಿನೇನಿ.
ಈ ಸದ್ಯಕ್ಕೆ ನಾಲ್ಕು ಸಿನಿಮಾಗಳ ಕತೆಗಳು ಸಿದ್ಧವಾಗಿದ್ದಾವೆ. ಇವು ಆತುರವಾಗಿ ಒಪ್ಪಿಕೊಂಡಿರುವ ಕತೆಗಳಲ್ಲ. ನಾನು ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತೇನೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುವುದು ನನಗೆ ಇಷ್ಟವಿಲ್ಲ. ನನಗೆ ಕತೆಯೇ ಮುಖ್ಯ, ನಾನು ಹಣಕ್ಕಾಗಿ ಸಿನಿಮಾಗಳನ್ನು ಮಾಡುವುದಿಲ್ಲ
ಎಂದಿದ್ದಾರೆ ರಾಮ್.
ಇದೀಗ ಬಿಡುಗಡೆಗೆ ತಯಾರಾಗಿರುವ ರೆಡ್ ಸಿನಿಮಾ ಬಗ್ಗೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ರಾಮ್. 'ರೆಡ್' ಸಿನಿಮಾ ಖಂಡಿತವಾಗಿ ಜನರಿಗೆ ಇಷ್ಟವಾಗಲಿದೆ. ಆ ಸಿನಿಮಾವು ಎಂಟರ್ಟೈನ್‌ಮೆಂಟ್ ಜೊತೆಗೆ ಎಜುಕೇಟ್ ಸಹ ಮಾಡಲಿದೆ ಎಂದಿದ್ದಾರೆ.


Click it and Unblock the Notifications











