Peddi Trailer; ಕ್ರಿಕೆಟ್ಟು, ಕುಸ್ತಿ, ಓಟ.. 'ಪೆದ್ದಿ' ಆಕ್ಷನ್, ಎಮೋಷನ್ ಸೂಪರ್; ಎಲ್ಲಾ ಓಕೆ ಆದ್ರೆ...

ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ರಗಡ್ ರಾಮ್‌ಚರಣ್ ಆರ್ಭಟದ ಝಲಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕುಸ್ತಿ ಉಸ್ತಾದ್ ಅವತಾರದಲ್ಲಿ ಶಿವಣ್ಣ ದರ್ಶನ ಕೊಟ್ಟಿದ್ದಾರೆ. ಜೂನ್ 4ರಂದು ಸಿನಿಮಾ ತೆರೆಗೆ ಬರ್ತಿದೆ.

ಈ ಹಿಂದೆ ಬಂದಿದ್ದ ಟೀಸರ್‌ಗಳಲ್ಲಿ 'ಪೆದ್ದಿ' ಕ್ರಿಕೆಟ್, ಕುಸ್ತಿ ಆಡುವುದನ್ನು ತೋರಿಸಲಾಗಿತ್ತು. ಇದೀಗ ರನ್ನಿಂಗ್ ರೇಸ್ ಕೂಡ ಸೇರಿ ಚಿತ್ರದ ಕಥೆ ಏನು ಎನ್ನುವ ಬಗ್ಗೆ ಸಣ್ಣ ಸುಳಿವು ಕೊಟ್ಟಿದ್ದಾರೆ. ಖಡಕ್ ಹೈದ 'ಪೆದ್ದಿ' ರಾಜು ಪಾತ್ರದಲ್ಲಿ ರಾಮ್‌ಚರಣ್ ಮಿಂಚಿದ್ದಾರೆ. ಆತನ ಜೀವನದ ನೋವು ನಲಿವಿನ ಕಥೆ ಇದು. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. 80-90ರ ಕಾಲಘಟ್ಟದ ಕಥೆ ಚಿತ್ರದಲ್ಲಿದೆ.

Ramcharan and Shivarajkumar Starrer Peddi Action Packed Trailer gets mixed Response

ಬೆಟ್ಟದ ಕೆಳಗಿನ ಊರು. ಆ ಊರಿನ ಸಕಲಕ್ರೀಡಾ ವಲ್ಲಭ 'ಪೆದ್ದಿ'ರಾಜು. ಊರಿನ ಮಕ್ಕಳಿಗೆಲ್ಲಾ ಅವನೇ ಸ್ಫೂರ್ತಿ. ಒಳ್ಳೆ ಕ್ರಿಕೆಟಿಗ, ಅಷ್ಟೇ ಒಳ್ಳೆ ಕುಸ್ತಿ ಪೈಲ್ವಾನ್, ಓಟದಲ್ಲೂ ಮುಂದು. ಆತನಿಗೆ ಅಚಿಯಮ್ಮ(ಜಾನ್ವಿ ಕಪೂರ್) ಮೇಲೆ ಲವ್ವು. ಊರಿನ ದುಷ್ಠ ರಾಮ್‌ಬುಜ್ಜಿ(ದಿವ್ಯೆಂದು)ಯನ್ನು 'ಪೆದ್ದಿ' ಎದುರಾಕಿಕೊಳ್ಳುತ್ತಾನೆ. ಮುಂದೆ ಏನೆಲ್ಲಾ ಆಗುತ್ತೆ ಎನ್ನುವುದು ಇನ್ನುಳಿದ ಕಥೆ ಎನ್ನುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ. ತನ್ನವರಿಗಾಗಿ ತನ್ನ ಊರಿಗಾಗಿ 'ಪೆದ್ದಿ' ಹೋರಾಟದ ಕಥೆ ಚಿತ್ರದಲ್ಲಿದೆ.

ಕಾಲು ಕಳೆದುಕೊಳ್ಳುವ 'ಪೆದ್ದಿ' ಕೊನೆಗೆ ಪ್ಯಾರಾ ಒಲಂಪಿಕ್ಸ್‌ನಲ್ಲಿ ಗೆಲ್ಲುವುದೇ ಸಿನಿಮಾ ಕ್ಲೈಮ್ಯಾಕ್ಸ್ ಎಂದು ಟ್ರೈಲರ್ ನೋಡಿ ಕೆಲವರು ಊಹಿಸುತ್ತಿದ್ದಾರೆ. ಈ ಹಿಂದೆ 'ಉಪ್ಪೆನ' ಚಿತ್ರದಲ್ಲಿ ನಾಯಕನ ಮರ್ಮಾಂಗವನ್ನು ಕತ್ತರಿಸುವ ಕಥೆ ಹೇಳಿದ್ದರು. ಈ ಬಾರಿ ಒಂದು ಕಾಲು ಕಳೆದುಕೊಂಡ ನಾಯಕನ ಕಥೆ ಹೇಳುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಟ್ರೈಲರ್ ಟೆಕ್ನಿಕಲಿ ಚೆನ್ನಾಗಿದೆ. ಆದರೆ ಏನೋ ಮಿಸ್ಸಿಂಗ್ ಅನ್ನಿಸದೇ ಇರದು. ಈ ಹಿಂದೆ ನೋಡಿರುವ ಸಿನಿಮಾಗಳ ದೃಶ್ಯಗಳನ್ನೇ ಸೇರಿಸಿ ಹೊಸ ಕಥೆ ಹೇಳಿದಂತಿದೆ, ಒಟ್ಟಾರೆ ಮಿಕ್ಸ್ ಮಸಾಲಾ ಎನ್ನುವಂತಾಗಿದೆ.

ಹಳ್ಳಿಯ ಕುಸ್ತಿ ಪೈಲ್ವಾನ್ ರಾಷ್ಟ್ರೀಯಮಟ್ಟದಲ್ಲಿ ಅಂತರಾಷ್ಟ್ಟೀಯ ಮಟ್ಟದ ಟೂರ್ನಿಗಳಲ್ಲಿ ಗೆಲ್ಲುವ ಕಥೆಗಳು ಈ ಹಿಂದೆ ಬಂದಿತ್ತು. ಬಾಲಿವುಡ್‌ನ 'ದಂಗಲ್', 'ಸುಲ್ತಾನ್' ಹಾಗೂ ಕನ್ನಡದ 'ಪೈಲ್ವಾನ್' ಸಿನಿಮಾಗಳಲ್ಲಿ ಇಂತದ್ದೇ ಕಥೆ ಇತ್ತು. ಅದೇ ರೀತಿಯ ಕಥೆಯನ್ನು 'ಪೆದ್ದಿ' ಚಿತ್ರದಲ್ಲೂ ಹೇಳುತ್ತಿರುವುದು ಗೊತ್ತಾಗುತ್ತಿದೆ. ಎ. ಆರ್ ರಹಮಾನ್ ಹಿನ್ನೆಲೆ ಸಂಗೀತ ಟ್ರೈಲರ್‌ ಖದರ್ ಕಮ್ಮಿ ಮಾಡಿದೆ ಎನ್ನುವುದು ಕೆಲವರ ವಾದ. ಈ ಹಿಂದೆ ಬಂದಿದ್ದ ಟೀಸರ್‌ನಲ್ಲಿ ಕೂಡ ಇದೇ ಎಡವಟ್ಟಾಗಿತ್ತು. ಒಟ್ಟಾರೆ ಅಭಿಮಾನಿಗಳಿಗೆ 'ಪೆದ್ದಿ' ಇಷ್ಟವಾಗುವಂತಿದೆ.

ಭರ್ಜರಿ ಆಕ್ಷನ್ ಸೀಕ್ವೆನ್ಸ್, ಜಬರ್ದಸ್ತ್ ಡೈಲಾಗ್ಸ್, ಎಮೋಷನಲ್ ಸನ್ನಿವೇಶಗಳನ್ನು ಸೇರಿಸಿ 'ಪೆದ್ದಿ' ಕಥೆ ಹೇಳುತ್ತಿದ್ದಾರೆ ನಿರ್ದೇಶಕರು. ಆದರೆ ನಾಯಕಿಯನ್ನು ಬರೀ ಗ್ಲಾಮರ್ ಬೊಂಬೆಯಾಗಿ ಬಳಸಿಕೊಂಡಿರುವುದು ಗೊತ್ತಾಗುತ್ತಿದೆ. ಪಾತ್ರಗಳಿಗೆ ಕೆಲವರ ಧ್ವನಿ ಹೊಂದಿಕೆ ಆಗುತ್ತಿಲ್ಲ. ಎಡಿಟಿಂಗ್, ಬಿಜಿಎಂ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುಂಬೈನಲ್ಲಿ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೀತು. ವೇದಿಕೆಯಲ್ಲಿ ರಾಮ್‌ಚರಣ್ ಬ್ಯಾಟ್ ಹಿಡಿರು 'ಚಿಕ್ರಿ ಚಿಕ್ರಿ' ಹುಕ್ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಂದು ಹಿಟ್ ಆಗಿದೆ. ಇನ್ನೆರಡು ಹಾಡುಗಳು ಶೀಘ್ರವೇ ಬಿಡುಗಡೆ ಆಗಲಿದೆ.

ಟ್ರೈಲರ್ ರಿಲೀಸ್ ಮಾಡಿ ಪ್ರಮೋಷನ್ ಹೆಚ್ಚಿಸಿದೆ ಚಿತ್ರತಂಡ. ಸದ್ಯ ಐಪಿಎಲ್ ಟೂರ್ನಿ ನಡೀತಿದೆ. ನಡುವೆ 'ಪೆದ್ದಿ' ದರ್ಬಾರ್ ಶುರುವಾಗಲಿದೆ. ಚಿತ್ರದಲ್ಲಿ ಚರಣ್ ಗಲ್ಲಿ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದು ಐಪಿಎಲ್ ಟೂರ್ನಿಯಲ್ಲಿ ಪ್ರಚಾರ ಮಾಡುವ ಲೆಕ್ಕಾಚಾರ ನಡೀತಿದೆ. ಏಪ್ರಿಲ್ 30ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಕಾರಣಾಂತರಗಳಿಂದ ಒಂದು ತಿಂಗಳು ತಡವಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

Read more about: ramcharan shivarajkumar tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X