For Quick Alerts
  ALLOW NOTIFICATIONS  
  For Daily Alerts

  ಬೋಲ್ಡ್ ಪಾತ್ರಕ್ಕೆ ಹೆಚ್ಚು ಸಂಭಾವನೆ ಬೇಡಿಕೆ ಇಟ್ಟ ನಟಿ ರಮ್ಯಾ ಕೃಷ್ಣ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ರಮ್ಯಾ ಕೃಷ್ಣ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇತ್ತೀಚಿಗೆ ರಮ್ಯಾ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಸಂಪ್ರದಾಯಸ್ತ ಗೃಹಿಣಿಯಾಗಿ ಕಣಿಸಿಕೊಳ್ಳುತ್ತಿದ್ದ ರಮ್ಯಾ ಈಗ ದಿಢೀರನೆ ಬೋಲ್ಡ್ ಅವತಾರ ತಾಳಲು ಮುಂದಾಗಿರುವುದು ಅಭಿಮಾನಿಗಳಿಗೆ ಅಚ್ಚರಿ ಜೊತೆಗೆ ಕುತೂಹಲ ಮೂಡಿಸಿದೆ.

  ಅಂದ್ಹಾಗೆ ರಮ್ಯಾ ಬೋಲ್ಡ್ ಆಗಲು ನಿರ್ಧರಿಸಿದ್ದು, ಹಿಂದಿಯಲ್ಲಿ ಸೂಪರ್ ಹಿಟ್ ಆಗಿದ್ದ ಅಂಧಾಧುನ್ ಚಿತ್ರದ ತೆಲುಗು ರಿಮೇಕ್ ನಲ್ಲಿ. ಹೌದು, ಹಿಂದಿಯಲ್ಲಿ ನಟಿ ಟಬು ನಿರ್ವಹಿಸಿದ್ದ ಪಾತ್ರದಲ್ಲಿ ರಮ್ಯಾ ಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ಈ ಪಾತ್ರಕ್ಕಾಗಿ ರಮ್ಯಾ ಹೆಚ್ಚು ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ. ಅಂದ್ಹಾಗೆ ದಕ್ಷಿಣ ಭಾರತೀಯ ಚಿತ್ರರಂಗದ ಕೆಲವು ಪೋಷಕ ನಟಿಯರು ನಾಯಕಿಯರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಅವರಲ್ಲಿ ನಟಿ ರಮ್ಯಾ ಕೃಷ್ಣ ಕೂಡ ಒಬ್ಬರು. ಆದರೀಗ ಅಂಧಾಧುನ್ ಸಿನಿಮಾ ಪಾತ್ರಕ್ಕೆ ರಮ್ಯಾ ಮತ್ತೆ ಸಂಭಾವನೆ ಏರಿಸಿಕೊಂಡಿದ್ದಾರೆ. ಮುಂದೆ ಓದಿ..

  ಮತ್ತೊಂದು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ರಮ್ಯಾಕೃಷ್ಣಮತ್ತೊಂದು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ರಮ್ಯಾಕೃಷ್ಣ

  ಟಬು ಪಾತ್ರದಲ್ಲಿ ರಮ್ಯಾ ಕೃಷ್ಣ

  ಟಬು ಪಾತ್ರದಲ್ಲಿ ರಮ್ಯಾ ಕೃಷ್ಣ

  ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದ 'ಅಂಧಾಧುನ್' ಚಿತ್ರದ ತೆಲುಗು ಅವತರಣಿಕೆಯಲ್ಲಿ ಬೋಲ್ಡ್ ಪಾತ್ರದಲ್ಲಿ ರಮ್ಯಾಕೃಷ್ಣ ಅವರೇ ನಟಿಸಬೇಕು ಎನ್ನುವುದು ನಿರ್ದೇಶಕರ ಬಯಕೆ. ಅದರಂತೆ ಅವರು ರಮ್ಯಾಕೃಷ್ಣ ಜತೆ ಮಾತುಕತೆ ನಡೆಸಿ, ಗ್ರೀನ್ ಸಿಗ್ನಲ್ ಪಡೆದಿದ್ದರೆ. ಅದಕ್ಕೆ ತಕ್ಕಹಾಗೆ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ.

  ಹೆಚ್ಚು ಸಂಭಾವನೆ ಬೇಡಿಕೆ

  ಹೆಚ್ಚು ಸಂಭಾವನೆ ಬೇಡಿಕೆ

  ನಟಿ ರಮ್ಯಾ ಕೃಷ್ಣ ಬಾಹುಬಲಿ ಸಿನಿಮಾದ ನಂತರ ಮತ್ತಷ್ಟು ಖ್ಯಾತಿಗಳಿಸಿದ್ದಾರೆ. ಜೊತೆಗೆ ಅವರ ಸಂಭಾವನೆ ಕೂಡ ದುಪ್ಪಟ್ಟಾಗಿದೆ. ಸದ್ಯ ಬೋಲ್ಡ್ ಪಾತ್ರ ಮಾಡಲು ಗ್ರೀನ್ ಸಿಗ್ನಲ್ ನೀಡಿರುವ ರಮ್ಯಾ, ಭಾರಿ ಮೊತ್ತದ ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ. ಈಗಾಗಲೆ ರಮ್ಯಾ ಒಂದು ಸಿನಿಮಾಗೆ ದಿನಕ್ಕೆ 10 ಲಕ್ಷದ ವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತೆ. ಆದರೀಗ ಅಂಧಾಧುನ್ ಸಿನಿಮಾಗೆ ಹೆಚ್ಚಿನ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ.

  ಸಂಭಾವನೆ ವಿಚಾರಕ್ಕೆ 'ಕೆಜಿಎಫ್ 2' ತಿರಸ್ಕರಿಸಿದ್ದ ಖ್ಯಾತ ನಟಿಸಂಭಾವನೆ ವಿಚಾರಕ್ಕೆ 'ಕೆಜಿಎಫ್ 2' ತಿರಸ್ಕರಿಸಿದ್ದ ಖ್ಯಾತ ನಟಿ

  ನಾಯಕಿಯರು ಪಡೆಯುವ ಸಂಭಾವನೆಗಿಂತ ಹೆಚ್ಚು

  ನಾಯಕಿಯರು ಪಡೆಯುವ ಸಂಭಾವನೆಗಿಂತ ಹೆಚ್ಚು

  ದಕ್ಷಿಣ ಭಾರತೀಯ ನಾಯಕಿಯರು ಸದ್ಯ ಪಡೆಯುವ ಸಂಭಾವನೆಗಿಂತ ಅಂಧಾಧನ್ ಸಿನಿಮಾ ರಿಮೇಕ್ ಗೆ ರಮ್ಯಾ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಅಂದರೆ 3 ರಿಂದ 4 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಭಾರತೀಯ ಚಿತ್ರರಂಗದ ಮಟ್ಟಿಗೆ ಇದು ದೊಡ್ಡ ಮೊತ್ತದ ಸಂಭಾವೆಯಾಗಿದೆ.

  ಆಯುಷ್ಮಾನ್ ಪಾತ್ರದಲ್ಲಿ ನಿತಿನ್

  ಆಯುಷ್ಮಾನ್ ಪಾತ್ರದಲ್ಲಿ ನಿತಿನ್

  ನಾಯಕ ನಿತಿನ್ ಬ್ಯಾನರ್ ನಲ್ಲಿ ಸಿನಿಮಾ ತೆಲುಗಿನ ರೀಮೇಕ್ ಸಿನಿಮಾ ಮೂಡಿಬರಲಿದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. 'ವೆಂಕಟಾದ್ರಿ ಎಕ್ಸ್‌ಪ್ರೆಸ್', 'ಎಕ್ಸ್‌ಪ್ರೆಸ್ ರಾಜ', 'ಕೃಷ್ಣಾರ್ಜುನ ಯುದ್ಧಂ' ಸಿನಿಮಾಗಳನ್ನು ನಿರ್ದೇಶಿಸಿರುವ ಮೆರ್ಲಪಾಕ ಗಾಂಧಿ, ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆಯುಷ್ಮಾನ್ ಖುರಾನಾ ಪಾತ್ರವಲ್ಲಿ ನಿತಿನ್ ನಿಭಾಯಿಸಲಿದ್ದಾರೆ. ಚಿತ್ರಕ್ಕೆ ಅವರೇ ಬಂಡವಾಳವನ್ನೂ ಹೂಡುತ್ತಿದ್ದಾರೆ.

  ಮಧ್ಯವಯಸ್ಕ ಮಹಿಳೆಯ ಅಫೇರ್

  ಮಧ್ಯವಯಸ್ಕ ಮಹಿಳೆಯ ಅಫೇರ್

  ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಅಂಧಾಧುನ್ ಒಳಗೊಂಡಿದೆ. ಪರಪುರಷನ ಜತೆಗೆ ಸಂಬಂಧ ಹೊಂದಿರುವ ಮಧ್ಯವಯಸ್ಸಿನ ಮಹಿಳೆಯ ಪಾತ್ರದಲ್ಲಿ ಟಬು ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕೆ ರಮ್ಯಾಕೃಷ್ಣ ಅವರೇ ಸೂಕ್ತ ಎಂದು ಚಿತ್ರತಂಡ ತೀರ್ಮಾನಿಸಿದೆ. ಇಂಥದ್ದೇ ಪಾತ್ರವಿರುವ ಕನ್ನಡದ 'ಬಾ ಬಾರೋ ರಸಿಕ' ಚಿತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದರು.

  English summary
  Actress Ramya Krishna demand big money for Andhadhun Telugu remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X