ಟ್ರೈಲರ್ ಪರೀಕ್ಷೆ ಗೆದ್ನಾ 'ಗೇಮ್ ಚೇಂಜರ್'? ಶಂಕರ್-ಚರಣ್ ಜೋಡಿ ಮ್ಯಾಜಿಕ್ ಮಾಡುತ್ತಾ?

ಶಂಕರ್ ಹಾಗೂ ರಾಮ್‌ಚರಣ್ ಕಾಂಬಿನೇಷನ್ 'ಗೇಮ್ ಚೇಂಜರ್' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ. ತಂದೆ ಮಗನಾಗಿ ದ್ವಿಪಾತ್ರದಲ್ಲಿ ಮೆಗಾ ಪವರ್ ಸ್ಟಾರ್ ಅಬ್ಬರಿಸಿದ್ದಾರೆ. ಮೊದಲ ನೋಟದಲ್ಲಿ ಆಕ್ಷನ್ ಪ್ಯಾಕ್ಡ್ ಟ್ರೈಲರ್ ಗಮನ ಸೆಳೆದಿದೆ.

'ಗೇಮ್ ಚೇಂಜರ್' ಸಾಂಗ್ಸ್, ಟೀಸರ್ ನೋಡಿದವರು ಸಿನಿಮಾ ಮೇಲೆ ಆಸಕ್ತಿ ಕಳೆದುಕೊಂಡಿದ್ದರು. ಆದರೆ ಟ್ರೈಲರ್ ಕೊಂಚಮಟ್ಟಿಗೆ ಭರವಸೆ ಮೂಡಿಸಿದೆ. ಸುಗ್ಗಿ ಸಂಭ್ರಮದಲ್ಲಿ ಫಸ್ಟ್ ಡೇ ಫಸ್ಟ್ ಸಿನಿಮಾ ನೋಡಬೇಕು ಎಂದು ಅಭಿಮಾನಿಗಳನ್ನು ಹುರಿದುಂಬಿಸುವಂತಿದೆ. 'ಇಂಡಿಯನ್-2' ಸಿನಿಮಾ ಮಾಡಿ ಸೋತಿರುವ ಶಂಕರ್ ಈ ಬಾರಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

Ramcharan- Shankar s Game Changer action packed trailer Unveiled

ಶಂಕರ್ ಸಿನಿಮಾಗಳಲ್ಲಿ ಮುಖ್ಯವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟದ ಕತೆ ಇರುತ್ತದೆ. 'ಗೇಮ್‌ ಚೇಂಜರ್' ಚಿತ್ರದಲ್ಲಿ ಕೂಡ ಅದೇ ಕೇಂದ್ರ ಬಿಂದು ಎನ್ನುವುದು ಗೊತ್ತಾಗುತ್ತಿದೆ. ಕಿಯಾರಾ ಅಡ್ವಾನಿ ಹಾಗೂ ಅಂಜಲಿ ನಾಯಕಿಯರಾಗಿ ಮಿಂಚಿದ್ದಾರೆ. ಎಸ್‌. ಜೆ ಸೂರ್ಯ, ಬ್ರಹ್ಮಾನಂದಂ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.

ಬಹಳ ಹಿಂದೆ ಶುರುವಾಗಿದ್ದ 'ಗೇಮ್‌ ಚೇಂಜರ್' ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಾ ಬಂತು. 'RRR' ಬಳಿಕ ಸೋಲೊ ಹೀರೊ ಆಗಿ ಇದು ಚರಣ್ ಮೊದಲ ಸಿನಿಮಾ. ಹಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ IAS ಅಧಿಕಾರಿ ರಾಮ್ ನಂದನ್ ಹಾಗೂ ಆತನ ತಂದೆ ಅಪ್ಪಣ್ಣ ಪಾತ್ರಗಳಲ್ಲಿ ರಾಮ್‌ಚರಣ್ ಬಣ್ಣ ಹಚ್ಚಿದ್ದಾರೆ.

ದಿಲ್‌ ರಾಜು ಬಹಳ ಅದ್ಧೂರಿಯಾಗಿ 'ಗೇಮ್‌ ಚೇಂಜರ್' ಚಿತ್ರ ನಿರ್ಮಿಸಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಬಜೆಟ್ ಸಿಕ್ಕಾಪಟ್ಟೆ ಹೆಚ್ಚಾಗಿದ್ದು ವಾಪಸ್ ಬರುತ್ತಾ ಎನ್ನುವ ಅನುಮಾನ ಕೆಲವರಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶಕ ಶಂಕರ್ ಕಂಬ್ಯಾಕ್ ಮಾಡುತ್ತಾರಾ? ಎನ್ನುವ ಕುತೂಹಲವೂ ಇದೆ.

ಒಬ್ಬ ರಾಜಕಾರಣಿ ಹಾಗೂ ಸರ್ಕಾರಿ ಉದ್ಯೋಗಿ ನಡುವೆ ನಡೆಯುವ ಪೈಪೋಟಿ 'ಗೇಮ್‌ ಚೇಂಜರ್' ಎನ್ನುವುದು ಟ್ರೈಲರ್ ಗೊತ್ತಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ತಿರುಗಿ ಬೀಳುವ IAS ಅಧಿಕಾರಿ ರಾಮ್ ನಂದನ್. ಅದನ್ನು ಎದುರಿಸುವ ಆಂಧ್ರ ಸಿಎಂ ಬೊಬ್ಬಿಲಿ ಮೊಪಿದೇವಿ(ಎಸ್‌.ಜೆ ಸೂರ್ಯ) ಮುಂದೇನು ಎನ್ನುವುದು ಸಿನಿಮಾ ಕಥೆ. ಈ ನಡುವೆ ಫ್ಲ್ಯಾಶ್‌ಬ್ಯಾಕ್‌ನಲ್ಲಿ ಅಪ್ಪಣ್ಣನ ಕಥೆಯೂ ಬಂದು ಹೋಗುತ್ತದೆ.

ಪೊಲಿಟಿಕಲ್ ಥ್ರಿಲ್ಲರ್ ಜೊತೆಗೆ ರಿವೇಂಜ್ ಡ್ರಾಮಾ ಕೂಡ ಚಿತ್ರದಲ್ಲಿ ಇರುವಂತೆ ಕಾಣುತ್ತಿದೆ. ಭ್ರಷ್ಟಾಚಾರ ಮುಕ್ತ ಸಮಾಜ ಕಟ್ಟಬೇಕು ಎಂದು ಬಯಸಿದ್ದ ಅಪ್ಪಣ್ಣ, ಆತನ ಕಾಲಾನಂತರ ಅದನ್ನು ಸಾಧಿಸಲು ಮಗ ರಾಮ್ ನಂದನ್ ನಡೆಸುವ ಹೋರಾಟ, ಈ ಹಾದಿಯಲ್ಲಿ ಏನೆಲ್ಲಾ ಕಳೆದುಕೊಳ್ಳುತ್ತಾನೆ? ತನ್ನ ಹೋರಾಟದಲ್ಲಿ ಗೆಲ್ತಾನಾ? ಎನ್ನುವ ಕಥೆಯನ್ನು ಚಿತ್ರದಲ್ಲಿ ಹೇಳಿರುವಂತೆ ಕಾಣುತ್ತಿದೆ.

ನಿರ್ದೇಶಕ ಶಂಕರ್ ಅಂದರೆ ಅದ್ಧೂರಿತನ. ಚಿತ್ರದ ಪ್ರತಿಫ್ರೇಮ್ ಕಣ್ಣಿಗೆ ಹಬ್ಬ ಎನ್ನುವಂತೆ ಇರಬೇಕು ಎನ್ನುವುದು ಅವರ ಆಸೆ. ಅದೇ ರೀತಿ 'ಗೇಮ್‌ ಚೇಂಜರ್' ಚಿತ್ರ ಕಟ್ಟಿಕೊಟ್ಟಿದ್ದಾರೆ. ಎಸ್. ತಮನ್ ಸಂಗೀತ ಚಿತ್ರಕ್ಕಿದೆ. ಆದರೆ ಚಿತ್ರದ ಯಾವುದೇ ಹಾಡು ಹಿಟ್ ಆಗಿಲ್ಲ. ಆದರೆ ಆ ಹಾಡುಗಳನ್ನು ಕೋಟಿ ಕೋಟಿ ಸುರಿದು ಶಂಕರ್ ಚಿತ್ರೀಕರಿಸಿದ್ದಾರೆ.

ಭಿನ್ನ ವಿಭಿನ್ನ ಅವತಾರಗಳಲ್ಲಿ ರಾಮ್‌ಚರಣ್ ದರ್ಶನ ಕೊಟ್ಟಿದ್ದಾರೆ. ಒಂದೇ ಚಿತ್ರದಲ್ಲಿ ಇಷ್ಟು ಗೆಟಪ್‌ ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಖಡಕ್ ಡೈಲಾಗ್ಸ್, ಜಬರ್ದಸ್ತ್ ಆಕ್ಷನ್, ಸಣ್ಣ ಸಣ್ಣ ಸಾಂಗ್ ಝಲಕ್ ಮಿಕ್ಸ್ ಮಾಡಿ ಟ್ರೈಲರ್ ಕಟ್ ಮಾಡಲಾಗಿದೆ. ಕೊನೆಯಲ್ಲಿ ಲುಂಗಿ ಉಟ್ಟು ಕತ್ತಿ ಹಿಡಿದು ಹೆಲಿಕ್ಯಾಪ್ಟರ್‌ನಿಂದ ಚರಣ್ ಇಳಿದು ಬರುವ ರೀತಿ ಅಭಿಮಾನಿಗಳಿಗೆ ಇಷ್ಟವಾಗಿದೆ.

ತಮಿಳು ನಿರ್ದೇಶಕ ಕಾರ್ತಿಕ್ ಸುಬ್ಬರಾಜು 'ಗೇಮ್‌ ಚೇಂಜರ್' ಚಿತ್ರಕ್ಕೆ ಒನ್‌ಲೈನ್ ಸ್ಟೋರಿ ಕೊಟ್ಟಿದ್ದಾರೆ. ಅದನ್ನು ಡೆವಲಪ್ ಮಾಡಿ ಸ್ಕ್ರೀನ್‌ಪ್ಲೇ ಮಾಡಿ ಶಂಕರ್ ನಿರ್ದೇಶನ ಮಾಡಿದ್ದಾರೆ. ದಶಕಗಳ ಹಿಂದೆ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟ ಗೆದ್ದವರು ಶಂಕರ್. ಆದರೆ 'ಎಂದಿರನ್'(ರೋಬೊ) ಬಳಿಕ ಅವರ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಹಾಗಾಗಿ ಈ ಬಾರಿ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ.

More from Filmibeat

English summary
Game Changer Trailer: Ramcharan starrer political thrilleris guaranteed to give thrills this sankranthi
Read more about: ramcharan shankar tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X