Klin Kaara: ಕೊಂಚ ಯಾಮಾರಿದ ಉಪಾಸನಾ, ರಾಮ್‌ಚರಣ್: ಲೀಕ್ ಆಯ್ತು ಮುದ್ದು ಮಗಳ ಫೋಟೊ

ಟಾಲಿವುಡ್ ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ವರುಣ್ ತೇಜ್ ಹಾಗೂ ಲಾವಣ್ಯ ಪ್ರೀತಿಸಿ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ. ಚಿರಂಜೀವಿ- ರಾಮ್‌ಚರಣ್ ಬ್ಯುಸಿ ಶೆಡ್ಯೂಲ್ ನಡುವೆಯೂ ಫ್ಯಾಮಿಲಿಗೆ ಹೆಚ್ಚು ಸಮಯ ಕೊಡುತ್ತಿದ್ದಾರೆ. ಮೆಗಾ ಫ್ಯಾಮಿಲಿ ಫೋಟೋಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಸದ್ಯ ಇಟಲಿಯಲ್ಲಿ ಮೆಗಾ, ಅಲ್ಲು, ಕಾಮಿನೇನಿ ಕುಟುಂಬಗಳು ಬೀಡು ಬಿಟ್ಟಿವೆ. ಈ ವರ್ಷ ನಾಗಬಾಬು ಹುಟ್ಟುಹಬ್ಬವನ್ನು ಅಲ್ಲೇ ಆಚರಿಸಿಕೊಂಡಿದ್ದಾರೆ. ಇನ್ನು ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಮುದ್ದು ಮಗಳ ಜೊತೆ ಜೊತೆ ದೇಶ ವಿದೇಶ ಸುತ್ತಾಡುತ್ತಿದ್ದಾರೆ. ಆದರೆ ಕ್ಲೀಂಕಾರಳ ಮುಖ ರಿವೀಲ್ ಆಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಆದರೆ ಇದೀಗ ಮೆಗಾ ಪ್ರಿನ್ಸೆಸ್ ಲುಕ್ ರಿವೀಲ್ ಆಗಿದೆ. ಉಪಾಸನಾ ಎಷ್ಟೇ ಜಾಗ್ರತೆ ವಹಿಸಿದರೂ ಪ್ರಯೋಜನವಾಗಲಿಲ್ಲ.

Ramcharan, Upasana konidela reveal face of their baby girl Klin Kaara

ಇತ್ತೀಚಿಗೆ ಸಾಮಾನ್ಯವಾಗಿ ಪೋಷಕರು ಎಳೆ ಕಂದನ ಮುಖವನ್ನು ಅಷ್ಟು ಬೇಗ ರಿವೀಲ್ ಮಾಡುವುದಕ್ಕೆ ಸಿದ್ಧರಿರುವುದಿಲ್ಲ. ಕೆಲ ತಿಂಗಳ ಬಳಿಕ ವಿಶೇಷ ಫೋಟೊಶೂಟ್ ಮಾಡಿಸಿ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಮದುವೆಯಾಗಿ 10 ವರ್ಷಗಳ ಬಳಿಕ ರಾಮ್‌ಚರಣ್- ಉಪಾಸನಾ ದಂಪತಿ ಬಾಳಿಗೆ ಮಗಳು ಕ್ಲಿಂಕಾರ ಹರುಷ ತಂದಿದ್ದಾಳೆ. ಸದ್ಯ ಆ ಹರುಷದ ಸಾಗರದಲ್ಲಿ ಮೆಗಾ ಫ್ಯಾಮಿಲಿ ತೇಲಾಡುತ್ತಿದೆ. ರಾಮ್‌ಚರಣ್ ದಂಪತಿ ಕೂಡ ಮಗಳ ಮುಖ ರಿವೀಲ್ ಆಗದಂತೆ ಹೆಚ್ಚು ಜಾಗ್ರತೆ ವಹಿಸಿದ್ದರು. ಆದರೆ ಕೊಂಚ ಯಾಮಾರಿ ಎಡವಟ್ಟಾಗಿದೆ.

ಪ್ರತಿ ಬಾರಿಯೂ ಉಪಾಸನಾ ಫೋಟೊಗಳಲ್ಲಿ ಮಗಳ ಮುಖವನ್ನು ಕವರ್ ಮಾಡುತ್ತಿದ್ದರು. ಏರ್‌ಪೋರ್ಟ್ ಅಥವಾ ಯಾವುದಾದರೂ ಕಾರ್ಯಕ್ರಮಕ್ಕೆ ಬಂದರೂ ಕೈಯಿಂದ ಮಗಳ ಮುಖವನ್ನು ಮುಚ್ಚಿಕೊಳ್ಳುತ್ತಿದ್ದರು. ಇನ್ನು ಫೋಟೊಗಳಲ್ಲಿ ಮಗಳ ಮುಖಕ್ಕೆ ಸ್ಮೈಲಿ ಎಮೋಜಿ ಅಡ್ಡ ಇಟ್ಟು ಜಾಗ್ರತೆ ವಹಿಸುತ್ತಿದ್ದರು. ಸದ್ಯ ವಿದೇಶದಲ್ಲಿರುವ ಮೆಗಾ ಫ್ಯಾಮಿಲಿ ಫೋಟೊ ವೈರಲ್ ಆಗ್ತಿದೆ. ಉಪಾಸನಾ ಶೇರ್ ಮಾಡಿರುವ ಫೋಟೋಗಳಲ್ಲಿ ನೀರಿನಲ್ಲಿನ ಪ್ರತಿಬಿಂಬದ ಮೂಲಕ ಕ್ಲೀಂಕಾರ ಮುಖ ಕಾಣಿಸಿದೆ.

ಫೋಟೊದಲ್ಲಿ ಕ್ಲೀಂಕಾರ ಮುಖವನ್ನು ಉಪಾಸನಾ ಮುಚ್ಚಿದ್ದಾರೆ. ಪೂಲ್ ಪಕ್ಕ ಕ್ಲಿಕ್ಕಿಸಿರುವ ಫೋಟೊ ಆಗಿರುವುದರಿಂದ ನೀರಿನಲ್ಲಿ ಮೆಗಾ ಪ್ರಿನ್ಸೆಸ್ ಪ್ರತಿಬಿಂಬ ಚೆನ್ನಾಗಿ ಕಾಣಿಸುತ್ತಿದೆ. ಫೋಟೊದಲ್ಲಿ ಮುಖ ಮರೆಮಾಚಿದರೂ ಯಾಮಾರಿ ನೀರಿನಲ್ಲಿ ಪ್ರತಿಬಿಂಬ ಮರೆ ಮಾಡಲು ಮರೆತಿದ್ದಾರೆ. ಹಾಗಾಗಿ ಕ್ಲೀಂಕಾರಳ ಮುಖ ಪರಿಚಯ ಎಲ್ಲರಿಗೂ ಆದಂತಾಗಿದೆ. ಫೋಟೊದಲ್ಲಿ ಚಿರು, ರಾಮ್‌ಚರಣ್ ಎಲ್ಲರೂ ಗಮನ ಸೆಳೆದರೂ ಅವರನ್ನೆಲ್ಲಾ ಮೀರಿ ನೀರಿನಲ್ಲಿ ಕ್ಲೀಂಕಾರ ಪ್ರತಿಬಿಂಬ ಎಲ್ಲರನ್ನು ಆಕರ್ಷಿಸುತ್ತಿದೆ. ಅಭಿಮಾನಿಗಳಂತೂ ಫೋಟೊ ಮೇಲೆ ಕೆಳಗೆ ಮಾಡಿ ಜೂಮ್ ಹಾಕಿ ಮೆಗಾ ಪ್ರಿನ್ಸೆಸ್‌ನ ನೋಡಿ ಖುಷಿಪಡುತ್ತಿದ್ದಾರೆ.

ನವೆಂಬರ್ 1 ರಂದು ಇಟಲಿಯಲ್ಲಿ ವರುಣ್ ತೇಜ್ ಮತ್ತು ಲಾವಣ್ಯ ಡೆಸ್ಟಿನೇಷನ್ ವೆಡ್ಡಿಂಗ್ ನಡೀತಿದೆ. ಅಲ್ಲಿ ಮದುವೆಯ ಎಲ್ಲಾ ವಿಧಿವಿಧಾನಗಳು ಮುಗಿದ ನಂತರ ನವೆಂಬರ್ 5 ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಈ ಆರತಕ್ಷತೆ ಸಮಾರಂಭಕ್ಕೆ ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳು ಕೂಡ ಆಗಮಿಸಲಿದ್ದಾರೆ. ಈ ಮದುವೆ ಸಮಾರಂಭಕ್ಕೆ ನಿತಿನ್ ಕುಟುಂಬ ಮತ್ತು ನೀರಜಾ ಕೋನಾ ಸೇರಿದಂತೆ ಹಲವರು ಇಟಲಿಗೆ ಹೋಗಿದ್ದಾರೆ.

ಜೂನ್ 20ರಂದು ಉಪಾಸನಾ ಹೈದರಾಬಾದ್‌ನ ಅಪೋಲೊ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸುದ್ದಿ ಮೆಗಾ ಅಭಿಮಾನಿಗಳಲ್ಲಿ ಸಂತಸ ತಂದಿತ್ತು. ಮದುವೆಯಾಗಿ 10 ವರ್ಷಗಳ ಬಳಿಕ ದಂಪತಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದರು. ಮದುವೆಯಾದ ಹೊಸತರಲ್ಲೇ ಸದ್ಯಕ್ಕೆ ಮಕ್ಕಳು ಬೇಡ ಎಂದು ದಂಪತಿ ನಿರ್ಧರಿಸಿದ್ದಾಗಿ ಉಪಾಸನಾ ಹೇಳಿಕೊಂಡಿದ್ದರು.

More from Filmibeat

English summary
Ramcharan, Upasana konidela Revealed Baby Klin Kaara's Face.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X