ಮಗಳ ಆರೈಕೆಗೆ ಖ್ಯಾತ ದಾದಿಯನ್ನು ನೇಮಿಸಿದ ರಾಮ್‌ಚರಣ್- ಉಪಾಸನಾ; ಸಂಬಳ ಎಷ್ಟು ಲಕ್ಷ ಗೊತ್ತಾ?
ತೆಲುಗು ನಟ ರಾಮ್‌ಚರಣ್ ಹಾಗೂ ಉಪಾಸನಾ ಕೋನಿದೇಲ ದಂಪತಿ ಮದುವೆಯಾಗಿ 10 ವರ್ಷಗಳ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 7 ತಿಂಗಳ ಹಿಂದೆ ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಕ್ಲಿಂಕಾರ ಜನನವಾಗಿತ್ತು. ಬಹಳ ಜೋಪಾನವಾಗಿ ಮಗಳನ್ನು ದಂಪತಿ ಆರೈಕೆ ಮಾಡುತ್ತಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳ ಮೂಲಕ ರಾಮ್‌ಚರಣ್ ಸದ್ದು ಮಾಡುತ್ತಿದ್ದಾರೆ. ಇನ್ನು ಮದುವೆ ಆಗಿ ವರ್ಷಗಳೇ ಕಳೆದರೂ ತಾಯಿಯಾಗದ ಕಾರಣಕ್ಕೆ ಉಪಾಸನಾ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಈ ಬಗ್ಗೆ ಬಹಿರಂಗವಾಗಿಯೇ ಕೆಲವೊಮ್ಮೆ ಹೇಳಿಕೊಂಡಿದ್ದರು. ಆದರೆ ಬಹಳ ಬೇಗ ಮಗು ಬೇಡ ಎಂದು ತಾವು ನಿರ್ಧರಿಸಿದ್ದಾಗಿ ಸಂದರ್ಶನದಲ್ಲಿ ಉಪಾಸನಾ ಹೇಳಿಕೊಂಡಿದ್ದರು.

ಇನ್ನು ಸೋಶಿಯಲ್ ಮೀಡಿಯಾ ಜಮಾನದಲ್ಲಿ ಸೆಲೆಬ್ರೆಟಿಗಳು ಯಾವುದೇ ವಿಚಾರವನ್ನು ಮುಚ್ಚಿಡುವುದು ಕಷ್ಟವಾಗುತ್ತದೆ. ಹೋದಲ್ಲಿ ಬಂದಲ್ಲಿ ಕ್ಯಾಮರಾಗಳು ಅವರನ್ನು ಸುತ್ತುವರೆದಿರುತ್ತವೆ. ಬಹಳ ದಿನಗಳ ಕಾಲ ರಾಮ್‌ಚರಣ್- ಉಪಾಸನಾ ದಂಪತಿ ಮಗಳ ಮುಖ ತೋರಿಸದೇ ಜಾಗ್ರತೆ ವಹಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ಫ್ಯಾಮಿಲಿ ಗ್ರೂಪ್ ಫೋಟೊದಲ್ಲಿ ಈಜುಕೊಳದ ಬಿಂಬದಲ್ಲಿ ಅಭಿಮಾನಿಗಳಿಗೆ ಕೊಂಚಮಟ್ಟಿಗೆ ಕ್ಲಿಂಕಾರ ದರ್ಶನವಾಗಿತ್ತು. ಇದೀಗ ಕ್ಲೀಂಕಾರಳನ್ನು ನೋಡಿಕೊಳ್ಳುವ ದಾದಿಯ ಪರಿಚಯವಾಗಿದೆ.
ಹೌದು ರಾಮ್‌ಚರಣ್ ಹಾಗೂ ಉಪಾಸನಾ ದಂಪತಿ ತಮ್ಮ ಮಗಳಿಗೆ ಹೊಸ ಪ್ರಪಂಚ ಸೃಷ್ಟಿಸುತ್ತಿದ್ದಾರೆ. ಮಗಳಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿ ಮನೆಯಲ್ಲಿ ಹೊಸ ಲೋಕ ನಿರ್ಮಿಸಿದ್ದಾರೆ. ಇನ್ನು ಮಗಳ ಆರೈಕೆಗಾಗಿ ಬಹಳ ಜನಪ್ರಿಯ ದಾದಿಯನ್ನು ನೇಮಿಸಿಕೊಂಡಿದ್ದಾರೆ. ಆಕೆಗೆ ತಿಂಗಳಿಗೆ ಲಕ್ಷ ಲಕ್ಷ ಸಂಬಳ ನೀಡುತ್ತಿದ್ದಾರೆ ಎನ್ನಲಾಗ್ತಿದೆ. ಕೆಲ ದಿನಗಳ ಹಿಂದೆ ರಾಮ್‌ಚರಣ್ ದಂಪತಿ ಮಗಳ ಸಮೇತ ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿದ್ದರು. ಅಂದು ಜೊತೆಗೆ ನ್ಯಾನಿ(ದಾದಿ) ಸಾವಿತ್ರಿ ಸಹ ಇದ್ದರು.
ಅಂದು ದಾದಿ ಸಾವಿತ್ರಿ ಕೂಡ ರಾಮ್‌ಚರಣ್- ಉಪಾಸನಾ ಹಾಗೂ ಕ್ಲೀಂಕಾರ ಕಾಣಿಸಿಕೊಂಡಿದ್ದರು. ಈಗ ಆ ವಿಡಿಯೋ ವೈರಲ್ ಆಗುತ್ತಿದೆ. ಅರೇ, ಈಕೆಯನ್ನು ಎಲ್ಲೋ ನೋಡಿದ್ದೀವಿ ಅಲ್ಲವೇ ಎಂದು ಬಾಲಿವುಡ್ ಮಂದಿ ನೆನಪಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಇದೇ ಸಾವಿತ್ರಿ ದಾದಿ ಕೆಲ ವರ್ಷಗಳ ಹಿಂದೆ ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಮಗ ತೈಮೂರ್ ಅಲಿಖಾನ್ ಕೇರ್ ಟೇಕರ್ ಆಗಿದ್ದರು.

ಬಾಲಿವುಡ್ ತಾರೆಯರು ಅಥವಾ ಬಹಳ ಶ್ರೀಮಂತರು ತಮ್ಮ ಎಳೆಯ ಮಕ್ಕಳನ್ನು ನೋಡಿಕೊಳ್ಳಲು ನುರಿತ ದಾದಿಯರನ್ನು ನೇಮಿಸಿಕೊಳ್ಳುತ್ತಾರೆ. ಅವರಿಗೆ ತಮ್ಮ ಮನೆಯಲ್ಲೇ ವಸತಿ, ಊಟದ ವ್ಯವಸ್ಥೆ ಜೊತೆಗೆ ಲಕ್ಷ ಲಕ್ಷ ಸಂಬಳ ನೀಡುತ್ತಾರೆ. ಬಾಲಿವುಡ್ ನಟ-ನಟಿಯರು ಸಾಕಷ್ಟು ಜನ ಕಲಾವಿದರು ಇಂತಹ ನ್ಯಾನಿಗಳನ್ನು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ನೇಮಿಸಿಕೊಂಡಿದ್ದರು.
ಈಗ ಬಾಲಿವುಡ್ ಸೆಲೆಬ್ರೆಟಿಗಳ ಬಹುಬೇಡಿಕೆಯ ನ್ಯಾನಿ ಸಾವಿತ್ರಿ, ರಾಮ್‌ಚರಣ್ ಮಗಳು ಕ್ಲಿಂಕಾರ ಜೊತೆಗಿದ್ದಾರೆ. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿತ್ರಿ ಬಗ್ಗೆ ಚರ್ಚೆ ಶುರುವಾಗಿದೆ. ಸೆಲೆಬ್ರೆಟಿ ನ್ಯಾನಿ ಆಗಲು ಮಕ್ಕಳ ಪಾಲನೆಯಲ್ಲಿ ಬಹಳ ಪರಿಣತಿ ಹೊಂದಿರಬೇಕು. ಕೆಲ ಏಜೆನ್ಸಿಗಳು ಇಂತಹವರ ಬಗ್ಗೆ ಪರಿಶೀಲನೆ ನಡೆಸುತ್ತವೆ. ಸಿನಿಮಾ ತಾರೆಯರು ಅಥವಾ ಶ್ರೀಮಂತರು ಖಾಸಗಿ ಏಜೆನ್ಸಿಗಳ ಮೂಲಕ ಇಂತಹ ದಾದಿಯರನ್ನು ನೇಮಿಸಿಕೊಳ್ಳುತ್ತಾರೆ.
ಇನ್ನು ಕರೀನಾ ಕಪೂರ್ ಮಗಳ ಪೋಷಣೆ ಬಳಿಕ ಸಾವಿತ್ರಿ ನಟ ಶಾಹಿದ್ ಕಪೂರ್ ಮಗಳ ಆರೈಕೆಗೆ ನೇಮಕವಾಗಿದ್ದರು. ಹೀಗೆ ಬಾಲಿವುಡ್ ಸೆಲೆಬ್ರೆಟಿಗಳ ಫೇವರಿಟ್ ನ್ಯಾನಿ ಸದ್ಯ ರಾಮ್‌ಚರಣ್ ಮನೆ ಸೇರಿದ್ದಾರೆ. ಕ್ಲಿಂಕಾರಳ ಆರೈಕೆ ಮಾಡುತ್ತಿದ್ದಾರೆ. ತೈಮೂರ್ ಆರೈಕೆಗೆ ಸಾವಿತ್ರಿ ಅವರಿಗೆ ತಿಂಗಳಿಗೆ ಒಂದು ಲಕ್ಷ ಸಂಬಳ ಸಿಗುತ್ತಿತ್ತು ಎಂದು ಆಗ ವರದಿಯಾಗಿತ್ತು. ಸದ್ಯ ರಾಮ್‌ಚರಣ್ ಆಕೆಗೆ ತಿಂಗಳಿಗೆ 3 ಲಕ್ಷದ ವರೆಗೆ ಸಂಬಳ ನೀಡುತ್ತಾರೆ ಎನ್ನುವ ವದಂತಿ ಹರಿದಾಡುತ್ತಿದೆ.


Click it and Unblock the Notifications











