ಅಯ್ಯಪ್ಪಮಾಲೆ ಧರಿಸಿ ರಾಮ್‌ಚರಣ್ ದರ್ಗಾ ಭೇಟಿ; ಪತ್ನಿ ಉಪಾಸನಾ ಪ್ರತಿಕ್ರಿಯೆ

ತೆಲುಗು ನಟ ರಾಮ್‌ಚರಣ್ ಶಬರಿಮಲೆ ಸ್ವಾಮಿ ಅಯ್ಯಪ್ಪನ ಪರಮ ಭಕ್ತ. ಪ್ರತಿವರ್ಷ ಅಯ್ಯಪ್ಪ ಮಾಲೆ ದೀಕ್ಷೆ ಪಡೆದು ವ್ರತ ಆಚರಿಸಿ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಸದ್ಯ ಈ ವರ್ಷವೂ ಅಯ್ಯಪ್ಪ ಮಾಲಾಧಾರಿಯಾಗಿ ದೀಕ್ಷೆಯಲ್ಲಿದ್ದಾರೆ.

ಇತ್ತೀಚೆಗೆ ರಾಮ್‌ಚರಣ್ ಅಯ್ಯಪ್ಪ ಮಾಲಾಧಾರಿಯಾಗಿದೇ ಕಡಪ ಬಳಿಯ ಅಮೀರ್ ಪೀರ್ ದರ್ಗಾಗೆ ಭೇಟಿ ನೀಡಿದ್ದರು. ಚಾದರ್ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿ ಬಂದಿದ್ದರು. ಚರಣ್ ಹೀಗೆ ದರ್ಗಾಗೆ ಭೇಟಿ ನೀಡಿದ್ದ ಫೋಟೊ ವೈರಲ್ ಆಗಿತ್ತು. ಅಯ್ಯಪ್ಪ ಸ್ವಾಮಿ ವ್ರತ ಆಚರಿಸುತ್ತಿರುವವರು ದರ್ಗಾಗೆ ಭೇಟಿ ನೀಡಿದ್ದು ಸರಿಯಲ್ಲ ಎನ್ನುವ ಟೀಕೆ ವ್ಯಕ್ತವಾಗುತ್ತಿದೆ.

Ramcharan worshipping at a dargah wife upasana reacts on Trolls

ಸಾಕಷ್ಟು ಜನ ಸೋಶಿಯಲ್ ಮೀಡಿಯಾದಲ್ಲಿ ರಾಮ್‌ಚರಣ್ ನಡೆಯನ್ನು ಖಂಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಪತ್ನಿ ಉಪಾಸನಾ ಕೋನಿದೇಲ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಫೋಟೊ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. "ದೇವರ ನಂಬಿಕೆ, ಎಂದಿಗೂ ವಿಭಜನೆ ಮಾಡುವುದಿಲ್ಲ. ಭಾರತೀಯರಾಗಿ ನಾವು ಎಲ್ಲಾ ದೈವಗಳನ್ನು ಗೌರವಿಸುತ್ತೇವೆ. ಏಕತೆಯಲ್ಲೇ ನಮ್ಮ ಶಕ್ತಿ ಇದೆ" ಎಂದು ಉಪಾಸನಾ ಬರೆದುಕೊಂಡಿದ್ದಾರೆ.

ಇದೇ ಪೋಸ್ಟ್‌ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ 'ಸಾರೇ ಜಹಾಂಸೆ ಅಚ್ಚಾ' ಹಾಡನ್ನು ಸೇರಿಸಿ ಹಂಚಿಕೊಂಡಿದ್ದಾರೆ. ಉಪಾಸನಾ ಏಕತೆಯ ಮಂತ್ರ ಸಾರಿದರೂ ಕೆಲವರು ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಮತ್ತಷ್ಟು ಟ್ರೋಲ್ ಮಾಡುತ್ತಿದ್ದಾರೆ. ಅಯ್ಯಪ್ಪ ದೀಕ್ಷೆಯ ಬಗ್ಗೆ ನಿಮಗೆ ಗೊತ್ತಾ? ದಿನಗಳ ಕಾಲ ಅವರು ಕಠಿಣವಾದ ನೇಮನಿಷ್ಠೆ ಪಾಲಿಸಬೇಕು. ಹೀಗೆ ಇಷ್ಟಬಂದ ಕಡೆ ಹೋಗುವುದು ಅಲ್ಲ ಎಂದು ಉಪಾಸನಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ಹಿಂದೆ ರಾಮ್‌ಚರಣ್ ಅಯ್ಯಪ್ಪ ಮಾಲೆ ಧರಿಸಿದಾಗ ಬರಿಗಾಲಿನಲ್ಲಿ ಕೆಲ ವೇದಿಕೆಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇನ್ನು ಚರಣ್ ನಟನೆಯ 'ಗೇಮ್‌ ಚೇಂಜರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಜನವರಿ 10ಕ್ಕೆ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಖ್ಯಾತ ತಮಿಳು ನಿರ್ದೇಶಕ ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

'RRR' ಬಳಿಕ ರಾಮ್‌ಚರಣ್ ನಟಿಸಿದ 'ಆಚಾರ್ಯ' ಸಿನಿಮಾ ಗೆಲ್ಲಲಿಲ್ಲ. ಅತ್ತ 'ಇಂಡಿಯನ್- 2' ಸೋಲಿನಿಂದ ನಿರ್ದೇಶಕ ಶಂಕರ್ ಕಂಗೆಟ್ಟಿದ್ದಾರೆ. ಇಬ್ಬರಿಗೂ ಒಂದು ಬ್ರೇಕ್ ಬೇಕಾಗಿದೆ. 'ಗೇಮ್‌ ಚೇಂಜರ್' ಚಿತ್ರದಲ್ಲಿ ದ್ವಿಪಾತ್ರದಲ್ಲಿ ಚರಣ್ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

'ಗೇಮ್ ಚೇಂಜರ್' ಬಳಿಕ ಮತ್ತೆರಡು ಸಿನಿಮಾಗಳಿಗೆ ರಾಮ್‌ಚರಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬುಚ್ಚಿಬಾಬು ನಿರ್ದೇಶನದ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಜಾನ್ವಿ ಕಪೂರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಮೈಸೂರಿನಲ್ಲೇ ಫಸ್ಟ್ ಶೆಡ್ಯೂಲ್ ಶೂಟಿಂಗ್ ಶುರುವಾಗಲಿದೆ.

ಬುಚ್ಚಿಬಾಬು ಸಿನಿಮಾ ಬಳಿಕ ಸುಕುಮಾರ್ ನಿರ್ದೇಶನದಲ್ಲಿ ಮೆಗಾ ಪವರ್ ಸ್ಟಾರ್ ನಟಿಸಲಿದ್ದಾರೆ. ಈ ಹಿಂದೆ ಈ ಜೋಡಿ 'ರಂಗಸ್ಥಳಂ' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಕೊಟ್ಟಿತ್ತು.

More from Filmibeat

English summary
Ram Charan's Visit To Ameen Peer Dargah, Upasana konidela reponds to criticism,
Read more about: ramcharan telugu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X