Peddi vs Toxic: ಯಶ್ 'ಟಾಕ್ಸಿಕ್' ದಾಖಲೆ ಮುರಿದ 'ಪೆದ್ದಿ'; ಸ್ಟೇಡಿಯಂ ಹೊರಕ್ಕೆ ಫಸ್ಟ್ ಶಾಟ್
ರಾಮನವಮಿ ವಿಶೇಷವಾಗಿ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಟೀಸರ್ ರಿಲೀಸ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ 'ಪೆದ್ದಿ' ಫಸ್ಟ್ ಶಾಟ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಈಗಾಗಲೇ ಅಭಿಮಾನಿಗಳು ರೀಲ್ಸ್ ಮಾಡಿ ವೈರಲ್ ಮಾಡುತ್ತಿದ್ದಾರೆ. ನೋಡ ನೋಡುತ್ತಲೇ ಟೀಸರ್ ಹೊಸ ದಾಖಲೆ ಬರೆದಿದೆ. ಅಭಿಮಾನಿಗಳಿಗೂ ಇದು ಸಂತಸ ತಂದಿದೆ.
ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ರಾಮ್‌ಚರಣ್ ನಟನೆಯ 'ಗೇಮ್ ಚೇಂಜರ್' ಸಿನಿಮಾ ಸೋತಿತ್ತು. ಸದ್ಯ ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಮುಂದಿನ ವರ್ಷ ರಾಮ್ ಚರಣ್ ಹುಟ್ಟುಹಬ್ಬ(ಮಾರ್ಚ್ 27)ದ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ. ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

'ಉಪ್ಪೆನ' ಸಿನಿಮಾ ಮಾಡಿ ಬುಚ್ಚಿಬಾಬು ಗೆದ್ದಿದ್ದರು. ಇದು ಅವರ 2ನೇ ಸಿನಿಮಾ. ಅಂದಹಾಗೆ ನಿರ್ದೇಶಕ ಸುಕುಮಾರ್ ಗರಡಿಯಲ್ಲಿ ಪಳಗಿದ ಪ್ರತಿಭೆ. 'ರಂಗಸ್ಥಳಂ' ಚಿತ್ರಕ್ಕೂ ಸಹಾಯಕರಾಗಿ ಅವರು ಕೆಲಸ ಮಾಡಿದ್ದರು. 'ಪೆದ್ದಿ' ಸ್ಪೋರ್ಟ್ ಡ್ರಾಮಾ ಸಿನಿಮಾ. 90ರ ದಶಕದ ಕಾಲಘಟ್ಟದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಹಳ್ಳಿಯೊಂದರ ರಗಡ್ ಹೈದನಾಗಿ ರಾಮ್‌ಚರಣ್ ನಟಿಸಿದ್ದಾರೆ. 'ರಂಗಸ್ಥಳಂ' ಚಿತ್ರದಲ್ಲೂ ಅಂಥದ್ದೇ ಪಾತ್ರ ಮಾಡಿದ್ದರು. ದಡ್ಡ ಗಡ್ಡ ಕೂದಲು ಬಿಟ್ಟು ಅಬ್ಬರಿಸಿದ್ದರು. 'ಪೆದ್ದಿ' ಕೂಡ ಅದನ್ನೇ ಹೋಲುತ್ತಿದೆ.
ಹಳ್ಳಿಯಲ್ಲಿ ಕಬಡ್ಡಿ, ಕ್ರಿಕೆಟ್ ರೀತಿಯ ಆಟಗಳನ್ನು ಆಡಿಕೊಂಡಿರುವ ನಾಯಕ 'ಪೆದ್ದಿ'. ಆತನ ಜೀವನದಲ್ಲಿ ನಡೆಯುವ ಘಟನೆಗಳೇ ಇನ್ನುಳಿದ ಕಥೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಸಣ್ಣ ಟೀಸರ್ ಜೊತೆಗೆ ಒಂದಷ್ಟು ಮಾಸ್ ಸನ್ನಿವೇಶಗಳನ್ನು ಸೇರಿಸಿ ಟೀಸರ್ ಕಟ್ ಮಾಡಿದೆ ಚಿತ್ರತಂಡ. ಕೊನೆಗೆ 'ಪೆದ್ದಿ' ಬ್ಯಾಟ್ ನೆಲಕ್ಕೆ ಕುಟ್ಟಿ ಸರಿಪಡಿಸಿಕೊಂಡು ಫಾರ್ವಡ್ ಬಂದು ಚೆಂಡನ್ನು ಹೊಡೆಯುವ ಸೀನ್ ಅಭಿಮಾನಿಗಳ ಮನಗೆದ್ದಿದೆ.
24 ಗಂಟೆಗಳಲ್ಲಿ 'ಪೆದ್ದಿ' ಟೀಸರ್ ಹೊಸ ದಾಖಲೆ ಬರೆದಿದೆ. ಬರೀ ತೆಲುಗು ವರ್ಷನ್ ಮಾತ್ರ 3 ಕೋಟಿಗೂ ಅಧಿಕ ವೀವ್ಸ್ ಸಾಧಿಸಿದೆ. ಕನ್ನಡ, ತಮಿಳು, ಮಲಯಾಳಂ ವರ್ಷನ್‌ಗಳಿಗೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಇದು ಬರೀ ಯೂಟ್ಯೂಬ್ ವೀವ್ಸ್ ಮಾತ್ರ. ಬೇರೆ ಬೇರೆ ಜಾಲತಾಣಗಳಲ್ಲಿ ಮತ್ತಷ್ಟು ವೀವ್ಸ್ ಸಾಧಿಸಿದೆ. 5 ಲಕ್ಷಕ್ಕೂ ಅಧಿಕ ಲೈಕ್ಸ್ ಕೂಡ ಸಿಕ್ಕಿದೆ. 24 ಗಂಟೆಗಳಲ್ಲಿ ಒಂದೇ ಒಂದು ಯೂಟ್ಯೂಬ್ ಚಾನಲ್‌ನಲ್ಲಿ 'ಪೆದ್ದಿ' ಟೀಸರ್ 3 ಕೋಟಿ 65 ಲಕ್ಷ ವೀವ್ಸ್ ಸಾಧಿಸಿರುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ.
ಒಂದೇ ಯೂಟ್ಯೂಬ್ ಚಾನಲ್‌ನಲ್ಲಿ ಅತಿಹೆಚ್ಚು ವೀವ್ಸ್ ಸಾಧಿಸಿದ ಟೀಸರ್ ಎನ್ನುವ ದಾಖಲಕೆ 'ಟಾಕ್ಸಿಕ್' ಹೆಸರಿನಲ್ಲಿತ್ತು. ಯಶ್ ಬರ್ತ್‌ಡೇ ಸಂಭ್ರಮದಲ್ಲಿ ಬಂದಿದ್ದ ಸಣ್ಣ 'ಟಾಕ್ಸಿಕ್' ಗ್ಲಿಂಪ್ಸ್ 36 ಮಿಲಿಯನ್(3.60 ಕೋಟಿ) ವೀವ್ಸ್ ಗಳಿಸಿತ್ತು. ಇದೀಗ 'ಪೆದ್ದಿ' ಟೀಸರ್ ಅದಕ್ಕಿಂತ 50 ಸಾವಿರ ಹೆಚ್ಚು ವೀವ್ಸ್ ಗಳಿಸಿದೆ ಎನ್ನಲಾಗ್ತಿದೆ. ಇನ್ನು ತೆಲುಗು ಚಿತ್ರರಂಗದ ಮಟ್ಟಿಗೆ 'ಪೆದ್ದಿ' ನಂಬರ್ 1 ಸ್ಥಾನಕ್ಕೇರಿದೆ. 'ದೇವರ' ಹಾಗೂ 'ಪುಷ್ಪ'-2 ಟೀಸರ್ ದಾಖಲೆಗಳನ್ನು 'ಪೆದ್ದಿ' ಟೀಸರ್ ಮುರಿದಿದೆ.
ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಚಿತ್ರದ ಟೀಸರ್ ಮೊದಲ 24 ಗಂಟೆಗಳಲ್ಲಿ 2 ಕೋಟಿ 80 ಲಕ್ಷಕ್ಕೂ ಅಧಿಕ ವೀವ್ಸ್ ಸಾಧಿಸಿತ್ತು. ಕೊರಟಾಲ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಸದ್ಯ ಚಿತ್ರದ ಸೀಕ್ವೆಲ್ ಮಾಡುವ ತಯಾರಿ ಜೋರಾಗಿ ನಡೀತಿದೆ. ಕಳೆದ ವರ್ಷ ಸಿನಿಮಾ ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು.
ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಫಸ್ಟ್ ಟೀಸರ್ 2 ಕೋಟಿ 70 ಲಕ್ಷದ 11 ಸಾವಿರಕ್ಕೂ ಹೆಚ್ಚು ವೀವ್ಸ್ ಗಳಿಸಿತ್ತು. ಸುಕುಮಾರ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಕಂಡು ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಇನ್ನುಳಿದಂತೆ ಪವನ್ ಕಲ್ಯಾಣ್ ನಟನೆಯ 'ಓಜಿ' ಟೀಸರ್ 2 ಕೋಟಿ 70 ಲಕ್ಷ, ಪ್ರಭಾಸ್ 'ಕಲ್ಕಿ 2898AD' ಟೀಸರ್ 3 ಕೋಟಿ 30 ಲಕ್ಷ ವೀವ್ಸ್ ಗಳಿಸಿತ್ತು.


Click it and Unblock the Notifications











