ಜಪಾನ್‌ನಲ್ಲಿ 'ಕೆಜಿಎಫ್' Vs 'ರಂಗಸ್ಥಳಂ': ರಾಕಿಭಾಯ್ ಮೀರಿಸಿ ಮುನ್ನಡೆ ಸಾಧಿಸಿದ ಚಿಟ್ಟಿಬಾಬು

ಭಾರತೀಯ ಸಿನಿಮಾಗಳು ಈಗ ಜಪಾನ್‌ ದೇಶದಲ್ಲಿ ರಿಲೀಸ್ ಆಗೋದು ಹೊಸ ಟ್ರೆಂಡ್ ಆಗಿದೆ. ರಾಜಮೌಳಿ 'RRR' ಬಳಿಕ ಈಗ ಪ್ರಶಾಂತ್ ನೀಲ್ 'KGF' ಸರಣಿ ಹಾಗೂ ತೆಲುಗಿನ 'ರಂಗಸ್ಥಳಂ' ಸಿನಿಮಾಗಳು ಜಪಾನೀಸ್ ಭಾಷೆಗೆ ಡಬ್ ಆಗಿ ಒಟ್ಟಿಗೆ ಅಲ್ಲಿನ ಪ್ರೇಕ್ಷಕರ ಮುಂದೆ ಹೋಗುತ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಚಿಟ್ಟಿಬಾಬು ಆರ್ಭಟ ಜೋರಾಗಿದೆ.

ಇದೇ ಶುಕ್ರವಾರ 'KGF' ಚಾಪ್ಟರ್-1 ಹಾಗೂ ಚಾಪ್ಟರ್‌-2 ಜೊತೆಗೆ 'ರಂಗಸ್ಥಳಂ' ಸಿನಿಮಾ ಜಪಾನ್ ದೇಶದಲ್ಲಿ ತೆರೆಗಪ್ಪಳಿಸುತ್ತಿದೆ. ಇತ್ತೀಚೆಗೆ ಯಶ್ ವಿಶೇಷ ವಿಡಿಯೋ ಮಾಡಿ ಎಲ್ಲರೂ ಸಿನಿಮಾ ಎಂದು ಜಪಾನ್ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದರು. ಇದೀ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. 3 ಸಿನಿಮಾಗಳ ಟಿಕೆಟ್ ಬುಕ್ಕಿಂಗ್‌ಗೆ ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ಆದರೆ ಸದ್ಯದಮಟ್ಟಿಗೆ ಮೊದಲ ದಿನದ ಟಿಕೆಟ್ ಬುಕ್ಕಿಂಗ್‌ನಲ್ಲಿ 'ರಂಗಸ್ಥಳಂ' ಸಿನಿಮಾ ಮುಂದಿದೆ.

Ramcharans Rangasthalam leads Yashs KGF series day 1 advance bookings in Japan

'RRR' ಚಿತ್ರದಲ್ಲಿ ಚರಣ್ ನಟನೆ ನೋಡಿದ್ದಕ್ಕೋ ಅಲ್ಲಿನ ಪ್ರೇಕ್ಷಕರು 'ರಂಗಸ್ಥಳಂ' ಸಿನಿಮಾ ಟಿಕೆಟ್ ಬುಕ್ಕಿಂಗ್‌ಗೆ ಮುಗಿಬಿದ್ದಿದ್ದಾರೆ. ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಕಳೆದ ವರ್ಷ ನವೆಂಬರ್ 21ಕ್ಕೆ ಜಪಾನ್ ದೇಶದಲ್ಲಿ ರಿಲೀಸ್ ಆಗಿತ್ತು. ಜಪಾನ್ ಬಾಕ್ಸಾಫೀಸ್‌ನಲ್ಲಿ ಈ ಹಿಂದಿನ ಭಾರತದ ಸಿನಿಮಾಗಳ ದಾಖಲೆ ಮುರಿದು ಸಿನಿಮಾ ಶತದಿನೋತ್ಸವ ಆಚರಿಸಿಕೊಂಡಿತ್ತು.

Ramcharans Rangasthalam leads Yashs KGF series day 1 advance bookings in Japan

ಚಿಟ್ಟಿಬಾಬು ಹವಾ ಜೋರು

ಸುಕುಮಾರ್ ನಿರ್ದೇಶನದ 'ರಂಗಸ್ಥಳಂ' ಸಿನಿಮಾ 2018ರಲ್ಲಿ ತೆರೆಗಪ್ಪಳಿಸಿತ್ತು. ಇದೊಂದು ಹಳ್ಳಿಸೊಗಡಿನ ರಿವೇಂಜ್ ಡ್ರಾಮಾ ಆಗಿತ್ತು. ಸರಿಯಾಗಿ ಕಿವಿ ಕೇಳದ ಚಿಟ್ಟಿಬಾಬು ಪಾತ್ರದಲ್ಲಿ ರಾಮ್‌ಚರಣ್ ಅಭಿನಯ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಪರಭಾಷಾ ಪ್ರೇಕ್ಷಕರಿಗೂ ಸಿನಿಮಾ ಬಹಳ ಇಷ್ಟವಾಗಿತ್ತು. ಸದ್ಯ ಜಪಾನ್ ದೇಶದಲ್ಲಿ ಈ ಚಿತ್ರಕ್ಕೆ 80 ಶೋಗಳು ಸಿಕ್ಕಿವೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ 'ರಂಗಸ್ಥಳಂ' ಸಿನಿಮಾ 1.9 ಯೆನ್‌ ಹಣ ಬಾಚಿಕೊಂಡಿದೆ.

ರಾಕಿಭಾಯ್ ಆರ್ಭಟ ಹೇಗಿದೆ?

ಯಶ್ ನಟನೆಯ 'KGF' ಸರಣಿ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬಂದಿತ್ತು. ಮೊದಲ ಭಾಗ 250 ಕೋಟಿ ರೂ. ಗಳಿಸಿದರೆ 2ನೇ ಭಾಗ 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ತನ್ನ ತಾಯಿಗೆ ಕೊಟ್ಟ ಮಾತನ್ನು ಈಡೇರಿಸಲು ಬಾಲಕನೊಬ್ಬ ದೊಡ್ಡ ಗ್ಯಾಂಗ್‌ಸ್ಟರ್ ಆಗುವ ಕಥೆ ಚಿತ್ರದಲ್ಲಿದೆ. ಹೊಂಬಾಳೆ ಸಂಸ್ಥೆ ಈ ಸಿನಿಮಾ ನಿರ್ಮಿಸಿತ್ತು. ಸದ್ಯ ಜಪಾನ್‌ನಲ್ಲಿ 'KGF' ಮೊದಲ ಭಾಗಕ್ಕೆ 91 ಶೋ ಹಾಗೂ 2ನೇ ಭಾಗಕ್ಕೆ 85 ಶೋಗಳು ಸಿಕ್ಕಿವೆ.

ಮುತ್ತು ದಾಖಲೆ ಮುರಿದಿದ್ದ 'RRR'

ದಶಕಗಳ ಹಿಂಧೆ ಜಪಾನ್‌ ದೇಶದಲ್ಲಿ ರಜನಿಕಾಂತ್ ನಟನೆಯ 'ಮುತ್ತು' ಸಿನಿಮಾ ರಿಲೀಸ್ ಆಗಿ ದಾಖಲೆ ಬರೆದಿತ್ತು. ಭಾರತದ ಸಿನಿಮಾ ಅತಿ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆ ಈ ಸಿನಿಮಾ ಹೆಸರಿನಲ್ಲಿತ್ತು. ಈ ಸಿನಿಮಾ ನೋಡಿ ಜಪಾನ್ ಪ್ರೇಕ್ಷಕರು ತಲೈವಾ ಅಭಿಮಾನಿಗಳಾಗಿಬಿಟ್ಟಿದ್ದರು. 20 ವರ್ಷಗಳ ನಂತರ 'ಮುತ್ತು' ಕಲೆಕ್ಷನ್ ದಾಖಲೆಯನ್ನು ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ ಆಕ್ಷನ್ ಎಂಟರ್‌ಟೈನರ್ 'RRR' ಸಿನಿಮಾ ಮುರಿದಿತ್ತು. ಬಾಕ್ಸಾಫೀಸ್ ಶೇಕ್ ಮಾಡಿತ್ತು.

24 ವರ್ಷಗಳ ಹಿಂದೆ ರಜನಿ ಮೇನಿಯಾ

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಮುತ್ತು' ಸಿನಿಮಾ ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಿತ್ತು. ಅವತ್ತಿನ ಕಾಲಕ್ಕೆ ಕೋಟಿ ಕೋಟಿ ಕೊಳ್ಳೆ ಹೊಡೆದು ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ತಲೈವಾ ಅಲ್ಲಿ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿಬಿಟ್ಟಿದ್ದರು. ಜಪಾನ್‌ನಲ್ಲೂ ದಕ್ಷಿಣ ಭಾರತ ಸಿನಿಮಾ ತಾಕತ್ತು ಏನು ಎನ್ನುವುದನ್ನು 'ಮುತ್ತು' ಸಾಬೀತು ಮಾಡಿತ್ತು.

ರಜನಿ ಸ್ಟೈಲ್‌ಗೆ ಜಪಾನಿಯರು ಫಿದಾ

1995ರಲ್ಲಿ ಭಾರತದಲ್ಲಿ 'ಮುತ್ತು' ಸಿನಿಮಾ ತೆರೆಕಂಡಿತ್ತು. ಮರುವರ್ಷ ಚಿತ್ರವನ್ನು ಜಪಾನೀಸ್ ಭಾಷೆಗೆ ಡಬ್ ಮಾಡಿ ಅಲ್ಲಿ ರಿಲೀಸ್ ಮಾಡಲಾಗಿತ್ತು. ಚಿತ್ರದಲ್ಲಿ ತಲೈವಾ ಡಬಲ್ ರೋಲ್‌ನಲ್ಲಿ ಮೋಡಿ ಮಾಡಿದ್ದರು. ರಜನಿ ಸ್ಟೈಲ್ ನೋಡಿ ಜಪಾನ್ ಪ್ರೇಕ್ಷಕರು ಫಿದಾ ಆಗಿದ್ದರು. ಅಲ್ಲಿಂದ ಮುಂದೆ ಸೂಪರ್ ಸ್ಟಾರ್ ನಟನೆಯ ಕೆಲ ಸಿನಿಮಾಗಳನ್ನು ಜಪಾನ್‌ನಲ್ಲಿ ರಿಲೀಸ್ ಮಾಡಲಾಗಿತ್ತು.

More from Filmibeat

English summary
Ramcharan's Rangasthalam leads Yash's KGF series advance bookings in Japan. both films releasing in Japan on this Friday. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X