ಧ್ವಜಾರೋಹಣ ಮಾಡಿದ ಕ್ಲೀಂ ಕಾರ: ರಾಮ್‌ಚರಣ್ ಮಗಳ ಮೊದಲ ಫೋಟೊ ರಿವೀಲ್

2 ತಿಂಗಳ ಹಿಂದೆಯಷ್ಟೆ ಟಾಲಿವುಡ್ ಮೆಗಾ ಫ್ಯಾಮಿಲಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿತ್ತು. ರಾಮ್‌ಚರಣ್ ಪತ್ನಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದರು. ಬಳಿಕ ಮಗಳಿಗೆ ಕ್ಲೀಂ ಕಾರ ಎಂದು ನಾಮಕರಣ ಮಾಡಿದ್ದರು. ಆದರೆ ಮಗಳ ಫೋಟೊವನ್ನು ರಿವೀಲ್ ಮಾಡಿರಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಪೋಷಕರು ತಮ್ಮ ನವಜಾತ ಶಿಶುವಿನ ಫೋಟೊವನ್ನು ಬೇಗ ರಿವೀಲ್ ಮಾಡುವುದಿಲ್ಲ. ಸೆಲೆಬ್ರೆಟಿಗಳಂತೂ ಈ ವಿಚಾರದಲ್ಲಿ ಬಹಳ ಜಾಗ್ರತೆ ವಹಿಸುತ್ತಾರೆ. 6 ತಿಂಗಳು ಅಥವಾ ವರ್ಷದ ಬಳಿಕ ಸ್ಪೆಷಲ್ ಫೋಟೊಶೂಟ್ ಮಾಡಿಸಿ ಮಗ ಅಥವಾ ಮಗಳನ್ನು ಪರಿಚಯಿಸುತ್ತಾರೆ. ರಾಮ್‌ಚರಣ್ ದಂಪತಿ ಸಹ ಈ ವಿಚಾರದಲ್ಲಿ ಅದೇ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ತಮ್ಮ ಮುದ್ದಿನ ಮಗಳು ಕ್ಲೀಂ ಕಾರಳ ಫೋಟೊವೊಂದನ್ನು ಉಪಾಸನಾ ಹಂಚಿಕೊಂಡಿದ್ದಾರೆ.

Ram Charan- Upasana- KlinKaaras- first-photo

ಮೆಗಾ ಫ್ಯಾಮಿಲಿ ಸದ್ಯ ಕ್ಲೀಂಕಾರಳ ನಗು, ಅಳು ನೋಡುತ್ತಾ ಖುಷಿಪಡುತ್ತಿದ್ದಾರೆ. ಉಪಾಸನಾ ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ರಾಮ್‌ಚರಣ್ ಕೂಡ ಸಿನಿಮಾ ಶೂಟಿಂಗ್ ಬಿಟ್ಟು ಮಡದಿ, ಮಗಳಿಗೆ ಹೆಚ್ಚಿನ ಸಮಯ ಕೊಡುತ್ತಿದ್ದಾರೆ. ಚಿರಂಜೀವಿ ದಂಪತಿ ಮಾತ್ರವಲ್ಲ ಉಪಾಸನಾ ತಂದೆ ತಾಯಿ ಸಹ ಮೊಮ್ಮಗಳ ಜೊತೆ ಕಾಲ ಕಳೆಯುತ್ತಿದ್ದಾರೆ. ಕ್ಲೀಂಕಾರ ಹುಟ್ಟಿದ ಬಳಿಕ ಮೊದಲ ಬಾರಿ ಅಜ್ಜಿ ತಾತನ ಜೊತೆ ಇಂಡಿಪೆಂಡೆನ್ಸ್ ಡೇ ಆಚರಿಸಿದ್ದಾಳೆ. ಈ ಫೋಟೊಗಳನ್ನು ಉಪಾಸನಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೊದಲ್ಲಿ ಚಿರಂಜೀವಿ ಮೊಮ್ಮಗಳು ಕೂಡ ಸ್ಪಷ್ಟವಾಗಿ ಕಾಣಿಸುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ದಿನವೇ ಮೆಗಾ ಫ್ಯಾನ್ಸ್‌ಗೆ ಮಗಳನ್ನು ಉಪಾಸನಾ ಪರಿಚಯಿಸಿದ್ದಾರೆ.

ಕ್ಲೀಂಕಾರ ಧ್ವಜಾರೋಹಣ ಮಾಡುವ ಮೂಲಕ ಮೊದಲ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾಳೆ. "ಅಜ್ಜಿ- ತಾತನ ಜೊತೆ ಕ್ಲೀಂಕಾರ ಮೊದಲ ಇಂಡಿಪೆಂಡೆನ್ಸ್ ಡೇ. ಬಹಳ ಅಮೂಲ್ಯವಾದ ಕ್ಷಣಗಳು" ಎಂದು ಉಪಾಸನಾ ಪೋಸ್ಟ್‌ಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಕ್ಲೀಂಕಾರ ಮುಖ ಸಂಪೂರ್ಣವಾಗಿ ಕಾಣಿಸದಂತೆ ಕವರ್ ಮಾಡಲಾಗಿದೆ. ಇನ್ನು ಲಂಗಾ ಜಾಕೆಟ್ ಹಾಕಿಕೊಂಡು ಟ್ರೆಡಿಷನಲ್ ಲುಕ್‌ನಲ್ಲಿ ಮೆಗಾ ಫ್ಯಾಮಿಲಿಯ ಮುದ್ದು ಕಂದಮ್ಮ ಕಾಣಿಸಿಕೊಂಡಿದ್ದಾಳೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕ್ಲೀಂಕಾರ ತಂದೆಯ ಹೋಲಿಕೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಸೊಸೆ ಉಪಾಸನಾ ಗರ್ಭಿಣಿ ಆಗಿರುವ ವಿಚಾರವನ್ನು ಚಿರಂಜೀವಿ ಹಂಚಿಕೊಂಡಿದ್ದರು. ಬಳಿಕ ಆಸ್ಕರ್ ಅವಾರ್ಡ್ ಸೆರೆಮನಿ ಸಮಯದಲ್ಲಿ ರಾಮ್‌ಚರಣ್‌ ಮನೆಗೆ ಹೊಸ ಅತಿಥಿಯ ಆಗಮನಕ್ಕೆ ಕಾಯುತ್ತಿರುವುದಾಗಿ ಹೇಳಿದ್ದರು. ಬಳಿಕ ದುಬೈ ಹಾಗೂ ಹೈದರಾಬಾದ್‌ನಲ್ಲಿ 2 ಬಾರಿ ಉಪಾಸನಾ ಸೀಮಂತ ಕಾರ್ಯಕ್ರಮ ನಡೆದಿತ್ತು. ಜೂನ್ 20ಕ್ಕೆ ಹೈದರಾಬಾದ್‌ನ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮದುವೆಯಾಗಿ 11 ವರ್ಷಗಳ ಬಳಿಕ ದಂಪತಿ ತಂದೆ-ತಾಯಿ ಆಗಿದ್ದಾರೆ.

ರಾಮ್‌ಚರಣ್ ಸಿನಿಮಾಗಳ ವಿಚಾರಕ್ಕೆ ಬಂದರೆ ಶಂಕರ್ ನಿರ್ದೇಶನದ 'ಗೇಮ್‌ ಚೇಂಜರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ದಿಲ್ ರಾಜು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪೊಲಿಟಿಕಲ್ ಥ್ರಿಲ್ಲರ್ ಕಥೆಯನ್ನು ಹೇಳಲಾಗುತ್ತಿದೆ. ಚಿತ್ರದಲ್ಲಿ ಚರಣ್ ಡಬಲ್ ರೋಲ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಬಳಿಕ ಬುಚ್ಚಿಬಾಬು ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು 'ಮಫ್ತಿ' ನರ್ತನ್ ನಿರ್ದೇಶನದಲ್ಲೂ ರಾಮ್‌ಚರಣ್ ನಟನೆಯ ಸಿನಿಮಾ ಬಗ್ಗೆ ಮಾತುಕತೆ ನಡೀತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುವ ಸಾಧ್ಯತೆಯಿದೆ.

More from Filmibeat

English summary
Ram Charan, Upasana share daughter KlinKaara's first pic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X