Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನಾನು ವರ್ಮಾ ಒಟ್ಟಿಗೆ ಜಿಎಸ್‌ಟಿ ಸಿನಿಮಾ ನೋಡಿದ್ದೇವೆ": RGV ತಾಯಿ ಮಾತು ಕೇಳಿದವರು ಶಾಕ್!
'ಶಿವ', 'ಸರ್ಕಾರ್', 'ರಂಗೀಲಾ', 'ಕಂಪೆನಿ', 'ರಕ್ತಚರಿತ್ರ' ರೀತಿಯ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ ರಾಮ್‌ಗೋಪಾಲ್ ವರ್ಮಾ ಈಗ ಬಿಗ್ರೇಡ್ ಸಿನಿಮಾಗಳನ್ನು ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಕಾಮೆಂಟ್‌ಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಆದರೆ ಆರ್‌ಜಿವಿ ತಾಯಿ ಮಾತ್ರ "ನನ್ನ ಮಗ ಮಾಡುತ್ತಿರುವುದರಲ್ಲಿ ತಪ್ಪೇನಿದೆ?" ಎಂದಿದ್ದಾರೆ.
ಮೊನ್ನೆ ಮೊನ್ನೆವರೆಗೂ ಅಶ್ಲೀಲ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದ ವರ್ಮಾ ಈಗ ಅಶ್ಲೀಲ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಅರಿಯಾನ, ಅಶು ರೆಡ್ಡಿ, ಸಿರಿ ಸ್ಟೆಜಿ ರೀತಿಯ ನಿರೂಪಕಿಯರ ಜೊತೆ ಅತಿಯಾಗಿ ನಡೆದುಕೊಳ್ಳುತ್ತಿದ್ದಾರೆ. ನಿರೂಪಕಿಯ ಕಾಲಿಗೆ ಮುತ್ತಿಡುವುದು, ತೊಡೆ ಚೆನ್ನಾಗಿದೆ ಎನ್ನುವುದು, ನಿನ್ನನ್ನು ಊಹಿಸಿಕೊಂಡು ಹಸ್ತ ಮೈಥುನ ಮಾಡಿಕೊಂಡೆ ಎನ್ನುವುದು, ಕೆಲವರ ಕೆಂಗಣ್ಣಿಗೆ ಕಾರಣವಾಗಿದೆ. ಇಂತಹ ಸಂದರ್ಶನದಿಂದ ಯಾರಿಗೆ ಉಪಯೋಗ? ಇದೆಲ್ಲಾ ಯಾಕೋ ಅತಿಯಾಯಿತು ಎಂದು ಕುಟುಂಬ ಸದಸ್ಯರೇ ಹೇಳುತ್ತಿದ್ದಾರೆ. ಇನ್ನು ಕೆಲ ಸಂಪ್ರದಾಯವಾದಿಗಳು ಇದನ್ನು ನೋಡಿ ಕೆಂಡಕಾರುತ್ತಿದ್ದಾರೆ.
ಕೆನ್ನೆಗೆ
ಹೊಡೆದ
ಹುಡುಗಿಯ
ಬೆತ್ತಲೆ
ಕಾಲಿಗೆ
ಮುತ್ತಿಟ್ಟ
ರಾಮ್
ಗೋಪಾಲ್
ವರ್ಮಾ!
ವರ್ಮಾ ಒಬ್ಬ ಹುಚ್ಚ. ಆತನ ವಾದ, ಮಾತುಗಳು ಅಚ್ಚರಿ ಎನಿಸುತ್ತದೆ. ಆತನಷ್ಟು ವಿಚಿತ್ರ ವ್ಯಕ್ತಿ, ಮೊಂಡ, ಜಗಮೊಂಡ ಮತ್ತೊಬ್ಬರು ಇರಲ್ಲ. ಆದರೆ ಆತನ ತಾಯಿ ಸೂರ್ಯವತಿ ಮಾತುಗಳು ಅದಕ್ಕಿಂತಲೂ ವಿಚಿತ್ರ ಅನ್ನಿಸುತ್ತದೆ. ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಸೂರ್ಯವತಿಯವರ ಮಾತುಗಳನ್ನು ಕೇಳಿದವರು ಶಾಕ್ ಆಗಿದ್ದಾರೆ. ಈ ರೀತಿ ಯೋಚಿಸುವ ತಾಯಿ ಕೂಡ ಇರುತ್ತಾರಾ? ಎಂದು ಅವಕ್ಕಾಗಿದ್ದಾರೆ.

ವರ್ಮಾ ಯೋಗಿ, ವಿಜ್ಞಾನಿ
ಆರ್‌ಜಿವಿ ಹುಚ್ಚಾಟದ ಬಗ್ಗೆ ಅವರ ಸ್ವಂತ ಭಾವ ಕೂಡ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ರಾಮ್‌ಗೋಪಾಲ್ ವರ್ಮಾ ನಡೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರ ತಾಯಿ ಸೂರ್ಯವತಿ ಹೇಳಿದ್ದಾರೆ. "ನನಗೆ ಅವನು ಒಬ್ಬ ಯೋಗಿ, ಒಬ್ಬ ವಿಜ್ಞಾನಿ ರೀತಿ ಕಾಣುತ್ತಾನೆ. ನನ್ನ ಮಗ ಬಹಳ ಒಳ್ಳೆಯವನು. ಆತ ಯಾರಿಗೂ ಕೆಟ್ಟದನ್ನು ಬಯಸುವುದಿಲ್ಲ. ಆತ ತನಗನ್ನಿಸಿದ್ದನ್ನು ಮಾಡುತ್ತಾನೆ, ತನಗನ್ನಿದ್ದನ್ನು ಹೇಳುತ್ತಾನೆ. ಅದರಲ್ಲಿ ನನಗಂತೂ ತಪ್ಪು ಕಾಣಿಸುವುದಿಲ್ಲ" ಎಂದಿದ್ದಾರೆ.

ಒಟ್ಟಿಗೆ ಜಿಎಸ್‌ಟಿ ಸಿನಿಮಾ ನೋಡಿದ್ವಿ
4 ವರ್ಷಗಳ ಹಿಂದೆ ರಾಮ್‌ಗೋಪಾಲ್ ವರ್ಮಾ ಜಿಎಸ್‌ಟಿ(ಗಾಡ್ ಸೆಕ್ಸ್ ಥ್ರೂತ್) ಎನ್ನುವ ವಿವಾದಾತ್ಮಕ ಶಾರ್ಟ್ ಫಿಲ್ಮ್ ಮಾಡಿದ್ದರು. ಅಮೆರಿಕಾದ ಪೋರ್ನ್ ಸ್ಟಾರ್ ಮಿಯಾ ಮಾಲ್ಕೊವಾ ಜೊತೆ ಈ ಅಡೆಲ್ಟ್ ಕಂಟೆಂಟ್ ಸಿನಿಮಾ ಮಾಡಿದ್ದರು. ಮಿಲಾ ಮಾಲ್ಕಾವಾ ಸಂಪೂರ್ಣ ಬೆತ್ತಲಾಗಿ ಈ ಕಿರುಚಿತ್ರದಲ್ಲಿ ನಟಿಸಿದ್ದಳು. ಮಹಿಳೆಯರ ಅಂಗಾಂಗವನ್ನು ವರ್ಣಿಸುತ್ತಾ ಭಿನ್ನ ವಿಭಿನ್ನ ಕೋನಗಳಲ್ಲಿ ಮದನಾರಿ ಮಿಯಾ ಮಾಲ್ಕೊವಾಳನ್ನು ತೋರಿಸಿದ್ದರು. "ಜಿಎಸ್‌ಟಿ ಸಿನಿಮಾ ನಾನು ನೋಡಿದ್ದೇನೆ. ವರ್ಮಾ ಜೊತೆಗೆ ಕೂತು ನೋಡಿದ್ದೇನೆ" ಎಂದು ಸೂರ್ಯವತಿಯವರು ಹೇಳಿರುವುದು ಅಚ್ಚರಿ ಮೂಡಿಸಿದೆ.

ವರ್ಮಾ ಈ ಜನ್ಮದಲ್ಲಿ ಬದಲಾಗಲ್ಲ
ಮಗನ ಜೊತೆಗೆ ಕೂತು ಜಿಎಸ್‌ಟಿ ಸಿನಿಮಾ ನೋಡಿದ್ದೇನೆ ಎನ್ನುವ ಸೂರ್ಯವತಿಯರ ಮಾತು ಕೇಳಿ ಇಂತಹ ಫ್ಯಾಮಿಲಿ ಪ್ರಪಂಚದಲ್ಲಿ ಸಿಗಲ್ಲ ಬಿಡಿ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು "ವರ್ಮಾ ಈ ಜನ್ಮದಲ್ಲಿ ಬದಲಾಗುವುದಿಲ್ಲ. ತನಗೆ ಬದಲಾಗಬೇಕು ಅನ್ನಿಸಿದರೆ ಮಾತ್ರ ಬದಲಾಗಬಹುದು. ಚಿಕ್ಕಂದಿನಿಂದಲೂ ವರ್ಮಾ ಬಹಳ ಬುದ್ದಿವಂತ. ಆದರೆ ಅದು ಆಗ ಗೊತ್ತಾಗುತ್ತಿರಲಿಲ್ಲ. ನಾವು ಸರಿಯಾಗಿ ಓದುತ್ತಿಲ್ಲ ಎಂದುಕೊಂಡಿದ್ದೆವು. ಆದರೆ ಆತನ ಜ್ಞಾನಾರ್ಜನೆ ದೊಡ್ಡದು" ಎಂದು ಸೂರ್ಯವತಿ ಹೇಳಿದ್ದಾರೆ.

'ಡೇಂಜರಸ್' ಲೆಸ್ಬಿಯನ್ ಸಿನಿಮಾ
ಸದ್ಯ ರಾಮ್ ಗೋಪಾಲ್ ವರ್ಮಾ 'ಡೇಂಜರಸ್' ಎನ್ನುವ ಲೆಸ್ಬಿಯನ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ಈ ಚಿತ್ರದಲ್ಲಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಇಬ್ಬರನ್ನು ಸಿಕ್ಕಾಪಟ್ಟೆ ಬೋಲ್ಡ್ ಆಗಿ ವರ್ಮಾ ತೋರಿಸಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ರಿಲೀಸ್‌ಗೆ ಸಾಕಷ್ಟು ಅಡೆತಡೆ ಎದುರಾಗಿತ್ತು. ಕಳೆದ ವಾರ ಈ ಸಿನಿಮಾ ಬಂದು ಹೋಗಿದ್ದು ಯಾರಿಗೂ ಗೊತ್ತಾಗಲೇ ಇಲ್ಲ. ಸದ್ಯ 'ವ್ಯೂಹಂ' ಎನ್ನುವ ಮತ್ತೊಂದು ಚಿತ್ರವನ್ನು ವರ್ಮಾ ಘೋಷಿಸಿದ್ದಾರೆ.