For Quick Alerts
  ALLOW NOTIFICATIONS  
  For Daily Alerts

  'KGF-2' ಹಾಡುಗಳ ಬಗ್ಗೆ ತೆಲುಗಿನ ಖ್ಯಾತ ಚಿತ್ರಸಾಹಿತಿ ಹೇಳಿದ್ದೇನು?

  |

  ಕೆಜಿಎಫ್-2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ನಡೆಯುತ್ತಿದೆ. ಲಾಕ್ ಡೌನ್ ನಡುವೆಯೂ ಕೆಜಿಎಫ್ ತಂಡ ಚಿತ್ರದ ಮ್ಯೂಸಿಕ್ ವರ್ಕ್ ನಲ್ಲಿ ನಿರತವಾಗಿದೆ. ಈ ಬಗ್ಗೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  ಮಲ್ಟಿಪ್ಲೆಕ್ಸ್ ಗಳಿಗೆ ದೊಡ್ಡ ಶಾಕ್ ನೀಡಿದ ಪುನೀತ್ ರಾಜ್ ಕುಮಾರ್..! | Puneeth Rajkumar | Amazon Prime | OTT

  ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ಪ್ರಶಾಂತ್ ನೀಲ್ ಇಬ್ಬರು ಕಲಸ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ತೆಲುಗಿನ ಖ್ಯಾತ ಚಿತ್ರಸಾಹಿತಿ ರಾಮಜೋಗಯ್ಯ ಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ತೆಲುಗಿನಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ರಾಮಜೋಗಯ್ಯ ಶಾಸ್ತ್ರಿ ಕೆಜಿಎಫ್ ಚಿತ್ರದ ತೆಲುಗು ವರ್ಷನ್ ಗೆ ಹಾಡುಗಳನ್ನು ಬರೆದಿದ್ದಾರೆ. ಪಾರ್ಟ್-2ಗೂ ಇವರೆ ಗೀತರಚನೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳ ಬಗ್ಗೆ ರಾಮಜೋಗಯ್ಯ ಶಾಸ್ತ್ರಿ ಹೇಳಿದ್ದು ಹೀಗೆ. ಮುಂದೆ ಓದಿ..

  'KGF-2' ಅಪ್ ಡೇಟ್: ಲಾಕ್ ಡೌನ್ ನಡುವೆಯೂ ನಡೆಯುತ್ತಿದೆ ಮ್ಯೂಸಿಕ್ ಸೆಷನ್'KGF-2' ಅಪ್ ಡೇಟ್: ಲಾಕ್ ಡೌನ್ ನಡುವೆಯೂ ನಡೆಯುತ್ತಿದೆ ಮ್ಯೂಸಿಕ್ ಸೆಷನ್

  'ಕೆಜಿಎಫ್-2' ಸಂಗೀತ ಕೆಲಸ ನಡೆಯುತ್ತಿದೆ

  'ಕೆಜಿಎಫ್-2' ಸಂಗೀತ ಕೆಲಸ ನಡೆಯುತ್ತಿದೆ

  'ಕೆಜಿಎಫ್-2' ಸಿನಿಮಾದ ಮ್ಯೂಸಿಕ್ ವರ್ಕ್ ನಡೆಯುತ್ತಿದೆ. ಲಾಕ್ ಡೌನ್ ನಡುವೆಯೂ ಚಿತ್ರತಂಡ ಬಹುನಿರೀಕ್ಷೆಯ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದೆ. ಸದ್ಯ ಚಿತ್ರದ ಸಂಗೀತ ಕೆಲಸ ನಡೆಯುತ್ತಿದೆ. ಈ ಬಗ್ಗೆ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದು, ಕೆಜಿಎಫ್-2 ಮ್ಯೂಸಿಕ್ ಸೆಷನ್ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರ್, ಭುವನ್ ಗೌಡ ಮತ್ತು ಕಾರ್ತಿಕ್ ಇದ್ದಾರೆ.

  ಕೆಜಿಎಫ್‌ ಸಿನಿಮಾಕ್ಕೆ ಪೈಪೋಟಿಯೇ ಇಲ್ಲ: ಟಿಕ್‌ ಟಾಕ್‌ ನಲ್ಲಿ ಹೊಸ ದಾಖಲೆಕೆಜಿಎಫ್‌ ಸಿನಿಮಾಕ್ಕೆ ಪೈಪೋಟಿಯೇ ಇಲ್ಲ: ಟಿಕ್‌ ಟಾಕ್‌ ನಲ್ಲಿ ಹೊಸ ದಾಖಲೆ

   ಹಾಡುಗಳು ಎಮೋಷನಲ್ ಆಗಿವೆ

  ಹಾಡುಗಳು ಎಮೋಷನಲ್ ಆಗಿವೆ

  ತೆಲುಗಿನ ಖ್ಯಾತ ಸಾಹಿತಿ ರಾಮಜೋಗಯ್ಯ ಶಾಸ್ತ್ರಿ ಪಾರ್ಟ್-2ಗೂ ಹಾಡುಗಳನ್ನು ಬರೆಯುತ್ತಿದ್ದಾರೆ. ಈಗಾಗಲೆ ಹಾಡುಗಳನ್ನು ಬರೆಯುವ ಕೆಲಸ ಪ್ರಾರಂಭ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಾಮಜೋಗಯ್ಯ ಶಾಸ್ತ್ರಿ "ಪ್ರಸ್ತುತ ನಾನು ಕೆಜಿಎಫ್ ಹಾಡಿನಲ್ಲಿ ಬ್ಯುಸಿಯಾಗಿದ್ದೇನೆ. ಹಾಡುಗಳು ತುಂಬಾ ಎಮೋಷನಲ್ ಆಗಿವೆ" ಎಂದು ಬರೆದುಕೊಂಡಿದ್ದಾರೆ.

  ಕನ್ನಡ ಸಿನಿಮಾದ ತೆಲುಗು ವರ್ಷನ್ ಗೆ ರಾಮಜೋಗಯ್ಯ ಸಾಹಿತ್ಯ

  ಕನ್ನಡ ಸಿನಿಮಾದ ತೆಲುಗು ವರ್ಷನ್ ಗೆ ರಾಮಜೋಗಯ್ಯ ಸಾಹಿತ್ಯ

  ಕನ್ನಡದ ಸೂಪರ್ ಹಿಟ್ 'ಕೆಜಿಎಫ್' ಸಿನಿಮಾದ ತೆಲುಗು ವರ್ಷನ್ ಗೆ ಮಾತ್ರ ರಾಮಜೋಗಯ್ಯ ಶಾಸ್ತ್ರಿ ಹಾಡುಗಳನ್ನು ಬರೆದಿಲ್ಲ. ಆ ನಂತರ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾದ ತೆಲುಗು ವರ್ಷನ್ ಗೂ ಅವರೆ ಗೀತರಚನೆ ಮಾಡಿದ್ದಾರೆ. ಇನ್ನೂ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ತೆಲುಗು ವರ್ಷನ್ ನ ಹಾಡುಗಳು ಸಹ ರಾಮಜೋಗಯ್ಯ ಶಾಸ್ತ್ರಿ ಅವರ ರಚನೆಯಲ್ಲಿ ಮೂಡಿ ಬಂದಿವೆ.

  'KGF 2' ಅಪ್ ಡೇಟ್: ಈ ಎರಡು ದೃಶ್ಯ ಸೇರಿದಂತೆ 25 ದಿನಗಳ ಶೂಟಿಂಗ್ ಬಾಕಿ?'KGF 2' ಅಪ್ ಡೇಟ್: ಈ ಎರಡು ದೃಶ್ಯ ಸೇರಿದಂತೆ 25 ದಿನಗಳ ಶೂಟಿಂಗ್ ಬಾಕಿ?

  25 ದಿನಗಳ ಶೂಟಿಂಗ್ ಬಾಕಿ

  25 ದಿನಗಳ ಶೂಟಿಂಗ್ ಬಾಕಿ

  ಕೆಜಿಎಫ್-2 ಸಿನಿಮಾದ ಪ್ರಮುಖ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಆದರೆ ಇನ್ನೂ 25 ದಿನಗಳ ಚಿತ್ರೀಕರಣ ಬಾಕಿ ಇದೆಯಂತೆ. ಇದರಲ್ಲಿ 2 ಆಕ್ಷನ್ ದೃಶ್ಯಗಳಗಳನ್ನು ಚಿತ್ರೀಕರಣ ಮಾಡಬೇಕಿದೆ. ಒಂದು ಆಕ್ಷನ್ ದೃಶ್ಯ ಯಶ್ ಮತ್ತು ಸಂಜಯ್ ದತ್ ನಡುವಿನ ಫೈಟಿಂಗ್ ದೃಶ್ಯ ಸಹ ಇದೆಯಂತೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದೆ.

  Read more about: kgf 2 yash prashanth neel
  English summary
  Telugu Famous lyric writer Ramajogayya Shastri said that KGF-2 song is Massive emotional.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X