ತನ್ನ ಸಿನ್ಮಾ ಫ್ಲಾಪ್ ಆದ್ರೆ ಪಾರ್ಟಿ ಮಾಡುವ ಈ ಪ್ಯಾನ್ ಇಂಡಿಯಾ ಸ್ಟಾರ್ ಯಾರು?
ಸಾಮಾನ್ಯವಾಗಿ ಸಿನಿಮಾಗಳು ಸೋತರೆ ಸ್ಟಾರ್ ನಟರು ಆ ಬಗ್ಗೆ ಮಾತನಾಡಲು ಹಿಂದು ಮುಂದು ನೋಡ್ತಾರೆ. ಮಾಧ್ಯಮಗಳ ಮುಂದೆ ಬರಲು ಹೆದರುತ್ತಾರೆ. 'ಆದಿಪುರುಷ್' ಸಿನಿಮಾ ಸೋಲಿನ ಬಳಿಕ ಈವರೆಗೆ ಆ ಬಗ್ಗೆ ನಟ ಪ್ರಭಾಸ್ ಮಾತನಾಡಲೇಯಿಲ್ಲ. ಕೆಲವರು ಸಿನಿಮಾ ಗೆಲ್ಲುತ್ತಿದ್ದಂತೆ ಥಿಯೇಟರ್ ವಿಸಿಟ್, ಸೆಲೆಬ್ರೇಷನ್ ಮಾಡಿ ಖುಷಿಪಡುತ್ತಾರೆ.
ನಟ ರಾಮ್‌ಚರಣ್ ತಮ್ಮ ಸಿನಿಮಾಗಳು ಫ್ಲಾಪ್ ಆದ್ರೆ ಪಾರ್ಟಿ ಮಾಡುತ್ತಾರಂತೆ. 'RRR' ಸಿನಿಮಾ ಸಕ್ಸಸ್ ಬಳಿಕ ಒಂದು ವಾರ ಮನೆಬಿಟ್ಟು ಹೊರ ಬರಲಿಲ್ಲ. ಮನೆಯವರ ಜೊತೆಗೆ ಜಾಲಿಯಾಗಿ ಕಾಲ ಕಳೆದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಟ ರಾಮ್‌ಚರಣ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಮ್‌ಚರಣ್ ಮಾತನಾಡುವುದು ಕಮ್ಮಿ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಅಷ್ಟೇನು ಆಕ್ಟೀವ್ ಆಗಿಲ್ಲ. ಫಾದರ್ಸ್ ಡೇ ವಿಶೇಷವಾಗಿ ಆಂಗ್ಲ ಪತ್ರಿಕೆಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಮಾತನಾಡುತ್ತಾ "ನನಗೆ ನನ್ನ ತಂದೆಯೇ ಯಾವಾಗಲೂ ರೋಲ್ ಮಾಡೆಲ್. ಮೆಗಾ ಲೆಗಸ್ಸಿಯನ್ನು ಹೊರುವುದು ಕಷ್ಟ ಎನಿಸುತ್ತಾ ಎನ್ನುವ ಪ್ರಶ್ನೆಗೆ ರಾಮ್‌ಚರಣ್ ಇಂಟ್ರೆಸ್ಟಿಂಗ್ ಆಗಿ ಉತ್ತರ ನೀಡಿದ್ದಾರೆ.
"ನನಗೆ ಒತ್ತಡವನ್ನು ತೆಗೆದುಕೊಳ್ಳುವುದು ಹೆಗೆ ಎಂದು ಗೊತ್ತಿಲ್ಲ. ನಿಜ ಹೇಳಬೇಕಂದ್ರೆ ಸಿನಿಮಾಗಳು ಚೆನ್ನಾಗಿ ಓಡದೇ, ಫ್ಲಾಪ್ ಆದ್ರೆ ಪಾರ್ಟಿ ಮಾಡ್ತೀನಿ" ಎಂದಿದ್ದಾರೆ. ಅದೇ ರೀತಿ 'RRR' ಸಿನಿಮಾ ಬ್ಲಾಕ್‌ಬಸ್ಟರ್ ಟಾಲ್ ಬರುತ್ತಿದ್ದಂತೆ ಸೈಲೆಂಟ್ ಆಗಿಬಿಟ್ಟೆ. ಮನೆಯಲ್ಲೇ ಹೆಚ್ಚು ಸಮಯ ಕಳೆಯಲು ಆರಂಭಿಸಿದೆ. ಹಿಟ್, ಫ್ಲಾಪ್‌ಗಳಿಗಿಂತ ಆ ದಿನದ ಕೆಲಸ ಹೇಗಿದೆ? ದಿನದಿಂದ ದಿನಕ್ಕೆ ನಮ್ಮ ಕೆಲಸವನ್ನು ಸರಿಯಾಗಿ ಮಾಡಿದ್ದೇವೆಯೇ? ನಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದೇವೆಯೇ? ಅಷ್ಟು ಸಾಕು.. ಯಶಸ್ಸು ತನ್ನಿಂದ ತಾನೇ ಬರುತ್ತದೆ" ಎಂದಿದ್ದಾರೆ.
"ನಾನು ಊಟ ತಿನ್ನಿಸಿದರೆ ಮಗಳು ಕ್ಲಿಂಕಾರ ಪೂರ್ತಿ ತಿಂದುಬಿಡುತ್ತಾಳೆ ಎಂದು ರಾಮ್‌ಚರಣ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕ್ಲಿಂಕಾರಳಿಗೆ ಉಣಬಡಿಸುವುದರಲ್ಲಿ ನನ್ನನ್ನು ಮೀರಿಸುವವರು ಯಾರೂ ಇಲ್ಲ, ಉಪಾಸನಾ ಒಳ್ಳೆ ತಾಯಿಯಾಗಿರಬಹುದು ಆದರೆ ಈ ವಿಷಯದಲ್ಲಿ ನಾನೇ ಗ್ರೇಟ್ ಎಂದಿದ್ದಾರೆ. ಇನ್ನು ಮಗಳೊಟ್ಟಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರಂತೆ. ಅದಕ್ಕಾಗಿಯೇ ಅವರು ಶೂಟಿಂಗ್ ಸಮಯ ಸರಿಹೊಂದಿಸಲು ಬಯಸುತ್ತೇನೆ ಎಂದು ವಿವರಿಸಿದ್ದಾರೆ.

ಚಿರು ಇದ್ದಾಗ ಕ್ಲಿಂಕಾರ ಮುಖ ಅರಳುತ್ತಂತೆ. ಮಕ್ಕಳೆಲ್ಲಾ ಗ್ರಾಂಡ್ ಫಾದರ್ ಅಂದರೆ ಬೋರ್ ಎನಿಸುತ್ತಿದೆ ಅವರಿಗೆ. ಗ್ರಾಂಡ್ ಫಾದರ್ ಬದಲು ಚಿರುತ ಎಂದರೆ ಖುಷಿಯಾಗುತ್ತದೆ ಎಂದು ರಾಮ್‌ಚರನ್ ತಂದೆ ಬಗ್ಗೆ ಹೇಳಿದ್ದಾರೆ. ಸದ್ಯ ಮೆಗಾ ಪವರ್ ಸ್ಟಾರ್ ಮಾತುಗಳು ವೈರಲ್ ಆಗುತ್ತಿದೆ.
ಇನ್ನು ರಾಮ್‌ಚರಣ್ ಸಿನಿಮಾಗಳ ವಿಚಾರಕ್ಕೆ ಬಂದರೆ 'RRR' ಬಳಿಕ ಯಾವುದೇ ಹೊಸ ಸಿನಿಮಾ ರಿಲೀಸ್ ಆಗಿಲ್ಲ. ಶಂಕರ್ ನಿರ್ದೇಶನದಲ್ಲಿ 'ಗೇಮ್ ಚೇಂಜರ್' ಸಿನಿಮಾ ಕೊನೆ ಹಂತದ ಚಿತ್ರೀಕರಣ ನಡೆಯುತ್ತಿದೆ. ಮಗಳು ಕ್ಲಿಂಕಾರ ಹುಟ್ಟಿದ ಬಳಿಕ ಚರಣ್ ಹೆಚ್ಚು ಬಿಡುವು ಮಾಡಿಕೊಂಡಿದ್ದರಿಂದ ಚಿತ್ರೀಕರಣ ತಡವಾಗುತ್ತಾ ಬಂದಿತ್ತು. ಈ ವರ್ಷದ ಕೊನೆಗೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಚಿತ್ರದಲ್ಲಿ ಕೈರಾ ಅದ್ವಾನಿ ನಾಯಕಿಯಾಗಿ ನಟಿಸಿದ್ದು ಸುನೀಲ್, ಅಂಜಲಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
'ಗೇಮ್ ಚೇಂಜರ್' ಬಳಿಕ ಮತ್ತೆರಡು ಸಿನಿಮಾಗಳಿಗೆ ರಾಮ್‌ಚರಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬುಚ್ಚಿಬಾಬು ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ಚರಣ್ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸುಕುಮಾರ್ ಜೊತೆಗೂ ಮತ್ತೊಂದು ಸಿನಿಮಾ ಕನ್ಫರ್ಮ್ ಆಗಿದೆ. ಈ ಹಿಂದೆ 'ರಂಗಸ್ಥಳಂ' ಚಿತ್ರಕ್ಕಾಗಿ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿ ಗೆದ್ದಿದ್ದರು.


Click it and Unblock the Notifications











